Connect with us

LATEST NEWS

ಕ್ರಿಸ್‌ಮಸ್‌-ಹೊಸವರ್ಷಾಚರಣೆಗೆ ಗೈಡ್‌ಲೈನ್ಸ್ ಸಾಧ್ಯತೆ: 50% ಜನಮಿತಿ ಮಾತ್ರ ಅವಕಾಶ

Published

on

ಬೆಂಗಳೂರು: ಒಮಿಕ್ರಾನ್ ಆತಂಕ ಹಿನ್ನೆಲೆಯಲ್ಲಿ ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ವೇಳೆ ಕೆಲವು ನಿಬಂಧನೆಗಳನ್ನು ಹಾಕುವಂತೆ ರಾಜ್ಯ ಸರ್ಕಾರಕ್ಕೆ ತಾಂತ್ರಿಕಾ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ. ಅದರನ್ವಯ ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿದೆ.

ಡಿ.22ರಿಂದ ಜ.2ವರೆಗೂ ದೇವಸ್ಥಾನ, ಚರ್ಚ್‌, ಮಸೀದಿಗಳಲ್ಲಿ ಶೇ.50 ರಷ್ಟು ಜನಮಿತಿ ಜಾರಿಗೊಳಿಸಲು ಸೂಚಿಸಲಾಗಿದೆ. ಹೊಸ ವರ್ಷಾಚರಣೆ ಹಿನ್ನೆಲೆ ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ

ಡಿ.30ರಿಂದ ಜನವರಿ 2ರ ಬೆಳಿಗ್ಗೆ 5 ಗಂಟೆವರೆಗೂ ನೈಟ್‌ ಕರ್ಫ್ಯೂ ಜಾರಿಗೊಳಿಸಬೇಕು. ಅಗತ್ಯವಿರುವ ಕಡೆಗಳಲ್ಲಿ 144 ಸೆಕ್ಷನ್‌ ಜಾರಿಗೊಳಿಸಬೇಕು. ಇನ್ನು ಕ್ರಿಸ್‌ಮಸ್‌ ಆಚರಣೆಗೂ ಕೆಲ ಮಿತಿಗಳನ್ನು ವಿಧಿಸಲು ಶಿಫಾರಸು ಮಾಡಲಾಗಿದ್ದು,

ಪ್ರಾರ್ಥನಾ ಮಂದಿರಗಳಿಗೆ ನಿರ್ಬಂಧ
ಡಿ.22ರಿಂದ ಜ.2ವರೆಗೂ ದೇವಸ್ಥಾನ, ಚರ್ಚ್‌, ಮಸೀದಿಗಳಲ್ಲಿ ಶೇ.50 ರಷ್ಟು ಜನಮಿತಿ ವಿಧಿಸಬೇಕು. ಸಣ್ಣ ಪ್ರಾರ್ಥನಾ ಮಂದಿರಗಳಲ್ಲಿ 200ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ. ವಿಶೇಷ ಪೂಜೆ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಿಲ್ಲ.

ಮಂದಿರಗಳಿಗೆ ಎರಡೂ ಡೋಸ್‌ ಲಸಿಕೆ ಪಡೆದವರಿಗೆ ಮಾತ್ರ ಅನುಮತಿ ನೀಡಿ, 10 ವರ್ಷದೊಳಿಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಅನುಮತಿ ನಿರಾಕರಿಸಬೇಕು. 20 ನಿಮಿಷಕ್ಕಿಂತ ಹೆಚ್ಚು ಸಮಯ ಮಂದಿರಗಳಲ್ಲಿ ಸಾರ್ವಜನಿಕರು ಇರಕೂಡದು.

ಇನ್ನು ಮಂದಿರಗಳ ಪುರೋಹಿತರು, ಪಾದ್ರಿಗಳು, ಮೌಲ್ವಿಗಳು ಕಡ್ಡಾಯವಾಗಿ ಕೊರೋನಾ ಪರೀಕ್ಷೆಗೊಳಗಾಗಿ ನೆಗೆಟಿವ್‌ ವರದಿ ಹೊಂದಿರಬೇಕು ಎಂದು ತಜ್ಞರು ಸೂಚಿಸಿದ್ದಾರೆ

LATEST NEWS

ಮೂರು ವರ್ಷದ ಮಗುವಿನ ಎದೆಗೆ ಕಾಲಿಟ್ಟು ಕೊಂ*ದ ಪಾಪಿ..! ಬೆಳಗಾವಿಯಲ್ಲೊಂದು ಅಮಾನುಷ ಘಟನೆ

Published

on

ಬೆಳಗಾವಿ: ಮೂರು ವರ್ಷದ ಮಗುವಿನ ಎದೆ ಮೇಲೆ ಕಾಲಿಟ್ಟು, ತುಳಿದು ಹ*ತ್ಯೆ ಮಾಡಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿಯಲ್ಲಿ ನಡೆದಿದೆ.

ಬುರ್ಲಟ್ಟಿ ಗ್ರಾಮದ ಶ್ರೀನಿಧಿ ಕಾಡಪ್ಪ ಕಾಳಾಪಾಟೀಲ್ ಮೂರು ವರ್ಷದ ಮೃತಪಟ್ಟಿರುವ ಮಗು.  ಜೋತಿಭಾ ತುಕಾರಾಮ ಬಾಬಾಬರ ಎಂಬವನು ಮಗುವನ್ನು ಕೊಂ*ದವರು ಎಂದು ತಿಳಿದು ಬಂದಿದೆ. ಮಗುವಿನ ತಂದೆ ಕಾಡಪ್ಪ ಕಾಳಪಾಟೀಲಗೆ ಕಳೆದ ವರ್ಷ ಜೋತಿಭಾ ಬಾಬಾಬರ ಐವತ್ತು ಸಾವಿರ ಸಾಲ ನೀಡಿದ್ದ ಎನ್ನಲಾಗಿದೆ. ಈ ಹಣವನ್ನು ವಾಪಸ್‌ ನೀಡುವಂತೆ ಕಾಳಪ್ಪನಿಗೆ ಕೇಳಿದಾಗ ಶನಿವಾರ ಬೆಳಗ್ಗೆ ಜೋತಿಭಾ ಕಾಳಪ್ಪನ ಮನೆ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದಾಗಿ ಇಬ್ಬರ ನಡುವೆ ಜಗಳ ತಾರಕಕ್ಕೇರಿ ಜೋತಿಭಾ ತುಕಾರಾಮ ಬಾಬಾಬರ ಮಗುವಿನ ಎದೆ ಮೇಲೆ ಕಾಲಿಟ್ಟು ಕೊಂದಿದ್ದಾನೆ ಎಂದು ಮೃತಪಟ್ಟ ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.

ಮುಂದೆ ಓದಿ..: ಸಾ*ವಿನಲ್ಲಿ ಒಂದಾದ ತಂದೆ ಮಗ.. ತಂದೆಯ ಅಗಲಿಕೆ ನೋವಲ್ಲೇ ಅಸುನೀಗಿದ ಮಗ..!

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

ಸಾ*ವಿನಲ್ಲೂ ಒಂದಾದ ತಂದೆ ಮಗ.. ತಂದೆಯ ಅಗಲಿಕೆ ನೋವಲ್ಲೇ ಅಸುನೀಗಿದ ಮಗ..!

Published

on

ಕೊಪ್ಪಳ: ಒಂದೇ ದಿನದಲ್ಲಿ ತಂದೆ ಮಗ ಇಬ್ಬರೂ ಸಾವನ್ನಪ್ಪಿದ ಘಟನೆ ಕೊಪ್ಪಳದ ಬಂಡಿಹರ್ಲಾಪುರಾದಲ್ಲಿ ನಡೆದಿದೆ. ತಂದೆಯ ಸಾವಿನ ನೋವಿನಲ್ಲಿ ಮಗ ಕೂಡಾ ಸಾವನ್ನಪ್ಪಿದ್ದಾರೆ. ಮೃ*ತರನ್ನು ರಾಮರೆಡ್ಡಿ (70) ಮತ್ತು ಆದಿನಾರಾಯಣ ರೆಡ್ಡಿ (42) ಎಂದು ಗುರುತಿಸಲಾಗಿದೆ.

death

ಮುಂದೆ ಓದಿ..; ಎರಡು ಲಾರಿಗಳ ಮಧ್ಯೆ ಅಪಘಾತ; ಚಾಲಕ ಗಂಭೀರ

ರಾಮರೆಡ್ಡಿ ಅನಾರೋಗ್ಯದಿಂದ ಬಳಲುತ್ತಿದ್ದು, ನಿನ್ನೆ(ಎ.28) ಬೆಳಿಗ್ಗೆ ಮೃತಪಟ್ಟಿದ್ದರು. ಅದೇ ದಿನ ರಾತ್ರಿ 8.30ಕ್ಕೆ ಮಗ ಆದಿನಾರಾಯಣ ರೆಡ್ಡಿ ಕೂಡ ಪ್ರಾಣ ಬಿಟ್ಟಿದ್ದಾರೆ. ಆದಿನಾರಾಯಣ ತಂದೆಯನ್ನು ಬಹಳ ಪ್ರೀತಿಸುತ್ತಿದ್ದು, ತಂದೆಯ ಸಾವಿನ ದುಃಖದಲ್ಲಿ ಕುಳಿತಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಆದಿನಾರಾಯಣ ರೆಡ್ಡಿ, ಪತ್ನಿ ಹಾಗೂ ತನ್ನೆರಡು ಮಕ್ಕಳನ್ನು ಅಗಲಿದ್ದಾರೆ.

Continue Reading

DAKSHINA KANNADA

ಎರಡು ಲಾರಿಗಳ ಮಧ್ಯೆ ಅಪಘಾತ; ಚಾಲಕ ಗಂಭೀ*ರ

Published

on

ಮಂಗಳೂರು: ಬೈಕಂಪಾಡಿ ಹೋಟೆಲ್ ಶ್ರೀ ದ್ವಾರದ ಬಳಿ ಲಾರಿಗಳೆರಡರ ನಡುವೆ ಅಪಘಾತ ಸಂಭವಿಸಿ ಲಾರಿ ಚಾಲಕ ಗಂಭಿರ ಗಾಯಗೊಂಡ ಘಟನೆ ನಡೆದಿದೆ. ಒಂದು ಲಾರಿಯೊಂದು ಗ್ರಾನೈಟ್ ಅಂಗಡಿಯೊಳಗೆ ನುಗ್ಗಿದ್ದು, ಅಪಾರ ಮೌಲ್ಯದ ಗ್ರಾನೈಟ್‌ ಹಾನಿಗೊಂಡಿದೆ.

ಮುಂದೆ ಓದಿ..; ಪುತ್ತೂರು : ಧರೆಗುರುಳಿದ ಬೃಹದಾಕಾರದ ಮರ; ಮಾವಿನಕಾಯಿಗಾಗಿ ಮುಗಿಬಿದ್ದ ಜನ!

accident

ಲಾರಿ ಸಾಗಾಟ ಮಾಡುತ್ತಿದ್ದ ಲಾರಿ ಅಪಘಾತದಿಂದ ನಜ್ಜುಗುಜ್ಜಾಗಿದೆ. ಇನ್ನು ಇದೇ ಭಾಗದಲ್ಲಿ ನಿತ್ಯವೂ ಮಹಿಳೆಯರು ಮೀನ ಮಾರಾಟ ಮಾಡುತ್ತಿದ್ದರು. ಅದೃಷ್ಟವಶಾತ್ ಇದೀಗ ಭಾರೀ ಅನಾಹುತ ತಪ್ಪಿದೆ.

 

Continue Reading

LATEST NEWS

Trending