Sunday, November 27, 2022

ಸುಳ್ಯ: ಗುಡಿಸಲಿನಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ಆಸರೆಯಾದ ವಿಕ್ರಮ್ ಫೌಂಡೇಶನ್ & ಹಿಂದೂ ಜಾಗರಣ ವೇದಿಕೆ

ಸುಳ್ಯ: ಹಿಂದೂ ಜಾಗರಣ ವೇದಿಕೆ ಸುಳ್ಯ ಘಟಕ ಮತ್ತು ವಿಕ್ರಮ್ ಫೌಂಡೇಶನ್ ಬೆಂಗಳೂರು ಇದರ ಜಂಟಿ ಸಹಯೋಗದೊಂದಿಗೆ ಮೂರು ಬಡ ಕುಟುಂಬಗಳಿಗೆ ನೂತನ ಮನೆ ಹಸ್ತಾಂತರ ಮಾಡಲಾಗಿದೆ.


ಸುಳ್ಯದ ಮಂಡೆಗೋಲಿನಲ್ಲಿ ಗುಡಿಸಲಲ್ಲಿ ವಾಸಿಸುತ್ತಿದ್ದ ಕುಟುಂಬಗಳಿಗೆ ಈ ಮನೆಗಳನ್ನು ಹಸ್ತಾಂತರಿಸಲಾಗಿದ್ದು, ವಿಕ್ರಮ್ ಫೌಂಡೇಶನ್ ನಿರ್ದೇಶಕ ಮಹೇಶ್ ವಿಕ್ರಂ ಹೆಗಡೆ, ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಿದರು.

ತಲಾ ಒಂದು ಮನೆಗೆ ಸುಮಾರು 6 ಲಕ್ಷ ವೆಚ್ಚ ತಗುಲಿದ್ದು, ಹಿಂದೂ ಜಾಗರಣ ವೇದಿಕೆ ಒಂದು ಮನೆಯನ್ನು ಕಟ್ಟಿ ಹಸ್ತಾಂತರಿಸಲು ಮೊದಲು ನಿರ್ಧರಿಸಿತ್ತು.

ಈ ವಿಚಾರವನ್ನು ಅರಿತ ವಿಕ್ರಮ ಫೌಂಡೇಶನ್‌ನ ಮಹೇಶ್ ವಿಕ್ರಂ ಹೆಗಡೆ ಬಡ ಕುಟುಂಬಗಳನ್ನು ಗುರುತಿಸುವಂತೆ ಸೂಚಿಸಿದ ಹಿನ್ನಲೆಯಲ್ಲಿ ಮತ್ತೆರಡು ಮನೆಗಳನ್ನು ಕಟ್ಟಿ ಕೊಡಲಾಗಿದೆ.

LEAVE A REPLY

Please enter your comment!
Please enter your name here

Hot Topics

ಸುಳ್ಯದಲ್ಲಿ ಪತ್ನಿಯನ್ನು ಕೊಂದು ಮೃತದೇಹವನ್ನು ಗೋಣಿಚೀಲದಲ್ಲಿಟ್ಟಿದ್ದ ಪಾಪಿ ಪತಿ ಪ.ಬಂಗಾಳದಲ್ಲಿ ಅರೆಸ್ಟ್

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೀರಮಂಗಲ ಸಮೀಪದ ಬಾಡಿಗೆ ಮನೆಯೊಂದರಲ್ಲಿ ಗೋಣಿಚೀಲದೊಳಗೆ ಮಹಿಳೆಯ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಪಶ್ಚಿಮ ಬಂಗಾಲದಲ್ಲಿ ಬಂಧಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿ ಇಬ್ರಾನ್ ಶೇಖ್...

ಬಾಂಬ್ ಸ್ಫೋಟ ಆರೋಪಿ ಶಾರೀಕ್‌ಗೆ ಆಸ್ಪತ್ರೆಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್‌-ಸ್ಪೋಟದ ಬೆನ್ನಲ್ಲೇ ಟ್ವೀಟ್‌ ಮಾಡಿದ ಝಾಕೀರ್‌…

ಮಂಗಳೂರು: ಮಂಗಳೂರಿನಲ್ಲಿ ರಿಕ್ಷಾದಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಇದೀಗ ಶಾರೀಕ್‌ ಜೀವಕ್ಕೂ ಆಪತ್ತು ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಬಳಿ ಪೊಲೀಸರು ಬಿಗು...

ಮಂಗಳೂರಿನಲ್ಲಿ ಹಣದ ಆಮಿಷವೊಡ್ಡಿ ಮತಾಂತರಕ್ಕೆ ಯತ್ನ-ಖ್ಯಾತ ವೈದ್ಯೆ ಸಹಿತ ಮೂವರ ವಿರುದ್ಧ ಸಂತ್ರಸ್ತ ಯುವತಿಯಿಂದಲೇ ದೂರು ದಾಖಲು

ಮಂಗಳೂರು: ಮುಸ್ಲಿಂ ಯುವಕನೊಬ್ಬ ಮತಾಂತರಗೊಳಿಸಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯುವತಿಯೋರ್ವಳು ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.ಆಕೆ ನೀಡಿರುವ ದೂರಿನಲ್ಲಿ 'ಮಂಗಳೂರಿನ ಬಿಕರ್ನಕಟ್ಟೆಯಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾಗ ಬಿಕರ್ನಕಟ್ಟೆಯ ಕೈಕಂಬದಲ್ಲಿರುವ ಖಲೀಲ್‌ನ...