Connect with us

LATEST NEWS

ಮಂಗಳೂರು ಲೇಡಿಸ್ ಪಿಜಿಯಲ್ಲಿ ಬಟ್ಟೆ ಕದಿಯುತ್ತಿದ್ದ ವಿಕೃತ ಕಾಮಿಗೆ ಧರ್ಮದೇಟು ನೀಡಿದ ಯುವತಿಯರು

Published

on

ಮಂಗಳೂರು: ಮಂಗಳೂರು ಲೇಡಿಸ್ ಪಿಜಿಗೆ ನುಗ್ಗಿ ಯುವತಿಯರ ಬಟ್ಟೆ ಕದಿಯುತ್ತಿದ್ದ ವಿಕೃತ ಕಾಮಿಗೆ ಕೊನೆಗೆ ಯುವತಿಯರೇ ರೆಡ್ ಹ್ಯಾಂಡ್ ಆಗಿ ಹಿಡಿದು ಧರ್ಮದೇಟು ನೀಡಿರುವ ಘಟನೆ ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನ ಬಳಿಯ ಪಿಜಿಯೊಂದರಲ್ಲಿ ನಡೆದಿದೆ.


ಶರವು ದೇವಸ್ಥಾನ ಬಳಿಯ ಪಿಜಿಯಲ್ಲಿ 40ಕ್ಕೂ ಹೆಚ್ಚು ಯುವತಿಯರು ವಾಸ್ತವ್ಯವಿದ್ದು ಇಲ್ಲಿಗೆ ಕಳೆದ ಕೆಲವು ತಿಂಗಳುಗಳಿಂದ ವ್ಯಕ್ತಿಯೊಬ್ಬ ರಾತ್ರಿ ಏಕಾಏಕಿ ಪ್ರವೇಶ ಮಾಡಿ ಯುವತಿಯರ ಬಟ್ಟೆಗಳನ್ನು ಕದಿಯುವುದು, ರೂಮಿಗೆ ಪ್ರವೇಶಿಸಿ ವಿಕೃತವಾಗಿ ನಡೆದುಕೊಳ್ಳುವುದು ಮಾಡುತ್ತಿದ್ದ. ಈ ಹಿಂದೆ ಎರಡು ಬಾರಿ ಈತನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಆದರೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಮರುದಿನವೇ ಆತನನ್ನು ಬಿಟ್ಟು ಕಳುಹಿಸಿದ್ದರು ಎಂಬ ಆರೋಪ ಕೇಳಿಬಂದಿದೆ.

ನಿನ್ನೆ ತಡರಾತ್ರಿಯೂ ಏಕಾಏಕಿ ವಿಕೃತಕಾಮಿ ಯುವತಿಯೊಬ್ಬಳ ರೂಮ್ ಪ್ರವೇಶಿಸಿ ಆಕೆಯ ಬಟ್ಟೆಯನ್ನು ಟೆರೇಸ್ ಮೇಲೆ ಕೊಂಡೊಯ್ದು ಇಟ್ಟಿದ್ದ. ಇದು ಗಮನಕ್ಕೆ ಬಂದು ಎಲ್ಲ ಯುವತಿಯರು ಹುಡುಕಾಟ ನಡೆಸಿದ್ದು ಈ ವೇಳೆ ಆತ ಟೆರೇಸ್ ಮೇಲೆ ಪತ್ತೆಯಾಗಿದ್ದಾನೆ. ಹಾಗೇ ಸಿಕ್ಕಿದವನಿಗೆ ಯುವತಿಯರೇ ಸೇರಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆತ ಅಲ್ಲಿಂದ ಪರಾರಿಯಾಗಿ ನಗರದ ತಾರಾ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದಿದ್ದಾನೆ ಎಂಬ ಮಾಹಿತಿ ಲಭಿಸಿದೆ.

ಕೇರಳ ಮೂಲದ ಆರೋಪಿ ವಿಕೃತ ಚೇಷ್ಟೆಯಿಂದಾಗಿ ಪಿಜಿ ಯುವತಿಯರು ಭಯಬಿದ್ದಿದ್ದಾರೆ. ಈ ಹಿಂದೆ ಎರಡು ಬಾರಿ ಇಂತಹದ್ದೇ ಪ್ರಕರಣ ಜರುಗಿದ್ದರೂ ಪೊಲೀಸರು ಕಠಿಣ ಕ್ರಮ ಜರುಗಿಸದೇ ಇರುವುದು ಮತ್ತೊಮ್ಮೆ ಘಟನೆ ಮರುಕಳಿಸಲು ಕಾರಣ ಎಂದು ಯುವತಿಯರು ದೂರಿದ್ದಾರೆ.

Click to comment

Leave a Reply

Your email address will not be published. Required fields are marked *

FILM

ದಾಂಪತ್ಯಕ್ಕೆ ಕಾಲಿಡಲಿದ್ದಾರಾ ‘ಪ್ರಭಾಸ್‌’..! ಈ ಪೋಸ್ಟ್‌ ಹಿಂದಿನ ಅಸಲಿಯತ್ತೇನು!?

Published

on

ಟಾಲಿವುಡ್‌ ನ ಮೋಸ್ಟ್ ಬ್ಯಾಚುಲರ್‌ ಎಂದೇ ಹೆಸರಾಗಿರುವ ಪ್ರಭಾಸ್ ಸದಾ ತಮ್ಮ ಮದುವೆಯ ವಿಚಾರವಾಗಿಯೇ ಸುದ್ದಿಯಲ್ಲಿರುತ್ತಾರೆ. ಸೂಪರ್ ಸ್ಟಾರ್ ಪ್ರಭಾಸ್‌ರವರ ಹೆಸರಿನ ಜೊತೆ ಹಲವು ಸ್ಟಾರ್ ನಟಿಯರ ಹೆಸರುಗಳು ತುಣುಕು ಹಾಕುತ್ತಿತ್ತು. ಅದರಲ್ಲೂ ಪುತ್ತೂರಿನ ಬೆಡಗಿ ಅನುಷ್ಕಾ ಶೆಟ್ಟಿ ಯವರ ಹೆಸರು ಆಗಾಗ ಕೇಳಿಬರುತ್ತಿತ್ತು. ಇನ್ನು ಬಾಹುಬಲಿ ಸಿನೆಮಾದ ಬಳಿಕ ಇವರಿಬ್ಬರು ಪ್ರೀತಿಯಲ್ಲಿದ್ದಾರೆ, ಇನ್ನೇನು ದಾಂಪತ್ಯ ಜೀವನಕ್ಕೂ ಕಾಲಿಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಮಧ್ಯೆ ಪ್ರಭಾಸ್ ಹಾಗೂ ಅನುಷ್ಕಾ ಅದೆಲ್ಲವನ್ನು ಅಲ್ಲಗಳೆದಿದ್ದಾರೆ.

ಇದೀಗ ಪ್ರಭಾಸ್ ಅವರ ಒಂದು ಪೋಸ್ಟ್‌ ಅಭಿಮಾನಿಗಳಲ್ಲಿ ಖುಷಿ ನೀಡಿದೆ. ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ‘ಡಾರ್ಲಿಂಗ್ಸ್‌!!.. ಕೊನೆಗೂ ನನ್ನ ಜೀವನದಲ್ಲಿ ಒಬ್ಬ ವಿಶೇಷ ವ್ಯಕ್ತಿ ಬರಲಿದ್ದಾರೆ.. ಸ್ವಲ್ಪ ಕಾಯಿರಿ” ಎಂದು ಬರೆದುಕೊಂಡು ಪೋಸ್ಟ್‌ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಖುಷಿ ಜೊತೆ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಪೋಸ್ಟ್‌ ನೋಡಿದ ಬಳಿಕ ಪ್ರಭಾಸ್ ಮದುವೆಗೆ ಸಜ್ಜಾಗಿದ್ದಾರಾ..!? ಎಂಬುದಾಗಿಯೂ ಕುತೂಹಲ ಮೂಡಿದೆ. ಇನ್ನೂ ಕೆಲವರು ಸಿನೆಮಾ ಪ್ರಚಾರಕ್ಕಾಗಿ ಈ ತಂತ್ರವನ್ನು ಬಳಸಿದ್ದಾರಾ ಎನ್ನುವುದು ಅನುಮಾನ ಮೂಡಿದೆ.

ದರ್ಶನ್ ‘ಡೆವಿಲ್’ಗೆ ಹೀರೋಯಿನ್ ಫಿಕ್ಸ್; ಡಿಬಾಸ್ ಗೆ ಜೊತೆಯಾದ್ರು ಕರಾವಳಿ ಬೆಡಗಿ!

ಸಿನೆಮಾ ಪ್ರಚಾರಕ್ಕಾಗಿ ಪೋಸ್ಟ್‌ ಹಾಕಿದ್ರಾ ಪ್ರಬಾಸ್..?

kalki

ಸಲಾರ್ ಸಿನೆಮಾ ಹಿಟ್ ಬಳಿಕ ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ ‘ ಸಿನೆಮಾ ತೆರೆಗೆ ಬರಲು ಸಿದ್ಧವಾಗಿದೆ. ಇನ್ನೂ ಈ ಸಿನೆಮಾದಲ್ಲಿ ಘಟಾನುಘಟಿಗಳು ಬಣ್ಣ ಹಚ್ಚಿದ್ದಾರೆ. ಅಮಿತಾಬಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾನಿ ಮುಂತಾದವರು ನಟಿಸಿದ್ದಾರೆ. ಇದೇ ಸಿನೆಮಾದ ಪ್ರಚಾರಕ್ಕಾಗಿ ಮಾಡಿರುವ ತಂತ್ರ ಎಂದು ಹೇಳಲಾಗಿದೆ. ಇನ್ನು ಈ ಸಿನೆಮಾ ಪ್ರಚಾರಕ್ಕಾಗಿಯೇ ಹೊಸ ವಿನ್ಯಾಸದ ಕಾರೊಂದನ್ನು ತಯಾರು ಮಾಡಲಾಗಿದೆಯಂತೆ. ಹೀಗಾಗಿ ಪ್ರಭಾಸ್ ‘ ನನ್ನ ಜೀವನದಲ್ಲಿ ಹೊಸ ವ್ಯಕ್ತಿ ಆಗಮನ’ ಎಂದು ಬರೆದುಕೊಂಡಿರಬಹುದು ಎಂದು ಊಹಿಸಲಾಗಿದೆ.

ಅದೇನೆ ಇರಲಿ ಪ್ರಭಾಸ್ ಮದುವೆ ಆಗಲು ನಿರ್ಧಿರಿಸಿದ್ದಾರಾ..? ಅಥವಾ ಸಿನೆಮಾ ಪ್ರಚಾರಕ್ಕಾಗಿ ಹೀಗೆ ಬರೆದುಕೊಂಡಿದ್ದಾರಾ..? ಅನ್ನೋದರ  ಅಸಲಿಯತ್ತು  ಇನ್ನೆರೆಡು ದಿನಗಳಲ್ಲಿ ಕಾದು ನೋಡಬೇಕಿದೆ.

 

 

Continue Reading

LATEST NEWS

ರಾಜ್ಯದ ಈ ಜಿಲ್ಲೆಗಳಲ್ಲಿ ಮೇ 24ರ ವರೆಗೂ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

Published

on

ಬೆಂಗಳೂರು : ಬಿಸಿಲ ಬೇಗೆಗೆ ಬೆಂದಿರುವ ಜನರ ಮೊಗದಲ್ಲಿ ನಗುವನ್ನು ಮಳೆರಾಯ ತಂದಿದ್ದಾನೆ. ಈಗಾಗಲೇ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮಳೆರಾಯನ ಆಗಮನವಾಗಿದೆ. ಮೇ 24ರವರೆಗೂ ಭಾರೀ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


ಎಲ್ಲಿಲ್ಲಿ ಮಳೆ?

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನದ, ಕೊಪ್ಪಳ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹಾವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ : ಇದು ಪುರುಷರು ಮಾತ್ರ ಭಾಗವಹಿಸುವ ಜಾತ್ರೆ..! ಮಾಂಸದೂಟ ಇಲ್ಲಿನ ವಿಶೇಷ..!

ಇನ್ನು ಬೆಳಗಾವಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳ ಹಲವೆಡೆ ಸ್ವಲ್ಪ ಮಟ್ಟಿಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Continue Reading

FILM

ದರ್ಶನ್ ‘ಡೆವಿಲ್’ಗೆ ಹೀರೋಯಿನ್ ಫಿಕ್ಸ್; ಡಿಬಾಸ್ ಗೆ ಜೊತೆಯಾದ್ರು ಕರಾವಳಿ ಬೆಡಗಿ!

Published

on

ಬೆಂಗಳೂರು : ಚಾಲೆಂಜಿಂಗ್ ದರ್ಶನ್ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ. ಚಿತ್ರ ಬಿಡುಗಡೆಗೂ ಮುನ್ನ ಚಿತ್ರದ ಪ್ರತೀ ಅಪ್ಡೇಟ್ ಗಾಗಿ ತುದಿಗಾಲಲ್ಲಿ ನಿಂತಿರುತ್ತಾರೆ. ಹೊಸ ಚಿತ್ರ ಅನೌನ್ಸ್ ಆದಾಗಿನಿಂದ ಪ್ರತಿ ಸುದ್ದಿಗಾಗಿಯೂ ಅಭಿಮಾನಿಗಳು ಕುತೂಹಲದಿಂದ ನಿರೀಕ್ಷೆಯಲ್ಲಿರುತ್ತಾರೆ.
‘ಕಾಟೇರ’ ಚಿತ್ರದ ಯಶಸ್ಸಿನ ನಂತರ ದರ್ಶನ್ ‘ಡೆವಿಲ್’ ಚಿತ್ರವನ್ನು ಅನೌನ್ಸ್ ಮಾಡಿದ್ದರು. ಈಗಾಗಲೇ ಪೋಸ್ಟರ್, ಮೇಕಿಂಗ್ ವೀಡಿಯೋಗಳು ಸದ್ದು ಮಾಡುತ್ತಿವೆ. ಡಿ ಬಾಸ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಕರಾವಳಿ ಬೆಡಗಿ ನಾಯಕಿ :

ದರ್ಶನ್ ಜೊತೆ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲಕ್ಕೂ ಈಗ ತೆರೆ ಬಿದ್ದಿದೆ, ಕರಾವಳಿಯ ಬೆಡಗಿ ದರ್ಶನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹೌದು, ಕರಾವಳಿ ಮೂಲದ ರಜನಾ ರೈ ‘ಡೆವಿಲ್’ ಚಿತ್ರದ ನಾಯಕಿ. ಈ ಹಿಂದೆಯೂ ರಚನಾ ಡೆವಿಲ್ ಗೆ ನಾಯಕಿ ಆಗಲಿದ್ದಾರೆ ಎಂಬ ಗಾಳಿ ಸುದ್ದಿಯೊಂದು ಹರಿದಾಡುತ್ತಿತ್ತು. ಇದೀಗ ಅದು ದೃಢವಾಗಿದೆ. ಪೋಸ್ಟರ್ ಕೂಡ ಬಿಡುಗಡೆಯಾಗಿದೆ.

ಸಿನಿಮಾದ ನಿರ್ಮಾಣ ಸಂಸ್ಥೆಯಾದ ಜೈ ಮಾತಾ ಕಂಬೈನ್ಸ್‌ ತನ್ನ ಸೋಶಿಯಲ್‌ ಮೀಡಿಯಾ ಪುಟದಲ್ಲಿ ಪೋಸ್ಟರ್ ಹಂಚಿಕೊಂಡಿದ್ದು, ‘ವೆಲ್‌ಕಮ್‌ ಆನ್‌ ಬೋರ್ಡ್‌, ಶುದ್ಧ ಕೌಶಲ್ಯಕ್ಕಾಗಿ ಗುರುತಿಸಲಾಗಿದೆ. ರಚನಾ ರೈ ಸ್ವಾಗತ’ ಎಂದುಬರೆದುಕೊಂಡಿದೆ. ಪೋಸ್ಟರ್ ನಲ್ಲಿ ನೆಲದ ಪ್ರತಿಭೆಗೆ ಮನ್ನಣೆ ಎಂದು ಬರೆಯಲಾಗಿದೆ.


ಪುತ್ತೂರು ಮೂಲದ ರಚನಾ ಈಗಾಗಲೇ ತುಳು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ರೂಪೇಶ್ ಶೆಟ್ಟಿ ಜೊತೆ ತುಳು ಚಿತ್ರ ‘ಸರ್ಕಸ್’ನಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಕನ್ನಡದಲ್ಲಿ ಧನ್ವೀರ್ ಗೌಡ ಜೊತೆ ‘ವಾಮನ’ದಲ್ಲೂ ನಟಿಸಿದ್ದಾರೆ. ಬ್ಯಾಡ್ಮಿಂಟನ್ ಪ್ಲೇಯರ್ ಆಗಿರುವ ರಚನಾ ಮಾಡೆಲ್ ಕ್ಷೇತ್ರದಲ್ಲೂ ಮಿಂಚಿದ್ದಾರೆ. ಡ್ಯಾನ್ಸರ್ ಕೂಡಾ ಹೌದು. ‘ಓ ಮೈ ಡಾಗ್’ ಎಂಬ ಪುಸ್ತಕವನ್ನೂ ಅವರು ಬರೆದಿದ್ದಾರೆ.

ಇದನ್ನೂ ಓದಿ : ನಟಿ ಪವಿತ್ರಾ ಜಯರಾಂ ಸಾ*ವಿನ ಬೆನ್ನಲ್ಲೇ ಆತ್ಮಹ*ತ್ಯೆಗೆ ಶರಣಾದ ಸಹನಟ ಚಂದು!

‘ತಾರಕ್’ ಬಳಿಕ ‘ಡೆವಿಲ್’ ಚಿತ್ರದ ಮೂಲಕ ಮತ್ತೆ ಪ್ರಕಾಶ್ ವೀರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ದರ್ಶನ್ ಕೈಗೆ ಪೆಟ್ಟಾದ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತವಾಗಿತ್ತು. ಸದ್ಯ ದರ್ಶನ್ ಗುಣಮುಖರಾಗಿದ್ದು, ಸದ್ಯದಲ್ಲೇ ಡೆವಿಲ್ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

Continue Reading

LATEST NEWS

Trending