ನವದೆಹಲಿ: ಇಂದು ಚೀನಾದಲ್ಲಿ ನಿಮಿಷಕ್ಕೆ 10 ಮಕ್ಕಳು ಜನಿಸುತ್ತಿದ್ದರೆ, ಭಾರತದಲ್ಲಿ 30 ಮಕ್ಕಳು ಜನಿಸುತ್ತಿದ್ದಾರೆ. ಹೀಗಿರುವಾಗ ನಾವು ಚೀನಾದೊಂದಿಗೆ ಸ್ಪರ್ಧಿಸೋದು ಹೇಗೆ? ಆದ್ದರಿಂದ ಮಸೂದೆಯನ್ನು ಧರ್ಮ ಅಥವಾ ಪಂಗಡವನ್ನು ಲೆಕ್ಕಿಸದೇ ಪ್ರತಿಯೊಬ್ಬರಿಗೂ ಅನ್ವಯವಾಗುವಂತೆ ಜಾರಿಗೊಳಿಸಬೇಕು. ಅನುಸರಿಸದವರ ಮತದಾನದ ಹಕ್ಕನ್ನೂ ಕಸಿದುಕೊಳ್ಳಬೇಕು ಎಂದು ಕೇಂದ್ರ ಸಚಿವ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಜನಸಂಖ್ಯಾ ನಿಯಂತ್ರಣ ಮಸೂದೆಗೆ ಸಂಬಂಧಿಸಿದಂತೆ ಇದೀಗ ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿ ಮಾತನಾಡಿ , ‘ಭಾರತದಲ್ಲಿ ಸೀಮಿತ ಸಂಪನ್ಮೂಲ ಇರುವುದರಿಂದ ಜನಸಂಖ್ಯಾ ನಿಯಂತ್ರಣ ಮಸೂದೆ ನಿರ್ಣಾಯಕವಾಗಿದೆ ಎಂದಿದ್ದಾರೆ. ನಮ್ಮಲ್ಲಿ ಸೀಮಿತ ಸಂಪನ್ಮೂಲ ಇರುವುದರಿಂದ ಜನಸಂಖ್ಯೆ ನಿಯಂತ್ರಿಸುವುದು ಅವಶ್ಯಕವಾಗಿದೆ.
ಭಾರತವು ವೇಗವಾಗಿ ಅಭಿವೃದ್ಧಿ ಹೊಂದಬೇಕಾದರೆ, ಈ ಬಗ್ಗೆ ಕಾನೂನು ರೂಪಿಸಬೇಕು ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಚೀನಾ ಜನಸಂಖ್ಯೆ ನಿಯಂತ್ರಿಸುವುದಕ್ಕಾಗಿ `ಒನ್ ಚೈಲ್ಡ್ ಪಾಲಿಸಿ’ (ಒಂದು ಮಗುವನ್ನು ಹೊಂದುವ ನೀತಿ) ಜಾರಿಗೆ ತಂದಿತು.
ಈ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸಿ ಅಭಿವೃದ್ಧಿ ಸಾಧಿಸಿತು. ಸರ್ಕಾರ ಮಹಿಳೆಯರ ಮೇಲಿನ ಯಾವುದೇ ದೌರ್ಜನ್ಯವನ್ನು ಧರ್ಮದ ಚೌಕಟ್ಟಿನಲ್ಲಿ ನೋಡಬಾರದು.
ಅಂತಹ ಘಟನೆಗಳನ್ನು ಪೂರ್ವಾಗ್ರಹ ರಹಿತವಾಗಿ ಎಲ್ಲರೂ ಖಂಡಿಸಬೇಕು ಎಂದು ಹೇಳಿದ್ದಾರೆ.