Connect with us

    LATEST NEWS

    ಕತ್ರಿನಾ ಕೈಫ್​ ಕೆನ್ನೆಯಷ್ಟು ನೈಸ್‌ ರೋಡ್‌ ಮಾಡುತ್ತೇನೆಂದ ಸಚಿವನ ಹೇಳಿಕೆ ವೈರಲ್‌

    Published

    on

    ಜೈಪುರ: ರಾಜಸ್ಥಾನ ಸಚಿವ ನೀಡಿದ ಹೇಳಿಕೆಯೊಂದು ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.
    ಪಂಚಾಯತ್​ ರಾಜ್​ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ರಾಜೇಂದ್ರ ಸಿಂಗ್​ ಗೌಡ,

    ಬಾಲಿವುಡ್​ ಬ್ಯೂಟಿ ಕತ್ರಿನಾ ಕೈಫ್​ ಅವರ ಕೆನ್ನೆಯಷ್ಟು ಸೊಗಸಾದ ರಸ್ತೆಗಳನ್ನು ಮಾಡಿಸುತ್ತೇನೆಂದು ಭರವಸೆ ನೀಡಿದ್ದಾರೆ.


    ರಾಜಸ್ಥಾನದ ಜಂಜುನು ಜಿಲ್ಲೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುವ ವೇಳೆ ಸಚಿವರು ಈ ಭರವಸೆಯನ್ನು ನೀಡಿದ್ದಾರೆ.

    ಗೌಡ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್​ಪಿಯಲ್ಲಿ ಟಿಕೆಟ್​ ಪಡೆದು ಜಯ ಸಾಧಿಸಿ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ.
    2015ರಲ್ಲಿ ಆರ್​ಜೆಡಿ ನಾಯಕ ಲಾಲು ಪ್ರಸಾದ್​ ಯಾದವ್​ ಹೇಮಾಮಾಲಿನಿ ಕೆನ್ನೆಯಂತ ನಯವಾದ ರಸ್ತೆಗಳನ್ನು ಮಾಡಿಸುವ ಭರವಸೆ ನೀಡಿದ್ದರು. 2013ರಲ್ಲಿ ಉತ್ತರ ಪ್ರದೇಶದ ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಸಚಿವ ರಾಜಾರಾಮ್​ ಪಾಂಡೆ ಮಾತನಾಡಿ,

    ಪ್ರತಾಪಗಢ ಜಿಲ್ಲೆಯಲ್ಲಿರುವ ರಸ್ತೆಗಳನ್ನು ಹೇಮಾಮಾಲಿನಿ ಮತ್ತು ಮಾಧುರಿ ದೀಕ್ಷಿತ್​ ಗಲ್ಲದಂತೆ ಸೊಗಸಾಗಿ ಮಾಡಲಾಗುವುದು ಎಂದಿದ್ದರು. ಆದರೆ, ರಾಜಕಾರಣಿಗಳು ನೀಡಿದ ಭರವಸೆ ಮಾತ್ರ ಇಂದಿಗೂ ಭರವಸೆ ಆಗಿಯೇ ಉಳಿದಿವೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಚಿನ್ನದ ಅಂಗಡಿಗೆ ಬಂದು ಬೆಲೆಬಾಳುವ ಮಾಂಗಲ್ಯ ಸರದೊಂದಿಗೆ ಎಸ್ಕೇಪ್ ಆದ ಕಳ್ಳ

    Published

    on

    ಕಾರ್ಕಳ: ಗ್ರಾಹಕನ ಸೋಗಿನಲ್ಲಿ ಚಿನ್ನದ ಅಂಗಡಿಗೆ ಬಂದ ಮಧ್ಯ ವಯಸ್ಕ ವ್ಯಕ್ತಿಯೊಬ್ಬ ಮಾಂಗಲ್ಯ ಸರದೊಂದಿಗೆ ಪರಾರಿಯಾದ ಘಟನೆ ಕಾರ್ಕಳದಲ್ಲಿ ನಡೆದಿದೆ.

    ಸಪ್ಟೆಂಬರ್ 11 ರಂದು ಈ ಘಟನೆ ನಡೆದಿದ್ದು, ಮಾಂಗಲ್ಯ ಸರ ಖರೀದಿಯ ನೆಪದಲ್ಲಿ ಆರೋಪಿ ಅಂಗಡಿಗೆ ಬಂದಿದ್ದ. ಉಡುಪಿ ಜಿಲ್ಲೆಯ ಕಾರ್ಕಳದ ಉಷಾ ಜ್ಯುವೆಲ್ಲರಿಗೆ ಮಧ್ಯಾಹ್ನ 3 ಗಂಟೆಯ ವೇಳೆಗೆ ಆರೋಪಿ ಎಂಟ್ರಿಕೊಟ್ಟಿದ್ದ. ಅಲ್ಲಿದ್ದ ಸಿಬ್ಬಂದಿ ಯುವತಿಯ ಬಳಿ ಮಾಂಗಲ್ಯ ಸರ ತೋರಿಸುವಂತೆ ಕೇಳಿ ಬಳಿಕ ಅದರ ರೇಟ್‌ ಕೂಡಾ ಕೇಳಿದ್ದ. ಸೇಲ್ಸ್‌ ಗರ್ಲ್ ಮಾಂಗಲ್ಯ ಸರಕ್ಕೆ 1 ಲಕ್ಷದ 37 ಸಾವಿರ ರೂಪಾಯಿಗಳಾಗುತ್ತವೆ ಎಂದು ಹೇಳಿದಾಗ ನಗುತ್ತಲೇ ಸರ ಕೈಗೆತ್ತಿಕೊಂಡ ಆರೋಪಿ ಸರದೊಂದಿಗೆ ಎಸ್ಕೇಪ್ ಆಗಿದ್ದಾನೆ.

    ಸೇಲ್ಸ್‌ ಗರ್ಲ್‌ ತಕ್ಷಣ ಕಳ್ಳ ಕಳ್ಳ ಅಂತ ಬೊಬ್ಬೆ ಹೊಡೆದು ಹೊರಗಿದ್ದ ಜನರನ್ನು ಎಚ್ಚರಿಸಿದ್ದಾಳೆ. ಈ ವೇಳೆ ಸಾರ್ವಜನಿಕರ ಕೈಗೆ ಆರೋಪಿ ಸಿಕ್ಕಿ ಹಾಕಿಕೊಂಡಿದ್ದು, ಸಾರ್ವಜನಿಕರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯು ಹೆರ್ಮುಂಡೆ ಗ್ರಾಮದ ನಿವಾಸಿ ಜಯರಾಮ್‌ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಸದ್ಯ ಆರೋಪಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಾರಣ ಮಾಂಗಲ್ಯ ಸರವನ್ನು ಜ್ಯುವೆಲ್ಲರಿ ಮಾಲಕರಿಗೆ ಒಪ್ಪಿಸಲಾಗಿದೆ.

    Continue Reading

    LATEST NEWS

    ದೈತ್ಯಾಕಾರದ ಬಾಡಿ ಬಿಲ್ಡರ್ ಇನ್ನಿಲ್ಲ

    Published

    on

    ಮಂಗಳೂರು/ಹೊಸದಿಲ್ಲಿ: ಜಗತ್ತಿನ ಫೇಮಸ್ ಆಂಡ್ ಫೇವರೇಟ್ ಬಾಡಿ ಬಿಲ್ಡರ್ ಇಲಿಯಾ ಗೋಲೆಮ್ ಯಾಫೆಮ್‌ಚೆಕ್(36) ಹೃದಯಘಾತದಿಂದ ನಿಧನರಾಗಿದ್ದಾರೆ.


    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಡಿ ಬಿಲ್ಡರ್ :
    ಸೆ.6 ರಂದು ಹೃದಯಘಾತವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 6 ಅಡಿ ಎತ್ತರ ಹಾಗೂ 154 ಕೆ.ಜಿ ತೂಕದವನ್ನು ಹೊಂದಿದ್ದರು. ದಿ ಮ್ಯೂಟಂಟ್ ಎಂದು ಪ್ರಸಿದ್ಧಿಯಾಗಿದ್ದ ಇಲಿಯಾ ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಕೋಮಾಗೆ ಹೋಗಿದ್ದರು. ಕೊನೆಗೆ ಸೆ.11ರಂದು ಕೊನೆಯುಸಿರೆಳೆದರು ಎಂಬುವುದಾಗಿ ವರದಿಯಾಗಿದೆ.

    Continue Reading

    LATEST NEWS

    ಉತ್ತರಾಖಂಡದಲ್ಲಿ ಭೂಕುಸಿತ: ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬಂದ್

    Published

    on

    ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿ, ಬದರಿನಾಥ ರಾಷ್ಟ್ರೀಯ ಹೆದ್ದಾರಿಯು ಬಂದ್ ಆಗಿದೆ ಎಂದು ಜಿಲ್ಲಾಡಳಿತ ಇಂದು ತಿಳಿಸಿದೆ.

    ಭೂಕುಸಿತ ಸಂಭವಿಸಿ ಬೆಟ್ಟಗಳಿಂದ ಕಲ್ಲುಗಳು ಉರುಳಿ ರಸ್ತೆಗಳ ಮೇಲೆ ಬಿದ್ದಿದೆ. ಪರಿಣಾಮ ಲಂಬಗಡ, ನಂದಪ್ರಯಾಗ, ಸೋನಾಳ ಮತ್ತು ಬ್ಯಾರೇಜ್ ಕುಂಜ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕಚೇರಿ ಹೇಳಿದೆ. ಜೊತೆಗೆ ಸಾಕೋಟ್-ನಂದಪ್ರಯಾಗ ನಡುವಿನ ಮಾರ್ಗವನ್ನು ಕೂಡ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇನ್ನು ಕಾಮೇದಾ ಬಳಿಯ ಬದರಿನಾಥ ರಾಷ್ಟ್ರೀಯ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಚಮೋಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಇತ್ತೀಚೆಗೆ ಕೇದಾರನಾಥದ ಬಳಿಯ ಲಿಂಚೋಲಿಯಲ್ಲಿನ ಶಿಬಿರದಲ್ಲಿ ಭೂಕುಸಿತ ಉಂಟಾಗಿತ್ತು. ಋಷಿಕೇಶದ ಶಿವಮಂದಿರ ಮತ್ತು ಮೀರಾನಗರ ಪ್ರದೇಶಗಳ ಬಳಿ ಹೊಳೆಗಳಲ್ಲಿ 2 ಮೃತದೇಹಗಳು ಪತ್ತೆಯಾಗಿದ್ದವು.

    Continue Reading

    LATEST NEWS

    Trending