BANTWAL
ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ರಚನೆ
ಬಂಟ್ವಾಳ ತಾಲೂಕಿನ ಮಾಣಿ ಪೆರಾಜೆಯ ವಿದ್ಯಾನಗರ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು.3ರಂದು ನೂತನ ಶಾಲಾ ಮಂತ್ರಿಮಂಡಲದ ರಚನೆ ಹಾಗೂ ಪ್ರಮಾಣವಚನ ಕಾರ್ಯಕ್ರಮ ನಡೆಯಿತು.
ಬಂಟ್ವಾಳ: ಬಂಟ್ವಾಳ ತಾಲೂಕಿನ ಮಾಣಿ ಪೆರಾಜೆಯ ವಿದ್ಯಾನಗರ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು.3ರಂದು ನೂತನ ಶಾಲಾ ಮಂತ್ರಿಮಂಡಲದ ರಚನೆ ಹಾಗೂ ಪ್ರಮಾಣವಚನ ಕಾರ್ಯಕ್ರಮ ನಡೆಯಿತು.
ಶಾಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಾಲಾ ನಾಯಕರ ಪಾತ್ರ ಅಪಾರ.
ಎಲ್ಲಾ ಶಾಲಾ ಮಂತ್ರಿಗಳು ತಮ್ಮ ಖಾತೆಗಳನ್ನು ವ್ಯವಸ್ಥಿತವಾಗಿ ಮುನ್ನಡೆಸಿ ಎಂದು ಕಾರ್ಯಕ್ರಮ ಅಧ್ಯಕ್ಷರು, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಶಾಲಾ ಸಂಚಾಲಕ ಪ್ರಹ್ಲಾದ್ ಶೆಟ್ಟಿ ಜೆ ಶುಭ ಹಾರೈಸಿದರು.
ಧನಾತ್ಮಕ ಟೀಕೆಗಳು ವ್ಯಕ್ತಿಯನ್ನು ಸದೃಢವಾಗಿ ಬೆಳೆಯಲು ಸಹಕರಿಸುತ್ತದೆ.
ಶಾಲಾ ನಾಯಕತ್ವ ವಿದ್ಯಾರ್ಥಿಗಳನ್ನು ಇನ್ನೂ ಜವಾಬ್ದಾರಿಯುತರನ್ನಾಗಿ ಮಾಡುತ್ತದೆ ಎಂದು ಶಾಲಾ ಆಡಳಿತಾಧಿಕಾರಿ ರವೀಂದ್ರ ರೈ ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ ಶೆಟ್ಟಿ ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.
ಶಾಲಾ ಪ್ರಧಾನಮಂತ್ರಿಯಾಗಿ 10ನೇ ತರಗತಿಯ ಪ್ರೇಕ್ಷ, ಉಪ ಪ್ರಧಾನಮಂತ್ರಿಯಾಗಿ 9ನೇ ತರಗತಿಯ ವರ್ಷಿತ್ ಬಿ.ಎಮ್, ಗೃಹ ಮಂತ್ರಿಯಾಗಿ ತರುಣ್ ಎಚ್ ಎಸ್, ಉಪ ಗೃಹ ಮಂತ್ರಿಯಾಗಿ 9ನೇ ತರಗತಿಯ ನಿವ್ಯ ರೈ, ಶಿಕ್ಷಣ ಮಂತ್ರಿಯಾಗಿ 10ನೇತರಗತಿಯ ಪ್ರಕೃತಿ ಶೆಟ್ಟಿ, ಉಪ ಶಿಕ್ಷಣ ಮಂತ್ರಿಯಾಗಿ 9ನೇ ತರಗತಿಯ ಸ್ವಸ್ತಿ, ಸಂವಹನ ಮಂತ್ರಿಯಾಗಿ 10ನೇತರಗತಿಯ ಧೀರಜ್, ಉಪ ಸಂವಹನ ಮಂತ್ರಿಯಾಗಿ 8ನೇ ತರಗತಿಯ ಪ್ರಗತಿ, ಸಾಂಸ್ಕೃತಿಕ ಮಂತ್ರಿಯಾಗಿ 10ನೇತರಗತಿಯ ಮಾನ್ಯ ಆರ್ ಶೆಟ್ಟಿ, ಉಪ ಸಾಂಸ್ಕೃತಿಕ ಮಂತ್ರಿಯಾಗಿ 9ನೇ ತರಗತಿಯ ಆಶ್ರಯ್ ಎಲ್, ಕ್ರೀಡಾ ಮಂತ್ರಿಯಾಗಿ 9ನೇ ತರಗತಿಯ ತನ್ವಿತ್ ಸಿ.ಜಿ, ಉಪ ಕ್ರೀಡಾ ಮಂತ್ರಿಯಾಗಿ 8ನೇ ತರಗತಿಯ ಮೊಹಮ್ಮದ್ ಸಹಲ್, ಸ್ವಾಸ್ಥ್ಯ ಮತ್ತು ಆರೋಗ್ಯ ಮಂತ್ರಿಯಾಗಿ 10ನೇ ತರಗತಿಯ ವೃದ್ಧಿ ಕೊಂಡೆ, ಉಪ ಸ್ವಾಸ್ಥ್ಯ ಮತ್ತು ಆರೋಗ್ಯ ಮಂತ್ರಿಯಾಗಿ 9ನೇ ತರಗತಿಯ ಸಿಂಚನಶ್ರೀ, ವಿದ್ಯುತ್ ಮತ್ತು ಸಂಪನ್ಮೂಲ ಮಂತ್ರಿಯಾಗಿ 9ನೇ ತರಗತಿಯ ವರುಣ್, ಉಪ ವಿದ್ಯುತ್ ಮತ್ತು ಸಂಪನ್ಮೂಲ ಮಂತ್ರಿಯಾಗಿ 8ನೇ ತರಗತಿಯ ಶ್ರೀನಿಧಿ ಪಿ ಕೆ ಪ್ರಮಾಣವಚನ ಸ್ವೀಕರಿಸಿದರು.
ಕಾರ್ಯಕ್ರಮವನ್ನು ಜಯಶ್ರೀ ಆಚಾರ್ಯ ಸ್ವಾಗತಿಸಿ, ಅಶ್ವಿನಿ ಪಿ ಆರ್ ವಂದಿಸಿ, ಲೀಲಾ ಕಾರ್ಯಕ್ರಮ ನಿರೂಪಿಸಿದರು.
BANTWAL
Bantwala: ಹೃದಯ ಸಂಬಂಧಿ ಖಾಯಿಲೆಯಿಂದ 4 ವರ್ಷದ ಬಾಲಕಿ ನಿಧನ..!
ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ 4 ವರ್ಷದ ಪುಟ್ಟ ಬಾಲಕಿಯೋರ್ವಳು ಮೃತಪಟ್ಟ ಘಟನೆ ಸೆ.24ರಂದು ಬಂಟ್ವಾಳದ ಮಿತ್ತೂರಿನಲ್ಲಿ ನಡೆದಿದೆ.
ಬಂಟ್ವಾಳ: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ 4 ವರ್ಷದ ಪುಟ್ಟ ಬಾಲಕಿಯೋರ್ವಳು ಮೃತಪಟ್ಟ ಘಟನೆ ಸೆ.24ರಂದು ನಡೆದಿದೆ.
ಮೃತ ಬಾಲಕಿಯನ್ನು ಬಂಟ್ವಾಳ ಮಿತ್ತೂರು ಸಮೀಪದ ಪಾಟ್ರಕೋಡಿ ನಿವಾಸಿ ಇಬ್ರಾಹಿಂ ಬಾತಿಷಾ ರವರ ಪುತ್ರಿ ಜಮೀಲಾ ಸನಿಕ (4) ಎಂದು ತಿಳಿದು ಬಂದಿದೆ.
ಜಮೀಲಾ ಬಾಲಕಿ ಪುತ್ತೂರಿನ ಮುರದಲ್ಲಿರುವ ಅಲ್ ಬಿರ್ರ್ ಸ್ಕೂಲ್ ನ ಎಲ್.ಕೆ.ಜಿ. ಯಲ್ಲಿ ಕಲಿಯುತ್ತಿದ್ದಳು.
ಈಕೆ ಅನಾರೋಗ್ಯದಿಂದ ಇದ್ದು, ಬೆಂಗಳೂರಿನ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
BANTWAL
Bantwala: ಓವರ್ ಟೇಕ್ ಮಾಡಲು ಹೋದ ಟೆಂಪೋ ರಿಕ್ಷಾ – ಕರೆಂಟ್ ಕಂಬಕ್ಕೆ ಗುದ್ದಿದ ಬಸ್..!
ಬಂಟ್ವಾಳ: ಸರಕಾರಿ ಬಸ್ ಒಂದು ಓವರ್ ಟೇಕ್ ಮಾಡುತ್ತಿದ್ದ ಟೆಂಪೋ ರಿಕ್ಷಾವನ್ನು ತಪ್ಪಿಸಲು ಹೋಗಿ ಕರೆಂಟ್ ಕಂಬಕ್ಕೆ ಗುದ್ದಿದ ಘಟನೆ ಬಂಟ್ವಾಳದ ಸಜಿಪಮೂಡ ಗ್ರಾಮದ ಕಂದೂರು ಎಂಬಲ್ಲಿ ನಡೆದಿದೆ.
ಮೆಲ್ಕಾರಿನಿಂದ ಬರುತ್ತಿದ್ದ ಇಲ್ಯಾಸ್ ಟೆಂಪೋ ರಿಕ್ಷಾ ಚಾಲಕನು ಕಂದೂರಿನ ಬಜಾರ್ ಅಡಿಟೋರಿಯಮ್ ಬಳಿ ಬರುತ್ತಿದ್ದ ಆಕ್ಟಿವಾ ಗಾಡಿಯೊಂದನ್ನು ಓವರ್ ಟೇಕ್ ಮಾಡುತ್ತಿದ್ದ.
ಈ ವೇಳೆ ಮುಡಿಪು ಮಾರ್ಗವಾಗಿ ಬರುತ್ತಿದ್ದ ಕಾಸರಗೋಡು ಬಿ.ಸಿ.ರೋಡ್ ಬಸ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಬಸ್ ಗುದ್ದಿದ್ದ ರಭಸಕ್ಕೆ ಕರೆಂಟ್ ಕಂಬ ತುಂಡಾಗಿದೆ.
ಬಸ್ಸಿನಲ್ಲಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಪೋಲಿಸರು ಆಗಮಿಸಿ, ಪರಿಶೀಲನೆ ನಡೆಸಿದರು.
BANTWAL
Bantwala: ಕಾರುಗಳ ನಡುವೆ ಸರಣಿ ಅಪಘಾತ..!
ಪಾಣೆಮಂಗಳೂರು ಸೇತುವೆಯಲ್ಲಿ 2 ಕಾರುಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಸುಮಾರು ಒಂದು ತಾಸಿಗಿಂತಲೂ ಅಧಿಕವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆಯಾದ ಘಟನೆ ನಡೆದಿದೆ.
ಬಂಟ್ವಾಳ: ಪಾಣೆಮಂಗಳೂರು ಸೇತುವೆಯಲ್ಲಿ 2 ಕಾರುಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಸುಮಾರು ಒಂದು ತಾಸಿಗಿಂತಲೂ ಅಧಿಕವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆಯಾದ ಘಟನೆ ನಡೆದಿದೆ.
ಪಾಣೆಮಂಗಳೂರು ಸೇತುವೆಯಲ್ಲಿ ಎರಡು ಕಾರುಗಳು ಡಿಕ್ಕಿಯಾಗಿದ್ದು, ಇದರ ಹಿಂಬದಿಯಿಂದ ಬಂದ ಮತ್ತೆ ಎರಡು ವಾಹನಗಳು ಢಿಕ್ಕಿ ಯಾಗಿದೆ.
ಡಿಕ್ಕಿಯ ರಭಸಕ್ಕೆ ಎರಡು ಕಾರುಗಳು ಜಖಂಗೊಂಡಿದೆ.
ಆದರೆ ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯವಾಗದೆ ಪಾರಾಗಿದ್ದಾರೆ.
ಇದರ ಜೊತೆಗೆ ಸೇತುವೆ ಸಮೀಪ ನೆಹರು ನಗರ ಎಂಬಲ್ಲಿ ಲಾರಿಯೊಂದರ ಟಯರ್ ಕೆಟ್ಟು ಹೋಗಿ ನಿಂತಿತ್ತು.
ಹೀಗಾಗಿ ತಾಸುಗಟ್ಟಲೆ ವಾಹನಗಳು ಸಾಲಾಗಿ ನಿಂತಿದ್ದವು.
ಸೇತುವೆಯಲ್ಲಿ ಅಪಘಾತ ಸಂಭವಿಸಿದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.
ವಾಹನಗಳನ್ನು ಕ್ಲಿಯರ್ ಮಾಡಲು ಟ್ರಾಫಿಕ್ ಪೋಲೀಸರು ಹರಸಹಾಸ ಪಟ್ಟರು.
ಅಪಘಾತ ನಡೆದು ಕೆಲವೇ ಹೊತ್ತಿನಲ್ಲಿ ವಾಹನಗಳ ಸಾಲು ಸುಮಾರು ಉದ್ದಕ್ಕೆ ತಲುಪಿತ್ತು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾದ ಹಿನ್ನೆಲೆಯಲ್ಲಿ ವಾಹನ ಸವಾರರು ಪಾಣೆಮಂಗಳೂರು ಪೇಟೆ ಮೂಲಕ ಹಳೆ ಸೇತುವೆ ಮೂಲಕ ಸಂಚಾರಕ್ಕೆ ಪ್ರಯತ್ನ ಮಾಡಿದರಾದರೂ ಅಲ್ಲಿಯೂ ಟ್ರಾಫಿಕ್ ಸಮಸ್ಯೆ ಉಂಟಾಯಿತು.
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ವಾಹನಗಳು ಹೋಗಿ ಸಾಲು ಸಾಲಾಗಿ ನಿಂತಿರುವ ಪೋಟೋ ವೈರಲ್ ಆಗಿದೆ.
ರಾತ್ರಿ ಹೊತ್ತು ವಾಹನಗಳ ಲೈಟ್ ಮತ್ತು ನೇತ್ರಾವತಿ ನದಿಯ ನೀರು ಕಂಗೊಳಿಸುವ ಚಿತ್ರವನ್ನು ಪಾಣೆಮಂಗಳೂರು ಮಂಗಳೂರು ಹೊಸ ಸೇತುವೆಯಿಂದ ಕ್ಲಿಕ್ ಮಾಡಿದ್ದಾರೆ.
ಪೊಲೀಸ್ ಸಿಬ್ಬಂದಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಿದರು.
- DAKSHINA KANNADA6 days ago
Suratkal: ಸಮುದ್ರ ವಿಹಾರಕ್ಕೆ ತೆರಳಿದ ಮೂವರಲ್ಲಿ ಓರ್ವ ಸಮುದ್ರ ಪಾಲು..!
- BANTWAL6 days ago
Bantwala: ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು..!
- DAKSHINA KANNADA7 days ago
ಮೂಲ್ಕಿ: ಮಟ ಮಟ ಮಧ್ಯಾಹ್ನ ಮನೆಯ ಅಂಗಳಕ್ಕೆ ಬಂದು ಚೂರಿ ತೋರಿಸಿ ಚಿನ್ನದ ಕರಿಮಣಿ ಎಗರಿಸಿ ಪರಾರಿ..!
- LATEST NEWS5 days ago
Udupi: ಪತಿಗೆ ಮೆಣಸಿನ ಹುಡಿ ಮಿಶ್ರಿತ ಕುದಿಯುವ ನೀರು ಎರಚಿದ ಪತ್ನಿ..!