Monday, August 15, 2022

ಮಂಗಳೂರು ಏರ್ಪೋರ್ಟ್ ನಲ್ಲಿ ರ‍್ಯಾಪಿಡ್ ಪಿಸಿಆರ್ ಟೆಸ್ಟ್ : ಅನಿವಾಸಿಗಳ ಬೇಡಿಕೆಗೆ ಸ್ಪಂದಿಸಿದ ದ.ಕ ಡಿ ಸಿ

ದುಬೈ : ದುಬೈ ಹೋಗುವ ಪ್ರಯಾಣಿಕರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾಪಿಡ್ ಪರೀಕ್ಷೆ ನಡೆಸಲು ಅನುಕೂಲವಾಗುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಗೆ ಅನಿವಾಸಿ ಭಾರತೀಯರು ಹರ್ಷ ವ್ಯಕ್ತಪಡಿಸಿದೆ.

ಭಾರತದಿಂದ ಯುಎಇಗೆ ತೆರಳುವ ವಿಮಾನಕ್ಕೆ ಹಲವು ತಿಂಗಳು ನಿಷೇಧ ಹೇರಿದ್ದ ಯುಎಇ ಸರ್ಕಾರ ಆಗಸ್ಟ್ 5ರಂದು ನಿಷೇಧ ಹಿಂತೆಗೆದು ಹಲವು ಷರತ್ತು ಗಳೊಂದಿಗೆ ಪ್ರಯಾಣಿಸಲು ಅನುಮತಿ ನೀಡಿತ್ತು.

ಯುಎಇ ರೆಸಿಡೆನ್ಸ್ ವಿಸಾ ಹೊಂದಿರಬೇಕು, ಎರಡು ವ್ಯಾಕ್ಸೀನೇಷನ್ ಪಡೆದಿರಬೇಕು, 48 ಘಂಟೆ ಮುಂಚೆ ಪಿಸಿಆರ್ ಟೆಸ್ಟ್ ನಲ್ಲಿ ಕೊರೋನ ನೆಗೆಟಿವ್ ರಿಪೋರ್ಟ್ ಪಡೆದಿರಬೇಕು ಎಂಬ ಷರತ್ತಿನೊಂದಿಗೆ ಪ್ರಯಾಣ ಹೊರಡುವ ಮುನ್ನ ವಿಮಾನ ನಿಲ್ದಾಣದಲ್ಲಿಯೂ ರ‍್ಯಾಪಿಡ್ ಆರ್ಟಿ ಪಿಸಿಆರ್ ಟೆಸ್ಟ್ ನಡೆಸಬೇಕು ಎಂಬ ಹೊಸ ಷರತ್ತು ಸೇರ್ಪಡೆ ಮಾಡಿದ್ದು, ಮಂಗಳೂರು ವಿಮಾನ ನಿಲ್ದಾಣದಲ್ಲಿ ರ‍್ಯಾಪಿಡ್ ಆರ್ಟಿ ಪಿಸಿಆರ್ ಟೆಸ್ಟ್ ವ್ಯವಸ್ಥೆ ಇಲ್ಲದ ಕಾರಣ ಮಂಗಳೂರಿನಿಂದ ಯುಎಇಗೆ ವಿಮಾನ ಯಾನ ಆರಂಭವಾಗಿಲ್ಲ. ಕರಾವಳಿಯ ಕರ್ನಾಟಕದ ಸಾವಿರಾರು ಅನಿವಾಸಿಗಳು ಯುಎಇಗೆ ತೆರಳಲು ಬೆಂಗಳೂರು, ಮುಂಬೈ ವಿಮಾನ ನಿಲ್ದಾಣದ ಮೊರೆ ಹೋಗಬೇಕಾಗಿತ್ತು.

ಅನಿವಾಸಿ ಕನ್ನಡಿಗರ ಈ ಸಮಸ್ಯೆಗಳ ಕುರಿತು ಕನ್ನಡಿಗಾಸ್ ಫೆಡರೇಷನ್ ಸಂಚಾಲಕರಾದ ಹಿದಾಯತ್ ಅಡ್ಡೂರ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ರವರ ಗಮನಕ್ಕೆ ತಂದಾಗ ಅತೀ ಶೀಘ್ರದಲ್ಲಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಅವರು ನೀಡಿದ ಭರವಸೆಯಂತೆ ಇಂದು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ರ‍್ಯಾಪಿಡ್ ಆರ್ಟಿ ಪಿಸಿಆರ್ ಟೆಸ್ಟ್ ಮಾಡುವ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು, ಶೀಘ್ರವೇ ಮಂಗಳೂರು ಮೂಲಕ ಯುಎಇ ವಿಮಾನಯಾನ ಆರಂಭಗೊಳ್ಳಲಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಸ್ಪಂದನೆಗೆ ಹಿದಾಯತ್ ಅಡ್ಡೂರ್, ಕೆಎನ್ಆರೈ ಯುಎಇ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಇ ಮೂಳೂರು, ಬಿ.ಡಬ್ಲ್ಯು.ಎಫ್ ಅಧ್ಯಕ್ಷ ಮಹಮ್ಮದ್ ಆಲಿ ಉಚ್ಚಿಲ್, ನಮ್ಮ ನಾಡ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಸಲೀಂ, ಕನ್ನಡ ಮಿತ್ರರು ಯುಎಇ ಅಧ್ಯಕ್ಷ ಶಶಿಧರ ನಾಗರಾಜಪ್ಪ ಹಾಗೂ ಇತರ ಕನ್ನಡ ಪರ ಸಂಘಟನೆಗಳು, ಕನ್ನಡಿಗರು ಧನ್ಯವಾದ ವ್ಯಕ್ತಪಡಿಸಿದ್ದಾರೆ

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿ: ಮರೋಡಿಯಲ್ಲಿ ಆಟಿಡೊಂಜಿ ಕೆಸರ್‍ದ ಕೂಟ ಸಂಭ್ರಮ

ವೇಣೂರು: ಮರೋಡಿ ಅರುಣೋದಯ ಯುವಕ ಮಂಡಲದ ಆಶ್ರಯದಲ್ಲಿ ಆಟಿಡೊಂಜಿ ಕೆಸರ್‍ದ ಕೂಟ ಕಾರ್ಯಕ್ರಮವು ಮರೋಡಿಯ ಬೊವೂರಿ ಜಯ ಪೂಜಾರಿಯವರ ಗದ್ದೆಯಲ್ಲಿ ಭಾನುವಾರ ನಡೆಯಿತು.ಶಾಸಕ ಹರೀಶ್ ಪೂಂಜ ಕ್ರೀಡಾಕೂಟವನ್ನು ಉದ್ಘಾಟಿಸಿ, ನಮ್ಮ ಮಣ್ಣಿನ ಕ್ರೀಡೆಯನ್ನು...

ಅಬ್ಬಕ್ಕನ ನಾಡಿನಲ್ಲಿ ಅತೀ ಎತ್ತರದಲ್ಲಿ ಶಾಶ್ವತವಾಗಿ ಅರಳಿದ ತಿರಂಗಾ

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮಂಗಳೂರು ಹೊರವಲಯದ ಅತ್ಯಂತ ಎತ್ತರ ಧ್ವಜಸ್ತಂಭದಲ್ಲಿ ಇಂದು ಬೃಹತ್ ರಾಷ್ಟ್ರ ಧ್ವಜಾರೋಹಣ ನೆರವೇರಿತು.ತೊಕ್ಕೊಟ್ಟುವಿನ ಓವರ್ ಬ್ರಿಡ್ಜ್ ಬಳಿ ನಿರ್ಮಾಣಗೊಂಡ 110 ಅಡಿ ಎತ್ತರದ ಧ್ವಜ ಸ್ಥಂಭದಲ್ಲಿ ಧ್ವಜಾರೋಹಣ...

ಕನಸಿನ, ಆಕರ್ಷಣೆಯ ಹಾಗೂ ಅಭಿವೃದ್ದಿಯ ಮಂಗಳೂರಿಗೆ ಪಣ: ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

ಮಂಗಳೂರು: ಕನಸಿನ, ಆಕರ್ಷಣೆಯ ಹಾಗೂ ಅಭಿವೃದ್ದಿಯ ಮಂಗಳೂರನ್ನು ಮಾಡಲು ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್‌ ಕುಮಾರ್‌ ಹೇಳಿದ್ದಾರೆ.ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಸ್ವಾತಂತ್ರ್ಯದ...