Monday, July 4, 2022

‘ಕಲ್ಲಡ್ಕ ಶಾಲೆಯ ಬಡಮಕ್ಕಳ ಅನ್ನವನ್ನು ಕಸಿದ ದುರುಳ’ ಎಂದು ಮಾಜಿ ಸಚಿವ ರೈ ವಿರುದ್ಧ ಅಪಪ್ರಚಾರ: ದೂರು

ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ಅವರ ಬಗ್ಗೆ ವಾಟ್ಸಪ್ ಗ್ರೂಪ್‌ ನಲ್ಲಿ ಮಾನಹಾನಿಕರ ಸುದ್ದಿ ಹಬ್ಬಿಸಿದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಮಾಜಿ ಸಚಿವ ಬಿ‌.ರಮಾನಾಥ ರೈ ಅವರ ಬಗ್ಗೆ ಇಲ್ಲಸಲ್ಲದ ಮಾನಹಾನಿಕರ ವಿಷಯಗಳನ್ನು 9731350751 ಮೊಬೈಲ್ ನಂ. ನಿಂದ ವಾಟ್ಸಪ್ ಗ್ರೂಪ್ ಗಳಿಗೆ ಶೇರ್ ಮಾಡಿದ್ದಾರೆ. ಅನಗತ್ಯ ಮತ್ತು ಆಧಾರರಹಿತ ವಿಷಯಗಳಾದ “ಕರ್ನಾಟಕದಲ್ಲಿ 23 ಹಿಂದೂ ಕಾರ್ಯ ಕರ್ತರ ಕೊಲೆ ಪ್ರಕರಣದಲ್ಲಿ ಪರೋಕ್ಷವಾಗಿ ಭಾಗಿಯಾಗಿ,

ಕಲ್ಲಡ್ಕ ಶಾಲೆಯ ಬಡಮಕ್ಕಳ ಹೊಟ್ಟೆಯ ಹಸಿವಿನ ಅನ್ನವನ್ನು ಕಸಿದ ದುರುಳ, ಇದ್ದ ಕಡೆ ಎಲ್ಲ ತೆಂಗಿನ ಕಾಯಿ ಹೊಡೆದು ಸಂಸದರ ಅನುದಾನವನ್ನು ತನ್ನದು ಎಂದು ಹೇಳುತ್ತಾ ತಿರುಗುವ ಬಡಪಾಯಿ ರಮಾನಾಥ ರೈ” ಎಂದು ಬರೆದು ಸಾಲೆತ್ತೂರು ಗ್ರಾಮದ ಅಗರಿ ಬಾಳಿಕೆ ನಿವಾಸಿ ಪ್ರಶಾಂತ್ ಶೆಟ್ಟಿ ಅವರು ಎಲ್ಲಾ ಗ್ರೂಪ್ ಗಳಿಗೆ ಫಾರ್ವಡ್ ಮಾಡಿದ್ದಾರೆ.

ಇದೊಂದು ಗಂಭೀರ ಆರೋಪವಾಗಿದ್ದು, ಈ ಆರೋಪ ಮಾಡುವುದರ ಮೂಲಕ ಪರಿಸರದಲ್ಲಿ ಗಲಭೆ, ಶಾಂತಿ ಮತ್ತು ಸೌಹಾರ್ದ ವನ್ನು ಕದಡುವ ಹುನ್ನಾರ ಇದೆ, ಆದುದರಿಂದ ಈ ಪ್ರಕರಣ ವನ್ನು ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಆರೋಪಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

‘ಕುಡ್ಲ ನಾದುಂಡುಯೇ’: ಮಂಗಳೂರಿನಲ್ಲಿ ಮುಗಿಯುತ್ತಿಲ್ಲ ಪೌರಕಾರ್ಮಿಕರ ಧರಣಿ

ಮಂಗಳೂರು: ರಾಜ್ಯದಾದ್ಯಂತ ಪೌರ ಕಾರ್ಮಿಕರ ಮುಷ್ಕರ ನಾಲ್ಕನೇ ದಿನದತ್ತ ಸಾಗಿದ ಹಿನ್ನೆಲೆ  ಮಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ಮಾಡದೆ ಗಬ್ಬುನಾತ ಹೊಡೆಯುತ್ತಿದೆ.ಧಾರಾಕಾರವಾಗಿ ಮಳೆಯೂ ಸುರಿಯುತ್ತಿರುವುದರಿಂದ ತ್ಯಾಜ್ಯಗಳು ಚರಂಡಿಯಲ್ಲಿ, ನೀರಿನಲ್ಲಿ ತೇಲುತ್ತಿದೆ. ದ್ರವ ತ್ಯಾಜ್ಯಗಳು ಜನರ...

ಪುತ್ತೂರಿನಲ್ಲಿ ಬೈಕ್‌ – ಕಾರು ಡಿಕ್ಕಿ: ಓರ್ವ ಜೀವಾಂತ್ಯ

ಪುತ್ತೂರು: ಬೈಕ್ ಮತ್ತು ಮಾರುತಿ ಕಾರು ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹೊರ ವಲಯದ ಕುಂಬ್ರದಲ್ಲಿ ನಡೆದಿದೆ.ಕು೦ಬ್ರ...

ಪೌರಕಾರ್ಮಿಕರ ಬೆಂಬಲಕ್ಕೆ ನಿಂತ ವಿರೋಧ ಪಕ್ಷದ ಉಪನಾಯಕ ಖಾದರ್

ಮಂಗಳೂರು: ರಾಜ್ಯದಾದ್ಯಂತ ನಡೆಯುತ್ತಿರುವ ಪೌರ ಕಾರ್ಮಿಕರ ಮುಷ್ಕರ ನಾಳೆ ಐದನೇ ದಿನಕ್ಕೆ ಕಾಲಿರಿಸಲಿದೆ. ರಾಜ್ಯ ಘಟಕದ ಸೂಚನೆಯನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪ್ರತಿಭಟನೆ ಮುಂದುವರಿದಿದೆ.ಸ್ವಚ್ಛತಾ ಕೆಲಸವನ್ನು ಸಂಪೂರ್ಣ ಸ್ಥಗಿತಗೊಳಿಸಿ ಪೌರ ಕಾರ್ಮಿಕರು ಮಂಗಳೂರಿನಲ್ಲಿ...