Connect with us

    LATEST NEWS

    Mumbai : ಫ್ಲೈಓವರ್‌ನಿಂದ ರೈಲ್ವೇ ಹಳಿಗೆ ಬಿದ್ದ ಕಾರು – ಐವರಿಗೆ ಗಂಭೀರ ಗಾಯ..!

    Published

    on

    ಮೇಲ್ಸೇತುವೆಯ ಮೇಲಿಂದ ಕಾರೊಂದು ರೈಲ್ವೇ ಹಳಿಗೆ ಬಿದ್ದ ಪರಿಣಾಮ ಐವರು ಗಂಭೀರ ಗಾಯಗೊಂಡಿರುವ ಘಟನೆ ಜು.2ರಂದು ಮಹಾರಾಷ್ಟ್ರದಲ್ಲಿ  ನಡೆದಿದೆ.

    ಮುಂಬೈ: ಮೇಲ್ಸೇತುವೆಯ ಮೇಲಿಂದ ಕಾರೊಂದು ರೈಲ್ವೇ ಹಳಿಗೆ ಬಿದ್ದ ಪರಿಣಾಮ ಐವರು ಗಂಭೀರ ಗಾಯಗೊಂಡಿರುವ ಘಟನೆ ಜು.2ರಂದು ಮಹಾರಾಷ್ಟ್ರದಲ್ಲಿ ನಡೆದಿದೆ.

    ನಾಗ್ಪುರದ ಬೋರ್ಖೆಡಿ ಮೇಲ್ಸೇತುವೆಯ ಮೇಲೆ ಕಾರು ಚಲಿಸುತಿದ್ದ ವೇಳೆ ಈ ಅವಘಡ ಸಂಭವಿಸಿದೆ.

    ಇದರ ಪರಿಣಾಮ 5 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಪಘಾತದ ರಭಸಕ್ಕೆ ಕಾರು ಜಖಂಗೊಂಡಿದೆ.

    ಕಾರು ಅತಿ ವೇಗದಲ್ಲಿ  ಚಲಾಯಿಸಿದ ಪರಿಣಾಮ ಈ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

    ಬಳಿಕ ಸ್ಥಳಕ್ಕೆ ಬುಟಿಬೋರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಅಪಘಾತಕ್ಕೆ ನಿಖರ ಕಾರಣ ತನಿಖೆ ಬಳಿಕ ತಿಳಿಯಲಿದೆ.

    ಸದ್ಯ ಗಾಯಾಳುಗಳು ಚೇತರಿಸಿಕೊಂಡ ಬಳಿಕ ಅವರಿಂದ ಮಾಹಿತಿ ಪಡೆಯಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    FILM

    ಮಾಜಿ ಪ್ರಿಯಕರನ ಹ*ತ್ಯೆ ಆರೋಪ; ಬಾಲಿವುಡ್‌ನ ಖ್ಯಾತ ನಟಿಯ ತಂಗಿ ಅರೆಸ್ಟ್

    Published

    on

    ಮಂಗಳೂರು/ನವದೆಹಲಿ : ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಸಹೋದರಿ ಅಲಿಯಾ ಫಕ್ರಿಯನ್ನು ಬಂಧಿಸಲಾಗಿದೆ.  ಮಾಜಿ ಪ್ರಿಯಕರ ಎಡ್ವರ್ಡ್ ಜೇಕಬ್ಸ್(35) ಮತ್ತು ಅನಸ್ತಾಸಿಯಾ ಎಟಿಯೆನ್ನೆಯನ್ನು ಹ*ತ್ಯೆಗೈದಿರುವ ಗಂಭೀರ ಆರೋಪ ಅಲಿಯಾ ವಿರುದ್ಧ ಕೇಳಿ ಬಂದಿದೆ.  ಎಡ್ವರ್ಡ್ ಜೇಕಬ್ಸ್ ಮತ್ತು ಆತನ ಸ್ನೇಹಿತೆ ಅನಸ್ತಾಸಿಯಾ ನೆಲೆಸಿದ್ದ ಎರಡು ಅಂತಸ್ತಿನ ಕಟ್ಟಡಕ್ಕೆ ಅಲಿಯಾ ಫಕ್ರಿ ಬೆಂ*ಕಿ ಹಚ್ಚಿದ್ದರು. ನೀವೆಲ್ಲರೂ ಸಾಯಿರಿ ಎಂಬುದಾಗಿ ಆಕೆ ಕೂಗಾಡಿದ್ದರು ಎಂಬ ಬಗ್ಗೆ ವರದಿಯಾಗಿದೆ.

    ಬೆಂ*ಕಿ ಸಂಪೂರ್ಣವಾಗಿ ಕಟ್ಟಡವನ್ನು ಆವರಿಸಿದ್ದರಿಂದ ಎಡ್ವರ್ಡ್ ಜೇಕಬ್ಸ್  ಮತ್ತು ಅನಸ್ತಾಸಿಯಾಗೆ ತಪ್ಪಿಕೊಳ್ಳಲಾಗಿರಲಿಲ್ಲ. ಹೀಗಾಗಿ, ದಟ್ಟ ಹೊಗೆ ಆವರಿಸಿದ್ದರಿಂದ ಇಬ್ಬರೂ ಸ್ಥಳದಲ್ಲೇ ಪ್ರಾ*ಣಬಿಟ್ಟಿದ್ದರು.

    ಇದನ್ನೂ ಓದಿ : ರಿಷಬ್ ಶೆಟ್ಟಿಯಿಂದ ಹೊಸ ಸಿನಿಮಾ ಅನೌನ್ಸ್; ಶಿವಾಜಿ ಮಹಾರಾಜ್ ಆಗಿ ಡಿವೈನ್ ಸ್ಟಾರ್

    ಜೇಕಬ್ಸ್ ಒಂದು ವರ್ಷದ ಹಿಂದೆ ಅಲಿಯಾ ಫಕ್ರಿಯೊಂದಿಗೆ ಬ್ರೇಕ್ ಅಪ್ ಮಾಡಿಕೊಂಡಿದ್ದ. ಆದರೂ ಅಲಿಯಾ ನನ್ನ ಮಗನನ್ನು ಹಿಂಬಾಸುತ್ತಿದ್ದಳು ಎಂಬುದಾಗಿ ಜೇಕಬ್ಸ್ ತಾಯಿ ಆರೋಪಿಸಿದ್ದಾರೆ.  ಸದ್ಯ ಅಲಿಯಾರನ್ನು ನ್ಯೂಯಾರ್ಕ್‌ನ ಕ್ರಿಮಿನಲ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಜಿಲ್ಲಾ ಅಟಾರ್ನಿ ಮೆಲಿಂಡಾ ಜಾಮೀನು ನೀಡಲು ನಿರಾಕರಿಸಿದೆ ಎಂದು ತಿಳಿದುಬಂದಿದೆ.

    Continue Reading

    LATEST NEWS

    ಸ್ಟೇಟಸ್ನಲ್ಲಿ ಫೋಟೋ ಹಾಕಿದ ಮಾಜಿ ಪ್ರಿಯಕರ; ಆ*ತ್ಮಹತ್ಯೆಗೆ ಶರಣಾದ ವಿವಾಹಿತೆ!

    Published

    on

    ಮಂಗಳೂರು/ಬೆಳಗಾವಿ : ಕಾಮಾಲೆ ಕಣ್ಣಿಗೆ ಕಂಡಿದೆಲ್ಲವೂ ಹಳದಿಯಾಗಿರುತ್ತದೆ. ಪ್ರೀತಿ ಉಕ್ಕಿ ಹರಿದ ಕಾರಣ ವಾಟ್ಸಪ್ ಸ್ಟೇಟಸ್‌ಗೆ ಪ್ರೇಯಸಿಯ ಫೋಟೋವನ್ನು ಪ್ರಿಯಕರ ಹಾಕಿದ್ದಾನೆ. ಇದನ್ನು ಕಂಡ ಪ್ರಿಯತಮೆ ತನ್ನ ಪ್ರಾ*ಣವನ್ನೇ ಬಿಟ್ಟಿದ್ದಾಳೆ.

    ಆರತಿ ಪ್ರಶಾಂತ ಕಾಂಬಳೆ (26) ಪ್ರಾ*ಣ ಬಿಟ್ಟ ಯುವತಿ ಎಂದು ಗುರುತಿಸಲಾಗಿದೆ.

    ವಿವಾಹಿತೆ ಆರತಿ ಇನ್ನೋರ್ವನ ಮೋಹಕ್ಕೆ ಬಿದ್ದು, ಅವನೊಂದಿಗೆ ಅ*ಕ್ರಮ ಸಂಬಂಧವಿಟ್ಟುಕೊಂಡಿದ್ದಳು. ಆರತಿ ಜೊತೆ ಸ್ನೇಹ ಬೆಳೆಸಿದ ಹುಡುಗ ಸಾಗರ ಕಾಂಬಳೆ. ಈತ ತನ್ನ ಪ್ರೇಯಸಿಯ ಮೋಹದಲ್ಲಿ ಹುಚ್ಚು ಪ್ರೀತಿಯಲ್ಲಿ ಬಿದ್ದು, ಸ್ಟೇಟಸಲ್ಲಿ ಈಕೆಯ ಫೋಟೋ ಹಾಕಿದ್ದು ವೈರಲ್‌ ಆಗಿತ್ತು. ಅ*ಕ್ರಮ ಸಂಬಂಧ ಬಯಲಾದ ಕಾರಣ ಮನನೊಂದು ಆರತಿ ಪ್ರಾ*ಣವೇ ಕಳೆದುಕೊಂಡಿದ್ದಾಳೆ.

    ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ್‌ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರತಿ ಮದುವೆಯಾಗಿ ಸುಖಸಂಸಾರ ಮಾಡುತ್ತಿದ್ದರು. ವಾಟ್ಸಪ್‌ ಸ್ಟೇಟಸ್‌ ಫೋಟೋ ವೈರಲ್‌ ಆದುದರಿಂದ ಮನನೊಂದು ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದ ಸಂಬಂಧಿಕರ ಮನೆಗೆ ಬಂದು ಸಾ*ವಿಗೀಡಾಗಿದ್ದಾಳೆ. ರಾಯಬಾಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Continue Reading

    BANTWAL

    ಬಂಟ್ವಾಳ : ತುಳುನಾಡಿನ ಅಳಿಯ ಕಟ್ಟಿನ ಸಂಪ್ರದಾಯದಂತೆ ವಧುವನ್ನು ವರಿಸಿದ ಪಂಜಾಬಿ ವರ

    Published

    on

    ಬಂಟ್ವಾಳ: ತುಳುನಾಡಿನ ವಧುವನ್ನು ಪಂಜಾಬಿಯ ವರನಿಗೆ ಕನ್ಯಾದಾನ ಮಾಡಿದ ಅಪರೂಪದ ಪ್ರಸಂಗವೊಂದು ಇತ್ತೀಚೆಗೆ ನಡೆಯಿತು. ತುಳುನಾಡಿನಲ್ಲಿ ನಡೆಯುವ ಅಳಿಯ ಕಟ್ಟಿನ ಮದುವೆಯನ್ನು ಪಂಜಾಬ್ ರಾಜ್ಯದ ಕುಟುಂಬವೊಂದು ಅಪ್ಪಿಕೊಂಡು ಒಪ್ಪಿಕೊಂಡಿರುವುದು ನಿಜಕ್ಕೂ ತುಳುನಾಡಿಗೆ ಹೆಮ್ಮೆ. ಬಡಗಬೆಳ್ಳೂರು ಗ್ರಾಮದ ಪರಿಮೊಗರು ನಿವಾಸಿ ಪ್ರಕಾಶ್ ಶೆಟ್ಟಿ ಅವರ ಪ್ರಥಮ ಪುತ್ರಿ ಪುಣ್ಯ ಅವರ ವಿವಾಹವು ಪಂಜಾಬ್ ರಾಜ್ಯದ ಸಂಜೀವ ಶರ್ಮ ಎಂಬವರ ಮಗ ಉತ್ಕರ್ಷ ಅವರ ಜೊತೆ ನ.27 ರಂದು ಪಂಜಾಬ್ ಲುದಿನಾದ ಅಂಬ್ರೋಸಿಯಾ ಗ್ರ್ಯಾಂಡ್ ರೆಸಾರ್ಟ್ ನಲ್ಲಿ ಸಂಭ್ರಮದಿಂದ ನಡೆಯಿತು.

    ಉನ್ನತ ವಿದ್ಯಾಭ್ಯಾಸ ಉದ್ದೇಶದಿಂದ ಅಮೇರಿಕಾದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವೇಳೆ ಪರಿಚಯವಾದ ಇವರಿಬ್ಬರ ಸ್ನೇಹ ಮುಂದೆ ಸಾಗಿ ಮದುವೆ ಎಂಬ ಮೂರಕ್ಷರದ ಗಂಟು ಕಟ್ಟುವರೆಗೂ ತಲುಪಿತು. ಅಮೇರಿಕಾದ ವರನಿಗೆ ಅಥವಾ ವಧುವಿಗೆ ತುಳುನಾಡಿನ ವರ ಅಥವಾ ವಧು ಎಂಬ ಸಂಬಂಧಗಳು ಅನೇಕ ನಡೆದಿವೆ. ಅದು ದೊಡ್ಡ ಸಂಗತಿಯಾಗದೆ ಇರಬಹುದು. ಆದರೆ ಹೊರರಾಜ್ಯವಾದ ಪಂಜಾಬ್ ನ ವರ ಬಂಟ್ವಾಳದ ಬಂಟ ಸಮುದಾಯದ ವಧುವನ್ನು ತುಳುನಾಡಿನ ಅಳಿಯ ಕಟ್ಟು ಪ್ರಕಾರದ ಮದುವೆ ಮೂಲಕ ವರಿಸಿದ್ದಾನೆ ಎಂಬುದು ಉಲ್ಲೇಖನೀಯ ಅಂಶವಾಗಿದೆ.

    ಅತ್ಯಂತ ಪುರಾತನವಾದ ತುಳುನಾಡಿನ ಅಳಿಯ ಕಟ್ಟಿನ ಸಂಪ್ರದಾಯ ಬದ್ದವಾದ ಮದುವೆಗೆ ಸಾಕ್ಷಿಯಾಗಿ, ಭೂಮಿ ಸಾಕ್ಷಿಯಾದ ಮದುವೆಯನ್ನು ಪಿ.ಕಿಶೋರ್ ಭಂಡಾರಿ ಬಡಗಬೆಳ್ಳೂರು ಇವರ ಮಾರ್ಗದರ್ಶನದಲ್ಲಿ ಮಂಗಳೂರಿನ ರಾಕೇಶ್ ಸಾಲಿಯಾನ್ ಪಚ್ಚನಾಡಿ ಅವರು ನೆರವೇರಸಿಕೊಟ್ಟರು.

    Continue Reading

    LATEST NEWS

    Trending