Saturday, September 18, 2021

ಕೋವಿಡ್ ಚಿಕಿತ್ಸೆಗೆ ಬಿಲ್ ಕಟ್ಟಿದವರ ಹಣ ವಾಪಸ್ ನೀಡಿ : ಸರ್ಕಾರಕ್ಕೆ ಖಾದರ್ ಆಗ್ರಹ..

ಕೋವಿಡ್ ಚಿಕಿತ್ಸೆಗೆ ಬಿಲ್ ಕಟ್ಟಿದವರ ಹಣ ವಾಪಸ್ ನೀಡಿ : ಸರ್ಕಾರಕ್ಕೆ ಖಾದರ್ ಆಗ್ರಹ..

ಮಂಗಳೂರು :ದ.ಕ ಜಿಲ್ಲೆಯಲ್ಲಿ ಕೊರೋನಾ ಸಾವು ಮತ್ತು ಪಾಸಿಟಿವ್ ಪ್ರಕರಣಗಳು ದಿನಾ ದಿನಾ ಹೆಚ್ಚುತ್ತಿದೆ. ಆದರೂ ಜಿಲ್ಲೆಯಾದ್ಯಂತ ಎಲ್ಲಾ ಕಡೆ ಲಾಕ್ ಡೌನ್ ಸಡಿಲ ಮಾಡಿ ಬಿಟ್ಟಿದ್ದಾರೆ.

ಸರ್ಕಾರದ ಈ ಕಾರ್ಯವೈಕರಿಯೇ ಗೊಂದಲ ಉಂಟು ಮಾಡಿದೆ ಎಂದು  ಶಾಸಕ ಹಾಗೂ ಮಾಜಿ ಸಚಿವರಾದ ಯು,ಟಿ. ಖಾದರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ ಆದರೂ ಟೆಸ್ಟಿಂಗ್ ಕಡಿಮೆ ಮಾಡಿ ಸರ್ಕಾರ ಗೊಂದಲ ಮಾಡ್ತಿದೆ.

ಬೀದಿ ವ್ಯಾಪಾರಿಗಳು, ಲಾರಿ, ಬಸ್ ಚಾಲಕರು, ಇತರೆ ವ್ಯಾಪಾರಿಗಳಿಗೆ ಕೊರೋನಾ ಪರೀಕ್ಷೆ ನಡೆಸಲು ಆದೇಶ ಕೊಡಿ. ಆಗ ಎಲ್ಲರೂ ಹೋಗಿ ತಪಾಸಣೆ ಮಾಡಿಕೊಂಡು ಬರ್ತಾರೆ ಎಂದ ಅವರು ಇನ್ನು ಚಿಕಿತ್ಸೆ ವಿಚಾರದಲ್ಲೂ ಎಲ್ಲೂ ಯಾರಿಗೂ ಉಚಿತವಾಗಿ ಮಾಡ್ತಿಲ್ಲ.

ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕೋವಿಡ್ ಚಿಕಿತ್ಸೆಗೆ ಬಿಲ್ ಕಟ್ಟಿದವರಿಗೆ ಸಿಎಂ ಪರಿಹಾರ ನಿಧಿಯಿಂದ  ಹಣ ಮರುಪಾವತಿ ಮಾಡಬೇಕು.

ಆಗ ಸರ್ಕಾರಕ್ಕೆ ಆಸ್ಪತ್ರೆಗಳು ಎಷ್ಟು ಬಿಲ್ ಮಾಡಿದೆ ಅನ್ನೋದು ಗೊತ್ತಾಗುತ್ತೆ ಮತ್ತು ವ್ಯವಸ್ಥೆ ಪಾರದರ್ಶಕವಾಗಿರುತ್ತೆ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಇನ್ನು ಇತ್ತೀಚೆಗೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರು ಕೊರೊನಾ ವೈರಸ್ ಎಂಬುದೇ ಸುಳ್ಳು ಎಂದು ಹೇಳಿಕೆ ಬಗ್ಗೆ ಪ್ರತಿಕ್ರೀಯಿಸಿದ ಅವರು ಅನಂತ ಕುಮಾರ್ ಹೆಗಡೆ ತನ್ನ ಸ್ವಭಾವ ಚೇಂಜ್ ಮಾಡಬೇಕು,

ಆಗ ಮಾತ್ರ ಸಮಾಜದಲ್ಲಿನ ಗೊಂದಲ ಕಡಿಮೆ ಆಗಿ  ಕೊರನಾ ನಿಗ್ರಹ ಮಾಡಲು ಸಾದ್ಯ ಎಂದು ಅಭಿಪ್ರಾಯಪಟ್ಟರು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...