Monday, August 15, 2022

ಇಷ್ಟೇ ಸೊಂಟದ ಸುತ್ತಳತೆ, ಇಷ್ಟೇ ಇಂಚಿನ ಪಾದ ಇರುವ ಹುಡುಗಿ ಬೇಕೆಂದ ಭೂಪ: ಬೇಡಿಕೆ ನೋಡಿ ವ್ಯಂಗ್ಯವಾಡಿದ ನೆಟ್ಟಿಗರು

ಹೊಸದಿಲ್ಲಿ: ಸಂಗಾತಿಗಳನ್ನು ಆಯ್ಕೆ ಮಾಡಲೆಂದೇ ಇರುವ ಜಾಹಿರಾತು ವೇದಿಕೆಗಳಲ್ಲಿ ‘ನೋಡಲು ಚೆನ್ನಾಗಿರಬೇಕು’, ‘ಎತ್ತರ 5 ಅಡಿ ಸಾಕು’, ‘ಪದವಿ ಪಡೆದಿರಬೇಕು’, ’24 ವರ್ಷದವಳಾಗಿರಬೇಕು’, ಈ ರೀತಿ ಬೇಡಿಕೆಗಳನ್ನು ಇಟ್ಟಿರುವುದನ್ನು ನಾವು ನೀವು ನೋಡಿರುತ್ತೀವಿ.

ಆದರೆ ಇಲ್ಲೊಬ್ಬ ವ್ಯಕ್ತಿ ಹುಡುಗಿಯ ಬ್ರಾ ಸೈಜ್, ಸೊಂಟದ ಸುತ್ತಳತೆ, ಆಕೆಯ ಉಡುಪು ಸೇರಿ ಇನ್ನಿತರ ಪಟ್ಟಿಯನ್ನು ನೀಡಿ ವೆಬ್‌ಸೈಟ್‌ನ ಕೆಂಗಣ್ಣಿಗೆ ಗುರಿಯಾಗಿದ್ದಾನೆ.


ಈತನ ಬೇಡಿಕೆ ನೋಡಿ ಸಾಮಾಜಿಕ ಜಾಲತಾಣದಲ್ಲಿ ಜನರು ವ್ಯಂಗ್ಯ ಮಾಡಿದ್ದಾರೆ. ತನ್ನನ್ನು ವರಿಸುವವಳ ‘ಎತ್ತರ 5.2 ಅಡಿಯಿಂದ 5.6 ಇರಬೇಕು,

47-52 ಕೆಜಿ ತೂಕ ಇರಬೇಕು, ಸೊಂಟದ ಸುತ್ತಳತೆ 12-16 ಇಂಚು ಸಾಕು, ಬ್ರಾ ಗಾತ್ರ 32b ರಿಂದ 32c ಇರಬೇಕು, ಪಾದಗಳು 6-7 ಇಂಚು ಉದ್ದ ಇರಬೇಕು’ ಎಂದು ‘ಬೆಟರ್‌ಹಾಫ್‌.ಎಐ’ ಎಂಬ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನ ತನ್ನ ಪ್ರೊಫೈಲ್‌ನ ‘ಬಯೋ’ ವಿಭಾಗದಲ್ಲಿ ಬೇಡಿಕೆ ಇರಿಸಿದ್ದಾನೆ.

ಇವಿಷ್ಟೇ ಅಲ್ಲದೇ, ಇವನನ್ನು ವರಿಸುವವಳು ‘18-26 ವಯಸ್ಸಿನವಳಾಗಿರಬೇಕಂತೆ, ನಾಯಿಯನ್ನು ಪ್ರೀತಿಸುವ, ಮಕ್ಕಳನ್ನು ಇಷ್ಟಪಡದ, ಪ್ರವಾಸ ಪ್ರಿಯೆ ಆಗಿರಬೇಕು. 2ಎ ಕೆಟಗರಿಯವಳು, ಕುಟುಂಬಸ್ಥರು ಹಾಗೂ ಸಮಾಜದಲ್ಲಿ ಬೆರೆಯುವ ಮನಸ್ಥಿತಿ ಹೊಂದಿದವಳು,

ಹಾಸ್ಯ ಮನೋಭಾವ ಇದ್ದು, ಮೆನಿಕ್ಯೂರ್‌/ ಪೆಡಿಕ್ಯೂರ್‌ ಮಾಡಿಸಿಕೊಳ್ಳುವ ಜತಗೆ ಸ್ವಚ್ಛತೆ ಕಾಪಾಡಿಕೊಳ್ಳುವವಳು ಆಗಿರಬೇಕು, ಸಿನಿಮಾ ವೀಕ್ಷಣೆ, ಸಭ್ಯ ಬಟ್ಟೆ ಧರಿಸುವವಳು, ಜತೆಗೆ ನಿಷ್ಠೆ, ಪ್ರಾಮಾಣಿಕತೆಯಿಂದ ಇರುವವಳು ಆದರೆ ಮದುವೆಗೆ ಸಿದ್ಧ’ ಎಂದು ಇಷ್ಟುದ್ದ ಪಟ್ಟಿ ಮಾಡಿದ್ದಾನೆ.

ಸದ್ಯ ಈತನ ಹಲವು ಬೇಡಿಕೆಗಳ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇತ್ತ ‘ವೈಯಕ್ತಿಕ’ ವಿಷಯಗಳ ಕುರಿತು ಮಾಹಿತಿ ಕೇಳಿದ ಹಿನ್ನೆಲೆಯಲ್ಲಿ ಇದು ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನ ನಿಯಮಗಳ ಉಲ್ಲಂಘನೆಯಾಗಿದ್ದು,

‘ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸಂಸ್ಥೆ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದೆ.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿ: ಮರೋಡಿಯಲ್ಲಿ ಆಟಿಡೊಂಜಿ ಕೆಸರ್‍ದ ಕೂಟ ಸಂಭ್ರಮ

ವೇಣೂರು: ಮರೋಡಿ ಅರುಣೋದಯ ಯುವಕ ಮಂಡಲದ ಆಶ್ರಯದಲ್ಲಿ ಆಟಿಡೊಂಜಿ ಕೆಸರ್‍ದ ಕೂಟ ಕಾರ್ಯಕ್ರಮವು ಮರೋಡಿಯ ಬೊವೂರಿ ಜಯ ಪೂಜಾರಿಯವರ ಗದ್ದೆಯಲ್ಲಿ ಭಾನುವಾರ ನಡೆಯಿತು.ಶಾಸಕ ಹರೀಶ್ ಪೂಂಜ ಕ್ರೀಡಾಕೂಟವನ್ನು ಉದ್ಘಾಟಿಸಿ, ನಮ್ಮ ಮಣ್ಣಿನ ಕ್ರೀಡೆಯನ್ನು...

ಮಂಗಳೂರು: ಕಂದಾವರ ನೂರುಲ್ ಇಸ್ಲಾಂ ಮಸ್ಜಿದ್‌- ಮದರಸದಲ್ಲಿ 75ರ ಸ್ವಾತಂತ್ರ್ಯ ಸಂಭ್ರಮ

ಮಂಗಳೂರು: ನೂರುಲ್ ಇಸ್ಲಾಂ ಮಸ್ಜಿದ್ ಮತ್ತು ಮದರಸ ಮೂಡುಕರೆ ಕಂದಾವರ ಇಲ್ಲಿ 75ನೇ ಸ್ವಾತಂತ್ರ್ಯವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.ಗೌರವಧ್ಯಕ್ಷರಾದ ಎಂ ಎಸ್ ಅಲಿಯಬ್ಬ ಅವರು ಸಬೀಹ್ ಅಲಿ ಅವರಿಂದ ಗೌರವವಂದನೆಯನ್ನು ಸ್ವೀಕರಿಸಿ ಧ್ವಜಾರೋಹಣ...

ಸೌದಿ ಅರೇಬಿಯಾದಲ್ಲಿ ಭಾರತದ ಸ್ವಾತಂತ್ರ್ಯ ಸಂಭ್ರಮ: ಕೇಕ್‌ ಕತ್ತರಿಸಿ ಆಚರಿಸಿದ ಅನಿವಾಸಿಗರು

ಮಂಗಳೂರು: ಇಂದು ಭಾರತ ದೇಶಾದ್ಯಂತ ಹಬ್ಬದ ವಾತಾವರಣ. ಸ್ವಾತಂತ್ರ್ಯದ ಅಮೃತಮಹೋತ್ಸವವಾದ ಇಂದು ಬೆಳಗ್ಗೆ ದೇಶಾದ್ಯಂತ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸುತ್ತಿದ್ದರೆ ಸಪ್ತ ಸಮುದ್ರಾಚೆಗಿರುವ ಸೌದಿ ಅರೇಬಿಯಾದಲ್ಲಿ ಅನಿವಾಸಿ ಭಾರತೀಯರು ಸ್ವಾತಂತ್ರ್ಯವನ್ನು ಆಚರಿಸಿದರು.ಸೌದಿ ಅರೇಬಿಯಾ...