ಬಂಟ್ವಾಳ: ನಿಷೇಧಿತ ಸಂಘಟನೆಯಾದ ಪಿ.ಎಫ್.ಐ.ಹಾಗೂ ಎಸ್.ಡಿ.ಪಿ.ಐ ಕಚೇರಿಗೆ ಎ.ಸಿ.ಮದನ್ ಮೋಹನ್ ನೇತೃತ್ವದಲ್ಲಿ ಬಂಟ್ವಾಳ ತಾಲೂಕಿನ ನಾಲ್ಕು ಕಚೇರಿಗೆ ಇಂದು ಮುಂಜಾನೆ ವೇಳೆ ಬೀಗ ಹಾಕಿದ್ದಾರೆ.
ಸರಕಾರ ನಿಷೇಧ ಮಾಡಿದ ಬಳಿಕವೂ ಎಸ್.ಡಿ.ಪಿ. ಕಚೇರಿಯಲ್ಲಿ ಪಿ.ಎಫ್.ಐ.ಸಂಘಟನೆಯ ಕಾರ್ಯಕರ್ತರು ಜಮಾಯಿಸಿ ಕೆಲಸ ಕಾರ್ಯಗಳನ್ನು ನಡೆಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಕಚೇರಿಗಳಿಗೆ ಬೀಗ ಹಾಕಿ, ಸಂಘಟನೆಯ ಬೋರ್ಡ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಫರಂಗಿಪೇಟೆ, ಕೆಳಗಿನಪೇಟೆ ಮಂಚಿಯಲ್ಲಿರುವ ಕಚೇರಿ ಹಾಗೂ ಪರ್ಲಿಯಾದಲ್ಲಿ ಹಂಝ ಎಂಬವರ ಮನೆಯನ್ನು ಕಚೇರಿ ಮಾಡಿದ ಈ ನಾಲ್ಕು ಕಡೆಗಳಿಗೆ ಏಕಕಾಲದಲ್ಲಿ ಪೊಲೀಸರ ತಂಡ ಬೀಗ ಹಾಕಿದೆ.
ತಾಲೂಕಿನಲ್ಲಿರುವ ಎಸ್.ಡಿ.ಪಿ.ಐ ಕಚೇರಿಯಲ್ಲಿ ಪಿ.ಎಫ್.ಐ.ಸಂಘಟನೆಗೆ ಸೇರಿದ ವ್ಯಕ್ತಿಗಳ ಚಲನ ವಲನಗಳ ಹಿನ್ನೆಲೆಯಲ್ಲಿ ಬೀಗ ಜಡಿಯಲು ಎ.ಸಿ.ಮದನ್ ಮೋಹನ್ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ಮಾಡಲಾಗಿತ್ತು.
ಗ್ರಾಮಾಂತರ ಎಸ್.ಐ.ಹರೀಶ್ ನೇತೃತ್ವದಲ್ಲಿ ದಾಳಿ ನಡೆಸಿ ಕಚೇರಿ ಒಳಗೆ ಸಂಪೂರ್ಣ ಶೊದ ಕಾರ್ಯ ನಡೆಸಿದ ಬಳಿಕ ಬೀಗ ಹಾಕಲಾಯಿತು.
ತಹಶಿಲ್ದಾರ್ ಸ್ಮಿತಾರಾಮು, ಪೋಲೀಸ್ ಇನ್ಸ್ ಪೆಕ್ಟರ್ ಗಳಾದ ಟಿ.ಡಿ.ನಾಗರಾಜ್ , ವಿವೇಕಾನಂದ, ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್, ಕಂದಾಯ ನಿರೀಕ್ಷಕ ರಾಜೇಶ್ ಹಾಗೂ ನಗರ ಪೋಲೀಸ್ ಠಾಣಾ ಅಪರಾಧ ವಿಭಾಗದ ಎಸ್.ಐ.ಕಲೈಮಾರ್, ತಾಪಂ.ಇ.ಓ ರಾಜಣ್ಣ ನೇತೃತ್ವದ ನಾಲ್ಕು ತಂಡಗಳು ದಾಳಿ ನಡೆಸಿ ಕಾರ್ಯಚರಣೆ ನಡೆಸಿದ್ದಾರೆ.