Connect with us

    DAKSHINA KANNADA

    ಖಾಸಗಿ ಬಸ್ ಚಾಲಕ, ನಿರ್ವಾಹಕನ ದುರ್ನಡತೆ- ಮಹಿಳೆಯ ದೂರು

    Published

    on

    ಮಂಗಳೂರು: ಮಂಗಳೂರಿನ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಕೀಲೆಯೊಬ್ಬರಿಗೆ ಕಂಡೆಕ್ಟರ್ ಇತರ ಪ್ರಯಾಣಿಕರ ಸಮ್ಮುಖ ನಿಂದಿಸಿ ಮಾನಸಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ಪ್ರಯಾಣಿಕೆ ಕದ್ರಿ ಠಾಣೆಗೆ ದೂರು ನೀಡಿದ್ದಾರೆ.

    ದೇರಳಕಟ್ಟೆ ಸಮೀಪದ ಜಲಾಲ್‌ಬಾಗ್ ನಿವಾಸಿಯಾಗಿರುವ ಕೆ.ಮುಫೀದಾ ರಹ್ಮಾನ್ ಅವರು ವೃತ್ತಿಯಲ್ಲಿ ವಕೀಲೆಯಾಗಿದ್ದು, ನಗರದಲ್ಲಿ  ಕಾರ್ಯನಿರ್ವಹಿಸುತ್ತಿದ್ದಾರೆ. ಸೋಮವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಮುಫೀದಾ ರಹ್ಮಾನ್ ಅವರು ಪಿವಿಎಸ್ ಸರ್ಕಲ್ ಬಳಿ ಬೋಂದೆಲ್‌ನಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ತೆರಳುವ ರೂಟ್ ನಂಬ್ರ 19ರ ‘ಆ್ಯಶೆಲ್’ ಎಂಬ ಹೆಸರಿನ ಖಾಸಗಿ ಬಸ್ಸಿಗೆ ಹತ್ತುವ ವೇಳೆ ಚಾಲಕನು ಅಜಾಗರೂಕತೆಯಿಂದ ಮುಂದಕ್ಕೆ ಚಲಾಯಿಸಿದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ತಾನು ಬಸ್ಸಿನಿಂದ ಕೆಳಕ್ಕೆ ಬೀಳುವ ಸ್ಥಿತಿಯಲ್ಲಿದ್ದು, ಬೊಬ್ಬೆ ಹಾಕಿದೆ. ಆಗ ಕಂಡೆಕ್ಟರ್ ಉಡಾಫೆಯಾಗಿ ಮಾತನಾಡಿದ್ದಾನೆ. ಅವಾಚ್ಯವಾಗಿ ತನ್ನನ್ನು ನಿಂದಿಸಿದ್ದಾನೆ ಎಂದು ಪ್ರಯಾಣಿಕೆ ಮುಫೀದಾ ಕದ್ರಿ ಠಾಣೆಗೆ ದೂರು ನೀಡಿದ್ದಾರೆ. ಮಾನಸಿಕ ಕಿರುಕುಳ ನೀಡಿದ ಕಂಡೆಕ್ಟರ್ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ವಕೀಲೆ ಮುಫೀದಾ ರಹ್ಮಾನ್ ಒತ್ತಾಯಿಸಿದ್ದಾರೆ. ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಸುಬ್ರಹ್ಮಣ್ಯ: ಅನ್ಯಕೋಮಿನ ಯುವಕನಿಂದ ಮೆಸೇಜ್; ಯುವಕರಿಂದ ಹಲ್ಲೆ

    Published

    on

    ಸುಬ್ರಹ್ಮಣ್ಯ: ಅನ್ಯಕೋಮಿನ ಯುವಕನೋರ್ವ ವಿದ್ಯಾರ್ಥಿನಿಗೆ ಮೆಸೇಜ್ ಮಾಡಿದ್ದಾನೆ ಎಂದು ಆರೋಪಿಸಿ ತಂಡವೊಂದು ಹಲ್ಲೆ ಮಾಡಿದ ಘಟನೆ ಸುಬ್ರಹ್ಮಣ್ಯದ ಗುತ್ತಿಗರುವಿನಲ್ಲಿ ನಡೆದಿದೆ.

    ಥಳಿತಕ್ಕೊಳಗಾದ ಯುವಕ ಆಸ್ಪತ್ರೆಗೆ ದಾಖಲಾಗಿ‌ ಚಿಕಿತ್ಸೆ ಪಡೆಯುತ್ತಿದ್ದಾನೆ.

    ನಿಯಾಝ್ ಎಂಬಾತ ಹಲ್ಲೆಗೊಳಗಾದ ಯುವಕ.

    ಸ್ಥಳೀಯ ಯುವತಿಯೋರ್ವಳಿಗೆ ನಿಯಾಝ್ ಮೆಸೇಜ್ ಮಾಡುತ್ತಿರುವುದಾಗಿ ತಿಳಿದು ಬಂದ ಬಳಿಕ, ಅವನನ್ನು ಕರೆಸಿಕೊಂಡ ಯುವಕರ ತಂಡವೊಂದು ಹಲ್ಲೆ ನಡೆಸಿದ್ದಾರೆ.

    ಈ ಪ್ರಕರಣದ ಕುರಿತು, ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ತಾರಾನಾಥ ಮುಗೇರ ನಿಗೂಢ ಸಾ*ವು ಪ್ರಕರಣಕ್ಕೆ ಟ್ವಿಸ್ಟ್; ಅಕ್ಕನಿಂದಲೇ ಹ*ತ್ಯೆ!

    Published

    on

    ಮಂಗಳೂರು : ಅನುಮಾನಾಸ್ಪದ ರೀತಿಯಲ್ಲಿ ಸಾ*ವಿಗೀಡಾಗಿದ್ದ ಕಟೀಲು ಗಿಡಿಗೆರೆ ನಿವಾಸಿಯ ಸಾ*ವು ಆತ್ಮಹ*ತ್ಯೆಯಲ್ಲ ಕೊ*ಲೆ ಎಂಬುದನ್ನು ಬಜಪೆ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

    ಕಟೀಲು ಗಿಡಿಗೆರೆ ನಿವಾಸಿ ತಾರಾನಾಥ ಮುಗೇರ (40) ಎಂಬವರ ಶ*ವ ಅವರ ಮನೆಯಿಂದ ಸುಮಾರು 100ಮೀ. ದೂರದಲ್ಲಿ ಭಾನುವಾರ ಅ.27ರಂದು  ಪತ್ತೆಯಾಗಿತ್ತು. ಪ್ರಕರಣದ ಸಂಶಯದ ಸುಳಿವುಗಳ ಜಾಡು ಹಿಡಿದು ತನಿಖೆ ಮುಂದುವರಿಸಿದ ಬಜಪೆ ಪೊಲೀಸರು ತಾರಾನಾಥರ ದೊಡ್ಡಪ್ಪನ ಮಗಳನ್ನು ಬಂಧಿಸಿದ್ದಾರೆ.

    ದೇವಕಿ (42) ಬಂಧಿತ ಆರೋಪಿ. ದೇವಕಿ ಅವಿವಾಹಿತೆಯಾಗಿದ್ದು,  ವಿಚಾರಣೆಯ ವೇಳೆ ಆಕೆಯ ಮೇಲೆ ಸಂಶಯ ದೃಢಪಟ್ಟ ಹಿನ್ನೆಲೆ ಆಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

     ಕೊ*ಲೆಯಾಗಿದ್ದು ಹೇಗೆ ?

    ತಾರಾನಾಥರಿಗೆ ಕುಡಿತದ ಚಟವಿತ್ತು. ಆತ ಮನೆಯವರಿಗೂ ಹಾಗೂ ಆರೋಪಿ ದೇವಕಿಗೂ ಕಿರುಕು*ಳ ನೀಡುತ್ತಿದ್ದ ಎನ್ನಲಾಗಿದೆ. ಹೆದರಿಸುವ ಸಲುವಾಗಿ ತಾರಾನಾಥ ತನ್ನ ಮನೆಯ ಪಕ್ಕವೇ ಇರುವ ದೊಡ್ಡಪ್ಪನ ಮನೆಯ ಬಟ್ಟೆ ಒಣಗಿಸಲು ಕಟ್ಟಿದ್ದ ಕೇಬಲನ್ನು ತಂದು ಕುತ್ತಿಗೆಗೆ ಬಿಗಿದುಕೊಂಡಿದ್ದ ವೇಳೆ ದೇವಕಿ ಅದನ್ನು ಜೋರಾಗಿ ಬಿಗಿದಾಗ ಆತ ಮೃ*ತಪಟ್ಟಿದ್ದರು ಎನ್ನಲಾಗಿದೆ.

    ಇದನ್ನೂ ಓದಿ : ಕಡಬ : ಶಸ್ತ್ರಚಿಕಿತ್ಸೆ ನಡೆಯುತ್ತಿರುವಾಗಲೇ ಹೃ*ದಯಾಘಾತದಿಂದ ವ್ಯಕ್ತಿ ಸಾ*ವು

    ಶನಿವಾರ ರಾತ್ರಿ 7 ಗಂಟೆಯ ಬಳಿಕ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಜೋಡಿಸಿ ಇಟ್ಟಿದ್ದ ಚಪ್ಪಲಿ, ಸ್ಥಳ ಮಹಜರು ವೇಳೆ ಧೃಡಪಟ್ಟ ಅಂಶಗಳಿಂದ ಪ್ರಕರಣದ ಸುಳಿವು ಸಿಕ್ಕಿತ್ತೆನ್ನಲಾಗಿದೆ. ಪ್ರಕರಣದಲ್ಲಿ ತಾರಾನಾಥನ ಸಹೋದರನನ್ನು ಕೂಡ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು.

    Continue Reading

    DAKSHINA KANNADA

    ದೀಪಾವಳಿ ಹಬ್ಬದ ಪ್ರಯುಕ್ತ ಕ್ಯಾಥೋಲಿಕ್ ಸಭೆಯಿಂದ ರಾಮಕೃಷ್ಣ ಮಿಷನ್ ಆಶ್ರಮಕ್ಕೆ ಭೇಟಿ

    Published

    on

    ಮಂಗಳೂರು : ದೀಪಾವಳಿ ಹಬ್ಬದ ಪ್ರಯುಕ್ತ ಮಂಗಳೂರಿನ ಧರ್ಮಪ್ರಾಂತ್ಯದ ಲೇ ಫೇಯ್ತ್‌ಫುಲ್ ಕಮಿಷನ್‌ನ ಪ್ರಮುಖ ಸದಸ್ಯರು, ಕ್ಯಾಥೋಲಿಕ್ ಸಭಾದ ಮುಖಂಡರು ಮತ್ತು ಇತರ ಪ್ರತಿನಿಧಿಗಳೊಂದಿಗೆ ಮೋರ್ಗಾನ್ಸ್ ಗೇಟ್‌ನಲ್ಲಿರುವ ರಾಮಕೃಷ್ಣ ಮಿಷನ್ ಆಶ್ರಮಕ್ಕೆ ಭೇಟಿ ನೀಡಿದರು.

    ಆಶ್ರಮದ ಮುಖ್ಯಸ್ಥ ಶ್ರೀ ಜಿತಕಾಮನಂದಗಿ ಸ್ವಾಮೀಜಿ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ ಮಾತನಾಡಿ, ಓಂ ಅಸತೋ ಮಾ ಸದ್‌ ಗಮಯ ತಮಸೋ ಮಾ ಜ್ಯೋತಿರ್‌ ಗಮಯ ಮೃತ್ಯೋರ್‌ ಮಾಮ್ರತಂ ಗಮಯ ಓಂ ಶಾಂತಿಃ ಶಾಂತಿಃ ಶಾಂತಿಃ” ಎಂಬಂತೆ ನಮ್ಮನ್ನು ಅಸತ್ಯದಿಂದ ಸತ್ಯದ ಕಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಮತ್ತು ಸಾವಿನಿಂದ ಅಮರತ್ವಕ್ಕೆ ಕರೆದೊಯ್ಯಿರಿ. ಈ ಸಂದೇಶವು ಇಂದಿನ ಸಮಾಜದಲ್ಲಿ ಸಹೋದರತ್ವ, ಶಾಂತಿ ಮತ್ತು ಸಂತೋಷವನ್ನು ಹರಡುವ ಹಂಚಿಕೆಯ ಗುರಿಯನ್ನು ಒತ್ತಿಹೇಳುತ್ತದೆ ಎಂದರು.

    ಕಾರ್ಯಕ್ರಮ ಆಯೋಜಿಸಿದ್ದ ದಿಲ್‌ರಾಜ್ ಆಳ್ವ ದೀಪಾವಳಿಯ ಮೌಲ್ಯಗಳನ್ನು ಪ್ರತಿಧ್ವನಿಸುವ ಸ್ಮರಣೀಯ ಅನುಭವವನ್ನು ಹಂಚಿಕೊಂಡರು. ಧರ್ಮಪ್ರಾಂತ್ಯದ ಲೇ ಫೇತ್‌ಫುಲ್ ಆಯೋಗದ ಕಾರ್ಯದರ್ಶಿ ರೆ.ಫಾ. ಜೆ.ಬಿ.ಕ್ರಾಸ್ತಾ, ಮಂಗಳೂರು ಧರ್ಮಪ್ರಾಂತ್ಯದ ಕೆಥೋಲಿಕ್ ಸಭಾದ ಅಧ್ಯಕ್ಷ ಅಲ್ವಿನ್ ಡಿಸೋಜಾ, ಪ್ರಸಿದ್ಧ ಸಾಮಾಜಿಕ ಸಂಯೋಜಕ ಡಾ. ಮಿಥುನ್ ಸಿಕ್ವೇರಾ,  ಆರೋಗ್ಯ ಸೇವಾ ಕ್ಷೇತ್ರದ ಸ್ವಯಂಸೇವಕ ಬಸವರಾಜು ಉಪಸ್ಥಿತರಿದ್ದರು.

    ಇದನ್ನೂ ಓದಿ : ಬಲಗೈ ಬಿಟ್ಟು ಎಡಕೈಗೆಯೇ ಯಾಕೆ ವಾಚ್ ಕಟ್ಟುವುದು ಗೊತ್ತಾ ?

    ಸ್ವಾಮೀಜಿಯೊಂದಿಗೆ ಸಾಂಕೇತಿಕ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು ಸಮುದಾಯಗಳ ನಡುವೆ ಐಕ್ಯತೆ ಸಾರಲಾಯಿತು.

    Continue Reading

    LATEST NEWS

    Trending