Saturday, April 1, 2023

ಅಲ್ಲಾಹ್ ನಮಗೆ ಮೋದಿಯನ್ನು ಪ್ರಧಾನಿಯಾಗಿ ಕರುಣಿಸಲಿ ಮತ್ತು ನಮ್ಮ ದೇಶವಾಳಲಿ: ಪಾಕ್ ಪ್ರಜೆ ಹೇಳಿಕೆ ವೈರಲ್

 ಪಾಕಿಸ್ತಾನದ ಪ್ರಜೆಯೊಬ್ಬ ನಮಗೆ ಅಲ್ಲಾಹ್ ಮೋದಿಯನ್ನು ನೀಡಲಿ ಅವರು ಈ ದೇಶದ ಸ್ಥಿತಿಯನ್ನು ಸರಿಪಡಿಸುತ್ತಾರೆ ಎಂದು ಹೇಳಿಕೆ ನೀಡಿದ್ದು, ಅದೀಗ ಸಾಕಷ್ಟು ವೈರಲ್ ಆಗುತ್ತಿದೆ. 

ಪಾಕಿಸ್ತಾನದ ಪ್ರಜೆಯೊಬ್ಬ ನಮಗೆ ಅಲ್ಲಾಹ್ ಮೋದಿಯನ್ನು ನೀಡಲಿ ಅವರು ಈ ದೇಶದ ಸ್ಥಿತಿಯನ್ನು ಸರಿಪಡಿಸುತ್ತಾರೆ ಎಂದು ಹೇಳಿಕೆ ನೀಡಿದ್ದು, ಅದೀಗ ಸಾಕಷ್ಟು ವೈರಲ್ ಆಗುತ್ತಿದೆ.

ಪ್ರಧಾನಿ ಮೋದಿ ಹಾಗೂ ಅವರ ಸರ್ಕಾರವು ಕೈಗೊಳ್ಳುವ ಕ್ರಮಗಳು ವಿಶ್ವಮಾನ್ಯವಾಗಿವೆ.

ಜಗತ್ತಿನ ದೊಡ್ಡ ದೊಡ್ಡ ದೇಶಗಳ ನಾಯಕರು ಪ್ರಧಾನಿ ನರೇಂದ್ರ ಮೋದಿಯವರ ನಿಲುವುಗಳನ್ನು ಆಗಾಗ ಹೊಗಳುತ್ತಿರುತ್ತಾರೆ. ಇಂತಹ ಹೆಮ್ಮೆಯ ನುಡಿಗಳು ಭಾರತೀಯರಿಗೆ ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿವೆ.

ಆದರೀಗ ಭಾರತವನ್ನು ಕಂಡರೆ ಸಾಕು ಹೌಹಾರುತ್ತಿದ್ದ ನೆರೆಯ ಪಾಕಿಸ್ತಾನದ ಜನರು ಭಾರತವನ್ನು ಅದರಲ್ಲೂ ಮೋದಿಯನ್ನು ಹೊಗಳಿದ್ದು ಎಲ್ಲರಿಗೂ ಅಚ್ಚರಿಯನ್ನುಂಟುಮಾಡಿದೆ.

ಜಾಲತಾಣಗಳಲ್ಲಿ ಹರಿದಾಡುತ್ತಿರು ವಿಡಿಯೋದಲ್ಲಿ ಪಾಕಿಸ್ತಾನದ ಪ್ರಜೆ ‘ಮೋದಿ ನಮಗಿಂತ ಉತ್ತಮರು, ನಮಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಬೇಕು. ಅವರ ಹೊರತಾಗಿ ಬೇರೆ ಯಾರೂ ಬೇಡ. ಅವರು ಅಲ್ಲಿನ ಜನರನ್ನು ತುಂಬಾ ಗೌರವಿಸುತ್ತಾರೆ.

ಅವರು ಎಲ್ಲೋ ಇದ್ದರೆ ನಾವೆಲ್ಲೋ ಇದ್ದೇವೆ. ನಮಗೂ ಅವರಿಗೂ ಯಾವುದೇ ಹೋಲಿಕೆ ಇಲ್ಲ. ಅಲ್ಲಾಹೂ ನಮಗೆ ಬೇರೆನೂ ಕೊಡುವುದು ಬೇಡ ನರೇಂದ್ರ ಮೋದಿಯನ್ನು ಕೊಡಲಿ’ ಎಂದು ಹೇಳಿದ್ದಾನೆ.

LEAVE A REPLY

Please enter your comment!
Please enter your name here

Hot Topics