ಮಂಗಳೂರು: ರಾಜ್ಯದಲ್ಲಿ ಸೆನ್ಸೇಷನ್ ತೋರಿಸಿದ ತುಳುನಾಡಿನ ದೈವಾರಾಧನೆಯ ಬಗೆಯನ್ನು ಬಿಚ್ಚಿಡುವ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಿತ್ರವನ್ನು ತೆರಿಗೆ ಮುಕ್ತಗೊಳಿಸಲು ಯೂತ್ ಕಾಂಗ್ರೆಸ್ ಮುಖಂಡ ಮಿಥುನ್ ರೈ ರಾಜ್ಯದ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಚಿತ್ರ ಇಡೀ ಕರ್ನಾಟಕದ ಜನ ನೋಡಬೇಕೆನ್ನುವ ಹಿನ್ನಲೆ ಟ್ವೀಟ್ ಮಾಡಿರುವ ಅವರು ‘ಇಡೀ ಜಗತ್ತಿನಲ್ಲಿ “ದೈವಾರಾಧನೆ”ಗೆ ಇವತ್ತು ಒಂದು ಪ್ರಮುಖವಾದ ಪ್ರಾಶ್ಯಸ್ತತೆ ಇದೆ, ಅದು ಹುಟ್ಟಿಕೊಂಡಿದ್ದು ನಮ್ಮ ತುಳುನಾಡಿನ ಮಣ್ಣಿನಲ್ಲಿ … ದೈವಾರಾಧನೆಯ ವಿಶಿಷ್ಟತೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ಜನರ ಮನಮುಟ್ಟಿಸುವ ಪ್ರಯತ್ನ ಇವತ್ತು “ಕಾಂತಾರ” ಚಿತ್ರದ ಮೂಲಕ ಫಲಿಸಿದೆ.
ಸನ್ಮಾನ ಮುಖ್ಯಮಂತ್ರಿಗಳಲ್ಲಿ ವಿನಮ್ರತೆಯಿಂದ ಮನವಿ ಮಾಡುತ್ತಾ ಇದ್ದೇನೆ, “ಕಾಂತಾರ” ಚಲನಚಿತ್ರ ಪ್ರತಿ ಮನೆಮನೆಗೆ ಮುಟ್ಟಬೇಕು.
ಈ ಚಿತ್ರಕ್ಕೆ ತೆರಿಗೆ ಮುಕ್ತ ಮಾಡಬೇಕು. ತುಳುನಾಡಿನ ದೈವಾರಾಧನೆಯ ಮಹತ್ವ ಸಮಸ್ತ ಕರ್ನಾಟಕದಲ್ಲಿ ತಿಳಿಯಬೇಕೆಂದು ಸಮಸ್ತ ತುಳುವೆರ ಕೋರಿಕೆ. ಎಂದು ಟ್ವೀಟ್ ಮಾಡಿದ್ದಾರೆ.