Connect with us

  FILM

  “ಜಗ್ಗೇಶ್ ಅವ್ರು ದೊಡ್ಡೋರು, ಅವ್ರ ಕಾಲಿನ ಚಪ್ಪಲಿಗೂ ನಾವು ಸಮವಲ್ಲ”

  Published

  on

  ಡ್ರೋನ್ ಪ್ರತಾಪ್ ತಂದೆ ಮರಿಮಾದಯ್ಯ ಮಾಧ್ಯಮಗಳ ಮುಂದೆ ಜಗ್ಗೇಶ್ ಅವರ ಬಗ್ಗೆ ಮಾತನಾಡಿದ್ದಾರೆ. 

   

  ಬೆಂಗಳೂರು : ಡ್ರೋನ್ ಪ್ರತಾಪ್ ಸದ್ಯ ಬಿಗ್ ಬಾಸ್ ಮನೆಯಲ್ಲಿ ಲಾಕ್ ಆಗಿದ್ದು, ಉತ್ತಮ ಪಟ್ಟವನ್ನು ಪಡೆದುಕೊಂಡು ಆಟವಾಡುತ್ತಿದ್ದಾರೆ.
  ಈ ಹಿಂದೆ ಪ್ರತಾಪ್ ಅನೇಕ ಬಾರಿ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಿದ್ದು ಅದನ್ನು ಅನೇಕ ಮಂದಿ ಅಪ್ರಿಷಿಯೇಟ್ ಮಾಡಿದ್ದಾರೆ. ಅವರಲ್ಲಿ ಸ್ಯಾಂಡಲ್ ವುಡ್ ನಟ ಜಗ್ಗೇಶ್ ಕೂಡ ಒಬ್ಬರು.
  ಅದಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಾಪ್ ವಿರುದ್ಧ ನೆಗೆಟಿವ್ ಕಮೆಂಟ್ಸ್ ಗಳುಬಂದ ಹಿನ್ನೆಲೆ “ನಾನು ಎಂತಹ ತಪ್ಪು ಮಾಡಿಬಿಟ್ಟೆ, ಇನ್ನೆಂದು ಹಿಂದೆ ಮುಂದೆ ನೋಡದೇ ಯಾರನ್ನು ಬೆಂಬಲಿಸುವುದಿಲ್ಲ ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದರು.

  ಪ್ರತಾಪ್ ತಮ್ಮ ತಪ್ಪು ತಿದ್ದಿಕೊಂಡು ಬಿಗ್‌ಬಾಸ್ ಮನೆಯಿಂದ ಒಳ್ಳೆ ವ್ಯಕ್ತಿಯಾಗಿ ಹೊರ ಬರುತ್ತಾರೆ ಎನ್ನುವವರು ಇದ್ದಾರೆ. ಇದೀಗ ಮಗನ ಬಗ್ಗೆ ತಂದೆ ಮರಿಮಾದಯ್ಯ ಮಾತನಾಡಿದ್ದಾರೆ.
  “ನಿನ್ನ ಮಗನನ್ನು ಯಾಕೆ ಉಳಿಸಿದ್ದೀಯಾ? ಊಟದಲ್ಲಿ ಏನಾದ್ರೂ ಹಾಕಿ ಸಾಯಿಸಿಬಿಡು ಎಂದು ಸಂಬಂಧಿಕರು ನನ್ನ ತಾಯಿಗೆ ಹೇಳಿದ್ದರು.ಎಲ್ಲರ ಬಳಿ ಹಣ ತೆಗೆದುಕೊಂಡಿದ್ದೀನಿ ಅಂತೆಲ್ಲಾ ಹೇಳಿದ್ದರು” ಎಂದು ಭಾವುಕರಾಗಿದ್ದರು.
  “ನನ್ನ ಮಗನ ಜೊತೆ ಮಾತನಾಡಲು ನಾನು ಟ್ರೈ ಮಾಡ್ತಿದ್ದೆ. ಅವ್ನು ಬೇಸರದಿಂದ ಫೋನ್ ತೆಗೆದಿರಲಿಲ್ಲ. ನಮ್ಮ ನಂಬರ್ ಬ್ಲಾಕ್ ಮಾಡಿರುವುದು ಸತ್ಯ.
  ಆತನೊಟ್ಟಿಗೆ ಮಾತನಾಡುವ ಅವಕಾಶ ಸಿಕ್ಕರೆ ಮಾತನಾಡುತ್ತೀನಿ. ಮಗನೊಟ್ಟಿಗೆ ಮಾತನಾಡುವ ಆಸೆ ನಮಗೂ ಇದೆ.ಅವನು ನಮಗೇನು ತಪ್ಪು ಮಾಡಲಿಲ್ಲ.

  ಅದು ಜನರ ತೀರ್ಪು. ಕರ್ನಾಟಕ, ಭಾರತದ ಜನ ನನ್ನ ಮಗನನ್ನು ಗೆದ್ದು ಕಳುಹಿಸಲಿ ಅಂತ ಮನವಿ ಮಾಡುತ್ತೇನೆ.”
  ಜಗ್ಗೇಶ್ ಅವರ ಬಗ್ಗೆ ಕೇಳಿದ ಪ್ರಶ್ನೆಗೆ “ಬಿಡಿ ಬಿಡಿ, ಅವ್ರು ದೊಡ್ಡವ್ರು.. ನಾವು ಕೆಳಗಿನ ಮಟ್ಟದವರು. ಅವ್ರ ಕಾಲಿನ ಚಪ್ಪಲಿಗೂ ಸಮವಲ್ಲ.ಆ ರೀತಿ ಇರುವವರು. ಅವರ ಬಗ್ಗೆ ಮಾತನಾಡುವ ಯೋಗ್ಯತೆಯಿಲ್ಲ. ಅವ್ರು ಏನೇ ಮಾತನಾಡಿದ್ದರು. ಅವರಿಗೆ ಸೇರಿದ್ದು. ಜನ ತಿಳ್ಕೊಬೇಕು ಅಷ್ಟೇ. ಬಿಗ್‌ಬಾಸ್ ಮನೆಯಲ್ಲಿ ಅವಮಾನದ ಮಾತು ಬಿಡಿ. ಅದಕ್ಕೆಲ್ಲ ನಾನು ಬೇಸರ ಮಾಡಿಕೊಳ್ಳಲ್ಲ. ಯಾಕೆಂದರೆ ಅದು ಆಟ “ಅವ್ರು ಆಟ ಆಡುತ್ತಿರುತ್ತಾರೆ. ಏನೋ ಒಂದು ಅಂತಾರೆ. ಅದಕ್ಕೆ ಬೇಸರ ಮಾಡಿಕೊಳ್ಳಬಾರದು. ಅವ್ರು ನಮ್ಮ ಮಕ್ಕಳು ಇದ್ದಂತೆ. ಪ್ರತಾಪ್ ಅತ್ತರೆ ಅಳಲಿ ಬಿಡಿ. ಉಳಿದವ್ರ ಬಗ್ಗೆ ಮಾತನಾಡಬಾರದು. ಅವರಿಗೂ ನಾವು ಮಾಡಿದ್ದು ತಪ್ಪು ಎಂದು ಅರಿವಾಗುತ್ತೆ.ಅವ್ರ ತಂದೆ ತಾಯಿ ನಮ್ಮಂಗೆ ಮಕ್ಕಳನ್ನು ಕಳುಹಿಸಿದ್ದಾರೆ. ಅವ್ರು ನಮ್ಮಂತೆ ಬಡವರೋ ಶ್ರೀಮಂತರೋ ಅದು ನನಗೆ ಗೊತ್ತಿಲ್ಲ. ಅಲ್ಲಿ ತಿಳ್ಕೊಳ್ದೇ ಇದ್ದರೂ ಹೊರಗೆ ಬಂದ್ಮೇಲೆ ಹೀಗೆ ಮಾತಾಡಿದ್ವಿ ಅಲ್ಲಾ? ಅಂತ ಗೊತ್ತಾಗುತ್ತೆ” ಎಂದಿದ್ದಾರೆ.
  ಒಟ್ನಲ್ಲಿ ಪ್ರತಾಪ್ ರಂತೆ ತಂದೆ ಕೂಡ ಜೆಂಟಲ್ ಮೆನ್ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

   

  Click to comment

  Leave a Reply

  Your email address will not be published. Required fields are marked *

  FILM

  ಅನಂತ್ ಅಂಬಾನಿ ಮದುವೆಗೆ ನಟ ಅಕ್ಷಯ್ ಕುಮಾರ್ ಗೈರು; ಕಾರಣ ಇಲ್ಲಿದೆ

  Published

  on

  ಬೆಂಗಳೂರು : ನಟ ಅಕ್ಷಯ್ ಕುಮಾರ್ ಅವರು ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಜುಲೈ 12 ರಂದು ನಡೆಯಲಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭಕ್ಕೆ ಗೈರಾಗುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂದಿತ್ತು. ಇದೀಗ ಕಳೆದ ಎರಡು ದಿನಗಳಿಂದ ಅಕ್ಷಯ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದ್ದು, ಅಭಿಮಾನಿಗಳಿಗೆ ಆತಂಕವಾಗಿದೆ. ಹೌದು, ಅಕ್ಷಯ್‌ ಕುಮಾರ್‌ಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.


  ಸದ್ಯ ನಟ ಇತ್ತೀಚಿಗೆ ಬಿಡುಗಡೆಯಾದ ‘ಸರ್ಫಿರಾ’ ಪ್ರಚಾರದಲ್ಲಿ ಬಿಝಿಯಾಗಿದ್ದಾರೆ. ಹೀಗಾಗಿ ನಟ ಸ್ವತಃ ಪರೀಕ್ಷೆಗೆ ಒಳಗಾಗಿದ್ದು, ಅವರಿಗೆ ಕೋವಿಡ್‌ 19 ಸೋಂಕು ಇರುವುದು ದೃಢಪಟ್ಟಿದೆ. ಸದ್ಯ ಅಕ್ಕಿ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿದ್ದಾರೆ.

  ಇದನ್ನೂ ಓದಿ : ರಾಕಿಂಗ್​ ಸ್ಟಾರ್​​ ಯಶ್​​ ಕೂದಲಿಗೆ ಕತ್ತರಿ! ರಾವಣ ಅವತಾರ ರಿವೀಲ್​?

  ಅಕ್ಷಯ್ ಕುಮಾರ್ ನಟನೆಯ ‘ಸರ್ಫಿರಾ’ ಜುಲೈ 12 ರಂದು ಬಿಡುಗಡೆಯಾಗಿದೆ. ಈ ಚಲನಚಿತ್ರವು 2020 ರ ತಮಿಳು ಚಲನಚಿತ್ರ ‘ಸೂರರೈ ಪೊಟ್ರು’ ನ ರಿಮೇಕ್‌ ಆಗಿದೆ. ಸುಧಾ ಕೊಂಗರ ನಿರ್ದೇಶಿಸಿದ ಈ ಚಿತ್ರದಲ್ಲಿ ಪರೇಶ್ ರಾವಲ್, ರಾಧಿಕಾ ಮದನ್ ಕಾಣಿಸಿಕೊಂಡಿದ್ದಾರೆ.

  Continue Reading

  FILM

  ರಾಕಿಂಗ್​ ಸ್ಟಾರ್​​ ಯಶ್​​ ಕೂದಲಿಗೆ ಕತ್ತರಿ! ರಾವಣ ಅವತಾರ ರಿವೀಲ್​?

  Published

  on

  ರಾಕಿಂಗ್​ ಸ್ಟಾರ್​​ ಯಶ್ ಸಿನಿಮಾದಿಂದಾಗಿ ಎಷ್ಟು ಜನಪ್ರಿಯತೆ ಪಡೆದಿದ್ದರೋ ಅಷ್ಟೇ ಜನಪ್ರಿಯತೆ ಅವರ ಹೇರ್​ ಸ್ಟೈಲ್​ ಮೂಲಕ​ ಪಡೆದಿದ್ದಾರೆ. ಕೆಜಿಎಫ್​ ಸಿನಿಮಾದಲ್ಲಿ ಉದ್ದನೆಯ ಕೂದಲು, ಉದ್ದನೆಯ ಗಡ್ಡ ಬಿಟ್ಟು ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಆದರೀಗ ಯಶ್​ ಲುಕ್​ ಇದ್ದಕ್ಕಿದ್ದಂತೆಯೇ ಬದಲಾಗಿದೆ. ರಾಕಿ ಭಾಯ್​ ಉದ್ದ ಕೂದಲಿಗೆ ಕತ್ತರಿ ಪ್ರಯೋಗಿಸಿದ್ದಾರೆ.

  ಕೆಜಿಎಫ್​, ಕೆಜಿಎಫ್ 2 ಸಿನಿಮಾದಲ್ಲಿ ಯಶ್​​ ಉದ್ದ ಕೂದಲು ಮತ್ತು ಗಡ್ಡದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಕೆಜಿಎಫ್​ 3 ಸಿನಿಮಾ ತೆರೆ ಮೇಲೆ ಬರಲು ಬಾಕಿ ಉಳಿದಿದೆ. ಆದರೆ ಇದರ ನಡುವೆ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಕೂಡ ಮಾಡುತ್ತಿದ್ದಾರೆ. ಶೂಟಿಂಗ್​ ಈಗಾಗಲೇ ಕೈಗೆತ್ತಿಕೊಂಡಿದ್ದಾರೆ. ಇದಲ್ಲದೆ ಬಾಲಿವುಡ್​ನಲ್ಲಿ ‘ರಾಮಾಯಣ’ ಸಿನಿಮಾಗೂ ಬಂಡವಾಳ ಹಾಕಿದ್ದು, ಅದರಲ್ಲಿ ‘ರಾವಣ’ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗ ಯಶ್​ ಸಡನ್​ ಆಗಿ ತಮ್ಮ ಕೂದಲಿಗೆ ಕತ್ತರಿ ಪ್ರಯೋಗಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

  ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಯಶ್​​ ‘ಟಾಕ್ಸಿಕ್’ ಅಥವಾ ‘ರಾಮಾಯಣ’ ಸಿನಿಮಾದಲ್ಲಿನ ರಾವಣ ಅವತಾರಕ್ಕೆ ಯಶ್​ ಹೊಸ ಅವತಾರ ಮಾಡಿಕೊಂಡಿದ್ದಾರೆ ಎಂಬ ಅನುಮಾನ ಅಭಿಮಾನಿಗಳನ್ನು ಕಾಡಿದೆ. ಮತ್ತೊಂದೆಡೆ ರಿಲಯನ್ಸ್​ ಒಡೆತನದ ಮಾಲೀಕ ಮುಖೇಶ್​ ಅಂಬಾನಿ ಮಗ ಅನಂತ್​ ಅಂಬಾನಿ ಮದುವೆಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಇವರ ಜೊತೆಗೆ ರಾಧಿಕಾ ಪಂಡಿತ್​ ಕೂಡ ಕಾಣಿಸಿಕೊಂಡಿದ್ದಾರೆ. ಸದ್ಯ ಉದ್ದನೆಯ ಕೂದಲು ಮತ್ತು ಗಡ್ಡವನ್ನು ಕತ್ತರಿಸಿರುವ ಯಶ್​ ಲುಕ್​ ಮಾತ್ರ ಡಿಫರೆಂಟಾಗಿದೆ. ಅನೇಕರು ಇವರ ಲುಕ್​ ನೋಡಿ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

  ಇನ್ನು ಯಶ್​ ತಮ್ಮ ಹಳೆಯ ಲುಕ್​ನಲ್ಲಿ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಉದ್ದನೆಯ ಕೂದಲು ಮತ್ತು ಗಡ್ಡ ಬಿಟ್ಟಿದ್ದ ಯಶ್​​ ‘ಬಿಯರ್ಡ್​​ ಆಯಿಲ್​’ ಕಂಪನಿಗೆ ಜಾಹೀರಾತು ನೀಡಿದ್ದರು. ಇದರ ಮೂಲಕ ಕೋಟಿ ಕೋಟಿ ಎಣಿಸಿದ್ದರು. ಮಾತ್ರವಲ್ಲದೆ, ಇವರ ಲುಕ್​ ನೋಡಿ ಅನೇಕರು ಫಾಲೋ ಮಾಡಿದ್ದಿದೆ. ಆದರೀಗ ಹೊಸ ಲುಕ್​ನಲ್ಲಿ ರಾಕಿಂಗ್​ ಸ್ಟಾರ್​ ಕಾಣಿಸಿಕೊಂಡಿದ್ದಾರೆ.

  Continue Reading

  FILM

  ಅಪ್ರತಿಮ ಕನ್ನಡತಿ ಅಪರ್ಣಾ ಇನ್ನಿಲ್ಲ..!

  Published

  on

  ಮಂಗಳೂರು :  ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅಪರ್ಣಾ ಅವರು ಮೃತರಾಗಿದ್ದಾರೆ. ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಅವರು ಇಂದು (ಜುಲೈ 11) ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕನ್ನಡ ನಿರೂಪಣೆ ಮೂಲಕ ಕರ್ನಾಟಕದ ಅಪ್ಪಟ ಕನ್ನಡತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.  ಜೊತೆಗೆ ನಟನೆ ಮೂಲಕವೂ ಅಪರ್ಣಾ ಅವರು ಗುರುತಿಸಿಕೊಂಡಿದ್ದಾರೆ. ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದಿದ್ದರು.

  ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳನ್ನು ಅಪರ್ಣಾ ಅವರು ನಿರೂಪಿಸಿದರು. ನಂತರ ಭಾರತ ಸರ್ಕಾರದ ‘ವಿವಿಧ ಭಾರತಿ’ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. 1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರವೊಂದನ್ನು ಸತತ ಎಂಟು ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು.

  Continue Reading

  LATEST NEWS

  Trending