Wednesday, November 30, 2022

ಮಂಗಳೂರು ಆಟೋ ಬಾಂಬ್ ಸ್ಫೋಟ ಸ್ಥಳಕ್ಕೆ ಭೇಟಿ ನೀಡಿದ ಉಸ್ತುವಾರಿ ಸಚಿವ ಸುನಿಲ್-ಸ್ಫೋಟಿತ ರಿಕ್ಷಾ ಪೊಲೀಸ್ ವಶಕ್ಕೆ

ಮಂಗಳೂರು:  ಆಟೋ ರಿಕ್ಷಾ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳಕ್ಕೆ ದ‌.ಕ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಾಗುರಿ ಬಳಿಯ ಬಾಂಬ್ ಸ್ಪೋಟದ ಜಾಗಕ್ಕೆ ಭೇಟಿ ನೀಡಿದ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಕಂಕನಾಡಿ ಪೊಲೀಸರಿಂದ ಮಾಹಿತಿ ಪಡೆದರು.

ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು ‘ಎನ್‌ಐಎ ಘಟಕ ನಿರ್ಮಾಣ ಆಗಲು ಏನೇನು ನಿಬಂಧನೆಗಳು ಇದೆಯೋ ಅದನ್ನು ಪರಿಶಿಲನೆ ಮಾಡಲಾಗ್ತಿದೆ. ಆದ್ರೆ ಅದಕ್ಕೂ ಮೊದಲು ಈ ರೀತಿಯ ಘಟನೆಗಳನ್ನು ಆಗದಂತೆ ಎಚ್ಚರ ವಹಿಸಲಾಗುತ್ತಿದೆ. ಕರ್ನಾಟಕದ ಮಾತ್ರವಲ್ಲ ದೇಶದ ಯಾವ ಭಾಗದಲ್ಲೂ ಕೂಡಾ ಇಂತಹ ಘಟನೆ ನಡೀಬಾರದು.

ಇಂತಹ ಭಯೋತ್ಪಾದಕ ಕೃತ್ಯವನ್ನು ಮಟ್ಟ ಹಾಕಲು ಸರ್ಕಾರ ಯಾವಾಗ್ಲೂ ಸನ್ನದ್ಧ ಎಂದು ದೇಶದ ಪ್ರಧಾನಿಯೇ ಹೇಳಿದ್ದಾರೆ.

ಈ ಘಟನೆಯನ್ನು ಎಚ್ಚರಿಕೆಯಿಂದ ನಿಭಾಯಿಸುವಲ್ಲಿ ಸಮಾಜ ಕೂಡಾ ಎದ್ದು ನಿಲ್ಲಬೇಕು. ರಿಕ್ಷಾ ಚಾಲಕರ ಚಿಕಿತ್ಸಾ ವೆಚ್ಚವನ್ನು ಸರ್ಕಾರ, ಪಕ್ಷದ ಮುಖಂಡರು ಸೇರಿ ನಾವೇ ಭರಿಸುತ್ತೇವೆ’ ಎಂದು ಹೇಳಿದರು.

ಇನ್ನು ಸ್ಪೋಟವಾದ ಆಟೋ ರಿಕ್ಷಾವನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದುಕೊಂಡಿದ್ದಾರೆ ಎಂಬಂತಹ ಮಾಹಿತಿ ಲಭ್ಯವಾಗಿದೆ. ಸಚಿವರ ಜೊತೆ ದ.ಕ ಜಿಲ್ಲಾಧಿಕಾರಿ ರವಿಕುಮಾರ್, ಮೇಯರ್ ಜಯಾನಂದ ಅಂಚನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics

ಕುಂಬ್ಳೆ ಸುಂದರ್ ರಾವ್ ನಿಧನಕ್ಕೆ ನಳಿನ್ ಕುಮಾರ್ ಕಟೀಲ್ ಸಂತಾಪ..!

ಮಂಗಳೂರು :  ಐದು ದಶಕಗಳ ಕಾಲ ಯಕ್ಷಗಾನ ಕ್ಷೇತ್ರಕ್ಕೆ ಅಪ್ರತಿಮ ಸೇವೆ ಸಲ್ಲಿಸಿದ ಕುಂಬ್ಳೆ ಸುಂದರ ರಾವ್ ಅವರ ಅಗಲುವಿಕೆಯಿಂದ ಯಕ್ಷರಂಗ ಮಹಾನ್ ಕಲಾವಿದನನ್ನು ಕಳೆದುಕೊಂಡಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ , ಸಂಸದ...

15,000 ಶಿಕ್ಷಕರ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಹೈಕೋರ್ಟ್ ತಡೆಯಾಜ್ಞೆ..!

ಬೆಂಗಳೂರು : ರಾಜ್ಯದ ವಿವಿಧ ಶಾಲೆಗಳಲ್ಲಿ ಖಾಲಿಯಿರುವ 15 ಸಾವಿರಪದವೀಧರ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿತ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.ಹದಿನೈದು ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ...

ಸ್ನೇಹಿತರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡ್ತೇನೆ ಎಂದಿದ್ದ ಪ್ರವೀಣ್ ಶವ ಗುರುವಾಯನಕೆರೆಯಲ್ಲಿ ಪತ್ತೆ…!

ಬೆಳ್ತಂಗಡಿ : ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದೇನೆ ಎಂದು ಗೆಳೆಯರಿಗೆ ಕರೆ ಮಾಡಿ ಹೇಳಿದ್ದ ಆಟೋ ರಿಕ್ಷಾ ಚಾಲಕನ ಮೃತದೇಹ ಗುರುವಾಯನಕೆರೆಯಲ್ಲಿ ಪತ್ತೆಯಾಗಿದೆ.ಮೃತರನ್ನು ಸ್ಥಳೀಯ ಆಟೊ ರಿಕ್ಷಾ ಡ್ರೈವರ್ ಪ್ರವೀಣ್ ಎಂದು ಗುರುತಿಸಲಾಗಿದ್ದು, ಇವರು...