Connect with us

  LATEST NEWS

  ತಾರಕಕ್ಕೇರಿದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ-ಸಿಎಂ ಬೊಮ್ಮಾಯಿ ಪೋಸ್ಟರ್‌ಗೆ ಕಪ್ಪು ಮಸಿ ಬಳಿದ ಕಿಡಿಗೇಡಿಗಳು

  Published

  on

  ಮುಂಬೈ: ಕರ್ನಾಟಕ-ಮಹಾರಾಷ್ಟ್ರ ನಡುವೆ ಗಡಿ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಮುಂಬೈ ಬಸ್‌ ನಿಲ್ದಾಣದಲ್ಲಿ ಕಿಡಿಗೇಡಿಗಳು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪೋಸ್ಟರ್‌ಗೆ ಕಪ್ಪು ಮಸಿ ಬಳಿದು ಅವಮಾನ ಮಾಡಿರುವ ಪ್ರಸಂಗ ನಡೆದಿದೆ.


  ಎರಡೂ ರಾಜ್ಯಗಳ ನಡುವೆ ಗಡಿ ವಿವಾದ ತಾರಕ್ಕೇರಿದ್ದು ಇದೀಗ ರಾಜ್ಯದ ಪ್ರವಾಸೋದ್ಯಮ ಜಾಹೀರಾತು ಇದ್ದ ಪೋಸ್ಟರ್‌ನಲ್ಲಿ ಸಿಎಂ ಜತೆಗೆ ಸಚಿವ ಆನಂದ್‌ ಸಿಂಗ್‌ ಭಾವಚಿತ್ರಕ್ಕೂ ಕಪ್ಪು ಬಣ್ಣ ಬಳಿಯಲಾಗಿದೆ.

  ಗಡಿ ಗಲಾಟೆ ತೀವ್ರ ಸ್ವರೂಪ ಪಡೆಯುತ್ತಿರುವ ಕಾರಣ ಬೆಳಗಾವಿ ಸೇರಿ ಗಡಿ ಜಿಲ್ಲೆಗಳಿಂದ ಮಹಾರಾಷ್ಟ್ರಕ್ಕೆ ತೆರಳುವ 300ಕ್ಕೂ ಹೆಚ್ಚು ಕೆಎಸ್ ಆರ್‍ಇಟಿಸಿ ಬಸ್‌ ಸೇವೆ ಸ್ಥಗಿತಗೊಳಿಸಲಾಗಿದೆ.

  ಇನ್ನು, ಮಹಾರಾಷ್ಟ್ರದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಒಂದಕ್ಕೆ ಕೆಲವು ಕಿಡಿಗೇಡಿಗಳು, ಕಲ್ಲು ತೂರಾಟ ನಡೆಸಿದ ಘಟನೆಯ ಹಿನ್ನೆಲೆಯಲ್ಲಿ, ಗಡಿ ಭಾಗದ ಜಿಲ್ಲೆಗಳಲ್ಲಿ ಗಲಭೆ ಸೃಷ್ಠಿಯಾಗದಂತೆ ಶಾಂತಿ ಸೌಹಾರ್ದತೆ ಕಾಪಾಡಿ, ಕಟ್ಟೆಚ್ಚರ ವಹಿಸುವಂತೆ, ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸರಿಗೆ ಸೂಚಿಸಿದ್ದಾರೆ.

   

  LATEST NEWS

  ಅನಂತ್ ಅಂಬಾನಿ-ರಾಧಿಕಾ ಮರ್ಚಂಟ್‌ ಮದುವೆ ಡೇಟ್‌ ಫಿಕ್ಸ್‌..! ವೈರಲ್ ಆಯ್ತು ವೆಡ್ಡಿಂಗ್ ಕಾರ್ಡ್‌..!

  Published

  on

  ಮುಂಬೈ/ಮಂಗಳೂರು: ಅನಂತ್ ಅಂಬಾನಿ ಹಾಗೂ ರಾದಿಕಾ ಮರ್ಚಂಟ್‌ ರವರ ವಿವಾಹವು ಇಟಲಿಯಲ್ಲಿ ನಡೆಯಲಿದ್ದು, ಇದೀಗ ಮದುವೆಯ ಆಮಂತ್ರಣ ಪತ್ರ ಬಹಿರಂಗವಾಗಿದೆ.

  ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆಗೆ ತೆರೆ ಬಿದ್ದಿದೆ. ಇನ್ನು ಇವರಿಬ್ಬರ ಪ್ರಿ ವೆಡ್ಡಿಂಗ್‌ ಬಹಳ ಅದ್ಧೂರಿಯಾಗಿ ಜರಗಿದ್ದು  ಸ್ಟಾರ್ ನಟ-ನಟಿಯರು ಸಾಕ್ಷಿಯಾಗಿದ್ದರು. ಅತೀ ಶೀಘ್ರದಲ್ಲೇ ರಾಧಿಕಾ ಮರ್ಚಂಟ್‌ ಹಾಗೂ ಅನಂತ್ ಅಂಬಾನಿ ವಿವಾಹವಾಗಲಿದ್ದಾರೆ. ಇನ್ನು ಮದುವೆಗೂ ಮುನ್ನ ಮೊದಲನೇ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದಿದ್ದು, ಎರಡನೇ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ಇಟಲಿಯ ಕ್ರೂಸ್‌ನಲ್ಲಿ ಆಯೋಜಿಸಲಾಗಿದೆ.


  ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜು.12ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹ ನಡೆಯಲಿದೆ.  ಅತಿಥಿಗಳು  ಆಮಂತ್ರಣ ಕಾರ್ಡ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಅನಂತ್-ರಾಧಿಕಾ ಮದುವೆ ಕಾರ್ಡ್ ಸಾಂಪ್ರದಾಯಿಕ ಕೆಂಪು ಮತ್ತು ಗೋಲ್ಡನ್ ಬಣ್ಣದಿಂದ ಕೂಡಿದ್ದು ಇವರಿಬ್ಬರ ವಿವಾಹ ಕಾರ್ಯಕ್ರಮದ ವಿವರಗಳನ್ನೂ ಕಾರ್ಡ್‌ನಲ್ಲಿ ನೀಡಲಾಗಿದೆ.

  ಇದನ್ನೂ ಓದಿ.. ಅಂಬಾನಿ ಪುತ್ರನ ಮದುವೆ ಎಲ್ಲಿ ನಡೆಯುತ್ತೆ ಗೊತ್ತಾ…!! ಹೇಗಿದೆ ಅದ್ಧೂರಿ ತಯಾರಿ?

  ಕಾರ್ಡ್‌ನಲ್ಲಿ ಜು.12ರಂದು ವಿವಾಹವಿದ್ದು ಇದಕ್ಕೆ ಎಲ್ಲರೂ ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು, ಜು.13ರಂದು ಆಶೀರ್ವಾದ ಕಾರ್ಯಕ್ರಮವಿದ್ದು ಇದಕ್ಕೆ ಭಾರತೀಯ ಫಾರ್ಮಲ್ ಹಾಗೂ ಜು. 14ರಂದು  ಆರತಕ್ಷತೆ ಸಮಾರಂಭವಿದ್ದು, ಇದಕ್ಕೆ ಇಂಡಿಯನ್ ಚಿಕ್ ಥೀಮ್ ಬಟ್ಟೆಗಳನ್ನು ಧರಿಸಿ ಬರಲು ಕೇಳಲಾಗಿದೆ. ಈ ಆಮಂತ್ರಣದ ಬೆನ್ನಲ್ಲೇ ಅಧಿಕೃತ ಆಮಂತ್ರಣ ಬರಲಿದೆ ಎಂದೂ ಹೇಳಲಾಗಿದೆ.

  Continue Reading

  DAKSHINA KANNADA

  ಹಾವು ಮನೆಯೊಳಗೆ ಬಂದರೆ ಶುಭ ಸೂಚಕವೇ..?

  Published

  on

  ಮಂಗಳೂರು: ಹಾವು.. ಆ ಶಬ್ಧ ಕೇಳಿದೊಡನೆ ಒಮ್ಮೆ ಭಯ ಹುಟ್ಟಿಸುತ್ತದೆ. ಇನ್ನು ಎದುರಿಗೆ ಹಾವು ನೋಡಿದರೆ ಹೃದಯದ ಬಡಿತವೇ ನಿಂತು ಹೋದಂತೆ ಆಗುತ್ತದೆ. ಹಾಗೆಯೇ ಒಂದು ವೇಳೆ ನಿಮ್ಮ ಮನೆಯೊಳಗೆ ಹಾವು ಬಂದರೆ ನಿಮಗೆ ಹೇಗಾಗಬಹುದು. ಕೆಲವೊಮ್ಮೆ ಎಷ್ಟೋ ಜನರ ಮನೆಯೊಳಗೆ ಹಾವು ಬಂದಿರುತ್ತದೆ. ಹಾಗೋ ಹೀಗೋ ಹಾವು ಹಿಡಿಯುವರನ್ನು ಕರೆದು ಹಾವನ್ನು ಹೊರಗೆ ಕಳಿಸುವ ಸಾಹಸ ಮಾಡಿದ ನಂತರವೂ ಕೆಲವು ದಿನಗಳವರೆಗೂ ಆ ಭಯ ಇದ್ದೇ ಇರುತ್ತದೆ.

  ಆದರೆ ಹಾವು ಮನೆಯೊಳಗೆ ಬಂದರೆ ಅದನ್ನು ಕೆಲವರು ಶುಭವೆಂದೂ ಇನ್ನೂ ಕೆಲವರು ಸಮಸ್ಯೆ ಎಂದು ಹೇಳುವುದನ್ನು ನಾವು ಕೇಳಿದ್ದೇವೆಹಾವು ಮನೆಗೆ ಬಂದರೆ ಏನು ಅರ್ಥ? ಅದರಿಂದ ಏನಾದರೂ ಸಮಸ್ಯೆ ಇದೆಯೇ ತಿಳಿಯೋಣ.

  ಮನೆಯೊಳಗೆ ಹಾವು ಬರುವುದು ಶುಭ ಸೂಚಕ ಎಂದು ಹೇಳುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಹಾವನ್ನು ದೇವರ ರೂಪದಲ್ಲಿ ಪೂಜಿಸಲಾಗುತ್ತದೆ. ಆದಿಶೇಷ ಸರ್ಪಗಳ ರಾಜ, ಶಿವನು ಕೂಡಾ ಹಾವನ್ನು ತನ್ನ ಕತ್ತಿನಲ್ಲಿ ಸುತ್ತಿಕೊಂಡಿದ್ದಾನೆ. ಆದ್ದರಿಂದ ದೇವರ ಸ್ವರೂಪವಾಗಿರುವುದರಿಂದ ಮನೆಯೊಳಗೆ ಹಾವು ಬಂದರೆ ಅದು ಖಂಡಿತ ಏನೋ ಶುಭ ಮುನ್ಸೂಚನೆ ಎಂದು ನಂಬಲಾಗಿದೆ.

  ಮನೆಯೊಳಗೆ ಒಂದು ವೇಳೆ ಕಪ್ಪು ಹಾವು ಬಂದರೆ ಅದನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಇದರಿಂದ ನಿಮಗೆ ಶಿವನ ಕೃಪೆ ದೊರೆಯಲಿದ್ದು ಕೆಲವೇ ದಿನಗಳಲ್ಲಿ ನಿಮ್ಮ ಜೀವನ ಬದಲಾಗಲಿದೆ, ನೀವು ಸಂತೋಷ ಜೀವನವನ್ನು ಗಳಿಸಲಿದ್ದೀರಿ ಎಂಬ ಅರ್ಥವನ್ನು ನೀಡುತ್ತದೆ.

  ಹಾವಿನ ಮರಿ ಮನೆಯೊಳಗೆ ಬಂದರೆ ನೀವು ಕೆಲವು ದಿನಗಳಿಂದ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸಗಳು ಆದಷ್ಟು ಬೇಗ ಪೂರ್ಣಗೊಳ್ಳುತ್ತವೆ ಎಂದು ಅರ್ಥ. ಹಾವು ಮನೆಯನ್ನು ಪ್ರವೇಶಿಸಿದರೆ ಲಕ್ಷ್ಮೀ ಆಶೀರ್ವಾದ ಕೂಡಾ ನಿಮ್ಮ ಮೇಲಿದೆ ಎಂದು ಅರ್ಥ. ಇದುವರೆಗೂ ನೀವು ಎದುರಿಸುತ್ತಿದ್ದ ನಿಮ್ಮ ಆರ್ಥಿಕ ಸಮಸ್ಯೆ ಕೊನೆಗೊಳ್ಳುವುದು. ನಿಮ್ಮ ಆರ್ಥಿಕ ಪರಿಸ್ಥಿತಿ ಸದೃಢಗೊಳ್ಳುವುದು ಖಚಿತ.

  ಒಂದು ವೇಳೆ ನಿಮ್ಮ ಮನೆಗೆ ಬಿಳಿ ಬಣ್ಣದ ಹಾವು ಪ್ರವೇಶಿಸಿದರೆ ಇದು ಇನ್ನಷ್ಟು ಮಂಗಳಕರ ಎನ್ನಲಾಗಿದೆ. ಇದು ಮನೆಯಲ್ಲಿ ಶಾಂತಿ, ಸುಖ, ಸಮೃದ್ಧಿ ನೆಲೆಸುವಂತೆ ಮಾಡುತ್ತದೆ. ಇದ್ದಕ್ಕಿದ್ದಂತೆ ನಿಮ್ಮ ಮನೆಗೆ ಹಸಿರು ಹಾವು ಬಂದರೆ ಅದೂ ಕೂಡಾ ಶುಭವೇ. ಶೀಘ್ರದಲ್ಲೇ ನೀವು ಶುಭ ಸುದ್ದಿ ಕೇಳಲಿದ್ದೀರಿ, ನಿಮ್ಮ ಕಷ್ಟನಷ್ಟಗಳು ಕೊನೆಗೊಳ್ಳುತ್ತವೆ.

  ಹಳದಿ ಬಣ್ಣದ ಹಾವು ಮನೆಗೆ ಬಂದರೆ ನೀವು ಅತಿ ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ಜೀವನದಲ್ಲಿ ಪ್ರಗತಿ ಹೊಂದಲಿದ್ದೀರಿ ಎಂದು ಅರ್ಥ. ಅಷ್ಟೇ ಅಲ್ಲ, ಮನೆಗೆ ಹಾವು ಬಂದರೆ ಪತಿ ಪತ್ನಿ ನಡುವೆ ಬಾಂಧವ್ಯ ಹೆಚ್ಚಾಗುತ್ತದೆ. ಪರಸ್ಪರ ಪ್ರೀತಿ ವಿಶ್ವಾಸ ಬೆಳೆಯುತ್ತದೆ. ಜೀವನ ಸುಂದರವಾಗಿರುತ್ತದೆ.

  Continue Reading

  LATEST NEWS

  ಕೊರಿಯರ್ ಏಜೆಂಟ್ ವೇಷದಲ್ಲಿ ಬಂದು ದರೋಡೆಗೆ ಯತ್ನಿಸಿದ ಮಹಿಳೆ..! ಅಸಲಿಗೆ ಈಕೆ ಯಾರು ಗೊತ್ತಾ?

  Published

  on

  ಬೆಂಗಳೂರು: ಮಹಿಳೆಯೊಬ್ಬರು ಕೊರಿಯರ್ ಏಜೆಂಟ್‌ನಂತೆ ವೇಷ ಧರಿಸಿ ದರೋಡೆ ಮಾಡುತ್ತಿದ್ದು ಆಕೆಯನ್ನು ಪೊಲೀಸರು ಬಂಧಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಕೊರಿಯರ್‌ ಏಜೆಂಟ್‌ ವೇಷ ಧರಿಸಿ ಮನೆಗಳಿಗೆ ನುಗ್ಗಿ ಬೆದರಿಸಿ, ಹಲ್ಲೆಗೈದು ದರೋಡೆ ಮಾಡುತ್ತಿದ್ದ ಈಕೆಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಈಕೆ ದೆಹಲಿಯ ದ್ವಾರಕಾ ಅಕ್ಕ-ಪಕ್ಕ ಪ್ರದೇಶಗಳಲ್ಲಿ ದರೋಡೆಗಳನ್ನು ಮಾಡುತ್ತಿದ್ದಳು ಎನ್ನಲಾಗಿದೆ.

  ನಾಗರಿಕ ರಕ್ಷಣಾ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಈಕೆ ಈಗ ಕೆಲಸ ಕಳೆದುಕೊಂಡಿದ್ದಾಳೆ. ಈಕೆಯ ಬಳಿಯಿದ್ದ ಕೊರಿಯರ್ ಬ್ಯಾಗ್, ಟಾಯ್‌ಗನ್, ಹ್ಯಾಂಡ್‌ಗ್ಲೌಸ್, ಎರಡು ಹಗ್ಗಗಳು, ಒಂದು ಬ್ಯಾಗ್ ಹೆಲ್ಮೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

  ನಡೆದ ಘಟನೆ ಏನು..?

  ಮೇ.23ರಂದು ಪೊಲೀಸರಿಗೆ ಬಂದ ದರೋಡೆ ಕುರಿತ ದೂರಿನ ಪ್ರಕಾರ ಮಹಿಳೆಯೊಬ್ಬರು ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಕೊರಿಯರ್‌ ವೇಷದಲ್ಲಿ ಬಂದ ಮಹಿಳೆ ‘ನಿಮಗೊಂದು ಕೊರಿಯರ್ ಬಂದಿದೆ ಸಹಿ ಹಾಕಿ ಪಡೆಯಿರಿ’ ಎಂದಿದ್ದಾರೆ. ಇನ್ನು ನನ್ನಲ್ಲಿ ಸಹಿ ಹಾಕಲು ಪೆನ್ ಇಲ್ಲ ನೀವೇ ಪೆನ್ನು ತರುತ್ತೀರಾ..? ಎಂದು ಕೇಳಿಕೊಂಡಿದ್ದಾಳೆ. ಮಹಿಳೆ ಮನೆಯೊಳಗಡೆ ಪೆನ್ನು ತರಲು ಹೋಗುತ್ತಿದ್ದಾಗ ಹಿಂದಿನಿಂದ ಹಿಂಬಾಳಿಸಿಕೊಂಡು ಏಕಾಏಕಿ ಮಹಿಳೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಟಾಯ್‌ ಗನ್‌ನಿಂದ ಹೊಡೆದಿದ್ದಾಳೆ. ಹೊಡೆತದ ರಭಸಕ್ಕೆ ಮಹಿಳೆಯ ಮುಖದಲ್ಲಿ ರಕ್ತ ಸೋರಿದೆ. ಮಹಿಳೆ ಜೋರಾಗಿ ಬೊಬ್ಬೆ ಹೊಡೆದು ಅಕ್ಕ-ಪಕ್ಕದ ಮನೆಯವರನ್ನು ಕರೆಯುತ್ತಾಳೆ. ಕೂಡಲೇ ಸ್ಥಳೀಯರು ಮಹಿಳೆ ಮನೆಗೆ ಧಾವಿಸಿ ಬರುತ್ತಾರೆ. ಇದನ್ನು ಅರಿತ ಕೊರಿಯರ್ ವೇಷ ಧರಿಸಿದ್ದ ಮಹಿಳೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಈಕೆ ಕೈಗೆ ಗ್ಲೌಸ್‌, ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದರಿಂದ ಮುಖ ಚಹರೆ ಪತ್ತೆ ಮಾಡಲು ಸಾಧ್ಯವಾಗಲಿಲ್ಲ ಎಂದು ಗಾಯಗೊಂಡಿದ್ದ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

  ಅಷ್ಟಕ್ಕೂ ಈ ಮಹಿಳೆ ಯಾರು ಗೊತ್ತಾ..?

  ಇನ್ನು ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಕೊರಿಯರ್ ಏಜೆಂಟ್‌ ಪತ್ತೆಗಾಗಿ ಸೋಮೇಶ್ ವಿಹಾರ್‌ನಿಂದ ಚಾವ್ಲಾ ವರೆಗೆ ಸಿಸಿಟಿವಿ ಪರಿಶೀಲನೆ ಮಾಡುತ್ತಾರೆ. ಮೇ.24ರಂದು ಸೋಮೇಶ್ ವಿಹಾರ್‌ನಲ್ಲಿದ್ದ ಖಾಲಿ ಮನೆಯೊಂದರಲ್ಲಿ ಕೊರಿಯರ್ ವೇಷ ಧರಿಸಿದ್ದ ಮಹಿಳೆಯನ್ನು ಪತ್ತೆ ಮಾಡುತ್ತಾರೆ. ಆಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಾರೆ. ಇನ್ನು ಈ ಕೃತ್ಯ ಎಸಗಿದ ಮಹಿಳೆಯನ್ನು ರೇಖಾ ಎಂದು ಹೇಳಲಾಗಿದೆ. ಈಕೆ ಸಿವಿಲ್ ಡಿಫೆನ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದು, ಕೆಲ ದಿನಗಳಿಂದ ನನ್ನ ಕೆಲಸ ಹೋಗಿದೆ. ಮನೆಯ ಬಾಡಿಗೆ ಮತ್ತು ಮನೆಯ ಖರ್ಚನ್ನು ಸಂಭಾಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಹಣಕ್ಕೆ ಬೇಕಾಗಿ ಈ ಕೆಲಸ ಮಾಡಿದ್ದೇನೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾಳೆ.

  ಇದನ್ನೂ ಓದಿ..; ಹೈಕೋರ್ಟ್‌ ಮಹಿಳಾ ಸಿಬಂದಿಗಳಿಗೆ ಇನ್ಮುಂದೆ ‘ಮುಟ್ಟಿನ ರಜೆ’

  ಉದ್ಯಮಿ ಮನೆಗೂ ಕನ್ನ..!

  ಈ ಹಿಂದೆ ಉದ್ಯಮಿ ಚಂದ್ರಕಾಂತ್‌ ಮನೆಯಲ್ಲಿ ಕನ್ನ ಹಾಕಲು ಈ ಮಹಿಳೆ ಯತ್ನಿಸಿದ್ದಳು. ಮೇ.23 ರಂದು ರೇಖಾ ಕೊರಿಯರ್ ಏಜೆಂಟ್ ವೇಷ ಧರಿಸಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಚಂದ್ರಕಾಂತ್‌ ಮನೆಗೆ ಹೋಗಿದ್ದಾಳೆ. ನಿಮಗೊಂದು ಕೊರಿಯರ್ ಬಂದಿದೆ, ಸಹಿ ಹಾಕಿ ಪಡೆದುಕೊಳ್ಳಿ ಎಂದಿದ್ದಾಳೆ. ನನ್ನಲ್ಲಿ ಪೆನ್ನು ಇಲ್ಲ, ನೀವೆ ಪೆನ್ನು ತನ್ನಿ ಎಂದು ಹೇಳಿದ್ದಾಳೆ. ಇನ್ನು ಪೆನ್ನು ತರಲು ಮನೆಯ ಒಳಗಡೆ ಹೋದ ಚಂದ್ರಕಾಂತ್‌ ರವರನ್ನು ಹಿಂಬಾಲಿಸಿದ ರೇಖಾ ಆಟಿಕೆ ಪಿಸ್ತೂಲ್‌ನಿಂದ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಚಂದ್ರಕಾಂತ್ ಜೋರಾಗಿ ಬೊಬ್ಬೆ ಹೊಡೆದಿದ್ದು ಭಯದಿಂದ ಮಹಿಳೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ.

  Continue Reading

  LATEST NEWS

  Trending