ಇಟವಾ: ಮದುವೆಯ ದಿನ ಮಂಟಪದಲ್ಲಿ ಮದುಮಗಳು ಮುಖಕ್ಕೆ ಧರಿಸಿದ್ದ ಮುಸುಕನ್ನು ತೆಗೆದು ವರನೊಬ್ಬ ಬೆಚ್ಚಿ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಇಟವಾದಲ್ಲಿ ನಡೆದಿದೆ.
ಈ ಬಗ್ಗೆ ಓಡಿ ಹೋಗಿ ಪೊಲೀಸ್ ಠಾಣೆಗೆ ದೂರು ನೀಡಲು ಬಯಸಿದ ವರನ ಧೋತಿಯನ್ನೇ ಬಿಚ್ಚಿದ್ದಾಳೆ.
ಶತ್ರುಘ್ನ ಸಿಂಗ್ ಎಂಬ ಯುವಕನಿಗಾಗಿ ಮನೆಯವರು ಹುಡುಗಿಯನ್ನು ನೋಡುತ್ತಿದ್ದರು.
ಆ ಸಂದರ್ಭದಲ್ಲಿ 20 ವರ್ಷದ ಹುಡುಗಿಯ ಫೋಟೋ ಅನ್ನು ಮದುವೆ ಬ್ರೋಕರ್ ಒಬ್ಬ ತೋರಿಸಿದ. ವಧು-ವರರು ಇಬ್ಬರೂ ನೋಡಿಕೊಂಡು ಜತೆಗೆ ಕುಟುಂಬದವರೂ ಮಾತುಕತೆ ನಡೆಸಿ ಮದುವೆಯನ್ನೂ ನಿಗದಿ ಮಾಡಲಾಯಿತು.
ಅಲ್ಲಿನ ಪದ್ಧತಿಯಂತೆ ಮದುಮಗಳ ಮುಖವನ್ನು ಮುಸುಕಿನಿಂದ ಮುಚ್ಚಲಾಗುತ್ತದೆ. ಅದೇ ರೀತಿ ಮದುಮಗಳ ಮುಖವನ್ನೂ ಮುಚ್ಚಲಾಗಿತ್ತು.
ನಂತರ ಮದುವೆ ಮಾಡುತ್ತಿರುವ ಸಂದರ್ಭದಲ್ಲಿ ವಧುವಿನ ಕೈಯನ್ನು ನೋಡಿ ವರನಿಗೆ ಏನೋ ಸಂದೇಹ ಬಂದಿದೆ. ಈ ವೇಳೆ ವಧುವಿನ ಮುಖದ ಮೇಲಿದ್ದ ಪರದೆ ತೆಗೆದು ಹೌಹಾರಿ ಹೋಗಿದ್ದಾನೆ.
ಏಕೆಂದರೆ ಅಲ್ಲಿ ಇದ್ದುದು ಸುಮಾರು 45 ವರ್ಷದ ಮಹಿಳೆ. ಈ ಮದುವೆಯನ್ನು ಅಲ್ಲಿಯೇ ನಿಲ್ಲಿಸಲಾಯಿತು. ತಮಗೆ ಮೋಸ ಮಾಡಿರುವುದಾಗಿ ತಿಳಿದ ಯುವಕ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಲು ಮಂಟಪದಿಂದಲೇ ಓಡಿಹೋಗುವ ಪ್ರಯತ್ನ ಮಾಡಿದ. ಆಗ ಮಹಿಳೆ ಮತ್ತು ಆಕೆಯ ಕಡೆಯವರು ಆತನ ಧೋತಿ ಬಿಚ್ಚಿದರು.
ನಂತರ ಬಲವಂತದಿಂದ ಈ ಮದುವೆಯನ್ನು ಮಾಡಿಸುವ ಪ್ರಯತ್ನ ಮಾಡಿದರು. ನಂತರ ತಿಳಿದದ್ದು ಈ ಮಹಿಳೆ ಗಂಡ ಬಿಟ್ಟವಳು ಹಾಗೂ ಇಬ್ಬರು ದೊಡ್ಡ ಮಕ್ಕಳ ತಾಯಿ ಎಂದು.
ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ ಕೂಡ ಮಾಡಲಾಯಿತು.
ಆದರೂ ಆತ ಬಿಡದೇ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಮಹಿಳೆ ಮತ್ತು ಮೋಸ ಮಾಡಿದ ಬ್ರೋಕರ್ ಮೇಲೆ ದೂರು ದಾಖಲಿಸಿದ್ದಾನೆ.