Connect with us

LATEST NEWS

Nepal: ನಾಪತ್ತೆಯಾಗಿದ್ದ ಹೆಲಿಕಾಪ್ಟರ್‌ ಪತನ : ಪೈಲಟ್‌ ಸೇರಿದಂತೆ ಐವರ ದುರ್ಮರಣ..!

Published

on

ಆರು ಜನರೊಂದಿಗೆ ನೇಪಾಳದ ಮೌಂಟ್ ಎವರೆಸ್ಟ್ ಬಳಿ ನಾಪತ್ತೆಯಾಗಿದ್ದ ಮನಂಗ್ ಎ‌ ಹೆಲಿಕಾಪ್ಟರ್ ಜು. 11 ರಂದು ಸೋಲುಖುಂಬು ಜಿಲ್ಲೆಯ ಲಿಖುಪಿಕೆಯ ಲಾಯ್ಡುರಾದಲ್ಲಿ ಪತನಗೊಂಡಿದ್ದು, ಪೈಲಟ್ ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ.

ನೇಪಾಳ:  ಆರು ಜನರೊಂದಿಗೆ ನೇಪಾಳದ ಮೌಂಟ್ ಎವರೆಸ್ಟ್ ಬಳಿ ನಾಪತ್ತೆಯಾಗಿದ್ದ ಮನಂಗ್ ಎ‌ ಹೆಲಿಕಾಪ್ಟರ್ ಜು. 11 ರಂದು ಸೋಲುಖುಂಬು ಜಿಲ್ಲೆಯ ಲಿಖುಪಿಕೆಯ ಲಾಯ್ಡುರಾದಲ್ಲಿ ಪತನಗೊಂಡಿದ್ದು, ಪೈಲಟ್ ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ.

ವಿಮಾನದಲ್ಲಿದ್ದ ಎಲ್ಲಾ ವಿದೇಶಿ ಪ್ರಜೆಗಳು ಮೆಕ್ಸಿಕನ್ನರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಗ್ರಾಮಸ್ಥರು ಐದು ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ಕೋಶಿ ಪ್ರಾಂತ್ಯದ ಪೊಲೀಸ್‌ ಡಿಐಜಿ ರಾಜೇಶನಾಥ ಬಸ್ರೋಲಾ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಹೆಲಿಕಾಪ್ಟರ್ ಬೆಟ್ಟದ ಮೇಲಿರುವ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ಸಂಭವಿಸಿದೆ.

ಮೃತಪಟ್ಟ ದೇಹಗಳ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ಜೊತೆಗೆ ಓರ್ವ ನಾಪತ್ತೆಯಾಗಿದ್ದು, ಶೋಧಕಾರ್ಯಾಚರಣೆ ನಡೆಯುತ್ತಿದೆ.

ಆಲ್ಟಿಟ್ಯೂಡ್ ಏರ್ ಹೆಲಿಕಾಪ್ಟರ್ ಕಠ್ಮಂಡುವಿನಿಂದ ರಕ್ಷಣೆಗಾಗಿ ಹೊರಟಿದೆ ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ಟ್ವಿಟ್ ಮಾಡಿದೆ.

ಭಾರೀ ಸ್ಫೋಟದೊಂದಿಗೆ ಹೆಲಿಕಾಪ್ಟರ್ ಪತನಗೊಂಡಿದ್ದು, ಅಪಘಾತದ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.

ಹೆಲಿಕಾಪ್ಟರ್ ಅನ್ನು ಕಠ್ಮಂಡು ಮೂಲದ ಖಾಸಗಿ ಕಂಪನಿ ಮನಂಗ್ ಏರ್ ನಿರ್ವಹಿಸುತ್ತಿದ್ದು, ಪೂರ್ವ ನೇಪಾಳದ ಪರ್ವತ ಸೋಲುಖುಂಬು ಜಿಲ್ಲೆಯಿಂದ ರಾಜಧಾನಿ ಕಠ್ಮಂಡುವಿಗೆ ಐವರು ವಿದೇಶಿ ಪ್ರವಾಸಿಗರನ್ನು ಕರೆದೊಯ್ಯುತ್ತಿತ್ತು.

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ವಿವರವಾದ ವರದಿ ಬರಬೇಕಿದೆ ಎಂದು ಟಿಐಎಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಸ್ಥಳದಲ್ಲಿ ಸ್ಥಳೀಯ ಪೊಲೀಸರನ್ನು ಕೂಡ ನಿಯೋಜಿಸಲಾಗಿದೆ.

DAKSHINA KANNADA

ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನ ಗಣಪತಿ ವಿಗ್ರಹದ ವಿಸರ್ಜನೆ

Published

on

ಮಂಗಳೂರು: ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿ 3ದಿನಗಳ ಕಾಲ ನಡೆದ 17ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಗುರುವಾರ ರಾತ್ರಿ ಸಂಪನ್ನಗೊಂಡಿತು.

ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಹಯೋಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳ ಸಹಯೋಗದಲ್ಲಿ ನಡೆದ ಈ ಉತ್ಸವದ ಕೊನೆಗೆ ಶ್ರೀ ಸಿದ್ದಿವಿನಾಯಕ ದೇವರಿಗೆ ಮಹಾಪೂಜೆ ನೆರವೇರಿಸಲಾಯಿತು.

ಬಳಿಕ ಕಡೆಂಜ ಅಶೋಕ್ ಕುಮಾರ್ ಚೌಟ ಶೋಭಾಯಾತ್ರೆಯನ್ನು ಉದ್ಘಾಟಿಸಿದರು. ಚೆಂಡೆ ವಾದ್ಯ ಮೇಳ ಮತ್ತು ಭಜನಾ ಸೇವೆಗಳ ಜೊತೆಗೆ ಸಾಗಿ ಬಂದ ಶೋಭಾಯಾತ್ರೆಯು ಬಂಟ್ಸ್ ಹಾಸ್ಟೆಲ್ ನ ಹಿಂಭಾಗವಾಗಿ ಹೊರಟು ಪಿವಿಸ್ ಸರ್ಕಲ್, ನವಭಾರತ ಸರ್ಕಲ್, ಡೊಂಗರಕೇರಿ, ನ್ಯೂ ಚಿತ್ರ ಆಗಿ ಕಾರ್ ಸ್ಟ್ರೀಟ್ ಗೆ ಸಾಗಿ ಕುಡ್ತೇರಿ ಮಹಮ್ಮಾಯಿ ದೇವಸ್ಥಾನದ ಕೆರೆಗೆ ಬಂದು ಗಣಪತಿ ಮೂರ್ತಿಯ ವಿಗ್ರಹದ ವಿಸರ್ಜನೆ ಮಾಡಲಾಯಿತು.

3ಜಿಲ್ಲೆಗಳಿಂದ ಆಗಮಿಸಿದ ಬಂಟರ ಮತ್ತು ಊರ – ಪರವೂರ ಭಕ್ತರು ವೈಭವದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು .

Continue Reading

LATEST NEWS

ಸಿರಿಮನೆ ಫಾಲ್ಸ್ ಗೆ ತೆರಳುತ್ತಿದ್ದ ವಿಭಿನ್ನ ಕೋಮಿನ ಜೋಡಿಗಳನ್ನು ತಡೆದ ಹಿಂದೂ ಕಾರ್ಯಕರ್ತರು – FIR ದಾಖಲು..!

Published

on

ಉಡುಪಿ: ವಿಭಿನ್ನ ಕೋಮಿನ ಜೋಡಿಗಳಿಬ್ಬರು ಜಾಲಿ ರೈಡ್ ಗೆ ತೆರಳಿದ್ದಾಗ ಜೋಡಿಗಳನ್ನು ತಡೆದು ನಿಲ್ಲಿಸಿದ ಸಂಘ ಪರಿವಾರದ ಕಾರ್ಯಕರ್ತರು ಅನೈತಿಕ ಪೊಲೀಸ್ ಗಿರಿ ನಡೆಸಿರುವ ವಿಡಿಯೊವೊಂದು ವೈರಲ್ ಆಗಿದೆ.

ಕಳೆದ ಎರಡು ತಿಂಗಳ ಹಿಂದೆ ಜೋಡಿಗಳಿಬ್ಬರು ಅಗುಂಬೆಯ ಸಿರಿಮನೆ ಫಾಲ್ಸ್ ಗೆ ತೆರಳಿದ್ದರು.

ಇವರಿಬ್ಬರು ವಿಭಿನ್ನ ಕೋಮಿನವರೆಂದು ತಿಳಿದ ಸಂಘ ಪರಿವಾರದ ಕಾರ್ಯಕರ್ತರು ಶೃಂಗೇರಿ ಬಳಿ ಅಡ್ಡ ಹಾಕಿ ಅನೈತಿಕ ಪೊಲೀಸ್ ಗಿರಿ ನಡೆಸಿದ್ದರು.

ಬಳಿಕ ಇಬ್ಬರ ವಿಡಿಯೋ ಚಿತ್ರೀಕರಣ ಮಾಡಿದ್ದರು.

ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ  ಬಗ್ಗೆ  ಯುವತಿಯ ಸಹೋದರ ಅನೈತಿಕ ಪೊಲೀಸ್ ಹಾಗೂ ವಿಡಿಯೋ ಆಗಿರುವುದರ ಕುರಿತಾಗಿ  ಕಾಪು ಪೊಲೀಸ್  ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಮುಂದುವರೆದಿದೆ.

 

 

Continue Reading

DAKSHINA KANNADA

ಹಿಂದೂ ನಾಯಕರ ಫೇಸ್ಬುಕ್‌ ಅಕೌಂಟ್‌ ಹ್ಯಾಕ್‌- ಶ್ರೀಕಾಂತ್‌ ಶೆಟ್ಟಿ ಆರೋಪ..!

Published

on

ಹಿಂದೂ ಜಾಗರಣ ವೇದಿಕೆಯ ಕರ್ನಾಟಕದ ಕೆಲವು ನಾಯಕರ ಫೇಸ್ಬುಕ್‌ ಖಾತೆಗಳನ್ನು ನಿಷ್ಕ್ರೀಯಗೊಳಿಸಿದಕ್ಕೆ ಹಿಂದೂ ಜಾಗರಣ  ವೇದಿಕೆ ಮುಖಂಡ ಶ್ರೀಕಾಂತ್‌ ಶೆಟ್ಟಿ ಆರೋಪಿಸಿದ್ದಾರೆ. 

ಉಡುಪಿ: ಹಿಂದೂ ಜಾಗರಣ ವೇದಿಕೆಯ ಕರ್ನಾಟಕದ ಕೆಲವು ನಾಯಕರ ಫೇಸ್ಬುಕ್‌ ಖಾತೆಗಳನ್ನು ನಿಷ್ಕ್ರೀಯಗೊಳಿಸಲಾಗಿದೆ.

ಆದರೆ ಇದನ್ನು ಸ್ವತಃ ಫೇಸ್ಬುಕ್‌ ಸಂಸ್ಥೆಯೇ ನಿಷ್ಕ್ರೀಯಗೊಳಿಸಿದೆಯೋ ಅಥವಾ ಯಾರದ್ದೋ ದೂರಿನ ಆಧಾರದಲ್ಲಿ ನಿಷ್ಕ್ರೀಯಗೊಳಿಸಲಾಗಿದೆಯೋ ಎನ್ನುವುದು ತಿಳಿದು ಬಂದಿಲ್ಲ.

ಆದರೆ ಇದು ಹಿಂದೂ ವಿಚಾರಧಾರೆಯ ಪ್ರಚಾರ ಮತ್ತು ಹೋರಾಟ ನಡೆಸುತ್ತಿರುವವರ ಮೇಲೆ ನಡೆದ ವ್ಯವಸ್ಥಿತ ಸೈಬರ್  ದಾಳಿಯಾಗಿದೆ ಎಂದು ವೇದಿಕೆ ಮುಖಂಡ ಶ್ರೀಕಾಂತ್‌ ಶೆಟ್ಟಿ ಆರೋಪಿಸಿದ್ದಾರೆ.

ಸ್ವತಃ ಶ್ರೀಕಾಂತ್‌ ಶೆಟ್ಟಿ ಸಂಘಟನೆಯ ಇತರ ಪ್ರಚಾರಕರಾದ ಪ್ರವೀಣ್‌ ಯಕ್ಷಮಠ, ಕೆ ಟಿ ಉಲ್ಲಾಸ್‌, ಸುಕೃತ್‌ ಭಾರದ್ವಾಜ್‌, ಅರವಿಂದ ಕೋಟೇಶ್ವರ ಮೊದಲಾದ 20ಕ್ಕೂ ಹೆಚ್ಚು ಮಂದಿಯ ಫೇಸ್ಬುಕ್‌ ಪೇಜ್‌ಗಳನ್ನು ಡಿಲಿಟ್ ಮಾಡಲಾಗಿದೆ.

ನಾವು ಯಾರೂ ಸಾಮಾಜಿಕ ಸಾಮರಸ್ಯವನ್ನು ಕೆಡಿಸಿಲ್ಲ. ಗಲಭೆ ಸೃಷ್ಟಿಸಿಲ್ಲ. ಕೇವಲ ಹಿಂದೂಪರ ಹೋರಾಟ ಮಾಡುತ್ತಿರುವವರು.

ಆದ್ದರಿಂದ ಹಿಂದೂ ಚಳುವಳಿಯಲ್ಲಿ ಭಾಗವಹಿಸುತ್ತಿರುವವರನ್ನು ಹತ್ತಿಕ್ಕುವ ಹುನ್ನಾರ ಇದು ಎನ್ನುವುದು ಸಾಬೀತಾಗಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿರುವ ಕೆಲಸ ಇದು.

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಿಂದೂವಾದಿ ಸಂಗಟನೆಳು ಮೋದಿ ಪರವಾಗಿ ಯಶಸ್ವಿ ಕೆಲಸ ಮಾಡಿದ್ದೆವು.

2024ರ ಚುನಾವಣೆಯಲ್ಲಿ ಮತ್ತೇ ಅದಾಗಬಾರದು ಎನ್ನುವ ಪೂರ್ವ ತಯಾರಿ ಇದಾಗಿದೆ ಎಂದವರು ಹೇಳಿದ್ದಾರೆ.

ಆದರೆ ಆರ್‌ಎಸ್‌ಎಸ್‌ನ ಭಾಗವಾಗಿರುವ ಹಿಂದು ಜಾಗರಣ ವೇದಿಕೆ ಸಾಮಾಜಿಕ ಜಾಲತಾಣಗಳನ್ನು ನಂಬಿಕೊಂಡಿರುವ ಫೇಸ್ಬುಕ್‌ ಉಳಿಯಲ್ಲ.

ಆನ್ ಗ್ರೌಂಡ್‌ ಜನರ ಮಧ್ಯೆ ಕೆಲಸ ಮಾಡವ ವೇದಿಕೆ.

ಈ ಫೇಸ್ಬುಕ್‌ ಖಾತೆಗಳ ನಿಷ್ಕ್ರೀಯ ಕೃತ್ಯವನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.

Continue Reading

LATEST NEWS

Trending