Connect with us

LATEST NEWS

ಅಪಘಾತದಲ್ಲಿ ಮೃತಪಟ್ಟರೂ 9 ಮಂದಿಗೆ ಹೊಸ ಬಾಳು ನೀಡಿದ 2.5 ವರ್ಷದ ಬಾಲಕಿ..!!

Published

on

ಚಂಡೀಗಢ : ರಸ್ತೆ ಅಪಘಾತದಲ್ಲಿ ಮೃತಪಟ್ಟ ಎರಡೂವರೆ ವರ್ಷದ ಮಗಳ ಅಂಗಾಂಗಗಳನ್ನು ತಂದೆಯೊಬ್ಬರು ದಾನ ಮಾಡುವ ಮೂಲಕ 9 ಮಂದಿಗೆ ಜೀವದಾನ ಮಾಡಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ.

ಡಿಸೆಂಬರ್ 12ರಂದು ಪಂಜಾಬ್‌ನ ಮೊಹಾಲಿ ಎಂಬಲ್ಲಿ ರಸ್ತೆ ಅಪಘಾತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ್ದರು.

ಅಪಘಾತದಲ್ಲಿ ಎರಡೂವರೆ ವರ್ಷದ ಅನಾಯಕ ಎಂಬ ಬಾಲಕಿ ಗಾಯಗೊಂಡಿದ್ದು, ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಂಡೀಗಢ ಪಿಜಿಐಗೆ ದಾಖಲಿಸಲಾಗಿತ್ತು.

ಆದರೆ, ಬಾಲಕಿಯ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಳು.

ರಸ್ತೆ ಅಪಘಾತದಲ್ಲಿ ಇಡೀ ಕುಟುಂಬವನ್ನು ಕಳೆದುಕೊಂಡರೂ ಕೂಡ ಅನಾಯಕಳ ತಂದೆ ಅಮಿತ್ ಗುಪ್ತಾ ತನ್ನ ಮಗಳ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದರು. ಈ ಒಂದು ನಿರ್ಧಾರದಿಂದ 9 ಮಂದಿ ರೋಗಿಗಳಿಗೆ ಇದೀಗ ಹೊಸ ಬದುಕು ಸಿಗಲಿದೆ.

ಪಿಜಿಐ ವೈದ್ಯರು ಅಂಗಾಂಗ ದಾನ ಪ್ರಕ್ರಿಯೆ ಪ್ರಾರಂಭಿಸಿದ್ದು, ಬಾಲಕಿಯ ಹೃದಯವನ್ನು ಚೆನ್ನೈಗೆ, ಯಕೃತ್ ಅನ್ನು ಅಹಮದಾಬಾದ್‌ಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ರೋಗಿಗಳಿಗೆ ಮೇದೋಜೀರಕ ಗ್ರಂಥಿ, ಮೂತ್ರಪಿಂಡ ಮತ್ತು ಕಣ್ಣಿನ ಕಸಿ ಮಾಡಲು ಹೊಂದಾಣಿಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಅಮಿತ್ ಗುಪ್ತಾ, ರಸ್ತೆ ಅಪಘಾತದಲ್ಲಿ ಪತ್ನಿ ಕೀರ್ತಿ ಗುಪ್ತಾ (33), ಸಹೋದರ ನುವಂಶ್ (6), ಚಿಕ್ಕಪ್ಪ ಅನುಜ್ ಬನ್ಸಾಲ್ (30 ), ಅಜ್ಜಿ ಉಷಾ ರಾಣಿ (60) ಮತ್ತು ಸಹೋದರಿಯನ್ನು ಕಳೆದುಕೊಂಡಿದ್ದೇನೆ. ಅಪಘಾತದ ವೇಳೆ ಮಗಳು ಅನಾಯಕಳ ತಲೆಗೆ ತೀವ್ರ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು.

ಕೂಡಲೇ ಆಕೆಯನ್ನು ಚಂಡೀಗಢದ ಪಿಜಿಐಗೆ ಕರೆತರಲಾಯಿತಾದರೂ ಜೀವ ಉಳಿಯಲಿಲ್ಲ. ಪ್ರೀತಿಯ ಮಗಳನ್ನು ಕಳೆದುಕೊಂಡು ತುಂಬಾ ದುಃಖಿತನಾಗಿದ್ದೇನೆ. ಆದರೆ, 9 ಜನರಿಗೆ ಅವಳ ಅಂಗಾಂಗಗಳಿಂದ ಹೊಸ ಜೀವನ ಸಿಗುತ್ತಿದೆ. ಈ ಮೂಲಕವಾದರೂ ನನ್ನ ಮಗಳು ಜೀವಂತವಾಗಿರುತ್ತಾಳೆ ಎಂದು ಹೇಳಿದರು.

ಅಮಿತ್ ಗುಪ್ತಾ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪಿಜಿಐ, ಇತರರಿಗೂ ಇದು ಸ್ಫೂರ್ತಿ ನೀಡುತ್ತದೆ ಎಂದು ಹೇಳಿದೆ.

LATEST NEWS

ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್‌ ಪ್ರಕರಣ; ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ನಿರ್ಬಂಧ..!

Published

on

ಬೆಂಗಳೂರು: ಹಾಸನದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್‌ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೆಸರು ಬಳಸದಂತೆ ಬೆಂಗಳೂರಿನ ನ್ಯಾಯಾಲಯ ನಿರ್ಬಂಧ ಹೇರಿದೆ.

ಪ್ರಜ್ವಲ್ ರೇವಣ್ಣ ಪ್ರಕರಣ ; ವೀಡಿಯೋ ಹರಿಬಿಟ್ಟ ಕಾರ್ತಿಕ್ ನಾಪತ್ತೆ! ಮಲೇಷ್ಯಾಕ್ಕೆ ಹೋಗಿರುವ ಶಂಕೆ

ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಗಳು ತಮ್ಮ ಹೆಸರು ಬಳಸುವುದನ್ನು ನಿರ್ಬಂಧಿಸುವಂತೆ ಕೋರಿ‌ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಎಚ್. ಡಿ ದೇವೇಗೌಡ ಮತ್ತು ಎಚ್. ಡಿ. ಕುಮಾರಸ್ವಾಮಿ ಹೆಸರು ಬಳಸಂತೆ ಮಾಧ್ಯಮಗಳು, ಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ. ‘ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ಮಾಧ್ಯಮಗಳಲ್ಲಿ ನಮ್ಮ ಹೆಸರು ಬಳಸುವುದರಿಂದ ತಮ್ಮ ಘನತೆ, ಗೌರವಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಮಧ್ಯಂತರ ತಡೆಯಾಜ್ಞೆ ನೀಡಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದರು.‌ ಮನವಿ ಆಲಿಸಿದ ನ್ಯಾಯಾಧೀಶರು ಮಾಧ್ಯಮಗಳು ಸತ್ಯಕ್ಕೆ ದೂರವಾದ, ಆಧಾರ ರಹಿತ ಸುದ್ದಿಗಳನ್ನು ಅರ್ಜಿದಾರರ ವಿರುದ್ಧ ಪ್ರಸಾರ ಮಾಡದಂತೆ ನಿರ್ಬಂಧ‌ ವಿಧಿಸಿ ಪ್ರತಿವಾದಿಗಳಿಗೆ ಸಮನ್ಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದ್ದಾರೆ.

 

Continue Reading

FILM

ಅರೆಬೆತ್ತಲೆ ಫೊಟೊ ಪೋಸ್ಟ್ ಮಾಡಿದ ಸಮಂತಾ..! ಅಸಲಿಯತ್ತೇನು?

Published

on

ಜನಪ್ರಿಯ ನಟಿ ಸಮಂತಾರುತು ಪ್ರಭು  ತಮ್ಮ ಸಿನೆಮಾ ನಟನೆ ಮೂಲಕ ಎಲ್ಲರ ಫೇವರೆಟ್ ಆಗಿದ್ದವರು. ಮುದ್ದು ಮುಖದ ಚೆಲುವೆಯ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಈಕೆ ಅನಾರೋಗ್ಯಕ್ಕೂ ತುತ್ತಾಗಿದ್ದರು. ಇತ್ತೀಚೆಗೆ ತನ್ನ ಮಾಜಿ ಪತಿಯ ವಿಚಾರಕ್ಕೆ ಸಂಬಂಧಿಸಿ ಹಲವಾರು ವಿಚಾರಗಳಲ್ಲಿ ಸುದ್ದಿಯಲ್ಲಿರುತ್ತಾರೆ.

ಇದೀಗ ಸಮಂತಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತನ್ನ ಖಾತೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಅರೆನಗ್ನ ಫೊಟೋವನ್ನು ಪೋಸ್ಟ್‌ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅದು ಸುಳ್ಳಾಗಿತ್ತು. ಯಾರೋ ಕಿಡಿಗೇಡಿಗಳು ಸಮಂತಾ ಫೊಟೋವನ್ನು ತಿರುಚಿ ಪೋಸ್ಟ್ ಮಾಡಿದ್ದಾರೆ.

ಮುಂದೆ ಓದಿ..; “ಮದುವೆ ಗೌನ್‌”ಗೆ ಮತ್ತೊಂದು ಟಚ್ ಕೊಟ್ಟ ‘ಸಮಂತಾ’..!! ಶಾಕ್‌ನಲ್ಲಿಅಭಿಮಾನಿಗಳು!

ಇನ್ನು ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿರುವ ಸಮಂತಾ ದಿನಕ್ಕೊಂದು ಆರೋಗ್ಯ ಮಾಹಿತಿಯನ್ನು ಪೋಸ್ಟ್ ಮಾಡುತ್ತಾರೆ. ಇತ್ತೀಚೆಗಷ್ಟೇ ಸಮಂತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ‘ಫಾರ್ ಇನ್‌ಫ್ರಾರೆಡ್ ಸೌನಾ’ ಉಪಯೋಗಗಳು ಎಂದು ಬರೆದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.  ಪೋಸ್ಟ್‌ನಲ್ಲಿ ದೀರ್ಘಕಾಲದ ಕಾಯಿಲೆಗಳು, ಚರ್ಮದ ಸೌಂದರ್ಯ, ದೇಹದ ಕೊಬ್ಬನ್ನು ಕಡಿಮೆ ಮಾಡುವುದು ಮುಂತಾದ ವಿವಿಧ ಉದ್ದೇಶಗಳಿಗಾಗಿ ಜನರು ಬಾತ್‌ ಟಬ್‌ನಲ್ಲಿ ಸ್ವಲ್ಪ ಸಮಯ ಇರುತ್ತಾರೆ ಎಂದು ಬರೆದುಕೊಂಡಿದ್ದರು.

ಅರೆಬೆತ್ತಲೆ ಫೊಟೊ ವೈರಲ್:

ಇನ್ನು ಬಾತ್ ಟಬ್‌ನಲ್ಲಿ ಟವಲ್ ಸುತ್ತಿಕೊಂಡು ಇರುವ ಸಮಂತಾ ಅವರ ಫೊಟೋದ ಜೊತೆಗೆ ಕೆಲವೊಂದು ಹೆಲ್ತ್‌ ಟಿಪ್ಸ್‌ಗಳನ್ನು ಬರೆದು ಪೋಸ್ಟ್ ಮಾಡಿದ್ದರು. ಇದರ ಬೆನ್ನಲೇ ಇನ್ನೊಂದು ಸಮಂತಾ ಅರೆಬೆತ್ತಲೆ ಫೊಟೋ ಪೋಸ್ಟ್ ಮಾಡಿ ಡಿಲೀಟ್ ಮಾಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಆದರೆ ಅದರಲ್ಲಿ ಆಕೆಯ ಮುಖ ಕಾಣುತ್ತಿಲ್ಲ. ಅಸಲಿಗೆ ಅದು ನಕಲಿ ಎಂದು ಗೊತ್ತಾಗಿದೆ.  ಸೋಶಿಯಲ್ ಮೀಡಿಯಾದಲ್ಲಿ ಫೇಕ್‌ ಸುದ್ದಿ ಹಬ್ಬಿಸುವವರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಖುದ್ದು ಸಮಂತಾ ಈ ಫೋಟೊ ಹಾಕಿ ಡಿಲೀಟ್ ಮಾಡಿದ್ದಾರೆ ಎಂದು ಕೆಲವರು ವೈರಲ್ ಮಾಡುತ್ತಿದ್ದಾರೆ. ಆದರೆ ಇದೆಲ್ಲಾ ಸುಳ್ಳು. ಆಕೆಯ ಅಂತಹ ಯಾವುದೇ ಫೋಟೊ ಪೋಸ್ಟ್ ಮಾಡಿಲ್ಲ. ಕಿಡಿಗೇಡಿಗಳು ಈ ರೀತಿ ಫೋಟೊ ವೈರಲ್ ಮಾಡುತ್ತಿದ್ದಾರೆ ಎನ್ನುವ ಚರ್ಚೆಯೂ ನಡೀತಿದೆ. ಒಟ್ಟಾರೆ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಕಾಮೆಂಟ್ಸ್ ಬರುತ್ತಿವೆ.

Continue Reading

FILM

ಹೆಣ್ಣು ಮಕ್ಕಳು ಕನಿಷ್ಠ 25 ದಾಟಿದ ಮೇಲೆ ಮದುವೆಯಾಗಿ; ಮಿಲನಾ ನಾಗರಾಜ್

Published

on

ಮಂಗಳೂರು : ಮದುವೆ ಎಂಬುದು ಎಲ್ಲರ ಬಾಳಿನ ಪ್ರಮುಖ ಘಟ್ಟ. ಕೆಲವೊಂದು ವಿಷಯ, ಜವಾಬ್ದಾರಿಗಳು ಮದುವೆ ಆದ ಮೇಲೆಯೇ ಬರುತ್ತದೆ. ಇನ್ನು ಮನೆಯ ಹಿರಿಯರು ಹೇಳುತ್ತಾ ಇರುತ್ತಾರೆ ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತದೆ. ಆ ಸಂಬಂಧವನ್ನು ದೂರ ಮಾಡಲು ಯಾರಿಂದ ಸಾಧ್ಯವಿಲ್ಲ ಎಂದು. ಹೀಗೆ ಕೆಲವೊಂದು ಬುದ್ಧಿವಾದದ ಮಾತುಗಳನ್ನು ಎಲ್ಲರೂ ಹೇಳುತ್ತಾ ಇರುತ್ತಾರೆ. ಇದೇ ರೀತಿ ಫಿಲ್ಮ ಸ್ಟಾರ್ ತಾಯಿಯಾಗ್ತಿರೋ ಮಿಲನಾ ನಾಗರಾಜ್ ಈಗ ತಮ್ಮ ಬದುಕಿನ ಸಂತಸದ ಘಟ್ಟದಲ್ಲಿ ಇದ್ದಾರೆ. ಮಿಲನಾ ಮತ್ತು ಪತಿ ಡಾರ್ಲಿಂಗ್ ಕೃಷ್ಣ ಇಬ್ಬರೂ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಮಿಲನಾ ನಾಗರಾಜ್ ಯಾವಾಗಲೂ ಪ್ರಬುದ್ಧತೆಯಿಂದಲೇ ಮಾತನಾಡುತ್ತಾರೆ.

ಇದೇ ರೀತಿಯಾಗಿ ನಮ್ಮ ಬದುಕಿನ ಸಾರ್ಥಕ ಕ್ಷಣಗಳನ್ನು ಮಿಲನಾ ತನ್ನ ವಿಡಿಯೋದಲ್ಲಿ ಮೆಲುಕು ಹಾಡಿದ್ದಾರೆ. ಹಾಗೆಯೇ ನಿಮಗೆ 25 ವರ್ಷಗಳಿಗಿಂತ ಹೆಚ್ಚು ವಯಸ್ಸಾಗುವವರಗೆ ಖಂಡಿತಾ ಮದುವೆಯಾಗ್ಬೇಡಿ. ಮೊದಲು ನೀವು ದುಡಿಯಿರಿ, ಗಳಿಸಿ, ಸ್ವತಂತ್ರರಾಗಿ, ಮಾನಸಿಕವಾಗಿ ಗಟ್ಟಿಯಾಗಿ, ಪ್ರಬುದ್ಧರಾಗಿ. ನಿಮ್ಮ ಬದುಕಿನ ನಿರ್ಧಾರಗಳನ್ನು ನೀವು ತೆಗೆದುಕೊಳ್ಳುವಷ್ಟು ಗಟ್ಟಿಯಾಗಿ ಆಗ ಮದುವೆಯಾಗಿ. ಅನೇಕ ಹುಡುಗಿಯರು, ಹುಡುಗರು ಕೂಡಾ ಗೊಂದಲದಲ್ಲೇ ಮದುವೆಯಾಗ್ತಾರೆ. ಹಾಗೆ ಆಗಬಾರದು. ಎಂದು ನಟಿ ಮಿಲನಾ ಹೇಳಿದ್ದರು.

ಅದೇ ರೀತಿ ಗಂಡು ಹೆಣ್ಣಿನ ಹೊಂದಾಣಿಕೆ ಹೇಳುವಷ್ಟು ಸುಲಭದ ಮಾತಲ್ಲ. ಮನೆಯಲ್ಲಿ ನಾವು ನಮ್ಮ ತಂದೆ- ತಾಯಿ ಜೊತೆಗೇ ಚಿಕ್ಕ ಚಿಕ್ಕ ವಿಚಾರಗಳಿಗೆ ಜಗಳ ಆಡುತ್ತಿರುತ್ತೇವೆ. ಆದರೆ ಮಕ್ಕಳು ಎನ್ನುವ ಕಾರಣಕ್ಕೆ ತಂದೆ ತಾಯಿ ಹೊಂದಿಕೊಳ್ಳುತ್ತಾರೆ. ಸುಲಭವಾಗಿ ಕ್ಷಮಿಸಿಬಿಡುತ್ತಾರೆ. ಆದರೆ ನಮ್ಮ ಬದುಕಿನಲ್ಲಿ ಒಬ್ಬ ಹೊಸ ವ್ಯಕ್ತಿ ಬಂದಾಗ ಹಾಗಿರುವುದಿಲ್ಲ. ಅವರು ಈ ಎಲ್ಲಾ ವಿಚಾರಗಳಿಗೆ ರೆಡಿ ಇರುವುದಿಲ್ಲ. ಅವರು ನಮ್ಮಿಂದ ಒಳ್ಳೆಯ ವಿಚಾರಗಳನ್ನ, ಸಿಹಿಯಾದ ವಿಚಾರಗಳನ್ನಷ್ಟೇ ಬಯಸುತ್ತಾರೆ. ಹಾಗಾಗಿ ಈ ಪ್ರಬುದ್ಧತೆ ಸಂಸಾರ ಸಾಮರಸ್ಯದಲ್ಲಿ ಬಹಳ ಮುಖ್ಯ ಎಂದಿದ್ದಾರೆ ಮಿಲನಾ ನಾಗರಾಜ್.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹೆಚ್ಚು ಹರಿದಾಡುತ್ತಿದೆ. ಮದುವೆ, ಸಂಬಂಧಗಳು, ಬದುಕು-ಭವಿಷ್ಯ ಈ ಎಲ್ಲದರ ಬಗ್ಗೆ ಅದೆಷ್ಟು ಸರಳವಾಗಿ ಮಿಲನಾ ವಿವರಿಸಿದ್ದಾರೆ ಎಂದು ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

ಇದೇ ಸೆಪ್ಟೆಂಬರ್ ತಿಂಗಳಲ್ಲಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ತಮ್ಮ ಮೊದಲ ಮಗುವನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಇನ್ನು ಈ ವರ್ಷ ಪೂರ್ತಿ ಡಾರ್ಲಿಂಗ್ ಕೃಷ್ಣ ಬಹಳ ಬ್ಯುಸಿಯಂತೆ. ಸಾಲು ಸಾಲು ಪ್ರಾಜೆಕ್ಟ್ ಗಳ ನಡುವೆ ಪತ್ನಿ ಜೊತೆ ಸಮಯ ಕಳೆಯಲು ಸಾಕಷ್ಟು ಪ್ಲಾನಿಂಗ್ ಮಾಡಿಕೊಳ್ತಿದ್ದಾರಂತೆ. ಮೊದಲ ಎರಡು ತಿಂಗಳು ನನಗೂ ಆರೋಗ್ಯದಲ್ಲಿ ಸಾಕಷ್ಟು ಏರುಪೇರುಗಳಿದ್ದವು, ಆದರೆ ನಂತರ ನಿಧಾನಕ್ಕೆ ದೇಹ ಮತ್ತು ಮನಸ್ಸು ಈ ಸನ್ನಿವೇಶಕ್ಕೆ ಹೊಂದಿಕೊಂಡಿದೆ. ಸೆಪ್ಟೆಂಬರ್ ಗಾಗಿ ಎದುರು ನೋಡುತ್ತಿದ್ದೇವೆ ಎಂದು ಮಿಲನಾ ನಾಗರಾಜ್ ಖುಷಿಯಿಂದ ತಿಳಿಸಿದ್ದಾರೆ.

Continue Reading

LATEST NEWS

Trending