Connect with us

LATEST NEWS

ಭಾಂದವ್ಯ ಟ್ರೋಫಿಗೆ ಮುತ್ತಿಕ್ಕಿದ ಪೊಲೀಸ್ ಇಲೆವೆನ್; ರನ್ನರ್ಸ್ ಆಗಿ ಹೊರ ಹೊರಹೊಮ್ಮಿದ ಪ್ರೆಸ್ ಇಲೆವೆನ್…!

Published

on

ಭಾಂದವ್ಯ ಟ್ರೋಫಿಗೆ ಮುತ್ತಿಕ್ಕಿದ ಪೊಲೀಸ್ ಇಲೆವೆನ್; ರನ್ನರ್ಸ್ ಆಗಿ ಹೊರ ಹೊರಹೊಮ್ಮಿದ ಪ್ರೆಸ್ ಇಲೆವೆನ್…!!!

Police Eleven who kissed the grand trophy; Press Eleven, who came out as runners.

ಪುತ್ತೂರು: ವಿವಿಧ ಇಲಾಖೆಗಳನ್ನ ಒಗ್ಗೂಡಿಸಿಕೊಂಡು ‘ಭಾಂದವ್ಯ’ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ನಗರದ ವಿವೇಕಾನಂದ ಕಾಲೇಜಿನಲ್ಲಿ ನಡೆಯಿತು.

ವಿವಿಧ ಇಲಾಖೆಗಳ ಸುಮಾರು 16 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡು ತಮ್ಮ ಬಲ ಪ್ರದರ್ಶನಗೈದರು. ಈ ಪಂದ್ಯಾ ಕೂಟದ ಮೊದಲ ಸೆಮಿಫೈನಲ್ ಪಂದ್ಯ ಭಾರೀ ರಣರೋಚಕದಿಂದ ಕೂಡಿತ್ತು.

ಮೆಸ್ಕಾಂ ಹಾಗೂ ಪ್ರೆಸ್ ಇಲೆವೆನ್ ನಡುವಿನ ಜಿದ್ದಾ ಜಿದ್ದಿನ ಪಂದ್ಯ ನೆರೆದಿದ್ದ ಕ್ರೀಡಾ ಪ್ರೇಮಿಗಳನ್ನು ಪಂದ್ಯಾಟದ ಕೊನೇ ಎಸೆತದ ವರೆಗೂ ತುದಿಗಾಲಲ್ಲಿ  ನಿಲ್ಲುವಂತೆ ಮಾಡಿತ್ತು.4 ಓವರ್ ಗಳ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೆಸ್ಕಾಂ, ಪ್ರೆಸ್ ಇಲೆವೆನ್ ಗೆ 34 ರನ್ ಗಳ ಕಠಿಣ ಟಾರ್ಗೆಟ್ ನ್ನ ನೀಡಿತು. ಇದನ್ನ ಬೆನ್ನಟ್ಟಿದ ಪ್ರೆಸ್ ಇಲೆವೆನ್ ಆರಂಭದಲ್ಲೇ ಪೆವಿಲಿಯನ್ ಪರೇಡ್ ಮಾಡಿ ಸೋಲಿನ ದವಡೆಗೆ ಸಿಲುಕಿತ್ತು.

ಆದ್ರೆ ಆರಂಭಿಕ ಆಟಗಾರ ವೀಕ್ಷಿತ್ ಒಂದು ಕಡೆ ಭದ್ರವಾಗಿಯೇ ಉಳಿದಿದ್ರು. ಕೊನೆಯ ಎರಡು ಓವರ್ ಗಳಲ್ಲಿ ಮಾತ್ರ ನಡೆದಿದ್ದು ಎಲ್ಲವೂ ಮ್ಯಾಜಿಕ್. ವೀಕ್ಷಿತ್ ಅಬ್ಬರದ ಬ್ಯಾಟಿಂಗ್ ಗೆ ತಬ್ಬಿಬ್ಬಾದ ಮೆಸ್ಕಾಂ ಇಲೆವೆನ್ ಕೊನೇ ಓವರ್ ನ ಒಂದು ಎಸೆತದಲ್ಲಿ ಸೋಲೊಪ್ಪಿಕೊಂಡಿತು. ಈ ಮೂಲಕ ಪ್ರೆಸ್ ಫೈ‌ನಲ್ ಪ್ರವೇಶಿಸಿತು.

ಇನ್ನೊಂದೆಡೆ ಎರಡನೇ ಸೆಮಿಫೈನಲ್ ನಲ್ಲಿ ಸುದ್ದಿ ಬಿಡುಗಡೆ ತಂಡ ಹಾಗೂ ಪೊಲೀಸ್ ಇಲೆವೆನ್ ನಡುವೆ ನಡೆದ ಹೋರಾಟದಲ್ಲಿ ಪೊಲೀಸ್ ಇಲೆವೆನ್ ಸುದ್ದಿಬಿಡುಗಡೆಯ ಬೌಲರ್ ಗಳನ್ನ ಬೆಂಡೆತ್ತಿದರು.

ನಾಲ್ಕು ಓವರ್ ಗಳಲ್ಲಿ ಬರೋಬ್ಬರಿ 57 ರನ್ ಚಚ್ಚಿದ ಪೊಲೀಸ್ ಇಲೆವೆನ್ ಬ್ಯಾಟ್ ಮೂಲಕ ರುಚಿ ತೋರಿಸಿದ್ರು. ಇದನ್ನ ಬೆನ್ನತ್ತಿದ ಸುದ್ದಿ ಬಿಡುಗಡೆ ತಂಡ ಮೊದಲ ಓವರ್ ನಿಂದಲೇ ಡಾಟ್ ಮೇಲೆ ಡಾಟ್ ಮಾಡಿ ರನ್ ತೆಗೆಯಲು ಪೇಚಾಡಿದ್ರು. ಈ ಮೂಲಕ  ಹೀನಾಯ ಸೋಲನ್ನೊಪ್ಪಿಕೊಂಡ್ರು. ಇದರೊಂದಿಗೆ ಪೊಲೀಸ್ ಇಲೆವೆನ್ ಫೈನಲ್ ಹಂತಕ್ಕೆ ಪ್ರವೇಶಿಸಿತು.

ಇನ್ನು ಫೈನಲ್ ನ ಹೋರಾಟದಲ್ಲಿ ಎರಡು ಬಲಾಢ್ಯ ತಂಡಗಳಾದ ಪೊಲೀಸ್ ಇಲೆವೆನ್ ಹಾಗೂ ಪ್ರೆಸ್ ಇಲೆವೆನ್ ನಡುವೆ ಕುತೂಹಲ ಹುಟ್ಟು ಹಾಕಿತು.

ನಾಲ್ಕು ಓವರ್ ಗಳ ಪಂದ್ಯಾಟದಲ್ಲಿ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಪೊಲೀಸ್ ಇಲೆವೆನ್ 43 ರನ್ನಿನ ಟಾರ್ಗೆಟ್ ನೀಡಿತು.

ಬಲಿಷ್ಠ ಬೌಲಿಂಗ್ ಲೈನಪ್ ಗಳನ್ನ ಹೊಂದಿದ್ದ ಪೊಲೀಸ್ ಇಲೆವೆನ್ ಪ್ರೆಸ್ ಇಲೆವೆನ್ ತಂಡದ ಆಟಗಾರರನ್ನ ಕಟ್ಟಿ ಹಾಕುವಲ್ಲಿ ಯಶಸ್ವಿಯಾದ್ರು. ಕೊನೆಯ ಎರಡು ಬಾಲ್ ನಲ್ಲಿ ಎರಡು ಸಿಕ್ಸರ್ ಅವಶ್ಯಕತೆ ಇತ್ತು. ಒಂದು ಬಾಲ್ ಗೆ ವಿಕೆಟ್ ಪತನವಾದ್ರೆ, ಮತ್ತೊಂದು ಬಾಲ್ ಗೆ ಪ್ರೆಸ್ ಇಲೆವೆನ್ ತಂಡದ ಆಟಗಾರ ಪ್ರಜ್ವಲ್ ಅಮೀನ್ ಸಿಕ್ಸರ್ ಸಿಡಿಸುವ ಮೂಲಕ ಪ್ರೆಸ್ ಇಲೆವೆನ್ ಐದು ರನ್ನಿನ ಸೋಲೊಪ್ಪಿಕೊಂಡಿತು.

ಈ ಮೂಲಕ ಭಾಂದವ್ಯ ಟ್ರೋಫಿಗೆ ಪೊಲೀಸ್ ಇಲೆವೆನ್ ಮುತ್ತಿಕ್ಕಿತು. ರನ್ನರ್ಸ್ ಆಗಿ ಪ್ರೆಸ್ ಇಲೆವೆನ್ ತಂಡ ಹೊರಹೊಮ್ಮಿತು. ಇನ್ನು ಭಾಂದವ್ಯ ಟ್ರೋಫಿಯನ್ನ ಸ್ಕರಿಯ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು. ಪಂದ್ಯಾಟದ ಬೆಸ್ಟ್ ಬ್ಯಾಟ್ಸ್ ಮನ್ ಹಾಗೂ ಬೆಸ್ಟ್ ಬೌಲರ್ ಗಳಾಗಿ ಪ್ರೆಸ್ ಕ್ಲಬ್ ತಂಡ ಸದಸ್ಯರು ಪಡೆದುಕೊಂಡರು. ಈ ಟೂರ್ನಿಯ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪೊಲೀಸ್ ಇಲೆವನ್ ತಂಡದ ಸದಸ್ಯ ಭಾಜನರಾದ್ರು.

Click to comment

Leave a Reply

Your email address will not be published. Required fields are marked *

LATEST NEWS

‘ಗೀತಾಂಜಲಿ ಸಿಲ್ಕ್ಸ್’, ‘ಶಾಂತಿ ಸಾಗರ್’ ಹೊಟೇಲ್ ಸಂಸ್ಥಾಪಕ ನೀರೆಬೈಲೂರು ಗೋವಿಂದ ನಾಯಕ್ ನಿ*ಧನ

Published

on

ಉಡುಪಿ : ಉಡುಪಿಯ ಖ್ಯಾತ ಜವಳಿ ಮಳಿಗೆ ‘ಗೀತಾಂಜಲಿ ಸಿಲ್ಕ್ಸ್’ ಮತ್ತು ‘ಶಾಂತಿ ಸಾಗರ್’ ಹೊಟೇಲ್ ಸಂಸ್ಥಾಪಕ ನೀರೆಬೈಲೂರು ಗೋವಿಂದ ನಾಯಕ್ ಇಂದು ಮುಂಜಾನೆ ಸ್ವಗೃಹದಲ್ಲಿ ವಿಧಿವ*ಶರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಮೃ*ತರು ಐವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಇದನ್ನೂ ಓದಿ : KARKALA: ಕಲ್ಲು ಸಾಗಾಟದ ಲಾರಿ ಪಲ್ಟಿ; ಇಬ್ಬರು ಕಾರ್ಮಿಕರು ಸಾ*ವು

Continue Reading

LATEST NEWS

KARKALA: ಕಲ್ಲು ಸಾಗಾಟದ ಲಾರಿ ಪಲ್ಟಿ; ಇಬ್ಬರು ಕಾರ್ಮಿಕರು ಸಾ*ವು

Published

on

ಕಾರ್ಕಳ :  ಕಲ್ಲು ಲೋಡು ಮಾಡಿಕೊಂಡು ಸಾಗುತ್ತಿದ್ದ ಲಾರಿ ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಮೃ*ತಪಟ್ಟ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಸಮೀಪದ ಕಲ್ಲು ಕೊರೆಯ ಬಳಿ ನಡೆದಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಿ ದೇವಲಾಪುರ ನಿವಾಸಿ ಕರಿಯಪ್ಪ(26) ಮತ್ತು ನರಿಯಪ್ಪ(27) ಮೃ*ತಪಟ್ಟವರು.

ಇದನ್ನೂ ಓದಿ : ರಾಜ್ಯದ ಈ ಜಿಲ್ಲೆಗಳಲ್ಲಿ ಮೇ 24ರ ವರೆಗೂ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ಕಾರ್ಕಳ ನಿಟ್ಟೆ ಭ್ರಾಮರಿ ಕ್ರಾಸ್ ಸಮೀಪ ಲಾರಿಯಲ್ಲಿ ಕಲ್ಲು ಲೋಡ್ ಮಾಡಿಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿ ಕೋರೆಯ ಪಕ್ಕದ ಇಳಿಜಾರು ರಸ್ತೆಯಲ್ಲಿ ಚಲಿಸುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಪರಿಣಾಮ ಕಾರ್ಮಿಕರು ಲಾರಿಯ ಚಕ್ರದ ಅಡಿಯಲ್ಲಿ ಸಿಲುಕಿ ಮೃ*ತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

FILM

ದಾಂಪತ್ಯಕ್ಕೆ ಕಾಲಿಡಲಿದ್ದಾರಾ ‘ಪ್ರಭಾಸ್‌’..! ಈ ಪೋಸ್ಟ್‌ ಹಿಂದಿನ ಅಸಲಿಯತ್ತೇನು!?

Published

on

ಟಾಲಿವುಡ್‌ ನ ಮೋಸ್ಟ್ ಬ್ಯಾಚುಲರ್‌ ಎಂದೇ ಹೆಸರಾಗಿರುವ ಪ್ರಭಾಸ್ ಸದಾ ತಮ್ಮ ಮದುವೆಯ ವಿಚಾರವಾಗಿಯೇ ಸುದ್ದಿಯಲ್ಲಿರುತ್ತಾರೆ. ಸೂಪರ್ ಸ್ಟಾರ್ ಪ್ರಭಾಸ್‌ರವರ ಹೆಸರಿನ ಜೊತೆ ಹಲವು ಸ್ಟಾರ್ ನಟಿಯರ ಹೆಸರುಗಳು ತುಣುಕು ಹಾಕುತ್ತಿತ್ತು. ಅದರಲ್ಲೂ ಪುತ್ತೂರಿನ ಬೆಡಗಿ ಅನುಷ್ಕಾ ಶೆಟ್ಟಿ ಯವರ ಹೆಸರು ಆಗಾಗ ಕೇಳಿಬರುತ್ತಿತ್ತು. ಇನ್ನು ಬಾಹುಬಲಿ ಸಿನೆಮಾದ ಬಳಿಕ ಇವರಿಬ್ಬರು ಪ್ರೀತಿಯಲ್ಲಿದ್ದಾರೆ, ಇನ್ನೇನು ದಾಂಪತ್ಯ ಜೀವನಕ್ಕೂ ಕಾಲಿಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಮಧ್ಯೆ ಪ್ರಭಾಸ್ ಹಾಗೂ ಅನುಷ್ಕಾ ಅದೆಲ್ಲವನ್ನು ಅಲ್ಲಗಳೆದಿದ್ದಾರೆ.

ಇದೀಗ ಪ್ರಭಾಸ್ ಅವರ ಒಂದು ಪೋಸ್ಟ್‌ ಅಭಿಮಾನಿಗಳಲ್ಲಿ ಖುಷಿ ನೀಡಿದೆ. ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ‘ಡಾರ್ಲಿಂಗ್ಸ್‌!!.. ಕೊನೆಗೂ ನನ್ನ ಜೀವನದಲ್ಲಿ ಒಬ್ಬ ವಿಶೇಷ ವ್ಯಕ್ತಿ ಬರಲಿದ್ದಾರೆ.. ಸ್ವಲ್ಪ ಕಾಯಿರಿ” ಎಂದು ಬರೆದುಕೊಂಡು ಪೋಸ್ಟ್‌ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಖುಷಿ ಜೊತೆ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಪೋಸ್ಟ್‌ ನೋಡಿದ ಬಳಿಕ ಪ್ರಭಾಸ್ ಮದುವೆಗೆ ಸಜ್ಜಾಗಿದ್ದಾರಾ..!? ಎಂಬುದಾಗಿಯೂ ಕುತೂಹಲ ಮೂಡಿದೆ. ಇನ್ನೂ ಕೆಲವರು ಸಿನೆಮಾ ಪ್ರಚಾರಕ್ಕಾಗಿ ಈ ತಂತ್ರವನ್ನು ಬಳಸಿದ್ದಾರಾ ಎನ್ನುವುದು ಅನುಮಾನ ಮೂಡಿದೆ.

ದರ್ಶನ್ ‘ಡೆವಿಲ್’ಗೆ ಹೀರೋಯಿನ್ ಫಿಕ್ಸ್; ಡಿಬಾಸ್ ಗೆ ಜೊತೆಯಾದ್ರು ಕರಾವಳಿ ಬೆಡಗಿ!

ಸಿನೆಮಾ ಪ್ರಚಾರಕ್ಕಾಗಿ ಪೋಸ್ಟ್‌ ಹಾಕಿದ್ರಾ ಪ್ರಬಾಸ್..?

kalki

ಸಲಾರ್ ಸಿನೆಮಾ ಹಿಟ್ ಬಳಿಕ ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ ‘ ಸಿನೆಮಾ ತೆರೆಗೆ ಬರಲು ಸಿದ್ಧವಾಗಿದೆ. ಇನ್ನೂ ಈ ಸಿನೆಮಾದಲ್ಲಿ ಘಟಾನುಘಟಿಗಳು ಬಣ್ಣ ಹಚ್ಚಿದ್ದಾರೆ. ಅಮಿತಾಬಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾನಿ ಮುಂತಾದವರು ನಟಿಸಿದ್ದಾರೆ. ಇದೇ ಸಿನೆಮಾದ ಪ್ರಚಾರಕ್ಕಾಗಿ ಮಾಡಿರುವ ತಂತ್ರ ಎಂದು ಹೇಳಲಾಗಿದೆ. ಇನ್ನು ಈ ಸಿನೆಮಾ ಪ್ರಚಾರಕ್ಕಾಗಿಯೇ ಹೊಸ ವಿನ್ಯಾಸದ ಕಾರೊಂದನ್ನು ತಯಾರು ಮಾಡಲಾಗಿದೆಯಂತೆ. ಹೀಗಾಗಿ ಪ್ರಭಾಸ್ ‘ ನನ್ನ ಜೀವನದಲ್ಲಿ ಹೊಸ ವ್ಯಕ್ತಿ ಆಗಮನ’ ಎಂದು ಬರೆದುಕೊಂಡಿರಬಹುದು ಎಂದು ಊಹಿಸಲಾಗಿದೆ.

ಅದೇನೆ ಇರಲಿ ಪ್ರಭಾಸ್ ಮದುವೆ ಆಗಲು ನಿರ್ಧಿರಿಸಿದ್ದಾರಾ..? ಅಥವಾ ಸಿನೆಮಾ ಪ್ರಚಾರಕ್ಕಾಗಿ ಹೀಗೆ ಬರೆದುಕೊಂಡಿದ್ದಾರಾ..? ಅನ್ನೋದರ  ಅಸಲಿಯತ್ತು  ಇನ್ನೆರೆಡು ದಿನಗಳಲ್ಲಿ ಕಾದು ನೋಡಬೇಕಿದೆ.

 

 

Continue Reading

LATEST NEWS

Trending