ಮಂಗಳೂರು: ಮಹಾನಗರ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿಗೆ ಗಬ್ಬದ ಹಸುವೊಂದು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಕೋಡಿಕಲ್ ಕ್ರಾಸ್ ಕರಾವಳಿ ಕಾಲೇಜಿನ ಬಳಿ ನಡೆದಿದೆ.
ಘಟನೆ ಭಾನುವಾರ ನಡೆದಿದ್ದು, ಘಟನಾ ಸ್ಥಳಕ್ಕೆ ಪಾಲಿಕೆಯ ಇಂಜಿನಿಯರ್‌ಗಳು ಆಗಮಿಸಿದಾಗ ಸ್ಥಳೀಯರು ಅವರನ್ನು ತರಾಟೆಗೆತ್ತಿಕೊಂಡ ಘಟನೆಯೂ ನಡೆಯಿತು.
ಇಲ್ಲಿನ ಬೀದಿ ದೀಪದ ಕೆಳಭಾಗದಲ್ಲಿ ಕೇಬಲ್ ವಾಯರ್ ಸರಿಯಾದ ರೀತಿಯಲ್ಲಿ ಅಳವಡಿಸದೇ ಇದ್ದುದರಿಂದ ವಿದ್ಯುತ್ ಪ್ರವಹಿಸಿ ದನ ಸಾವನ್ನಪ್ಪಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪಾಲಿಕೆಯ ಇಬ್ಬರು ಇಂಜಿನಿಯರ್ಗಳನ್ನು ತರಾಟೆಗೆ ತೆಗೆದುಕೊಂಡ ಕಾರಣ ಅವರು ದನದ ಮಾಲೀಕರ ಜೊತೆ ಮಾತನಾಡಿ ಪರಿಹಾರ ಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.