LATEST NEWS
ರಘುಪತಿ ಭಟ್ ಪತ್ನಿ ಅಪಹರಣ ಪ್ರಕರಣ- ಆರೋಪಿಗೆ ಒಂದು ವರ್ಷ ಜೈಲು..!
ಉಡುಪಿ: ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿಸಿರುವ ಪ್ರಕರಣದಲ್ಲಿ ಆರೋಪಿ ಅತುಲ್ ರಾವ್‌ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಉಡುಪಿ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ.
2008ರ ಜೂನ್ 10ರಂದು ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯ ಕರಂಬಳ್ಳಿಯ ತನ್ನ ಮನೆಯಿಂದ ನಾಪತ್ತೆಯಾಗಿದ್ದರು. ಅಂದು ರಘುಪತಿ ಭಟ್ ಅವರ ಬಾಲ್ಯ ಸ್ನೇಹಿತ, ಅದೇ ಊರಿನ ಅತುಲ್ ರಾವ್, ಮನೆಯಿಂದ ಪದ್ಮಪ್ರಿಯ ಅವರನ್ನು ಆಕೆಯ ಕಾರಿನಲ್ಲಿ ಕರೆದು ಕೊಂಡು ಹೋಗಿ ಕುಂಜಾರುಗಿರಿಯ ದಾರಿ ಮಧ್ಯೆ ಕಾರನ್ನು ಇಟ್ಟು, ಅದರ ಒಳಗೆ ಬಳೆಯ ಚೂರು, ರಕ್ತದ ಕಲೆಗಳನ್ನು ಮಾಡಿ ಅಪಹರಣದ ನಾಟಕ ಮಾಡಿದ್ದರೆಂದು ದೂರಲಾಗಿತ್ತು. ಈ ಬಗ್ಗೆ ರಘುಪತಿ ಭಟ್ 2008ರ ಜೂ.19ರಂದು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರಂಭದಲ್ಲಿ ಮಣಿಪಾಲ ಪೊಲೀಸರು ತನಿಖೆ ನಡೆಸಿ, ಬಳಿಕ ಸಿಒಡಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಆರೋಪಿ ವಿರುದ್ಧ ಸಿಒಡಿ ಪೊಲೀಸರು 2008ರ ಆ.22ರಂದು ಪ್ರಾರಂಭಿಕ ಮತ್ತು 2009ರ ಜು.29ರಂದು ಅಂತಿಮ ಚಾರ್ಜ್‌ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು, ಇದರಲ್ಲಿ ಮೋಸ, ವಂಚನೆ, ನಕಲಿ ದಾಖಲೆ ಸೃಷ್ಟಿ, ನಕಲಿ ದಾಖಲೆಯನ್ನು ನೈಜ ದಾಖಲೆ ಎಂಬುದಾಗಿ ಬಿಂಬಿಸಿ ಹಾಜರುಪಡಿಸಿ ದುರುಪಯೋಗ ಪಡಿಸಿರುವ ದೋಷಾರೋಪ ಹೊರಿಸಲಾಗಿತ್ತು. ಇದರಲ್ಲಿ ರಘುಪತಿ ಭಟ್ ನೀಡಿರುವ ದೂರಿನಲ್ಲಿ ತಿಳಿಸಿರುವ ಪದ್ಮಪ್ರಿಯಾ ಅಪಹರಣ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪವನ್ನು ಸಾಕ್ಷ್ಯದ ಕೊರತೆ ಹಿನ್ನೆಲೆಯಲ್ಲಿ ಸಿಒಡಿ ಅಧಿಕಾರಿಗಳು ಕೈಬಿಟ್ಟಿದ್ದರು. ಇದೀಗ ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಯೋಗೇಶ್, ಆರೋಪಿ ಮೇಲಿನ ಆರೋಪಗಳು ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು ಒಂದು ವರ್ಷ ಜೈಲುಶಿಕ್ಷೆ ಮತ್ತು 5000ರೂ. ದಂಡ ವಿಧಿಸಿದೆ.
FILM
ರಾತ್ರಿ 12.30ಕ್ಕೆ ಆಡಿಷನ್..2.30ಕ್ಕೆ ಆಯ್ಕೆ-ಬೃಂದಾವನ ಸೀರಿಯಲ್ ಹೀರೋ ಕ್ಲಾರಿಟಿ
ಬೆಂಗಳೂರು : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೃಂದಾವನ ಧಾರವಾಹಿಯ ನಟ ಧಾರವಾಹಿಗೆ ಆಯ್ಕೆಯಾದ ತಮ್ಮ ಅಭಿಪ್ರಾಯವನ್ನು ಕೊನೆಗೂ ಹಂಚಿಕೊಂಡಿದ್ದಾರೆ.
ಎಲ್ಲರಿಗೂ ಗೊತ್ತಿರುವಂತೆ ವರುಣ್ ಸೋಷಿಯಲ್ ಮೀಡಿಯಾದಲ್ಲಿ ಈಗಾಗ್ಲೇ ಜನಪ್ರಿಯತೆ ಪಡೆದುಕೊಂಡವರು. ಅಲ್ಲದೇ ಇತ್ತೀಚೆಗೆ ಗರ್ಲ್ ಫ್ರೆಡ್ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು.
ಇದೀಗ ಸೀರಿಯಲ್ ಗೆ ಆಯ್ಕೆಯಾದ ಬಗ್ಗೆ ಮಾತನಾಡಿರುವ ನಟ ವರುಣ್ ಆರಾಧ್ಯ “ದೀಪಾವಳಿ ಹಬ್ಬದ ಊಟ ಮುಗಿಸಿಕೊಂಡು ಮಲಗಿಕೊಂಡಿದ್ದೆ. ರಾತ್ರಿ 12.30ಗೆ ಕರೆ ಮಾಡಿ ಸೀರಿಯಲ್‌ನಲ್ಲಿ ನಟಿಸುವ ಇಂಟ್ರೆಸ್ಟ್ ಇದ್ಯಾ. ಅವಕಾಶ ಇದೆ ಎಂದು ಫೋನ್ ಮಾಡಿದರು. ರಾತ್ರಿ ಆ ಸಮಯದಲ್ಲಿ ಮಾಡಿದಕ್ಕೆ ನಾನು ಗಾಬರಿ ಆಗಿದೆ ಆ ಸಮಯದಲ್ಲಿ ಆಡಿಷನ್‌ಗೆ ಬರೆಲು ಹೇಳಿದರು. ನನ್ನ ಸ್ನೇಹಿತರನ್ನು ಕರೆದುಕೊಂಡು ನಾಗರಭಾವಿಯಲ್ಲಿ ನಿರ್ದೇಶಕರಾದ ರಾಮ್‌ಜೀ ಹೇಳಿದ ಸ್ಥಳಕ್ಕೆ ಹೋದೆ. ಕೈಗೆ ಒಂದು ಸ್ಕ್ರಿಪ್ಟ್ ಕೊಟ್ಟರು ಆಡಿಷನ್ ಮಾಡಿದೆ.
ಮಧ್ಯರಾತ್ರಿ 2.30ಕ್ಕೆ ಸೆಲೆಕ್ಟ್ ಆಗಿರುವೆ ಎಂದು ಹೇಳಿದರು. ನಾನು ಫುಲ್ ಶಾಕ್ ಆಗಿಬಿಟ್ಟಿ..ಅಲ್ಲದೆ ಬೆಳಗ್ಗೆನಿಂದ ಶೂಟಿಂಗ್ ಎಂದು ಹೇಳಿದರು. ಅಷ್ಟೊತ್ತರಲ್ಲಿ ಮನೆಗೆ ಬಂದು ಅಕ್ಕ ಮತ್ತು ಅಮ್ಮ ಮಲಗಿದ್ದರು, ಅವರನ್ನು ಎಬ್ಬಿಸಿ ಸೆಲೆಕ್ಟ್ ಅನ್ನೋ ವಿಚಾರ ಹೇಳಿದೆ. ಬೆಳಗ್ಗೆ ಶೂಟಿಂಗ್ ಇತ್ತು…ಹೇರ್ ಕಟ್ ಮಾಡಿಸಬೇಕು ಮತ್ತು ಗಡ್ಡ ಟ್ರಿಮ್ ಮಾಡಬೇಕು ಎಂದು ಹೇಳಿದರು ಅದೂ ಮಾಡಿಸಿಕೊಂಡು ಬೆಳಗ್ಗೆ ಶೂಟಿಂಗ್ ಸ್ಥಳಕ್ಕೆ ಹೋದೆ ಮರು ದಿನವೇ ಪ್ರಸಾರ ಮಾಡಲು ಶುರು ಮಾಡಿದ್ದರು. ಮೊದಲ ದೃಶ್ಯವೇ ಮದುವೆ ಮನೆ ಸೀನ್ ಅಗಿತ್ತು ಎಂದಿದ್ದಾರೆ.
bengaluru
ಹೈಕೋರ್ಟ್ ಕಲಾಪವನ್ನೂ ಬಿಡದ ಸೈಬರ್ ಹ್ಯಾಕರ್ಸ್-ವಿಡಿಯೋ ಕಾನ್ಫರೆನ್ಸ್ ಆ್ಯಪ್ನಲ್ಲಿ ಅಶ್ಲೀಲ ದೃಶ್ಯ ಅಪ್ಲೋಡ್
ಬೆಂಗಳೂರು: ಸೈಬರ್ ಖದೀಮರ ಉಪಟಳ ಎಲ್ಲಿಯವರೆಗೆ ತಲುಪಿದೆ ಎಂದರೆ ಅದು ಇದೀಗ ಕರ್ನಾಟಕ ಹೈಕೋರ್ಟ್ ಕಲಾಪಕ್ಕೂ ತಟ್ಟಿದೆ.
ಮಂಗಳವಾರ ಸಂಜೆ ಹೈಕೋರ್ಟಿನ ಹಾಲ್ ನಂಬರ್ 6, 12, 18, 23, 24, 26 ಮತ್ತು ಇತರ ಹಾಲ್ ಗಳಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದಾಗಲೇ ಲಿಂಕ್ ಮೂಲಕ ಭಾಗವಹಿಸಿದ್ದ ಅಪರಿಚಿತ ಆರೋಪಿಗಳು ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿ ಕಲಾಪಕ್ಕೆ ಅಡ್ಡಿ ಪಡಿಸಿದ್ದಾರೆ. ಈ ಬಗ್ಗೆ ಹೈಕೋರ್ಟಿನ ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಅವರು ಸೆಂಟ್ರಲ್ ಸೆನ್ ಕ್ರೈಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್ ಪೀಠಗಳಲ್ಲಿ ಲೈವ್ ಸ್ಟ್ರೀಮಿಂಗ್ ಮತ್ತು ವೀಡಿಯೋ ಕಾನ್ಫರೆನ್ಸ್ ಸೌಲಭ್ಯವನ್ನು ಕೆಲವು ದಿನಗಳ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ಬುಧವಾರ ಸಂಜೆ ಹೈಕೋರ್ಟ್ ಕಲಾಪದ ವೇಳೆ ವೀಡಿಯೋ ಕಾನ್ಫರೆನ್ಸ್ ಆ್ಯಪ್ ಅನ್ನು ಹ್ಯಾಕ್ ಮಾಡಿ ಆಶ್ಲೀಲ ದೃಶ್ಯಾವಳಿಯನ್ನು ಅಪ್ ಲೋಡ್ ಮಾಡಲಾಗಿತ್ತು. ಅಶ್ಲೀಲ ವೀಡಿಯೋ ಪ್ರಸಾರವಾಗುತ್ತಿದ್ದಂತೆ ಅದನ್ನು ನಿರ್ವಹಣೆ ಮಾಡುತ್ತಿದ್ದ ಸಿಬಂದಿಯನ್ನು ಕರೆದು ವಿಚಾರಿಸಿದಾಗ ಸೈಬರ್ ಹ್ಯಾಕ್ ಆಗಿರುವ ವಿಷಯ ಗೊತ್ತಾಗಿದೆ. ಕೂಡಲೇ ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.
LATEST NEWS
‘ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇನೆ’, ‘ಮುಸ್ಲಿಮರನ್ನು ರಕ್ಷಿಸುತ್ತೇನೆ’ ಎಂದ ಸಿಎಂ ಸಿದ್ದರಾಮಯ್ಯ
ಬೆಳಗಾವಿ: ಬೆಳಗಾವಿಯಲ್ಲಿ ನಡೆದ ಮುಸ್ಲಿಂ ಧರ್ಮ ಗುರುಗಳ ಸಮಾವೇಶಕ್ಕೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಅವರು, “ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇನೆ, ನಿಮ್ಮನ್ನು ನಾನು ರಕ್ಷಣೆ ಮಾಡುತ್ತೇನೆ” ಎಂದು ಹೇಳಿದ ಮಾತಿಗೆ ಪ್ರತಿಪಕ್ಷ ನಾಯಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು, ಇದು ವಿವಾದಕ್ಕೆ ಕಾರಣಾಗಿದೆ.
ದೊಡ್ಡ ಕೋಮುವಾದಿಗಳು ಎಂದರೆ ಅದು ಕಾಂಗ್ರೆಸ್ನವರು. ಸುಖದಲ್ಲಿ ತೇಲುತ್ತಿರುವ ವ್ಯಕ್ತಿ ಅಂದರೆ ಅದು ಸಿದ್ದರಾಮಯ್ಯ. ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರು, ಬಹುಸಂಖ್ಯಾತರು ಅಂತ ಪ್ರತ್ಯೇಕಿಸೋದನ್ನು ಬಿಡಬೇಕು. ರಾಜಕೀಯ ಸಲುವಾಗಿ ಬರೀ ಮತಕ್ಕಾಗಿ ತುಷ್ಟೀಕರಣ ಮಾಡುತ್ತಿದ್ದಾರೆ. ನಮ್ಮ ಸಮಾಜದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದರೆ ಅದು ಕಾಂಗ್ರೆಸ್ ಎಂದು ಈ ಹೇಳಿಕೆ ವಿರುದ್ಧ ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ ಎಂದು ಕಿಡಿಕಾರಿದ್ದಾರೆ.
ಟಿಪ್ಪು ಅಂದ್ರೆ ಸಿದ್ದರಾಮಯ್ಯಗೆ ಬಹಳ ಪ್ರೀತಿ. ಮುಖ್ಯಮಂತ್ರಿಗಳು ಆಡಿದ ಮಾತು ದೇಶ ಮತ್ತು ರಾಜ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹಿಂದೆ ಟಿಪ್ಪು ಮೇಲೆ ಅತಿಯಾದ ಪ್ರೀತಿ ತೋರಿಸಿ ಏನಾಯಿತು? ಇವರು ಮತ್ತೆ ಹಿಂದುಗಳನ್ನು ಎರಡನೇ ದರ್ಜೆ ಪ್ರಜೆಗಳ ರೀತಿ ನೋಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಸುವರ್ಣ ಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಸಮಾನತೆ ಇರಬೇಕು. ಟಿಪ್ಪು ಜಯಂತಿ, ಶಾದಿ ಭಾಗ್ಯ, ಮುಸ್ಲಿಂ ವಿವಾಹಕ್ಕೆ ಧನ ಸಹಾಯ ಈ ರೀತಿಯ ಕಾರ್ಯಕ್ರಮಗಳನ್ನ ತಂದು ಒಂದು ವರ್ಗವನ್ನು ಓಲೈಸುತ್ತಿದ್ದಾರೆ. ಮುಸ್ಲಿಮರನ್ನು ವೋಟ್ ಬ್ಯಾಂಕ್ ದಾಳವಾಗಿ ಕಾಂಗ್ರೆಸ್ ಬಳಕೆ ಮಾಡಿಕೊಳ್ಳುತ್ತಿದೆ ಎಂದರು.
ಸಿಎಂ ಸಿದ್ದರಾಮಯ್ಯ ಅನ್ಕೊಂಡಿದ್ದಾರೆ ಮುಸ್ಲಿಮರು ಈಗ ಹುಟ್ಟಿದ್ದಾರೆ ಎಂದು, ಆದರೆ ಅವರಿಗೆ ದೇಶ ಯಾವ ಅನ್ಯಾ ಮಾಡಿದೆ..? ಬಿಜೆಪಿ ಸರ್ಕಾರ ಇದ್ದಗಲೂ ಮುಸ್ಲಿಮರಿಗೆ ಸಹಾಯ ಮಾಡಿದೆ. ಆದರೆ ಇದೀಗ ಸಿದ್ದರಾಮಯ್ಯ ಹೇಳುತ್ತಿರುವುದು ಸರಿಯಾ..? ಇದೀಗ ಅವರು ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಮುಸಲ್ಮಾನರು ನಮ್ಮ ಪಕ್ಷದಲ್ಲೂ ಇದ್ದಾರೆ. ಆದರೆ ಕಾಂಗ್ರೆಸ್ನವರು ಓಲೈಸಲು ಇಂಥ ಹೇಳಿಕೆ ನೀಡುತ್ತಿದ್ದಾರೆ ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು. ಮುಸ್ಲಿಮರ ಬಗ್ಗೆ ಹೇಳುವ ಇವರು, ಅವರನ್ನು ಸಿಎಂ ಮಾಡಿದ್ದಾರೆಯೇ, ಅಧ್ಯಕ್ಷರನ್ನಾಗಿ ಮಾಡಿದ್ದಾರಾ? ನ್ಯಾಯ ಕೊಡಿಡುತ್ತೇನೆ ಅಂದರೇ, ಏನು ಅನ್ಯಾಯ ಆಗಿದೆ ? ಸರ್ವರಿಗೂ ಸಮಪಾಲು, ಸಮಬಾಳು ಅಂತ ನಮ್ಮ ಅಂಬೇಡ್ಕರ್ ಹೇಳಿದ್ದಾರೆ. ಓಲೈಕೆ ಮಾಡುವ ಕೆಲಸ ಆಗಬಾರದು. ಮುಖ್ಯಮಂತ್ರಿಗಳು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಸಲಹೆ ನೀಡಿದರು.
- Ancient Mangaluru6 days ago
ಕುಂದಾಪುರ: 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಇಲಾಖೆ ನೌಕರ
- DAKSHINA KANNADA6 days ago
ಉಡುಪಿ : ಬೈಕ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಜೀವಾಂತ್ಯ
- bangalore5 days ago
ಇವ್ರು ಯಾರಂತ ಗೊತ್ತಾಯ್ತ ಫ್ರೆಂಡ್ಸ್? ನ್ಯೂ ಕಪಲ್ಸ್ ಫಾರಿನ್ ಟ್ರಿಪ್ ಅಂತೆ..!
- bangalore4 days ago
ದೈವಕೋಲ ವೀಕ್ಷಣೆಗೆ ಟೂರ್ ಪ್ಯಾಕೇಜ್ – ತುಳುವರ ಧಾರ್ಮಿಕ ಭಾವನೆಗೆ ಪೆಟ್ಟು..!