ಮಂಗಳೂರು : ಸಿಟಿ ಬಸ್‌ನಲ್ಲಿ ಯಾರೋ ಪ್ರಯಾಣಿಕರು ಬಿಟ್ಟು ಹೋದ ಹಣವನ್ನು ಪ್ರಮಾಣಿಕವಾಗಿ ಜೋಪಾನ ಮಾಡಿ ಪೊಲೀಸ್ ಕಮಿಷನರಿಗೆ ನಗರದ ಸಿಟಿ ಬಸ್ ಚಾಲಕ ಮತ್ತು ನಿರ್ವಾಹಕ ಒಪ್ಪಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ತಲಪಾಡಿ ರೂಟಿನಲ್ಲಿ ಸಂಚರಿಸುವ ಮಹೇಶ್ ಮೋಟಾರ್ಸ್ ಸಂಸ್ಥೆಗೆ ಸೇರಿದ 42 ನಂಬ್ರ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯಾರೋ ಪ್ರಯಾಣಿಕ 10 ಸಾವಿರ ರೂಪಾಯಿಗಳ ನಗದನ್ನು ಬಸ್ಸಿನಲ್ಲೇ ಬಿಟ್ಟು ಹೋಗಿದ್ದರು.
ತೊಕ್ಕೊಟ್ಟುವಿನಲ್ಲಿ ಬಸ್ ಸೀಟಿನಲ್ಲಿದ್ದ ಈ ಹಣವನ್ನು ಗಮನಿಸಿದ ಬಸ್ ನಿರ್ವಾಹಕ ಅಲ್ತಾಫ್ ಮತ್ತು ಚಾಲಕ ದಿನಕರ್ ಅವರು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಬಂದು ಆಯುಕ್ತರಾದ ಎನ್ ಶಶಿ ಕುಮಾರ್ ಅವರಿಗೆ ಹಸ್ತಾಂತರ ಮಾಡಿದ್ದಾರೆ.
ಬಸ್ ಸಿಬಂದಿಯ ಪ್ರಮಾಣಿಕತೆಗೆ ಪೊಲೀಸ್ ಕಮಿಷನರ್ ಶ್ಲಾಘನೆ ವ್ಯಕಪಡಿಸಿದ್ದಾರೆ.