Thursday, September 29, 2022

ನೂಪುರ್ ವಿರುದ್ಧ ದಾಖಲಾಗಿದ್ದ ಎಲ್ಲಾ FIRಗಳನ್ನು ದೆಹಲಿಗೆ ವರ್ಗಾಯಿಸಿ: ಸುಪ್ರೀಂ

ಮಂಗಳೂರು: ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ದಾಖಲಾಗಿದ್ದ ಎಲ್ಲ ಎಫ್ಐಆರ್‌ಗಳನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಹಾಗೂ ಜೆ.ಬಿ ಪರ್ದಿವಾಲ ಅವರ ವೀಭಾಗೀಯ ಪೀಠ ಈ ನಿರ್ದೇಶನ ನೀಡಿದ್ದಾರೆ.

ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಮಾತನಾಡಿದ ವಿಚಾರಕ್ಕೆ ದೇಶಾದಾದ್ಯಂತ ಹಲವು ಪೊಲೀಸ್‌ ಠಾಣೆಗಳಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ಅದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಅವುಗಳನ್ನು ಒಟ್ಟುಗೂಡಿಸಿ ದೆಹಲಿ ಪೊಲೀಸರಿಗೆ ವರ್ಗಾಯಿಸಿದೆ.

ಈ ಹೇಳಿಕೆ ಖಂಡಿಸಿ ಭಾರತದಲ್ಲಿ ಭಾರಿ ಪ್ರತಿಭಟನೆಗಳು ಮಾತ್ರವಲ್ಲದೆ ಗಲ್ಫ್ ರಾಷ್ಟ್ರಗಳಿಂದ ಅಧಿಕೃತ ದೂರುಗಳು ಬಂದ ನಂತರ ಬಿಜೆಪಿ ಅವರನ್ನು ವಕ್ತಾರ ಸ್ಥಾನದಿಂದ ವಜಾಗೊಳಿಸಿತ್ತು.

LEAVE A REPLY

Please enter your comment!
Please enter your name here

Hot Topics

ಅಪರಿಚಿತರಿಂದ ಕಾಲಿವುಡ್‌ ‘ಆ್ಯಕ್ಷನ್‌ ಸ್ಟಾರ್’ ವಿಶಾಲ್ ಮನೆಗೆ ಕಲ್ಲು ತೂರಾಟ

ಚೆನ್ನೈ: ಕಾಲಿವುಡ್‌ನ 'ಆ್ಯಕ್ಷನ್‌ ಸ್ಟಾರ್' ನಟ ವಿಶಾಲ್ ಅವರ ಮನೆಗೆ ಯಾರೋ ಅಪರಿಚಿತ ಗನ್‌ಮ್ಯಾನ್‌ಗಳು ನುಗ್ಗಿ ಆಕ್ರಮಣ ಮಾಡಿ ಕಲ್ಲುತೂರಾಟ ಮಾಡಿದ್ದಾರೆ. ಅದರ ಪರಿಣಾಮವಾಗಿ ಮನೆಯ ಕಿಟಕಿ ಗಾಜುಗಳು ಒಡೆದಿರುವ ಘಟನೆ ಚೆನ್ನೈಯಲ್ಲಿ...

5 ವರ್ಷ PFI ಬ್ಯಾನ್ : ಮಂಗಳೂರಿನ ಕಚೇರಿಗಳಿಗೆ ಬೀಗ ಜಡಿದು ಸೀಲ್ ಡೌನ್ ಮಾಡಿದ ಪೊಲೀಸರು..!

ಮಂಗಳೂರು : ಪಿಎಫ್‌ಐ ಮತ್ತು ಅದರ ಅಂಗ ಸಂಘಟನೆಗಳನ್ನು 5 ವರ್ಷ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕೇಂದ್ರ ಸರ್ಕಾರದ ನಿರ್ದೇಶನದ ಮೇಲೆ ಪಿಎಫ್‌ಐ ಕಚೇರಿಗಳನ್ನು ಸೀಲ್ ಡೌನ್...

ಉಳ್ಳಾಲ: ಫ್ಲೆಕ್ಸ್‌ನಲ್ಲಿ ಅನುಮತಿಯಿಲ್ಲದೆ ಗರ್ಭಿಣಿ ಭಾವಚಿತ್ರ ಅಳವಡಿಕೆ: ಕೆರಳಿದ ಭಜರಂಗದಳ

ಉಳ್ಳಾಲ: ಕಾರ್ಯಕ್ರಮವೊಂದರ ಫ್ಲೆಕ್ಸ್ ನಲ್ಲಿ ಮಹಿಳೆಯ ಅನುಮತಿ ಇಲ್ಲದೆ ಫೊಟೋ ಅಳವಡಿಸಿದ ಕುರಿತಾಗಿ ಕೆರಳಿದ ಬಜರಂಗದಳದ ಕಾರ್ಯಕರ್ತರು ಕಾರ್ಯಕ್ರಮ ಆಯೋಜಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಉಳ್ಳಾಲದ ಕೊಲ್ಯ ನಾರಾಯಣಗುರು ಸಭಾಭವನದಲ್ಲಿ ಬುಧವಾರ ನಡೆಯಿತು.ದಕ್ಷಿಣ...