Connect with us

DAKSHINA KANNADA

ಮಂಗಳೂರು: ಪುರುಷೋತ್ತಮ ಬೆಳ್ಮಣ್ ಅವರಿಗೆ ವಾಗೀಶ್ವರೀ ಸಂಮಾನ

Published

on

ಮಂಗಳೂರು: ಹಿರಿಯ ಹವ್ಯಾಸಿ ಯಕ್ಷಗಾನ ಚೆಂಡೆ ಮದ್ದಳೆ ವಾದಕ ಪುರುಷೋತ್ತಮ ಬೆಳ್ಮಣ್ ಅವರಿಗೆ ವಾಗೀಶ್ವರೀ ಶತಮಾನೋತ್ಸವ ಸಂಮಾನವು ಮಂಗಳೂರಿನ ಕುಡ್ತೇರಿ ಮಹಾಮಾಯಾ ದೇವಸ್ಥಾನದಲ್ಲಿ ಬಿ.ನಾರಾಯಣ ಪ್ರಭು ಅವರ ಅಧ್ಯಕ್ಷತೆಯಲ್ಲಿ ಜರಗಿತು.


ಕಳೆದ ಐದು ದಶಕಗಳಿಂದ ಮಂಗಳೂರು ಹಾಗೂ ಮುಂಬೈಯ ಹತ್ತಾರು ಹವ್ಯಾಸಿ ಸಂಘಗಳಲ್ಲಿ ಚೆಂಡೆ ಮದ್ದಳೆ ವಾದಕರಾಗಿ , ಸಂಘಟಕರಾಗಿ ಕಲಾಸೇವೆಮಾಡಿರುವ ,ಲಯನ್ಸ್ ಸೇವಾಕ್ಷೇತ್ರದಲ್ಲೂ ಸಕ್ರಿಯರಾಗಿದ್ದ ಹಿರಿಯ ಕಲಾವಿದ ಪುರುಷೊತ್ತಮ ಬೆಳ್ಮಣ್ ಅವರನ್ನು ಭಾಗವತ ಅಶೋಕ್ ಬೋಳೂರು ಅಭಿನಂದಿಸಿದರು.


ಮುಂಬೈಯ ಪ್ರತಿಷ್ಟಿತ ಯಕ್ಷಗಾನ ಸಂಘಗಳಲ್ಲಿ ಹಾಗೂ ಹಿರಿಯ ವೃತ್ತಿಪರ ಭಾಗವತರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡ ಸಂಮಾನಿತರು ವಾಗೀಶ್ವರೀ ಸಂಘದ ಶತಮಾನೋತ್ಸವ ಕಾರ್ಯಕ್ರಮ, ಸಂಸ್ಮರಣೆ, ಸಮ್ಮಾನ ಸ್ತುತ್ಯರ್ಹ ಎಂದರು.

ಭಾಗವತ ಯೋಗೀಶ್ ಆಚಾರ್ಯ ಸಂಸ್ಮರಣೆ
ಹವ್ಯಾಸಿ ಭಾಗವತನಾಗಿ ಹಲವು ದಶಕಗಳಕಾಲ ವಾಗೀಶ್ವರೀ ಸಂಘದಲ್ಲಿ ಸಕ್ರಿಯರಾಗಿದ್ದ ಕೀರ್ತಿಶೇಷ ಯೋಗೀಶ್ ಆಚಾರ್ಯರ ಸಂಸ್ಮರಣೆ ಮಾಡಿದ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ನಗರದ ಹೂವಿನ ವ್ಯಾಪಾರಿಯಗಿದ್ದ ಆಚಾರ್ಯರ ಕಲಾಸಾಧನೆಯನ್ನು ನೆನಪಿಸಿದರು.

ಮುಖ್ಯ ಅತಿಥಿಯಾಗಿದ್ದ ಉದ್ಯಮಿ ರವೀಂದ್ರ ಮಲ್ಯ ಅವರು ಯಕ್ಷಗಾನಕ್ಕೆ ಪ್ರೇಕ್ಷಕರ ಕೊಡುಗೆ ಅಪಾರ. ಇಂತಹ ಕಾರ್ಯಕ್ರಮಗಳ ಮೂಲಕ ಇನ್ನಷ್ಟು ಪ್ರೇಕ್ಷಕರು ಯಕ್ಷಗಾನದತ್ತ ಆಕರ್ಷಿತರಾಗಲಿ ಎಂದು ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘಕ್ಕೆ ಶುಭವನ್ನು ಹಾರೈಸಿದರು.

ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು , ಶಿವಪ್ರಸಾದ್ ಪ್ರಭು , ಶೋಭಾ ಐತಾಳ್ ಉಪಸ್ಥಿತರಿದ್ದರು.

ಕರ್ನಾಟಕ ಯಕ್ಷಗಾನ ಅಕಾಡಮಿಯ ಸಹಯೋಗದಲ್ಲಿ ನಡೆಯುತ್ತಿರುವ ಶತಮಾನೋತ್ಸವ ಸರಣಿಯ 14 ನೇ ಸಭಾ ಕಾರ್ಯಕ್ರಮದ ಬಳಿಕ ಸಂಘದ ಕಲಾವಿದರಿಂದ “ಚೂಡಾಮಣಿ ” ತಾಳಮದ್ದಳೆ ಜರಗಿತು.

Ancient Mangaluru

ಕುಂದಾಪುರ: 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಇಲಾಖೆ ನೌಕರ

Published

on

ಕುಂದಾಪುರ: ಅರಣ್ಯ ಇಲಾಖೆ ವಶದಲ್ಲಿದ್ದ ವಾಹನ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ  ಕುಂದಾಪುರ ಅರಣ್ಯ ಇಲಾಖೆಯ ನೌಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಕ್ಷೇಮಾಭಿವೃದ್ಧಿ ನೌಕರ ಬಿ.ಮಂಜುನಾಥ್ ಪೂಜಾರಿ ಬಂಧಿತ ಆರೋಪಿ.

ಅರಣ್ಯ ಇಲಾಖೆ ವಶದಲ್ಲಿದ್ದ ಆಲೂರಿನ ಆದಿತ್ಯ ಎಂಬವರ ವಾಹನ ಬಿಡುಗಡೆಗಾಗಿ ಮಂಜುನಾಥ್ ಪೂಜಾರಿ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನು.  ಲಂಚ ನೀಡಲು ನಿರಾಕರಿಸಿದ ಆದಿತ್ಯ ಈ ಬಗ್ಗೆ ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಆದಿತ್ಯ ಅವರಿಂದ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ  ಸಂದರ್ಭ ಮಂಜುನಾಥ್ ಪೂಜಾರಿಯನ್ನು ಬಂಧಿಸಿದರು.  ಲೋಕಾಯುಕ್ತ ಎಸ್ಪಿ ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ  ಕೆ.ಸಿ. ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಮತ್ತು ರಫೀಕ್ ಹಾಗೂ ಸಿಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Continue Reading

DAKSHINA KANNADA

ಉಡುಪಿ : ಬೈಕ್ ಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಜೀವಾಂತ್ಯ

Published

on

ಉಡುಪಿ : ಉಡುಪಿಯ ಬ್ರಹ್ಮಾವರದ ಧರ್ಮಾವರಂ ಎಂಬಲ್ಲಿ ಬೈಕಿಗೆ ಬಸ್‌ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಉಪ್ಪಿನಕೋಟೆಯ 31 ವರ್ಷ ಪ್ರಾಯದ ಪ್ರೀತಮ್‌ ಡಿ’ ಸಿಲ್ವಾ ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ ನಡೆದಿದೆ.

ಪ್ರೀತಮ್‌ ಅವರು ಬೈಕ್‌ ಚಲಾಯಿಸಿಕೊಂಡು ಬ್ರಹ್ಮಾವರ ಆಕಾಶವಾಣಿ ಪೆಟ್ರೋಲ್‌ ಪಂಪ್‌ ಕಡೆಯಿಂದ ಸರ್ವಿಸ್‌ ರೋಡ್‌ನ‌ಲ್ಲಿ ಆಗಮಿಸಿ ಉಪ್ಪಿನಕೋಟೆಗೆ ತೆರಳಲು ಡಿವೈಡರ್‌ ಬಳಿ ಸಾಗುತ್ತಿದ್ದಾಗ ಎದುರಿನಿಂದ ಬಂದ ಖಾಸಗಿ ಬಸ್‌ ಢಿಕ್ಕಿ ಹೊಡೆಯಿತು. ಅವಿವಾಹಿತರಾಗಿದ್ದ ಪ್ರೀತಮ್‌ ಕೆಟರಿಂಗ್‌ ಉದ್ಯಮ ನಡೆಸುತ್ತಿದ್ದರು. ಪ್ರೀತಮ್‌ ಅವರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Continue Reading

DAKSHINA KANNADA

ಮನೆ ಬಿಟ್ಟು ಓಡಿ ಹೋಗಿದ್ದ ಬಂಟ್ವಾಳದ ಪ್ರೇಮಿಗಳು ಕಾಸರಗೋಡಿನಲ್ಲಿ ಪತ್ತೆ

Published

on

ಬಂಟ್ವಾಳ : 4 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕು ಸಜೀಪಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿಗಳಾದ ಅಕ್ಕ ಪಕ್ಕದ ಮನೆಗಳ ಯುವಕ ಹಾಗೂ ಯುವತಿಯನ್ನು ಬಂಟ್ವಾಳ ಪೊಲೀಸರು ಕೇರಳದ ಕಾಸರಗೋಡು ಜಿಲ್ಲೆಯ ಕಾಂಞಂಗಾಡಿನಲ್ಲಿ ಪತ್ತೆ ಹಚ್ಚಿ ಊರಿಗೆ ಕರೆ ತಂದಿದ್ದಾರೆ.

ಉದ್ದೊಟ್ಟು ನಿವಾಸಿ ಅಬ್ದುಲ್‌ಹಮೀದ್‌ಅವರ ಪುತ್ರಿ ಆಯಿಸತ್‌ರಸ್ಮಾ(18) ಮತ್ತು ಹೈದರ್‌ಅವರ ಪುತ್ರ ಮಹಮ್ಮದ್‌ಸಿನಾನ್‌ (23) ಅವರು ನ. 23 ರಂದು ತಂತಮ್ಮ ಮನೆಗಳಲ್ಲಿ ಮಲಗಿದ್ದವರು ನ. 24ರಂದು ಬೆಳಗಾಗುವಷ್ಟರಲ್ಲಿ ಕಾಣೆಯಾಗಿದ್ದರು. ಮನೆಯವರ ದೂರಿನಂತೆ ಹುಡುಕಾಟ ನಡೆಸಿದ ಬಂಟ್ವಾಳ ಪೊಲೀಸರು ಅವರಿಬ್ಬರನ್ನೂ ಕಾಂಞಂಗಾಡಿನಲ್ಲಿ ಪತ್ತೆ ಹಚ್ಚಿದ್ದು, ಠಾಣೆಗೆ ತಂದು ವಿಚಾರಿಸಿದಾಗ ತಾವಿಬ್ಬರೂ ಪರಸ್ಪರ ಪ್ರೀತಿಸಿದ್ದು, ಮದುವೆಯಾಗುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

Continue Reading

LATEST NEWS

Trending