Tuesday, March 28, 2023

ಹೊಸ ಯಕ್ಷಗಾನ ಪ್ರಸಂಗಗಳಿಗೆ ಅನ್ವಯವಾಗಲಿದೆ ಕೃತಿಸ್ವಾಮ್ಯ ಕಾಯ್ದೆ-ಪೆರ್ಡೂರು ಮೇಳ ಆಟದ ಅನಧಿಕೃತ ಚಿತ್ರೀಕರಣಕ್ಕೆ ನಿರ್ಬಂಧ..!

ಉಡುಪಿ: ಬಡಗುತಿಟ್ಟಿನ ಶ್ರೀಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಈ ವರ್ಷ ಪ್ರದರ್ಶಿಸುವ ಹೊಸ ಯಕ್ಷಗಾನ ಪ್ರದರ್ಶನಗಳ ಅನಧಿಕೃತ ಚಿತ್ರೀಕರಣವನ್ನು ನಿರ್ಬಂಧಿಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತಕ್ರಮದ ಎಚ್ಚರಿಕೆ ನೀಡಿದೆ.


ಇದುವರೆಗೆ ಸಿನಿಮಾ, ನಾಟಕ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದ್ದ ಕೃತಿಸ್ವಾಮ್ಯ ಕಾಯ್ದೆಯನ್ನು ಇದೀಗ ಯಕ್ಷಗಾನ ಪ್ರದರ್ಶನಕ್ಕೂ ಅನ್ವಯವಾಗುವಂತೆ ಜಾರಿಗೊಳಿಸಲಾಗುತ್ತಿದೆ. ಬಡಗುತಿಟ್ಟಿನ ಡೇರೆ ಮೇಳವಾದ ಪೆರ್ಡೂರು ಮೇಳ ಈಗಾಗಲೇ ಈ ವರ್ಷದ ತನ್ನ ತಿರುಗಾಟವನ್ನು ಪ್ರಾರಂಭಿಸಿದೆ.

ಪೆರ್ಡೂರು ಮೇಳ ಈ ವರ್ಷ ಪ್ರೊ.ಪವನ್ ಕಿರಣ್‌ಕೆರೆ ಅವರ ‘ಪಾವನ ತುಳಸಿ’ ಎಂಬ ಹೊಸ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸುತಿದ್ದು, ಇದರ ಪ್ರಥಮ ಪ್ರದರ್ಶನ ಇಂದು ಹೆರಂಜಾಲು ದೇವಸ್ಥಾನದಲ್ಲಿ ನಡೆದಿದೆ.

ಇದನ್ನು ಅನಧಿಕೃತವಾಗಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡದಂತೆ ಮುಂಜಾಗ್ರತಾ ಕ್ರಮವಾಗಿ ಇದನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲಾಗಿದೆ.ಇದಕ್ಕೆ ಸಂಬಂಧಿಸಿದಂತೆ ಪೆರ್ಡೂರು ಮೇಳದ ವತಿಯಿಂದ ಕರಪತ್ರ ವೊಂದನ್ನು ವ್ಯಾಪಕವಾಗಿ ಹರಿಯಬಿಡಲಾಗಿದೆ.

ಇದರಲ್ಲಿ ‘ನಮ್ಮ ಮಂಡಳಿಯ ಪ್ರದರ್ಶನಗಳ ವೀಡಿಯೋ ರೆಕಾರ್ಡ ಮಾಡುವಂತಿಲ್ಲ. ಕೃತಿ ಸ್ವಾಮ್ಯ ಕಾಯ್ದೆ 1957 ಸೆಕ್ಷನ್ 63ರ ಅಡಿಯಲ್ಲಿ ನಮ್ಮ ಪ್ರದರ್ಶನದ ಅನಧಿಕೃತ ವೀಡಿಯೋ ರೆಕಾರ್ಡಿಂಗ್, ಯೂಟ್ಯೂಬ್, ಫೇಸ್‌ಬುಕ್, ವಾಟ್ಸಪ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಎಚ್ಚರಿಸಲಾಗಿದೆ.‘

ಈ ಶಿಕ್ಷೆಯು ಆರು ತಿಂಗಳಿನಿಂದ ಒಂದು ವರ್ಷದವರೆಗೆ ಕಠಿಣ ಕಾರಾಗೃಹ ಶಿಕ್ಷೆ ಅಥವಾ 50,000ರೂ.ನಿಂದ 1,00,000ರೂ.ವರೆಗೆ ದಂಡವನ್ನು ಒಳಗೊಂಡಿರುತ್ತದೆ’ ಎಂದು ಕರಪತ್ರದಲ್ಲಿ ಎಚ್ಚರಿಸಲಾಗಿದೆ.

LEAVE A REPLY

Please enter your comment!
Please enter your name here

Hot Topics

puttur : ಉಪ್ಪಿನಂಗಡಿಯಲ್ಲಿ ಬೈಕುಗಳ ಮುಖಾಮುಖಿ ಢಿಕ್ಕಿ – ಓರ್ವ ಸ್ಥಳದಲ್ಲೇ ಮೃತ್ಯು..!

ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕಕ್ಕೆಪದವಿನಲ್ಲಿ ನಿನ್ನೆ ಸೋಮವಾರ ಸಂಜೆ ನಡೆದಿದೆ. ಪುತ್ತೂರು: ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ...

ಮಂಗಳೂರು : ಅಡ್ಯಾರ್ ಬಳಿ ಐಸ್ ಕ್ರೀಮ್ ದಾಸ್ತಾನು ಮಳಿಗೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಸೊತ್ತು ನಾಶ..!

ಮಂಗಳೂರು ಹೊರವಲಯದ ಅಡ್ಯಾರ್ ಬಳಿ ಐಸ್ ಕ್ರೀಮ್ ದಾಸ್ತಾನು ಮಳಿಗೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿದೆ.ಮಂಗಳೂರು : ಮಂಗಳೂರು ಹೊರವಲಯದ ಅಡ್ಯಾರ್ ಬಳಿ ಐಸ್ ಕ್ರೀಮ್ ದಾಸ್ತಾನು ಮಳಿಗೆಗೆ ಬೆಂಕಿ...

ಕಾರ್ಕಳ : ಅನಾರೋಗ್ಯದಿಂದ ಸಾವನ್ನಪ್ಪಿದ ಮನೆ ಮಗನ ಆಘಾತದಿಂದ ತಾಯಿ ಜೀವಾಂತ್ಯ..!

ಮಗನನ್ನು ಕಳೆದುಕೊಂಡ ನೋವಿನಲ್ಲಿ ತಾಯಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ ಸೋಮವಾರ ನಡೆದಿದೆ.ಕಾರ್ಕಳ : ಮಗನನ್ನು ಕಳೆದುಕೊಂಡ ನೋವಿನಲ್ಲಿ ತಾಯಿಯೊಬ್ಬರು...