Connect with us

DAKSHINA KANNADA

ಉಳ್ಳಾಲ ತಲಪಾಡಿಯಲ್ಲಿ ಲಾರಿ ಢಿಕ್ಕಿ ಪಾದಚಾರಿ ವ್ಯಕ್ತಿ ಸಾವು : ತಿಂಗಳ ಅಂತರದಲ್ಲಿ ಮೂವರು ಸಹೋದರರ ಸಾವು..!

Published

on

ಲಾರಿ ಅಪಘಾತಕ್ಕೀಡಾಗಿ ಪಾದಚಾರಿ ಮುಳ್ಳೇರಿಯ ಆದೂರು ನಿವಾಸಿ ವಸಂತ್‌ ಕುಮಾರ್‌ ರೈ (55) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಟೋಲ್‌ ಗೇಟ್‌ ಸಮೀಪ ಸೋಮವಾರ ಸಂಜೆ ಸಂಭವಿಸಿದೆ.

ಉಳ್ಳಾಲ: ಲಾರಿ ಅಪಘಾತಕ್ಕೀಡಾಗಿ ಪಾದಚಾರಿ ಮುಳ್ಳೇರಿಯ ಆದೂರು ನಿವಾಸಿ ವಸಂತ್‌ ಕುಮಾರ್‌ ರೈ (55) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಟೋಲ್‌ ಗೇಟ್‌ ಸಮೀಪ ಸೋಮವಾರ ಸಂಜೆ ಸಂಭವಿಸಿದೆ.

ತಿಂಗಳ ಅಂತರದಲ್ಲಿ ಸಹೋದರರ ನಡುವೆ ಸಂಭವಿಸಿದ ಮೂರನೇಯ ಸಾವಾಗಿದೆ.

ಟೋಲ್‌ ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿ 66 ರನ್ನು ದಾಟುವ ಸಂದರ್ಭ ಕೇರಳದ ಕಡೆಯಿಂದ ಅತಿವೇಗದಿಂದ ಧಾವಿಸುತ್ತಿದ್ದ ಕಲ್ಲು ಲೋಡ್‌ ಇದ್ದ ಲಾರಿ ವಸಂತ್‌ ಅವರಿಗೆ ಢಿಕ್ಕಿ ಹೊಡೆದಿದೆ.

ತಲೆಗೆ ಗಂಭೀರ ಗಾಯಗೊಂಡ ಅವರನ್ನು ಟೋಲ್‌ ಸಿಬ್ಬಂದಿ ಸೇರಿ, ತಮ್ಮದೇ ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲಿಸುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ಮಂಗಳೂರು ಸಂಚಾರಿ ಠಾಣಾ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದುಕೊಂಡು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ ವಸಂತ್‌ ರೈ ಅವರು ಕಳೆದ 10 ವರ್ಷಗಳಿಂದ ಕಾಸರಗೋಡಿನ ಕೆಎಸ್‌ ಆರ್‌ ಟಿಸಿ ಡಿಪೋದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಶಿರಿಯಾ ದೇವಸ್ಥಾನದಲ್ಲಿ ನಡೆದಿದ್ದ ಸಂಬಂಧಿಕರ ಉತ್ತರಕ್ರಿಯೆಯಲ್ಲಿ ಪಾಲ್ಗೊಂಡು ಕೋಟೆಕಾರು ತೆರಳಲು ತಲಪಾಡಿವರೆಗೆ ಬಸ್ಸಿನಲ್ಲಿ ಬಂದು ಇಳಿದಿದ್ದರು.

ಅಲ್ಲಿಂದ ಕೋಟೆಕಾರು ಕಡೆಗೆ ತೆರಳಲು ಮಂಗಳೂರು ಸಿಟಿ ಬಸ್ಸನ್ನೇರಲು ರಾ.ಹೆ.ಯನ್ನು ದಾಟುವಾಗ ಘಟನೆ ಸಂಭವಿಸಿದೆ.

ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಎಲ್ಲರೂ ಶಾಲೆ ಕಲಿಯುವ ವಿದ್ಯಾರ್ಥಿಗಳಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಿಂಗಳೊಳಗೆ ಮೂವರು ಸಹೋದರರ ದುರ್ಮರಣ!
ವಸಂತ್‌ ಕುಮಾರ್‌ ರೈ ಅಪಘಾತದಲ್ಲಿ ಸಾವನ್ನಪ್ಪುವ ಮೂಲಕ ಎರಡು ತಿಂಗಳ ಅಂತರದಲ್ಲಿ ಸಾವು ಕಂಡ ಮೂರನೇ ವ್ಯಕ್ತಿಯಾಗಿದ್ದಾರೆ. ಮುಂಬೈನಲ್ಲಿದ್ದ ಸಹೋದರ ಸದಾನಂದ ರೈ ಅವರು ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿ ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಅವರ ಮಕ್ಕಳು ಸೋಮವಾರ ರಾತ್ರಿ ರೈಲಿನಲ್ಲಿ ವಾಪಸ್ಸು ಮುಂಬೈಗೆ ಪ್ರಯಾಣಿಸುವ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗುವ ಸಲುವಾಗಿ ವಸಂತ್‌ ರೈ ಕೋಟೆಕಾರಿಗೆ ತೆರಳುತ್ತಿದ್ದರು. ಇನ್ನೋರ್ವ ಸಹೋದರ ಚಂದ್ರಹಾಸ್‌ ರೈ 15 ದಿನಗಳ ಅಂತರದಲ್ಲಿ ಅದೇ ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು. ಇದೀಗ ಅವರ ಸಾವಿನ 17 ದಿನಗಳ ಅಂತರದಲ್ಲಿ ವಸಂತ್‌ ಕುಮಾರ್‌ ರೈ ಸಾವನ್ನಪ್ಪಿದ್ದಾರೆ. ತಿಂಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರ ಸಾವಿನಿಂದ ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.

bangalore

“ಎಂಚ ಉಲ್ಲಾರ್ ಮರ್ರೆ”…. ಎಂದು ತುಳುವಿನಲ್ಲಿ ಮಾತನಾಡಿದ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್

Published

on

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಸಮೂಹ ಶಿಕ್ಷಣ ಸಂಸ್ಥೆಗಳ ಅಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಭ್ರಮರ ಇಂಚರ ನುಡಿಹಬ್ಬ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸಿದ ಸ್ಯಾಂಡಲ್ ವುಡ್  ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಭಾಗವಹಿಸಿ ಮಕ್ಕಳ ಜೊತೆಗೆ ಮಕ್ಕಳಂತೆ ಬೆರೆತು ಮಕ್ಕಳನ್ನು ಕೊಂಡಾಡಿದರು.

ಈ ವೇದಿಕೆಯಲ್ಲಿ ವಿದ್ಯಾಥಿಗಳು ನಟಿ ರಚಿತಾ ರಾಮ್ ಅವರ ಡ್ರಾಯಿಂಗ್ ಮಾಡಿ ಕೊಡುಗೆಯಾಗಿ ನೀಡಿದಾಗ ಖುಷಿ ಪಟ್ಟ ನಟಿ ಆ ವಿದ್ಯಾರ್ಥಿಗಳನ್ನು ವೇದಿಕೆಗೆ ತಾವೇ ಕರೆಸಿ ಅಭಿನಂದಿಸದರು.

ಹಾಗೂ ಕೆಲವು ವಿದ್ಯಾರ್ಥಿಗಳ ಜೊತೆ ವೇದಿಕೆಗೆ ಕರೆಸಿ ಹಾಡಿಸಿದರು. ಅದರಲ್ಲಿ ತಾನೇ ಬಂದು ವೇದಿಕೆಯಲ್ಲಿ ಒಂದು ಪುಟಾಣಿ ‘ಬಾಳ ಒಳ್ಳೇರು ನಮ್ಮ ಮಿಸ್ ಎನ ಹೇಳಿದ್ರು ಎಸ್ ಎಸ್ಸು’ ಎಂದು ಹಾಡಿದಾಗ ನಟಿ ಬಹಳ ಖುಷಿ ಪಟ್ಟರು.

ಈ ಸಂದರ್ಭ ರಚಿತರಾಮ್ ಜೊತೆ ಹಾಡಲು ಹೇಳಿದಾಗ ಅವರು ಕೂಡ “ಬಾಳ ಒಳ್ಳೇರು ನಮ್ಮ ಮಿಸ್ ಎನ ಹೇಳಿದ್ರು ಎಸ್ ಎಸ್ಸು” ಎಂದು ನಗ್ತಾ ನಗ್ತಾ ಹಾಡಿದರು.


ಬಳಿಕ ಮಾತನಾಡಿದ ನಟಿ ವಿದ್ಯಾರ್ಥಿಗಳು ಇಂತಹ ವೇದಿಕೆ ಸಿಕ್ಕಾಗ ಬಳಸಿಕೊಳ್ಳಬೇಕು. ಮತ್ತೇ ಇಂತಹ ವೇದಿಕೆ ಸಿಗುವುದಿಲ್ಲ. ನಮ್ಮ ಪ್ರತಿಭೆಯನ್ನು ನಾವೇ ಪ್ರದರ್ಶನ ಮಾಡಬೇಕು. ಬೇರೆ ಯಾರೂ ಕೂಡ ನಮಗೆ ಹೇಳಲು ಬರುವುದಿಲ್ಲ.

ಯಾರೂ ಕೂಡ ಸಪೋರ್ಟ್ ಮಾಡುವುದಿಲ್ಲ. ಸ್ವಾಯತ್ತತೆಯಿಂದ ನಾವು ಗೆಲ್ಲಬೇಕು. ಒಳ್ಳೆ ಒಳ್ಳೆ ವೇದಿಕೆ ಸಿಕ್ಕಾಗ ಬಿಡಬಾರದು. ಅದರ ಜೊತೆಗೆ ನಮ್ಮ ಗುರುಗುಳಿಗೆ ಹಾಗೂ ತಮ್ಮ ಪೋಷಕರಿಗೆ ಗೌರವ ಕೊಡಿ, ಮರ್ಯಾದೆ ಕೊಡಿ ಜೊತೆಗೆ ಅವರನ್ನು ಪ್ರೀತಿಸಿ ಎಂದರು.

ಈ ವೇಳೆ ರಚಿತರಾಮ್ ಕನ್ನಡದಲ್ಲಿ ಮಾತನಾಡಿದಾಗ ವಿದ್ಯಾರ್ಥಿಗಳು ತುಳುವಿನಲ್ಲಿ ಮಾತನಾಡಿ ಎಂದು ಕೂಗಾಡಿದರು. ಆಗ ಅವರು ಎಂಚ ವುಲ್ಲರ್ ಮರ್ರೆ…ಹುಷಾರ್ ವುಲ್ಲರಾ…ಎಂದು ತುಳುವಿನಲ್ಲಿ ಮಾತನಾಡಿದರು.

Continue Reading

BELTHANGADY

Belthangady: ರಸ್ತೆ ಪಕ್ಕದ ಗೂಡಂಗಡಿಯನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳು..!

Published

on

ಬೆಳ್ತಂಗಡಿ: ಬೆಳ್ತಂಗಡಿ ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿ ರಸ್ತೆ ಬದಿಯಲ್ಲಿದ್ದ ಗೂಡಂಗಡಿಯನ್ನು ಕಿಡಿಗೇಡಿಗಳು ರಾತ್ರಿಯ ವೇಳೆ ಧ್ವಂಸಗೊಳಿಸಿದ ಘಟನೆ ಸಂಭವಿಸಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಕೊಕ್ಕಡ ಗ್ರಾಮದ ಮಲ್ಲಿಗೆಮಜಲು ನಿವಾಸಿ ಅಬ್ದುಲ್ ಅಝೀಝ್ ಎಂಬವರು ತಮ್ಮ ಜೀವನೋಪಾಯಕ್ಕಾಗಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಗೂಡಂಗಡಿಯನ್ನು ಹಾಕಿ ವ್ಯಾಪಾರ ನಡೆಸುತ್ತಿದ್ದರು.

ಕಳೆದ ಮೂರು ವರ್ಷಗಳಿಂದ ಈ ಗೂಡಂಗಡಿ ಕಾರ್ಯ‌ ನಿರ್ವಹಿಸುತ್ತಿತ್ತು. ರಸ್ತೆ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಗೂಡಂಗಡಿಯನ್ನು ನಿರ್ಮಿಸಲಾಗಿತ್ತು. ಎಂದಿನಂತೆ ಶುಕ್ರವಾರ ರಾತ್ರಿಯ ವೇಳೆ ಅಂಗಡಿಯನ್ನು ಮುಚ್ಚಿ ಹೋಗಿದ್ದ ಅಬ್ದುಲ್ ಅಝೀಝ್ ಶನಿವಾರ ಬೆಳಗ್ಗೆ ಬಂದು ನೋಡಿದಾಗ ಅಂಗಡಿಯನ್ನು ಧ್ವಂಸಗೊಳಿಸಿರುವುದು ಕಂಡು ಬಂದಿದೆ. ಅಂಗಡಿಯಲ್ಲಿದ್ದ ವಸ್ತುಗಳೆಲ್ಲವನ್ನು ಹೊರಗೆಳೆದು ನಾಶಗೊಳಿಸಲಾಗಿದೆ. ತಂಪು ಪಾನೀಯಗಳ ಬಾಟ್ಲಿಗಳನ್ನು ಒಡೆದು ಹಾಕಲಾಗಿದೆ. ಅಂಗಡಿಯನ್ನು ಬಹುತೇಕ ಧ್ವಂಸಗೊಳಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.

Continue Reading

DAKSHINA KANNADA

Mangaluru: 4 ತಿಂಗಳ ಮಗುವನ್ನು ಉಸಿರುಕಟ್ಟಿಸಿ ಕೊಂದ ತಾಯಿ ಕೂಡ ಜೀವಾಂತ್ಯ..!

Published

on

ಮಂಗಳೂರು:  ತನ್ನ ಪುಟ್ಟ ಕಂದಮ್ಮನನ್ನು ನೀರಿನ ಟಬ್‌ ಒಳಗೆ ಮುಳುಗಿಸಿ ತಾನೂ ನೇಣು ಬಿಗಿದುಕೊಂಡು ಹೆತ್ತಬ್ಬೆಯೊಬ್ಬಾಕೆಯ ಕೃತ್ಯ ಮನಕಲಕಿದ ಘಟನೆ ಮಂಗಳೂರಿನ ಗುಜ್ಜರಕರೆ ಬಳಿ ನಡೆದಿದೆ.

ಅಪಾರ್ಟ್‌ಮೆಂಟ್‌ ಒಂದರಲ್ಲಿ ವಾಸ ಮಾಡುವ ಫಾತಿಮಾ ರುಕಿಯಾ(23) ಎಂಬಾಕೆ ತನ್ನ ನಾಲ್ಕೂವರೆ ತಿಂಗಳ ಮಗು ಅಬ್ದುಲ್ಲಾ ಹೂದ್‌ ಎಂಬಾತನನ್ನು ನೀರಿನ ಟಬ್‌ನೊಳಗೆ ಮುಳುಗಿಸಿ ಉಸಿರುಕಟ್ಟಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಫಾತಿಮಾಗೆ ಸುಮಾರು ಒಂದೂವರೆ ವರ್ಷದ ಹಿಂದೆ ಮುಹಮ್ಮದ್ ಉನೈಸ್ ಎಂಬವರ ಜೊತೆ ಮದುವೆಯಾಗಿತ್ತು. 2023 ಜು. 7 ರಂದು ಹೆರಿಗೆಯಾಗಿತ್ತು. ಅಬ್ದುಲ್ಲಾ ಹೂದ್ ಎಂಬ ಸುಮಾರು 4ವರೆ ತಿಂಗಳ ಗಂಡು ಮಗು ಇತ್ತು. ಹೆರಿಗೆಯಾದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಫಾತಿಮಾಗೆ ಚಿಕಿತ್ಸೆಯನ್ನು ಕೂಡಾ ನೀಡಲಾಗುತ್ತಿತ್ತು. ಈ ನಡುವೆ ಫಾತಿಮಾ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತನ್ನ ತಾಯಿ ಬಳಿ ಹೇಳುತ್ತಿದ್ದರು ಎನ್ನಲಾಗಿದೆ. ನಿನ್ನೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1-30 ಗಂಟೆಯ ಮಧ್ಯೆ ಮನೆಯಲ್ಲಿ ಯಾರೂ ಇಲ್ಲದ ಸಮಯ ಫಾತಿಮಾ ರುಕಿಯಾ ತಾನು ವಾಸವಾಗಿದ್ದ ಮಂಗಳೂರು ನಗರದ ಗುಜ್ಜರಕೆರೆ ಲೇಕ್ ವ್ಯೂ ಅಪಾರ್ಟ್ಮೆಂಟ್​ನ ಬೆಡ್ ರೂಮ್​ನ ಗ್ಯಾಲರಿಯಲ್ಲಿ ಪ್ಲಾಸ್ಟಿಕ್ ಟಬ್​ನಲ್ಲಿ ನೀರು ತುಂಬಿಸಿ ಮಗುವನ್ನು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ. ಬಳಿಕ ತಾನೂ ಕೂಡ ರೂಮಿನ ಕಿಟಕಿಯ ಕಬ್ಬಿಣದ ಸರಳಿಗೆ ಸೀರೆಯಿಂದ ಕಟ್ಟಿ ಮತ್ತೊಂದು ತುದಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Continue Reading

LATEST NEWS

Trending