bangalore
Banglore: ಲವ್ ಮಾಡುವಂತೆ ಶಿಕ್ಷಕಿ ಮಗನಿಂದ ಕಿರುಕುಳ- ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ..!
ಶಾಲೆಯ ಶಿಕ್ಷಕಿಯೋರ್ವರ ಮಗನು ಲವ್ ಮಾಡುವಂತೆ ವಿದ್ಯಾರ್ಥಿನಿಯೋರ್ವಳಿಗೆ ಕಿರುಕುಳ ನೀಡುತ್ತಿದ್ದ ಕಾರಣ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೊಸಕೋಟೆಯ ಪಾರ್ವತಿಪುರದಲ್ಲಿ ನಡೆದಿದೆ.
ಬೆಂಗಳೂರು: ಶಾಲೆಯ ಶಿಕ್ಷಕಿಯೋರ್ವರ ಮಗನು ಲವ್ ಮಾಡುವಂತೆ ವಿದ್ಯಾರ್ಥಿನಿಯೋರ್ವಳಿಗೆ ಕಿರುಕುಳ ನೀಡುತ್ತಿದ್ದ ಕಾರಣ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೊಸಕೋಟೆಯ ಪಾರ್ವತಿಪುರದಲ್ಲಿ ನಡೆದಿದೆ.
ಸಾರಾ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಮೃತ ಸಾರಾ ಹೊಸಕೋಟೆಯ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು.
ಆಕೆ ಓದುತಿದ್ದ ಶಾಲೆಯ ಶಿಕ್ಷಕಿಯ ಮಗನೊಬ್ಬ ಲವ್ ಮಾಡುವಂತೆ ಪೀಡಿಸುತ್ತಿದ್ದನು.
ಆದರೆ ಈಕೆ ಲವ್ ಮಾಡಲು ಒಪ್ಪಲಿಲ್ಲ. ಹಾಗಾಗಿ ಆತ ಕಿರುಕುಳ ನೀಡುತಿದ್ದನು.
ಈ ಕಿರುಕುಳದಿಂದ ಸಾರಾ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಬಾಲಕಿ ಮೃತಪಟ್ಟು ವಾರದ ನಂತರ ಮೃತ ಸಾರಾನ ಪೋಷಕರಿಗೆ ಸಹಪಾಠಿಗಳು ವಿಷಯ ತಿಳಿಸಿದ್ದಾರೆ.
ಸಾರಾನ ಪೋಷಕರು ಮಗಳ ಸಾವಿಗೆ ಶಿಕ್ಷಕಿ ಹಾಗೂ ಇತರರು ಕಾರಣ ಎಂದು ಹೊಸಕೋಟೆ ಠಾಣೆಗೆ ದೂರು ನೀಡಿದ್ದಾರೆ.
ಇದೀಗ ಪೊಲೀಸರು ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬಾಲಕಿ ಸಾವಿನ ನಂತರ ವಿಚಾರ ಎಲ್ಲೂ ಬಾಯ್ಬಿಡದಂತೆ ಮೃತ ವಿದ್ಯಾರ್ಥಿನಿ ಸ್ನೇಹಿತರಿಗೆ ಶಿಕ್ಷಕಿಯಿಂದ ಧಮ್ಕಿ ಆರೋಪ ಮಾಡಲಾಗಿದೆ.
ನೊಂದ ಪೋಷಕರು ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ.
bangalore
‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ರಿಲೀಸ್ ಡೇಟ್ ಚೇಂಜ್…!
ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನೆಮಾದ ಸೈಡ್ ಬಿ ಅಕ್ಟೋಬರ್ 20ರ ಬದಲಿಗೆ ಅಕ್ಟೋಬರ್ 27ರಂದು ರಿಲೀಸ್ ಆಗಲಿದೆ.
ರಕ್ಷಿತ್ ಶೆಟ್ಟಿ ನಟಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ತೆಲುಗಿನಲ್ಲೂ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದ್ದು ಚಿತ್ರತಂಡ ಮೊದಲೇ ಘೋಷಿಸಿದಂತೆ ಅಕ್ಟೋಬರ್ 20ಕ್ಕೆ ಬಿಡುಗಡೆ ಆಗಬೇಕಿತ್ತು.
ಆದ್ರೆ ಅಕ್ಟೋಬರ್ 20ಕ್ಕೆ ಸಪ್ತ ಸಾಗರದಾಚೆ ಸಿನೆಮಾ ರಿಲೀಸ್ ಆಗುತ್ತಿಲ್ಲ.
ಸೈಡ್ ಬಿ ಪಾರ್ಟ್ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು. ಭಾರೀ ಬಜೆಟ್ ಚಿತ್ರಗಳು, ಸ್ಟಾರ್ ನಟರ ಚಿತ್ರಗಳು, ಪರಭಾಷೆಯ ಚಿತ್ರಗಳ ಹಾವಳಿಯಿಂದಾಗಿ ಚಿತ್ರ ಬಿಡುಗಡೆಯ ದಿನಾಂಕ ಬದಲಾಗಿದೆ.
ಹೀಗಾಗಿ ಚಿತ್ರತಂಡ ಅಕ್ಟೋಬರ್ 27ಕ್ಕೆ ಪಾರ್ಟ್ ಬಿ ರಿಲೀಸ್ ಮಾಡುವ ಘೋಷಣೆಯನ್ನು ಮಾಡಿದೆ.
ಹೌದು ..ಅಕ್ಟೋಬರ್ 20ರ ಬದಲಿಗೆ ಅಕ್ಟೋಬರ್ 27ರಂದು ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ರಿಲೀಸ್ ಆಗಲಿದೆ.
ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ನೆಲದಲ್ಲೂ ಸದ್ದು ಮಾಡಿದೆ. ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡಿದ ಈ ಸಿನಿಮಾ, ಈಗ ತೆಲುಗಿನಲ್ಲೂ ಅತ್ಯುತ್ತಮ ಪ್ರತಿಕ್ರಿಯೆನ್ನು ಕಂಡಿದೆ.
ಹೇಮಂತ್ ನಿರ್ದೇಶಿಸಿದ ದೃಶ್ಯ ಕಾವ್ಯಕ್ಕೆ ಕನ್ನಡಿಗರು ಫಿದಾ ಆಗಿದ್ದಾರೆ. ಮನು- ಪ್ರಿಯಾ ಜೋಡಿಯ ಪ್ರೇಮ್ ಕಹಾನಿ ನೋಡಿ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ.
ಫೈನಲಿ ಜನ ಕಾತುರದಿಂದ ಕಾಯುತ್ತಿರುವ ಸಪ್ತ ಸಾಗರದಾಚೆ ಸಿನೆಮಾದ ಪಾರ್ಟ್ ಬಿ ಅಕ್ಟೋಬರ್ 27ರಂದು ಅದ್ದೂರಿಯಾಗಿ ಬಿಡುಗಡೆಗೆ ಸಿದ್ದವಾಗಿದೆ.
bangalore
SHOCKING! ಗುರುತೇ ಸಿಗದಷ್ಟು ಬದಲಾದ ‘ಹುಚ್ಚ’ ಖ್ಯಾತಿಯ ನಟಿ ರೇಖಾ …!
ಶಾಕಿಂಗ್ ಲುಕ್ ನಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್ ಜೊತೆ ‘ಹುಚ್ಚ’ ಚಿತ್ರದಲ್ಲಿ ನಟಿಸಿ ಮನೆ ಮಾತಾಗಿದ್ದ ನಟಿ ರೇಖಾ ವೇದವ್ಯಾಸ್.
ಬೆಂಗಳೂರು : ಕಿಚ್ಚ ಸುದೀಪ್ ಜೊತೆ ‘ಹುಚ್ಚ’ ಚಿತ್ರದಲ್ಲಿ ನಟಿಸಿ ಮನೆ ಮಾತಾಗಿದ್ದ ನಟಿ ರೇಖಾ ವೇದವ್ಯಾಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.
ಅಷ್ಟೊಂದು ಮುದ್ದು ಮುದ್ದು ಮುಖ, ಹೊಳೆಯುತ್ತಿದ್ದ ಕಣ್ಣು, ಮಿನುಗುತ್ತಿದ್ದ ಕೆನ್ನೆಯನ್ನು ಇಂದಿಗೂ ಅಭಿಮಾನಿಗಳು ನೆನೆಸಿಕೊಳ್ಳುತ್ತಾರೆ.ಆದ್ರೆ ಈಗ ಅದೇ ರೇಖಾ ಗುರುತೆ ಸಿಗದಷ್ಟರ ಮಟ್ಟಿಗೆ ಬದಲಾಗಿ ಹೋಗಿದ್ದಾರೆ.
ಸಣಕಲು ದೇಹ, ಬತ್ತಿದ ಕಣ್ಣುಗಳು, ಬಾಡಿದ ಕೆನ್ನೆಗಳು ರೇಖಾ ಅವರ ನಿಜ ಸ್ವರೂಪವನ್ನೇ ಬದಲಾಯಿಸಿ ಬಿಟ್ಟಿದೆ.
ಒಂದು ಕಾಲದಲ್ಲಿ ಬೆಳ್ಳಿ ತೆರೆಯಲ್ಲಿ ಮಿರ ಮಿರ ಮಿಂಚಿ ಮರೆಯಾಗಿರುವ ನಟಿ ರೇಖಾ ದಿಢೀರನೆ ತೆಲುಗು ಕಿರುತೆರೆ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಆಗಿದ್ದಾರೆ.
ತೆಲುಗಿನ ‘ಶ್ರೀದೇವಿ ಡ್ರಾಮಾ ಕಂಪನಿ’ ಕಾಮಿಡಿ ಶೋಗೆ ಅತಿಥಿಯಾಗಿ ಬಂದಿದ್ದ ರೇಖಾ ಎಲ್ಲರಿಗೂ ಶಾಕ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಹುಟ್ಟಿಬೆಳೆದ ರೇಖಾ ಕನ್ನಡದ ‘ಹುಚ್ಚ’ ಚಿತ್ರದಲ್ಲಿ ಮೊದಲಿಗೆ ಆಕೆ ಬಣ್ಣ ಹಚ್ಚಿದ್ದರು.
ಅಲ್ಲಿಂದ ಮುಂದೆ ಕನ್ನಡ ಸಿನಿರಸಿಕರಿಗೆ ‘ಹುಚ್ಚ’ ನಟಿ ರೇಖಾ ಅಂತ್ಲೇ ಪರಿಚಿತರಾದರು.
ಕನ್ನಡ ಜೊತೆ ಜೊತೆಗೆ ತೆಲುಗು, ತಮಿಳು ಸಿನಿಮಾಗಳಲ್ಲಿ ರೇಖಾ ಮಿಂಚಿದರು. ತೆಲುಗಿನಲ್ಲೂ ಆಕೆ ಹಲವು ಹಿಟ್ ಸಿನಿಮಾಗಳಲ್ಲಿ ಮಿಂಚಿದ್ದಾರೆ.
ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಆರಂಭಿಸಿದ ಚೆಲುವೆಗೆ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ.
‘ಚಿತ್ರ’, ‘ತುಂಟಾಟ’, ‘ಮೋನಲಿಸಾ’, ‘ಚೆಲ್ಲಾಟ’ ಹೀಗೆ ಹಿಟ್ ಸಿನಿಮಾಗಳಲ್ಲಿ ಮಿಂಚಿದರು.
ಬಳಿಕ ತೆಲುಗು, ತಮಿಳು ಸಿನಿಮಾಗಳತ್ತ ಮುಖ ಮಾಡಿದ್ದರು. ಗಣೇಶ್ ಜೋಡಿಯಾಗಿ ‘ಹುಡುಗಾಟ’ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬಂದ ರೇಖಾ ಮತ್ತೊಮ್ಮೆ ಕಮಾಲ್ ಮಾಡಿದರು.
ನಟಿ ರೇಖಾ 2014ರ ನಂತರ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿಲ್ಲ. ಅವಕಾಶಗಳು ಸಿಕ್ಕಿಲ್ವೋ ಅಥವಾ ಸಿನಿಮಾ ಮೇಲಿನ ಆಸಕ್ತಿ ಕಮ್ಮಿ ಆಯ್ತೋ ಗೊತ್ತಿಲ್ಲ.
ಆದರೆ ಇದ್ದಕ್ಕಿಂದ್ದಂತೆ ಬಿಗ್ ಸ್ಕ್ರೀನ್ನಿಂದ ಮಾಯವಾಗಿದ್ದ ರೇಖಾ ಸಿನಿಪ್ರೇಮಿಗಳಿಗೆ ಅಪರೂಪದ ತಾರೆಯಾಗಿ ಉಳಿದುಕೊಂಡು ಬಿಟ್ರು.
ಆದಷ್ಟು ಬೇಗ ಕನ್ನಡ ಮುದ್ದು ಮುಖದ ನಟಿ ರೇಖಾ ವೇದವ್ಯಾಸ್ ಗುಣ ಮುಖರಾಗಿ ಮೊದಲಿನ ಮಂದಹಾಸ ಬರಲಿ ಅನ್ನೋದೆ ಅವರ ಅಭಿಮಾನಿಗಳ ಆಸೆ.
bangalore
ಹಾಫ್ ಸೆಂಚುರಿ ಖುಷಿಯಲ್ಲಿ ಸೀತಾ-ರಾಮ ಸೀರಿಯಲ್
ಕನ್ನಡ ಕಿರುತೆರೆಯ ನಂಬರ್ ಒನ್ ಧಾರವಾಹಿ “ಸೀತಾ-ರಾಮ” ಯಶಸ್ವಿ 50 ಸಂಚಿಕೆಗಳನ್ನು ಪೂರೈಸಿದೆ.
ಬೆಂಗಳೂರು : ಕನ್ನಡ ಕಿರುತೆರೆಯಲ್ಲಿ ಸದ್ಯ ಸೀತಾರಾಮ ಧಾರವಾಹಿ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ರಾತ್ರಿ 9.30 ಕ್ಕೆ ಸರಿಯಾಗಿ ಪುಟ್ಟ ಮಕ್ಕಳಿಂದ ಹಿಡಿದು, ಹುಡುಗೀರು, ಆಂಟಿಯಂದಿರು ಟಿವಿ ಮುಂದೆ ಹಾಜರಿರ್ತಾರೆ.
ಇದೀಗ ನಂಬರ್ ಒನ್ ಸೀರಿಯಲ್ ಆಗಿರುವ ಸೀತಾರಾಮ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಕಥೆ ರಿಮೇಕ್ ಆದ್ರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಧಾರವಾಹಿ ಕಥಾ ಹಂದರವನ್ನು ಬಳಸಲಾಗಿದೆ.
ಅದ್ರಲ್ಲೂ ವೈಷ್ಣವಿ ಇದ್ದಾರೆ ಅಂದ್ರೆ ಅಲ್ಲಿ ಟಿ.ಆರ್.ಪಿ ರೇಟ್ ಗಗನಕ್ಕೇರುತ್ತೆ.
ಬಿಗ್ ಬಾಸ್ ಬಳಿಕ ವೈಷ್ಣವಿ ಸೀತಾ ರಾಮ ಪ್ರೋಜೆಕ್ಟ್ ಮೂಲಕ ಜನರ ಮನಸ್ಸನ್ನು ಗೆದ್ದು ಈಗ 50 ಸಂಚಿಕೆಗಳನ್ನು ಪೂರೈಸಿರುವ ಸಂತೋಷದಲ್ಲಿದ್ದಾರೆ.
ಬಡ ಮನೆಯ ಹೆಣ್ಣು ಮಗಳು ಬದುಕಿನ ಹೋರಾಟದಲ್ಲಿ ಎದುರಿಸುವ ನಾನಾ ಸಂಕಷ್ಟಗಳನ್ನುಇಟ್ಟುಕೊಂಡು ಧಾರವಾಹಿಯ ಕಥೆಯನ್ನು ಹೆಣೆಯಲಾಗಿದೆ.
ಹೀರೋ- ಹೀರೋಹಿನ್ ಕೆಮೆಸ್ಟ್ರೀ ಕ್ಲಿಕ್ ಆಗಿದ್ದು, ಇವರಿಬ್ಬರೂ ರಿಯಲ್ ಲೈಫಲ್ಲೂ ಒಂದಾದ್ರೆ ಚೆನ್ನಾಗಿರುತ್ತೆ ಅಲ್ವಾ ಅಂತ ಯೋಚ್ನೆ ಮಾಡ್ತಿದ್ದಾರೆ.
ಧಾರವಾಹಿ ನೂರು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಲಿ ಅನ್ನೋದೆ ಸೀತಾ-ರಾಮ ಧಾರವಾಹಿ ಅಭಿಮಾನಿಗಳ ಆಸೆ. ನಮ್ಮ ಕಡೆಯಿಂದಲೂ ಆಲ್ ದ ವೆರೀ ಬೆಸ್ಟ್.
- FILM7 days ago
Film: ಹಂದಿ ಮಾಂಸ ಸೇವಿಸಿದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ..!
- bangalore6 days ago
ಹುಡುಗಿ ಚೇಂಜ್ ಆದ್ರೂ ಡ್ರೆಸ್ ಚೇಂಜ್ ಆಗಿಲ್ಲ ಅಲ್ವಾ ಶೆಟ್ರೇ?
- bengaluru5 days ago
ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ನಟ ವಿಜಯ ರಾಘವೇಂದ್ರ ಭೇಟಿ..!
- DAKSHINA KANNADA5 days ago
ಮುಂದಿನ ವರ್ಷದಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ 3 ಬೋರ್ಡ್ ಎಕ್ಸಾಮ್- ಮಧು ಬಂಗಾರಪ್ಪ