ಪುತ್ತೂರು : ಸ್ವಾತಂತ್ರ್ಯ ಅಮ್ರತ ಮಹೋತ್ಸವದ ಅಂಗವಾಗಿ ಕಬಕ ಗ್ರಾಮ ಪಂಚಾಯತ್ ವತಿಯಿಂದ ಆಯೋಜಿಸಿದ್ದ ರಥದಲ್ಲಿ ಬ್ರಿಟೀಷರಿಗೆ ಕ್ಷಮಾಪಣ ಪತ್ರ ಬರೆದ ದೇಶದ್ರೋಹಿ ಸಾವರ್ಕರ್ ಚಿತ್ರ ಬಳಸುವ ಮೂಲಕ ಕಬಕ ಪಂಚಾಯತ್ ಆಡಳಿತ ನೈಜ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದೆ ಎಂದು ಎಸ್ ಡಿ ಪಿಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆರೋಪಿಸಿದೆ.
ಇದನ್ನು ಪ್ರಶ್ನಿಸಿದ ಎಸ್ ಡಿಪಿಐ ಕಾರ್ಯಕರ್ತರನ್ನು ಶಾಸಕರ ಕುಮ್ಮಕ್ಕಿನಿಂದ ಬಂಧಿಸಿದ ಕ್ರಮವನ್ನು ಎಸ್ ಡಿಪಿಐ ಖಂಡಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆಮಾಡಿರುವ ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಅಥಾವುಲ್ಲ ಜೋಕಟ್ಟೆ ಕಬಕ ಪಂಚಾಯತ್ ಆಡಳಿತವು ಯಾವುದೇ ಸದಸ್ಯರ ಗಮನಕ್ಕೆ ತರದೆ ಏಕಾಏಕಿ ಸಂವಿಧಾನ ವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ ಪಿಡಿಯೊ ಹಾಗೂ ಇತರ ಸಿಬ್ಬಂದಿಗಳ ಮೇಲೆ ಪೊಲೀಸರು ಸ್ವಯಂ ಪ್ರೇರಿತ ದೇಶದ್ರೋಹಿ ಕೇಸು ದಾಖಲಿಸಬೇಕೆಂದು ಒತ್ತಾಯಿಸಿದೆ.