ಉಡುಪಿ: ಪಿಎಫ್‌ಐ ಹಾಗೂ ಅದರ ಸಹ ಸಂಘಟನೆಗಳಿಗೆ ದೇಶದಾದ್ಯಂತ ಕೇಂದ್ರದ ಗೃಹ ಸಚಿವಾಲಯವು ನಿರ್ಬಂಧ ವಿಧಿಸಿದ ಬೆನ್ನಲ್ಲೇ ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಇರುವ ಪಿಎಫ್ಐ ಸಂಘಟನೆಗೆ ಸೇರಿದ ಹಲವು ಕಚೇರಿಗಳನ್ನು ಸೀಝ್ ಮಾಡಲಾಗಿದೆ.
ಕಚೇರಿಯಲ್ಲಿದ್ದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ವಿಶೇಷ ಅಂದರೆ ಉಡುಪಿ ಜಿಲ್ಲೆಯಲ್ಲಿ ಪಿಎಫ್‌ಐ ಪ್ರತ್ಯೇಕ ಕಚೇರಿಗಳು ಇಲ್ಲ.
ಇದರ ಎಲ್ಲಾ ಕೆಲಸ ಕಾರ್ಯಗಳೂ ಎಸ್ ಡಿ ಪಿ ಐ ಕಚೇರಿಯಲ್ಲಿಯೇ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಎಸ್‌ಡಿಪಿಐ ಕಚೇರಿಗಳನ್ನೂ ಸೀಝ್ ಮಾಡಲಾಗಿದೆ.
ಉಡುಪಿಯ ಪಂದುಬೆಟ್ಟು ಮಸೀದಿ ಬಳಿಯ ಕಟ್ಟಡದಲ್ಲಿದ್ದ ಕಚೇರಿ, ಹೂಡೆ, ಗಂಗೊಳ್ಳಿಯ ಎಸ್ ಡಿ ಪಿ ಐ ಕಚೇರಿ ಸೀಜ್ ಮಾಡಲಾಗಿದೆ.
ಎಸ್ ಡಿ ಪಿ ಐ ನಾಯಕರಾದ ಬಶೀರ್ ಮತ್ತು ನಜೀರ್ ಮನೆಗೂ ದಾಳಿ ನಡೆಸಲಾಗಿದ್ದು, ಮನೆಗೆ ಬೇಗ ಹಾಕಿದ್ದ ಹಿನ್ನೆಲೆಯಲ್ಲಿ ಪೊಲೀಸರು ವಾಪಸ್ ಬಂದಿದ್ದಾರೆ.
ನಾಯರ್ ಕೆರೆ ಪರಿಸರದ ಮಸೀದಿ ಕಟ್ಟಡದಲ್ಲೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.