Connect with us

LATEST NEWS

ರಾಷ್ಟ್ರಪತಿ ಭೇಟಿ ಹಿನ್ನೆಲೆ: ಶೃಂಗೇರಿ ದೇಗುಲದಲ್ಲಿ ಭಕ್ತರ ಪ್ರವೇಶಕ್ಕೆ ನಿಷೇಧ

Published

on

ಚಿಕ್ಕಮಗಳೂರು: ಶೃಂಗೇರಿ ಶಾರದಾ ಪೀಠಕ್ಕೆ ಅಕ್ಟೋಬರ್ 8ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ ನೀಡಲಿರುವ ಕಾರಣ ನಾಳೆ (ಅ.7) ಹಾಗೂ ನಾಡಿದ್ದು (ಅ.8) ಶೃಂಗೇರಿಯ ಶಾರದಾಂಬೆ ದೇಗುಲಕ್ಕೆ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.


ಅಕ್ಟೋಬರ್ 8ರ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಶೃಂಗೇರಿ ಮಠದಲ್ಲಿ ರಾಷ್ಟ್ರಪತಿಗಳ ಕಾರ್ಯಕ್ರಮ ನಡೆಯಲಿದೆ.

ಶಾರದಾಂಬೆ ದರ್ಶನದ ಜತೆಗೆ ಹಿರಿಯ ಹಾಗೂ ಕಿರಿಯ ಶ್ರೀಗಳನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ ಮಾಡಲಿದ್ದಾರೆ.
ಶೃಂಗೇರಿ ಶಾರದಾ ಪೀಠಕ್ಕೆ ಅ. 8ರಂದು ಆಗಮಿಸುವ ಹಿನ್ನೆಲೆಯಲ್ಲಿ ಮೂರು ಹೆಲಿಕಾಪ್ಟರ್ ಇಳಿಯುವುದಕ್ಕಾಗಿ ಹೆಲಿಪ್ಯಾಡ್‌ಗಳ ನಿರ್ಮಾಣ ಮಾಡಲಾಗಿದೆ.

ಗಾಂಧಿ ಮೈದಾನದಲ್ಲಿದ್ದ ಅಂಗಡಿ ಮುಂಗಟ್ಟುಗಳು, ಹೋಟೆಲ್‌, ರಸ್ತೆ ಬದಿ ವ್ಯಾಪಾರದ 25ಕ್ಕೂ ಹೆಚ್ಚು ಅಂಗಡಿಗಳ ತೆರವು ಮಾಡಲಾಗಿದೆ.

ಈಗಾಗಲೇ ಬೆಂಗಳೂರಿಗೆ ಬಂದಿಳಿದಿರುವ ಅವರು ನಾಳೆ ಸಂಜೆ ಮಂಗಳೂರಿಗೆ ಬರಲಿದ್ದಾರೆ.

DAKSHINA KANNADA

ಅಡುಗೆ ಮನೆಯಲ್ಲಿರುವ ಈ ಒಂದು ವಸ್ತುವನ್ನು ಪ್ರತಿದಿನ ಲಕ್ಷ್ಮೀಗೆ ಅರ್ಪಿಸಿ

Published

on

ಮಂಗಳೂರು: ಲಕ್ಷ್ಮೀ ನಿಮಗೆ ಒಲಿದರೆ ಆ ವ್ಯಕ್ತಿಗಳು ಐಶ್ವರ್ಯ  ದೊರೆತು ಲಕ್ಷ್ಮೀ ಪುತ್ರ ಎನಿಸಿಕೊಳ್ಳುತ್ತಾರೆ. ಲಕ್ಷ್ಮೀಯನ್ನು ಮೆಚ್ಚಿಸಲು ನಿಮ್ಮ ಅಡುಗೆ ಮನೆಯಲ್ಲಿರುವ ಒಂದು ವಸ್ತುವನ್ನು ಆಕೆಗೆ ಅರ್ಪಿಸಿದರೆ ಸಾಕು.

ಮನೆಯ ವಾಸ್ತುವಿಗೂ ಮನೆಯಲ್ಲಿರುವ ವಸ್ತುಗಳಿಗೂ ಸಂಬಂಧ ಇದೆ. ವಿಶೇಷವಾಗಿ ಅಡುಗೆ ಮನೆಯಲ್ಲಿರುವ ವಸ್ತುಗಳಿಗೂ ವಾಸ್ತುವಿಗೂ ಸಂಬಂಧ ಇದೆ. ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳನ್ನು ಜ್ಯೋತಿಷ್ಯದಲ್ಲಿ ಪರಿಹಾರವಾಗಿ ಬಳಸಲಾಗುತ್ತದೆ. ಅಂತಹ ಒಂದು ವಸ್ತು ಯಾವುದೆಂದರೆ ಅದು ಕೊತ್ತಂಬರಿ.

ಪ್ರಮುಖ ಸಂಬಾರ ಪದಾರ್ಥವಾದ ಕೊತ್ತಂಬರಿಯನ್ನು ವಾಸ್ತು ಪರಿಹಾರವಾಗಿಯೂ ಬಳಸುತ್ತಾರೆ. ಜೊತೆಗೆ ಕೊತ್ತಂಬರಿ ಸೊಪ್ಪನ್ನು ವಾಸ್ತು ಪರಿಹಾರದಲ್ಲಿ ಬಳಸಲಾಗುತ್ತದೆ. ಈ ವಸ್ತುಗಳನ್ನು ಸರಿಯಾಗಿ ಬಳಸಿದರೆ ನಿಮ್ಮ ಜೀವನ ಬದಲಾಗಬಹುದು

ಬಹಳಷ್ಟು ಕಡೆ ಲಕ್ಷ್ಮೀಗೆ ಧನಿಯಾ ಕಾಳನ್ನು ಅರ್ಪಿಸಲಾಗುತ್ತದೆ. ಲಕ್ಷ್ಮೀಗೆ ಧನಿಯಾ ಬಹಳ ಇಷ್ಟ ಎಂಬ ನಂಬಿಕೆ ಇದೆ. ದೀಪಾವಳಿ ಹಬ್ಬದಂದು ಲಕ್ಷ್ಮೀಗೆ ಈ ಧನಿಯಾವನ್ನು ಅರ್ಪಿಸಲಾಗುತ್ತದೆ. ಪೂಜೆಯ ನಂತರ ಲಕ್ಷ್ಮೀಗೆ ಅರ್ಪಿಸಿದ ಈ ಧನಿಯಾವನ್ನು ಸುರಕ್ಷಿತವಾಗಿ ಇಡಬೇಕು. ಹೀಗೆ ಪ್ರತಿದಿನ ಲಕ್ಷ್ಮೀ ದೇವಿಗೆ ಧನಿಯಾವನ್ನು ಇಟ್ಟರೆ ಮನೆಯಲ್ಲಿ ಸುಖ-ಶಾಂತಿ-ಸಮೃದ್ಧಿ ಆಗುತ್ತದೆ ಎನ್ನುವ ನಂಬಿಕೆ ಇದೆ.

Continue Reading

LATEST NEWS

‘ಡುಮ್ಮಿ’ ಎಂದು ಹೀಯಾಳಿಸಿದಕ್ಕೆ ಪತ್ನಿ ಆತ್ಮಹ*ತ್ಯೆ..!

Published

on

ಬೆಂಗಳೂರು: ಡುಮ್ಮಿ ಎಂದು ಹೀಯಾಳಿಸಿದಕ್ಕೆ ಪತ್ನಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬಸವೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಜುನಾಥ ನಗರ ನಿವಾಸಿ ಸಂಧ್ಯಾ(31 ವ) ಆತ್ಮಹ*ತ್ಯೆಗೆ ಶರಣಾದವರು. ಈಕೆ ಖಾಸಗಿ ಪ್ರೌಢ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.  ಪತಿ ಡುಮ್ಮಿ ಎಂದು ಹೀಯಾಳಿಸಿ ಜಗಳ ಮಾಡುತ್ತಿದ್ದರು. ಇದರಿಂದ ನೊಂದು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

suicde

ಬಾಲಕನ ಹ*ತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತಮ್ಮನನ್ನೇ ಕೊಂದ ಅಣ್ಣ; ಮೊಬೈಲ್ ನಿಂದ ಹೋಯ್ತು ಪ್ರಾಣ!

ಸಂಧ್ಯಾ, ಜಯಪ್ರಕಾಶ್ ದಂಪತಿಗೆ ನಾಲ್ಕು ವರ್ಷದ ಪುತ್ರನಿದ್ದಾನೆ. ಮಗನ ಅನಾರೋಗ್ಯ ಸಮಸ್ಯೆಯಿಂದಾಗಿ ವೈದ್ಯಕೀಯ ಚಿಕಿತ್ಸೆಗೆ ಸಾಕಷ್ಟು ಹಣ ವ್ಯಯಿಸಿದ್ದರು. ಇದರಿಂದಾಗಿ ದಂಪತಿ ಮಧ್ಯೆ ಮನಸ್ತಾಪಗಳು ಉಂಟಾಗಿತ್ತು. ಈ ಮಧ್ಯೆ ಜಯಪ್ರಕಾಶ್ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದರು. ಈ ಸಮಯದಲ್ಲಿ ಸಂಧ್ಯಾರವರಿಗೆ ಗರ್ಭಪಾತವಾಗಿದೆ. ಇದಾದ ಬಳಿಕ ಸಂಧ್ಯಾರವರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ದೇಹದ ತೂಕವು ಹೆಚ್ಚಾಗಿತ್ತು. ಗಂಡ ಹೆಂಡತಿಯ ನಡುವೆ ಜಗಳ ನಡೆಯುತ್ತಿತ್ತು. ಇನ್ನು ಸಂಧ್ಯಾಳನ್ನು ಪತಿ ಜಯಪ್ರಕಾಶ್ ಡುಮ್ಮಿ ಎಂದು ಹೀಯಾಳಿಸುತ್ತಿದ್ದರು. ಇದರಿಂದ ನೊಂದ ಮಹಿಳೆ ಗುರುವಾರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಆ ವೇಳೆಗೆ ಸಂಧ್ಯಾ ಕೊನೆಯುಸಿರು ಚೆಲ್ಲಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Continue Reading

LATEST NEWS

ಇದು ಪುರುಷರು ಮಾತ್ರ ಭಾಗವಹಿಸುವ ಜಾತ್ರೆ..! ಮಾಂಸದೂಟ ಇಲ್ಲಿನ ವಿಶೇಷ..!

Published

on

ಮಂಗಳೂರು / ಮಧುರೈ : ಅದು ಹತ್ತೂರಿನ ಜನರು ಭಾಗವಹಿಸುವ ಊರ ಜಾತ್ರೆಯಾಗಿದ್ದು ಕನಿಷ್ಟ ಅಂದ್ರೂ ಹತ್ತರಿಂದ ಹದಿನೈದು ಸಾವಿರ ಜನರು ಭಾಗವಹಿಸ್ತಾರೆ. ಆದ್ರೆ, ವಿಶೇಷ ಅಂದ್ರೆ ಈ ಜಾತ್ರೆಯಲ್ಲಿ ಎಲ್ಲೂ ಒಂದೇ ಒಂದು ಹೆಣ್ಣು ಮಕ್ಕಳು ಕಾಣೋದಿಕ್ಕೆ ಸಿಗೋದಿಲ್ಲ. ಹೆಣ್ಣು ಮಕ್ಕಳು ಈ ಜಾತ್ರೆ ಗದ್ದೆಗೆ ಇಳಿಬೇಕು ಅಂದ್ರೆ ಇಲ್ಲಿ ಪುರುಷರು ಊಟ ಮಾಡಿ ಬಿಟ್ಟು ಹೋದ ಬಾಳೆ ಎಲೆಗಳು ಒಣಗಿ ಹೋಗಬೇಕು. ಅಂದ್ರೆ ಕನಿಷ್ಟ ಅಂದ್ರೂ ಒಂದು ವಾರದ ಬಳಿಕವಷ್ಟೇ ಹೆಣ್ಣು ಮಕ್ಕಳು ಈ ಜಾತ್ರೆಗೆ ಬರಬಹುದು.


ಇದು ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಮಂಗಲಂ ಬಳಿಯ ಸೂರಿಕಂಬಟ್ಟಿ ಪಂಚಾಯತ್‌ನಲ್ಲಿ ನಡೆಯುವ ವಿಶೇಷ ಜಾತ್ರೆ. ಪೆರುಮಾಳ್ಕೋವಿಲ್ಪಟ್ಟಿ ಗ್ರಾಮ ದೇವರಾದ ಕರುಂಪರೈ ಮುತ್ತಯ್ಯ ದೇವಸ್ಥಾನದಲ್ಲಿ ಈ ಜಾತ್ರೆ ನಡೆಯುತ್ತದೆ. ಇದು ಮಾಂಸಾಹಾರಿ ಊಟದ ಜಾತ್ರೆಯಾಗಿದ್ದು, ಉತ್ಸವದ ಸಂಪ್ರದಾಯದಂತೆ ಪುರುಷರು ಮಾತ್ರ ಭಾಗವಹಿಸುತ್ತಾರೆ.

ದೇವರಿಗೆ ಮೇಕೆ ಬ*ಲಿ :

ಗ್ರಾಮ ದೇವರಿಗೆ ಭಕ್ತರು ತಮ್ಮ ಕೃಷಿ ಸಮೃದ್ಧಿಯಾಗಲು, ರೋಗ ರುಜಿನಗಳು ಬಾರದೇ ಇರಲು ಇಲ್ಲಿಗೆ ಕಪ್ಪು ಆಡುಗಳನ್ನು ಹರಕೆ ಹೇಳಿರುತ್ತಾರೆ. ಹರಕೆ ಹೇಳಿದ ಆಡುಗಳನ್ನು ಈ ಪರಿಸರದಲ್ಲಿ ತಂದು ಬಿಟ್ಟ ಬಳಿಕ ಆ ಆಡುಗಳಿಗೆ ಯಾರೂ ತೊಂದರೆ ಕೊಡುವಂತಿಲ್ಲ. ಯಾವ ತೋಟಕ್ಕೆ ಹೋಗಿ ಮೇವು ತಿಂದ್ರೂ ಅದು ಸಾಕ್ಷಾತ್ ಮುತ್ತಯ್ಯ ಕರುಪ್ಪು ಸ್ವಾಮಿಯೇ ಮೇವು ತಿನ್ನುತ್ತಿದ್ದಾರೆ ಅಂತ ಭಕ್ತರು ನಂಬಿಕೆ ಇಟ್ಟಿದ್ದಾರೆ. ಮುತ್ತಯ್ಯ ಸ್ವಾಮಿಗೆ ನಡೆಯುವ ವಾರ್ಷಿಕ ಜಾತ್ರೆಯಲ್ಲಿ ಇದೇ ಮೇಕೆಗಳನ್ನು ಬ*ಲಿ ಕೊಡಲಾಗುತ್ತದೆ. ಹಬ್ಬಕ್ಕೆ ಒಂದು ವಾರ ಮೊದಲು ಗ್ರಾಮಾಂತರ ಪ್ರದೇಶದಲ್ಲಿ ತಿರುಗಾಡುವ ಎಲ್ಲ ಮೇಕೆಗಳನ್ನು ಸಂಗ್ರಹಿಸಿ ಸ್ವಾಮಿಗೆ ಬ*ಲಿ ಕೊಡುತ್ತಾರೆ.


ಈ ಹಿನ್ನೆಲೆಯಲ್ಲಿ ಇಂದು ( ಮೆ 18 ) ಬೆಳಗ್ಗೆ ಉತ್ಸವ ಆರಂಭವಾಗಿದ್ದು, ದೇವಸ್ಥಾನದಲ್ಲಿ ಮುತ್ತಯ್ಯ ಸ್ವಾಮಿಗೆ ಪೊಂಗಲ್ ಹಾಕಿ ಪೂಜೆಗೆ ಚಾಲನೆ ನೀಡಲಾಯಿತು. ನಂತರ 125 ಮೇಕೆಗಳನ್ನು ಬ*ಲಿ ನೀಡಿ 2500 ಕೆಜಿ ಅಕ್ಕಿಯನ್ನು ಬೇಯಿಸಲಾಯಿತು. ನಂತರ ಬೇಯಿಸಿದ ಅನ್ನ ಮತ್ತು ಮಾಂಸವನ್ನು ಸ್ವಾಮಿಗೆ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರಿಗೆ ಅನ್ನದಾನ ಮಾಡಲಾಯಿತು.

ಮಹಿಳೆಯರಿಗಿಲ್ಲ ಪ್ರವೇಶ :


ಈ ಜಾತ್ರೆಯಲ್ಲಿ ಈ ಬಾರಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಪುರುಷರು ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ. ಇವರು ಆಹಾರ ಸೇವಿಸಿದ ಎಲೆಗಳನ್ನು ಹಾಗೆ ಬಿಟ್ಟು ಬಿಡುವುದು ಕೂಡಾ ಇಲ್ಲಿನ ಪ್ರಮುಖ ಸಂಪ್ರದಾಯದಲ್ಲಿ ಒಂದು. ಹೀಗೇ ಬಿಟ್ಟು ಹೋದ ಎಲೆಗಳು ಒಣಗುವ ತನಕ ಈ ಪ್ರದೇಶಕ್ಕೆ ಮಹಿಳೆಯರು ಎಂಟ್ರಿ ಕೊಡುವಂತಿಲ್ಲ. ಎಲೆಗಳು ಒಣಗಿದೆ ಎಂದು ದೇವಸ್ಥಾನದ ಪೂಜಾರರು ಹೇಳಿದ ಬಳಿಕ ಮಹಿಳೆಯರು ಜಾತ್ರೆಯಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ.

ಇದನ್ನೂ ಓದಿ : ಬಾಲಕನ ಹ*ತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತಮ್ಮನನ್ನೇ ಕೊಂದ ಅಣ್ಣ; ಮೊಬೈಲ್ ನಿಂದ ಹೋಯ್ತು ಪ್ರಾಣ!

ಮಾಂಸದೂಟದ ಹಬ್ಬದಲ್ಲಿ ತಿರುಮಂಗಲಂ, ಸೊರಿಕಂ ಪಟ್ಟಿ, ಪೆರುಮಾಳ್ ಕೋವಿಲ್ಪಟ್ಟಿ, ಕರಡಿಕ್ಕಲ್. ಮಾವಿಲಿಪಟ್ಟಿ, ಚೇಕನುರಾಣಿ, ಚೋಳವಂತನ್, ಕರುಮತ್ತೂರು, ಚೆಲ್ಲಂಪಟ್ಟಿ ಸೇರಿದಂತೆ ವಿವಿಧ ಪ್ರದೇಶಗಳ ಪುರುಷ ಭಕ್ತರು ಮಾತ್ರ ಭಾಗವಹಿಸಿದ್ದರು.

Continue Reading

LATEST NEWS

Trending