Thursday, November 26, 2020

ನಕಲಿ ಪೊಲೀಸ್ ದಾಳಿ ಮಾಡಿ ದರೋಡೆ ಮಾಡಿದ್ದ ಅಸಲಿ ಪೊಲೀಸರು ಅಂದರ್..!

ಶಕ್ತಿನಗರ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸರಕಾರದ ಆದೇಶ – ಶಾಸಕ ಕಾಮತ್..!

ಶಕ್ತಿನಗರ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸರಕಾರದ ಆದೇಶ - ಶಾಸಕ ಕಾಮತ್ ಮಂಗಳೂರು : ಶಕ್ತಿನಗರದ ನಾಲ್ಯ ಪದವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸರಕಾರದ ಆದೇಶ ಬಂದಿದೆ. ಆ ಮೂಲಕ...

 ಕೃಷ್ಣಾನುಗ್ರಹದಿಂದ ಪ್ರಜ್ವಲಿಸುತ್ತಿರುವ ಎಳೆ ಕಂದಮ್ಮ ಪ್ರಜ್ವಲಾಳಿಗೆ  ನಾಮಕರಣದ ಸಂಭ್ರಮ 

ಕೃಷ್ಣಾನುಗ್ರಹದಿಂದ ಪ್ರಜ್ವಲಿಸುತ್ತಿರುವ ಎಳೆ ಕಂದಮ್ಮ ಪ್ರಜ್ವಲಾಳಿಗೆ  ನಾಮಕರಣದ ಸಂಭ್ರಮ  ಉಡುಪಿ: ಎಲ್ಲ ಮಕ್ಕಳಿಗೂ ನಾಮಕರಣ ಸಂಭ್ರಮ ಸಾಮಾನ್ಯ ಆದ್ರೆ ಈ ಪುಟಾಣಿ ಕಂದಮ್ಮನಿಗೆ ನಾಮಕರಣ ಸಂಭ್ರಮ ವಿಶೇಷತೆಯೇ ಸರಿ ಯಾಕಂತೀರಾ... ಈ ಮುದ್ದು ಕಂದಮ್ಮನಿಗೆ...

ಭಾರತದಲ್ಲಿ ಕರಾಳ ಅಧ್ಯಾಯ ಬರೆದ 2008 ಉಗ್ರರ ಮುಂಬೈ ದಾಳಿಗೆ ಬರೋಬ್ಬರಿ 12ವರ್ಷ

ಭಾರತದಲ್ಲಿ ಕರಾಳ ಅಧ್ಯಾಯ ಬರೆದ 2008 ಉಗ್ರರ ಮುಂಬೈ ದಾಳಿಗೆ ಬರೋಬ್ಬರಿ 12ವರ್ಷ ಭಾರತದಲ್ಲಿ ಕರಾಳ ಅಧ್ಯಾಯ ಬರೆದ  ನವೆಂಬರ್ 26.11. 2008ರ ಮುಂಬೈ ಭಯೋತ್ಪಾದಕ ದಾಳಿಗೆ 12 ವರ್ಷಗಳು ಕಳೆದಿದ್ದು, ಅಮಾಯಕ ಜನರು,...

ಮಂಗಳೂರು ಉತ್ತರ ಭಾಜಪಾ ವತಿಯಿಂದ ಮಂಡಲ ಪ್ರಶಿಕ್ಷಣ ವರ್ಗ ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟನೆ

ಮಂಗಳೂರು ಉತ್ತರ ಭಾಜಪಾ ವತಿಯಿಂದ ಮಂಡಲ ಪ್ರಶಿಕ್ಷಣ ವರ್ಗ ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟನೆ ಮಂಗಳೂರು: ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಭಾಜಪಾ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಹಲವು...

ಮಲ್ಪೆ ಬಸ್ಸು ನಿಲ್ದಾಣದ ಬಳಿ ಹೈಟೆನ್ಶನ್‌ ಕಂಬಕ್ಕೇರಿದ ಮಾನಸಿಕ ಅಸ್ವಸ್ಥ..!

ಮಲ್ಪೆ ಬಸ್ಸು ನಿಲ್ದಾಣದ ಬಳಿ ಹೈಟೆನ್ಶನ್‌ ಕಂಬಕ್ಕೇರಿದ ಮಾನಸಿಕ ಅಸ್ವಸ್ಥ..! ಉಡುಪಿ: ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ‌ ಘಟ‌ನೆ ನಿನ್ನೆ ನಡೆದಿದೆ. ಉಡುಪಿ ತಾಲೂಕಿನ ಮಲ್ಪೆಯಲ್ಲಿ‌ ಈ‌ ಘಟನೆ‌...

ನಕಲಿ ಪೊಲೀಸ್ ದಾಳಿ ಮಾಡಿ ದರೋಡೆ ಮಾಡಿದ್ದ ಅಸಲಿ ಪೊಲೀಸರು ಅಂದರ್..!

ಬೆಂಗಳೂರು : ಕಳ್ಳರನ್ನು ಹಿಡಿಯಬೇಕಾದವರು ಪೊಲೀಸರೇ ದುಡ್ಡಿನ ಆಸೆಗೆ ಬಲಿಬಿದ್ದು ದರೋಡೆಗಿಳಿದು ಬಂಧನಕ್ಕೆ ಒಳಗಾದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.

ಅಸಲಿ ಪೊಲೀಸರು ಕಳ್ಳರ ಜತೆಗೆ ಸೇರಿಕೊಂಡು ನಕಲಿ ದಾಳಿ ಮಾಡಿ ಚಿನ್ನದ ಆಭರಣಗಳನ್ನು ದೋಚಿ ಸಿಕ್ಕಿಬಿದ್ದಿದ್ದಾರೆ. ಅಸಲಿ ಪೊಲೀಸರು ಈಗ ದರೋಡೆಕೋರರ ಜತೆಗೆ ಜೈಲು ಪಾಲಾಗಿ ಕಂಬಿ ಎಣಿಸುತ್ತಿದ್ದಾರೆ.

ಅಂದಹಾಗೆ ಕಳ್ಳರು ಮತ್ತು ಪೊಲೀಸರು ಜತೆಗೂಡಿ ನಕಲಿ ಪೊಲೀಸ್ ರೇಡ್ ಮಾಡಿರುವ ದರೋಡೆಯ ರೋಚಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ನವೆಂಬರ್ 11 ರಂದು ಈ ಘಟನೆ ನಡೆದಿದೆ. ನಗರದ ನಗರ್ತಪೇಟೆಯ ಅಣ್ಣಯ್ಯ ಬೀದಿಯಲ್ಲಿ ಚಿನ್ನದ ಅಂಗಡಿಗೆ ಏಕಾಏಕಿ ಪೊಲೀಸರು ದಾಳಿ ಮಾಡಿದ್ದರು.

ನೀನು ಪರವಾನಗಿ ಇಲ್ಲದೇ ಅಂಗಡಿ ನಡೆಸುತ್ತಿದ್ದೀಯ. ಕದ್ದ ಚಿನ್ನ ಖರೀದಿಸಿರುವ ಮಾಹಿತಿ ಇದೆ ಎಂದು ಸಿಸಿಬಿ ಪೊಲೀಸರ ಶೈಲಿಯಲ್ಲೇ ದಾಳಿ ನಡೆಸಿ ಬರೋಬ್ಬರಿ 9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದರು.

ದಾಳಿ ನಡೆದ ಬಳಿಕ ಅಂಗಡಿ ಮಾಲೀಕ ಕಾರ್ತಿಕ್ ಅವರು ಪರಿಚಿತ ಪೊಲೀಸರ ಮೂಲಕ ದಾಳಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ದಾಳಿ ನಡೆಸಿದ್ದು ಅಸಲಿ ಪೊಲೀಸರಲ್ಲ, ದರೋಡೆಕೋರರು ಎಂಬ ಸಂಗತಿ ಅರಿವಿಗೆ ಬಂದಿತ್ತು.

ಕೂಡಲೇ ಹೋಗಿ ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು.

ಪೊಲೀಸರ ಸೋಗಿನಲ್ಲಿ ದರೋಡೆಕೋರರು ದಾಳಿ ನಡೆಸಿ ಚಿನ್ನಾಭರಣ ಕದ್ದಿದ್ದ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡಸಿದ್ದರು.

ಪ್ರಕರಣದ ತನಿಖೆ ನಡೆಸಿದ ಹಲಸೂರುಗೇಟ್ ಪೊಲೀಸರು ನಕಲಿ ದಾಳಿ ಮಾಡಿದ್ದ ಏಳು ಆರೋಪಿಗಳನ್ನು ಬಂಧಿಸಿದ್ದು, ಅದರಲ್ಲಿ ಇಬ್ಬರು ಅಸಲಿ ಪೊಲೀಸ್ ಕಾನ್ಸ್ಟೇಬಲ್ ಗಳು ನಕಲಿ ದಾಳಿಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಪೊಲೀಸ್ ಪೇದೆ ಅಶೋಕ್ ಸೇರಿ ಎಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಕಾನ್ಸ್ಟೇಬಲ್ ಚೌಡೇಗೌಡ ತಲೆಮರೆಸಿಕೊಂಡಿದ್ದಾನೆ.
ಚಿನ್ನದ ಅಂಗಡಿ ಮಾಲೀಕ ಕಾರ್ತೀಕ್ ಪರವನಾಗಿ ಪಡೆಯದೇ ಚಿನ್ನದ ಆಭರಣ ಮಾಡುತ್ತಿದ್ದರು. ಈ ವಿಷಯ ತಿಳಿದಿದ್ದ ಬಿಲ್ಡಿಂಗ್ ಮಾಲೀಕರ ಪುತ್ರ ಸೂರಜ್ ಕಳ್ಳರ ಜತೆ ಸೇರಿ ಪೊಲೀಸರ ಹೆಸರಿನಲ್ಲಿ ದಾಳಿ ನಡೆಸಿ ಹಣ ದೋಚಲು ಸಂಚು ರೂಪಿಸಿದ್ದಾರೆ.

ಅದಕ್ಕೆ ಅಸಲಿ ಪೊಲೀಸರ ನೆರವು ಪಡೆಯಲು ಮುಂದಾಗುವ ದರೋಡೆಕೋರರ ತಂಡ, ಅಪಘಾತ ಪ್ರಕರಣದಲ್ಲಿ ಪ್ರಮುಖ ಆರೋಪಿ ನದೀಮ್ ಗೆ ಪರಿಚಯವಾಗಿದ್ದ ಕಾನ್ಸ್ಟೇಬಲ್ ಗಳಾದ ಚೌಡೇಗೌಡ ಮತ್ತು ಅಶೋಕ್ ಜತೆ ಮಾತನಾಡಿ ಯೋಜನೆ ರೂಪಿಸಿದ್ದಾರೆ.

ಕಾರ್ತೀಕ್ ಪೊಲೀಸರಿಗೆ ದೂರು ಕೊಡಲ್ಲ ಎಂಬ ಧೈರ್ಯದ ಮೇಲೆಯೇ ಪ್ಲಾನ್ ನಂತೆ ನದೀಮ್ ನೇತೃತ್ದದಲ್ಲಿ ದರೋಡೆಕೋರರು ಪೊಲೀಸರ ಸೋಗಿನಲ್ಲಿ ದಾಳಿ ನಡೆಸಿದ್ದಾರೆ.

ಈ ದಾಳಿಯಲ್ಲಿ ಪೇದೆಗಳಾದ ಚೌಡೇಗೌಡ ಮತ್ತು ಅಶೋಕ್ ಪಾಲ್ಗೊಂಡಿದ್ದಾರೆ. ಇದೇ ಕಾರಣಕ್ಕೆ ಭಯ ಬಿದ್ದು ದಾಳಿ ವೇಳೆ ಅಂಗಡಿ ಮಾಲೀಕ ಸುಮ್ಮನಾಗಿದ್ದ. ಪರಿಚಿತ ಪೊಲೀಸರ ಮೂಲಕ ಪೊಲೀಸರ ದಾಳಿ ನಕಲಿ ಎಂದು ಗೊತ್ತಾದ ಬಳಿಕ ದೂರು ನೀಡಿದ್ದು, ಇದೀಗ ಅಸಲಿ ಪೊಲೀಸರ ಜತೆಗೂಡಿ ನಕಲಿ ದಾಳಿ ಮಾಡಿ ದರೋಡೆ ಮಾಡಿದ್ದ ಏಳು ಆರೋಪಿಗಳು ಅಂದರ್ ಆಗಿದ್ದಾರೆ.

ಕಾನ್‌ಸ್ಟೇಬಲ್ ಚೌಡೇಗೌಡ ತಪ್ಪಿಸಿಕೊಂಡಿದ್ದು,ಆತನಿಗಾಗಿ ಶೋಧ ನಡೆಸುತ್ತಿದ್ದಾರೆ. ದರೋಡೆ ಮಾಡಿದ್ದ 9 ಲಕ್ಷ ರೂ.ಗಳಲ್ಲಿ ತಲಾ ಒಂದೊಂದು ಲಕ್ಷ ಹಂಚಿಕೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..!

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..! ಉಡುಪಿ : ಉಡುಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
Copy Protected by Chetans WP-Copyprotect.