Tuesday, July 5, 2022

ಬೆಳ್ತಂಗಡಿಯಲ್ಲಿ ಕೊಲೆಯಾದ ಹಿಂದೂ ಹುಡುಗನ ಬಗ್ಗೆ ಹಾಲಿ ಶಾಸಕ ಒಂದೇ ಒಂದು ಶಬ್ದ ಮಾತನಾಡಿಲ್ಲ: ಮಾಜಿ ಶಾಸಕ ವಸಂತ ಬಂಗೇರ

ಮಂಗಳೂರು: ಬೆಳ್ತಂಗಡಿ ಶಾಸಕರು ಹಿಂದೂಗಳ ಪರವಾಗಿರುವವರು, ಕೆಲದಿನಗಳ ಹಿಂದೆ ಬೆಳ್ತಂಗಡಿಯಲ್ಲಿ ಕೊಲೆಯಾದ ಹಿಂದೂ ಹುಡುಗನ ಪರವಾಗಿ ಮಾತನಾಡಬೇಕಿತ್ತು.

ಆದರೆ ಶಾಸಕರು ಒಂದೇ ಒಂದು ಶಬ್ದ ಮಾತನಾಡಿಲ್ಲ. ಕೊಲೆಯಾದ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಎಂದು ಮಾಜಿ ಶಾಸಕ ವಸಂತ ಬಂಗೇರಾ ಹೇಳಿದ್ದಾರೆ.

ಮಂಗಳೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳ್ತಂಗಡಿಯಲ್ಲಿ ಬಜರಂಗದಳದ ಕಾರ್ಯಕರ್ತ ಕೃಷ್ಣ ಅಲಿಯಾಸ್ ಕಿಟ್ಟನಿಂದ ಕೊಲೆಯಾದ ದಿನೇಶ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ.

ಆರೋಪಿಯ ಸಹೋದರರು ಬಿಜೆಪಿಯಲ್ಲಿದ್ದುಕೊಂಡು ಹೊಯ್ಗೆ, ಮರದ, ಗೋಸಾಗಾಟ, ಗೋಮಾಂಸ ದಂಧೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಸಾವಿನಲ್ಲಿ ಬಿಜೆಪಿಗರು ರಾಜಕೀಯ ಮಾಡಿದರು. ಆದರೆ ನಾವು ಹೆಣ ರಾಜಕೀಯ ಮಾಡಿಲ್ಲ. ಕೊಲೆಯಾದ ದಿನೇಶ್‌ ಅವರಿಗೆ ಪತ್ನಿ, 3 ಮಕ್ಕಳು ಹಾಗೂ ವೃದ್ದೆ ತಾಯಿ ಇದ್ದಾರೆ.

ಕೊಲೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ, ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಗೂ ಮನವಿ ಪತ್ರ ನೀಡಲಿದ್ದೇವೆ. ಮೃತ ದಿನೇಶ್‌ ಅವರಿಗೆ ನಿಧಿ ಸಂಗ್ರಹದ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು.
ಉಡುಪಿ ಮೂಲದ ಮುಸ್ಲಿಂ ಯುವಕ ಹಿಂದೂ ಯುವತಿಗೆ ಆರೋಪಿಯ ಅಣ್ಣ ಹಾಗೂ ಬಜರಂಗದಳದ ಜಿಲ್ಲಾ ಸಂಚಾಲಕ ಭಾಸ್ಕರ ಎಂಬಾತನು ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದಾನೆ. ಇದು ಯಾವ ಜಿಹಾದ್‌ ಎಂಬುವುದು ತಿಳಿಯುತ್ತಿಲ್ಲ.


ಪೊಲೀಸ್‌ ಠಾಣೆಗೂ ಬಂದು ಧಮ್ಕಿ ಹಾಕಿದ್ದ ಆರೋಪಿ
ಮೃತ ದಿನೇಶನ ತಾಯಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಿಸುತ್ತಿದ್ದಾಗ ಅಲ್ಲಿಗೆ ಬಂದ ಭಾಸ್ಕರ ಕೇಸು ದಾಖಲಿಸದಂತೆ ಧಮ್ಕಿ ಸಹ ಹಾಕಿದ್ದ, ಪೊಲೀಸರಿಗೂ ಟ್ರಾನ್ಸ್‌ಫರ್‌ ಮಾಡುವ ಬೆದರಿಕೆಯನ್ನೊಡ್ಡಿದ್ದ ಎಂದು ಹೇಳಿದರು.

ಆದರೂ ಪೊಲೀಸರು ಕೇಸು ದಾಖಲಿಸಿ ಯಾವುದೇ ಬೆದರಿಕೆ ಬಗ್ಗದೇ ಆರೋಪಿಯನ್ನು ಬಂಧಿಸಿರುವುದು ಶ್ಲಾಘನೀಯ ಎಂದು ಹೇಳಿದರು.

‘ಅವರು ರಕ್ತ ಕುಡಿಯುವವರು’
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಮೃತ ದಿನೇಶ್‌ ತಾಯಿ ಮಾತನಾಡಿ, ನನ್ನ ಮಗ ಸಾಧು ಸ್ವಭಾದವ.

ಯಾರೊಂದಿಗೂ ಜಗಳ ಮಾಡುತ್ತಿರಲಿಲ್ಲ. ಕೊಲೆಗೈದ ಕೃಷ್ಣ ಅಲಿಯಾಸ್ ಕಿಟ್ಟ ಹಾಗೂ ದಿನೇಶ್‌ ಮಧ್ಯೆ ಪೂರ್ವ ದ್ವೇಷ ಇರಲಿಲ್ಲ.

‘ನಿನಗೆ ಆಸ್ತಿಯ ದಾಖಲೆ ಪತ್ರವನ್ನು ನಾನು ಕಾಂಗ್ರೆಸ್‌ ಶಾಸಕ ವಸಂತ ಬಂಗೇರ ಅವರ ಮಾಡಿಸಿದ್ದೇ ನಾನು ಎಂದಾಗ ಆರೋಪಿ ಕಾಂಗ್ರೆಸ್‌ನವರ ಸುದ್ದಿ ನನ್ನ ಹತ್ತಿರ ಮಾತನಾಡಬೇಡ ಎಂದು ದೊಣ್ಣೆಯಿಂದ ಹೊಡೆದು ಗಂಭೀರ ಗಾಯಗೊಳಿಸಿ ಸಾಯಿಸಿದ್ದಾನೆ ಎಂದು ಆರೋಪಿ ತಾಯಿ ಪದ್ಮಾವತಿ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ: ಯುವಕನನ್ನು ಇರಿದು ಮುಗಿಸಿದ ಸ್ನೇಹಿತರು…

ಬಂಟ್ವಾಳ: ಯುವಕನೋರ್ವನನ್ನು ಆತನ ಸ್ನೇಹಿತರಿಬ್ಬರು ಸೇರಿಕೊಂಡು ಮಾರಕಾಸ್ತ್ರಗಳಿಂದ ಕೊಲೆ ನಡೆಸಿದ ಘಟನೆ ನಿನ್ನೆ ಮಧ್ಯರಾತ್ರಿ ವೇಳೆ ಕೈಕಂಬದ ತಲಪಾಡಿ ಎಂಬಲ್ಲಿ ನಡೆದಿದೆ.ಶಾಂತಿ ಅಂಗಡಿ ನಿವಾಸಿ ಮಹಮ್ಮದ್ ಆಶಿಫ್ (29) ಕೊಲೆಯಾದ ಯುವಕ.ಆತನ ಸ್ನೇಹಿತ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ : ಶಾಲಾ- ಕಾಲೇಜುಗಳಿಗೆ ಇಂದು (ಜು5) ರಜೆ ಘೋಷಿಸಿದ ಜಿಲ್ಲಾಧಿಕಾರಿ..!

ಮಂಗಳೂರು " ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ದಿನಾಂಕ 05/07/ 2022ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ ಪ್ರೌಢಶಾಲೆ, ಪದವಿ ಪೂರ್ವ...

ಮಂಗಳೂರು: ವರ್ಕ್ ಶಾಪ್‌ಗೆ ನೀರು ನುಗ್ಗಿ ಅಪಾರ ಹಾನಿ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವರ್ಕ್ ಶಾಪ್‌ಗೆ ನೀರು ನುಗ್ಗಿ ಅಪಾರ ಹಾನಿಯಾದ ಘಟನೆ ಮಂಗಳೂರು ನಗರ ಹೊರವಲಯದ ಕುಲಶೇಖರದ ಬಜ್ಜೋಡಿ ಎಂಬಲ್ಲಿ ನಡೆದಿದೆ.ಭಾರೀ ಮಳೆ ಹಿನ್ನಲೆ ವರ್ಕ್ ಶಾಪ್...