Saturday, August 20, 2022

ವೀಕೆಂಡ್‌ ಕರ್ಪ್ಯೂ ಇದ್ದರೂ ಮಲ್ಪೆ ಬೀಚ್‌ನಲ್ಲಿ ಜನವೋ ಜನ….

ಉಡುಪಿ: ಕೊರೋನಾ ಪಾಸಿಟಿವ್ ಕೇಸ್ ಗಳ ಸಂಖ್ಯೆಯನ್ನು ಹತೋಟಿಗೆ ತರಲು ಉಡುಪಿಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೆ ತರಲಾಗಿದೆ.

ಕೊರೊನಾ ಆತಂಕದ ಜೊತೆಗೆ ನಿಯಮ ಕಟ್ಟುನಿಟ್ಟು ಇದ್ದರು, ಹೊರಜಿಲ್ಲೆ ಹೊರರಾಜ್ಯದ ಪ್ರವಾಸಿಗರು ಕ್ಯಾರೆ ಅನ್ನುತ್ತಿಲ್ಲ.


ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಅವಕಾಶ ಇಲ್ಲ ಎಂದು ಖಡಕ್ ಸೂಚನೆ ಇದ್ದರೂ ನೂರಾರು ಪ್ರವಾಸಿಗರು ಮಲ್ಪೆ ಬೀಚ್ ಗೆ ಇಳಿದಿದ್ದಾರೆ.

ಮಲ್ಪೆ ಬೀಚ್ ನಿಂದ ಕೊಂಚ ದೂರದಲ್ಲಿ ಅಪಾಯಕಾರಿ ಎನಿಸುವ ಕಡಲತೀರದಲ್ಲಿ ಜನ ನೀರಿಗೆ ಇಳಿಯುತ್ತಿದ್ದಾರೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮುದ್ರಕ್ಕಿಳಿದ ಪ್ರವಾಸಿಗರನ್ನು ವಾಪಸ್ ಕಳುಹಿಸುತ್ತಿದ್ದಾರೆ.

ವಾರಾಂತ್ಯದಲ್ಲಿ ಬೀಚ್ ಆಸುಪಾಸಿನಲ್ಲಿ ಮೀನುಗಾರಿಕಾ ರಸ್ತೆಯಲ್ಲಿ ಜನ ಜಮಾಯಿಸಬಾರದು ಎಂದು ಹೈವೇ ಪೆಟ್ರೋಲ್ ಪೊಲೀಸರು ಹೆಚ್ಚುವರಿ ಗಸ್ತು ತಿರುಗುತ್ತಿದ್ದಾರೆ.

ಸಮುದ್ರದ ಸೌಂದರ್ಯ ಕಣ್ತುಂಬಿಕೊಳ್ಳಲು ಬಂದಿರುವ ಪ್ರವಾಸಿಗರ ಮನವೊಲಿಸಿ ಪ್ರವಾಸಿ ಕೇಂದ್ರದಿಂದ ಪೊಲೀಸರು ದೂರ ಕಳುಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics