Connect with us

DAKSHINA KANNADA

ಮಂಗಳೂರು: ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್, ಇ- ಗ್ಯಾಜೆಟ್‌ಗಳು ನಿಷೇಧ: ದ.ಕ. ಜಿಲ್ಲಾಧಿಕಾರಿ ರವಿಕುಮಾರ್

Published

on

ಸಾರ್ವತ್ರಿಕ ಕರ್ನಾಟಕ ವಿಧಾನಸಭಾ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಮೇ 10ರಂದು ಚುನಾವಣೆ ನಡೆಯಲಿದ್ದು ಚುನಾವಣೆಯ ಮತ ಎಣಿಕೆ ಮೇ 13ರಂದು ಸುರತ್ಕಲ್‌ನಲ್ಲಿರುವ ಎನ್.ಐ.ಟಿ.ಕೆಯಲ್ಲಿ ನಡೆಯಲಿದೆ.

ಮಂಗಳೂರು: ಸಾರ್ವತ್ರಿಕ ಕರ್ನಾಟಕ ವಿಧಾನಸಭಾ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಮೇ 10ರಂದು ಚುನಾವಣೆ ನಡೆಯಲಿದ್ದು ಚುನಾವಣೆಯ ಮತ ಎಣಿಕೆ ಮೇ 13ರಂದು ಸುರತ್ಕಲ್‌ನಲ್ಲಿರುವ ಎನ್.ಐ.ಟಿ.ಕೆಯಲ್ಲಿ ನಡೆಯಲಿದೆ.

ಮತ ಎಣಿಕೆಯ ದಿನದಂದು ಜನಪ್ರತಿನಿಧಿಗಳು, ಚುನಾವಣಾ ಎಂಜೆಟರುಗಳು, ಮತ ಎಣಿಕೆ ಎಂಜೆಟ್‌ಗಳು, ಮತ ಎಣಿಕೆ ಕೇಂದ್ರಕ್ಕೆ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಮೇಲ್ವಿಚಾರಕರು, ಸಹಾಯಕರು, ಗ್ರೂಪ್ ಡಿ ಸಿಬ್ಬಂದಿ ಮತ್ತು ಇನ್ನಿತರ ಎಲ್ಲಾ ಸಿಬ್ಬಂದಿಗಳು ಮತ ಎಣಿಕೆ ಕೇಂದ್ರದ ಆವರಣದೊಳಗೆ ಪ್ರವೇಶಿಸುವಾಗ ಮೊಬೈಲ್, ಎಲೆಕ್ಟ್ರಾನಿಕ್ಸ್ ವಾಚ್, ಮತ್ತು ಇನ್ನಿತರೇ ಡಿಜಿಟಲ್ ತಂತ್ರಜ್ಞಾನದ ಉಪಕರಣಗಳೊಂದಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.

ಈ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಪ್ರಜಾಪ್ರಾತಿ ನಿಧಿ ಕಾಯಿದೆ 1951ರ ಕಲಂ 126 ಹಾಗೂ ಭಾರತೀಯ ದಂಡ ಸಂಹಿತೆಯ ಕಾಯಿದೆನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಹಾಗೂ ಜಿಲ್ಲಾಧಿಕಾರಿ ರವಿಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಾಳೆ ಸಾರ್ವಜನಿಕ ರಜೆ:

ಸಾರ್ವತ್ರಿಕ ಕರ್ನಾಟಕ ವಿಧಾನಸಭಾ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಮತದಾರರು ತಮ್ಮ ಹಕ್ಕು ಚಲಾಯಿಸಲು ಅನುಕೂಲವಾಗುವಂತೆ ಮೇ10ರ ಬುಧವಾರ ಸಾರ್ವಜನಿಕ ರಜೆ ಘೋಷಿಸಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳು, ಶಾಲೆಗಳು, ಕಾಲೇಜುಗಳು, ವಿವಿಧ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳಿಗೆ (ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು) ಮೇ 10ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಎಲ್ಲಾ ಸರಕಾರಿ ನೌಕರರು ಚುನಾವಣಾ ಕರ್ತವ್ಯ ನಿರ್ವಹಿಸಬೇಕು ಎಂದು ಡಿಪಿಎಆರ್‌ನ ಅಧೀನ ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಾಹಿತಿ ನೀಡಲು ಕೋರಿಕೆ:

ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಸ್ಥಳೀಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತದಾರರಲ್ಲದ ರಾಜಕೀಯ ಪ್ರಚಾರಕರು, ಕಾರ್ಯಕರ್ತರು, ಮುಖಂಡರು ಅಥವಾ ಇನ್ನಿತರೇ ರಾಜಕೀಯ ಸಂಬಂಧಿತ ವ್ಯಕ್ತಿಗಳು ಮೇ 8ರ ಸಂಜೆ 6 ಗಂಟೆಯೊಳಗೆ ಚುನಾವಣಾ ಕ್ಷೇತ್ರ ಬಿಟ್ಟು ಹೋಗಬೇಕಾಗುತ್ತದೆ.

ಒಂದೊಮ್ಮೆ ಯಾವುದೇ ಬಾರ್, ರೆಸ್ಟೋರೆಂಟ್, ಹೋಟೆಲ್, ಸಭಾಭವನ ಸಮುದಾಯ ಭವನ, ಕಲ್ಯಾಣ ಮಂಟಪ, ಅತಿಥಿಗೃಹ, ವಸತಿಗೃಹ, ಹೋಂ ಸ್ಟೇಗಳಲ್ಲಿ ಉಳಿದುಕೊಂಡಲ್ಲಿ ಅಂತವರಿಗೆ ಆಸ್ಪದವಿರುವುದಿಲ್ಲ.

ಮೇ 8ರ ಸಂಜೆ 6 ಗಂಟೆಯ ನಂತರ ಅನಧಿಕೃತವಾಗಿ ಉಳಿದುಕೊಂಡಲ್ಲಿ ಆ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬಹುದಾಗಿದೆ.

ಇದನ್ನು ಉಲ್ಲಂಘಿಸಿ ಆಶ್ರಯ ನೀಡುವ ಮಾಲಕರ ವಿರುದ್ಧ ಪ್ರಜಾಪ್ರತಿನಿಧಿಯ ಕಾಯಿದೆ 1951ರ ಕಲಂ 126 ಹಾಗೂ ಭಾರತೀಯ ದಂಡ ಸಂಹಿತೆ ಕಾಯಿದೆ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಇನ್ನೂ ಪತ್ತೆಯಾಗದ ಪುತ್ತೂರಿನ ಚೈತ್ರಾ ಹೆಬ್ಬಾರ್: ಪತ್ತೆಗಾಗಿ ಬೆಂಗಳೂರು- ಕೇರಳದಲ್ಲಿ ಹುಡುಕಾಟ

Published

on

ಪುತ್ತೂರು:  ಉಳ್ಳಾಲ ಕೋಟೆಕಾರ್ ಬಳಿಯ ಮಾಡೂರಿನ ಪಿಜಿಯಿಂದ ಫೆ.17 ರಂದು ನಾಪತ್ತೆಯಾಗಿದ್ದ ಚೈತ್ರಾ ಹೆಬ್ಬಾರ್ ಚಲಾಯಿಸಿದ ಸ್ಕೂಟರ್ ಫೆ.25ರಂದು ಸುರತ್ಕಲ್ ಬಳಿ ಪತ್ತೆಯಾಗಿದ್ದು, ಆದರೆ ಚೈತ್ರಾ ಇನ್ನೂ ಪತ್ತೆಯಾಗಿಲ್ಲ.

ಮಾಡೂರಿನ ಪಿಜಿ ಯಿಂದ ಫೆ.17 ರಂದು ಮುಂಜಾನೆ 9 ಗಂಟೆಗೆ ಚೈತ್ರಾ ಇದೇ ಸ್ಕೂಟರ್‌ನಲ್ಲಿ ತೆರಳಿದ್ದರು. ಬಳಿಕ ನಾಪತ್ತೆಯಾಗಿದ್ದ ಚೈತ್ರಾ ಸುಳಿವು ಸಿಗದೆ ಹಿನ್ನೆಲೆಯಲ್ಲಿ ಚೈತ್ರಾ ದೊಡ್ಡಪ್ಪ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಹಿಂದೂ ಸಂಘಟನೆಗಳೂ ಇದೊಂದು ಲವ್‌ ಜಿಹಾದ್ ಪ್ರಕರಣವೆಂದು ಆರೋಪಿಸಿ ಹೋರಾಟದ ಎಚ್ಚರಿಕೆ ನೀಡಿದ್ದವು. ಇದಾದ ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಇದೀಗ ಚೈತ್ರಾಳ ಸ್ಕೂಟರ್ ಪತ್ತೆಯಾಗಿದೆ. ಚೈತ್ರಾ ಪಿಜಿಯಿಂದ ಹೊರಟ ಬಳಿಕ ಪಂಪ್‌ವೆಲ್ ಬಳಿ ಮೊಬೈಲ್ ಆಫ್ ಮಾಡಿಕೊಂಡಿದ್ದು ಬಳಿಕ ಸುರತ್ಕಲ್‌ಗೆ ಬಂದು ಅಲ್ಲಿ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ದರು, ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿಸಿರುವ ಪೊಲೀಸರು ಶಂಕಿತ ಯುವಕನ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದ್ರೆ ಆತನ ಮೊಬೈಲ್ ಕೂಡಾ ಸ್ವಿಚ್‌ ಆಫ್ ಆಗಿರುವ ಕಾರಣ ಚೈತ್ರಾ ಆತನ ಜೊತೆಯಲ್ಲಿ ಹೋಗಿರುವ ಬಲವಾದ ಅನುಮಾನ ಮೂಡಿದೆ. ಕೇರಳ ಅಥವಾ ಬೆಂಗಳೂರಿಗೆ ಹೋಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Continue Reading

DAKSHINA KANNADA

ಮಸ್ಕತ್ ನಲ್ಲಿ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಸತ್ಯ ನಾರಾಯಣ ಪೂಜೆ

Published

on

ಮಸ್ಕತ್ : ‘ಬಿರುವ ಜವನೆರ್ ‘ ಸಂಘಟನೆ ಯು ಮಸ್ಕತ್ ನ ದಾರಸೈಟ್ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಪೂಜಾ ಸಹಿತ ‘ಶ್ರೀ ಸತ್ಯ ನಾರಾಯಣ ವೃತ ಮಹಾತ್ಮೆ’ ಕಥೆಯನ್ನು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಪ್ರಸ್ತುತಿಗೊಳಿಸಲಿದೆ.

ಹೊರರಾಷ್ಟ್ರದಲ್ಲಿ ಮೊದಲ ಬಾರಿ ಶನೀಶ್ವರ ಯಕ್ಷಗಾನ ಪ್ರದರ್ಶನ ಮಾಡಿದ ಕೀರ್ತಿ ಪಡೆದ ತಂಡದಿಂದ ಸತ್ಯನಾರಾಯಣ ಪೂಜಾ ಸಹಿತ ತಾಳಮದ್ದಳೆ ಸಂಪನ್ನಗೊಳ್ಳಲಿದೆ. ಮಾ.1ರಂದು ಶುಕ್ರವಾರ ಪೂರ್ವಾಹ್ನ  8.30 ರಿಂದ ಅಪರಾಹ್ನ 1.30 ರ ತನಕ ಶನೀಶ್ವರ ಪೂಜೆ ಖ್ಯಾತಿಯ ಶ್ರೀ ಶನೀಶ್ವರ ಭಕ್ತ ವೃಂದ, ಪಕ್ಷಿಕೆರೆ, ಮಂಗಳೂರು ತಂಡವು ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಇವರ ಸಂಯೋಜನೆ ಯಲ್ಲಿ ಪ್ರದರ್ಶನ ನೀಡಲಿದೆ.

ಕಳೆದ ಮೂರು ದಶಕಗಳಿಂದ ತಾಳಮದ್ದಳೆ ಕಾರ್ಯಕ್ರಮಗಳನ್ನು ದೇಶ ವಿದೇಶಗಳಲ್ಲಿ ನೀಡಿರುವ ತುಳುನಾಡಿನ ಈ ಖ್ಯಾತ ತಂಡವು ಕರ್ನಾಟಕ, ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಹಾಗೂ ದುಬೈ, ಅಬುದಾಬಿ, ಮಸ್ಕತ್ ರಾಷ್ಟ್ರಗಳಲ್ಲಿ ಪೂಜಾ ಸಹಿತ ಶನೀಶ್ವರ ತಾಳಮದ್ದಳೆ ನಡೆಸಿ ಜನಪ್ರಿಯತೆ ಗಳಿಸಿವೆ. ಈ ಪೂರ್ವದಲ್ಲಿ ‘ಬಿರುವ ಜವನೆರ್’ ಇದೇ ತಂಡದಿಂದ ಎರಡು ಬಾರಿ ಶನಿಪೂಜೆಯನ್ನು ಮಸ್ಕತ್ ನಲ್ಲಿ ಆಯೋಜಿಸಿ ಯಶಸ್ವಿಯಾಗಿದ್ದಾರೆ. ಈ ಸಂಘಟನೆಯು ಧಾರ್ಮಿಕ ಮತ್ತು ಸಮಾಜ ಸೇವಾ ಚಟುವಟಿಕೆಯನ್ನು ಕಳೆದ ಒಂದು ದಶಕದಿಂದ ನಡೆಸುತ್ತಿದೆ. ಹಿಮ್ಮೇಳ ದಲ್ಲಿ ಡಾ. ಪ್ರಖ್ಯಾತ್ ಶೆಟ್ಟಿ, ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ, ದಯಾನಂದ ಕೋಡಿಕಲ್ ಹಾಗೂ ಅರ್ಥಧಾರಿಗಳಾಗಿ ಕದ್ರಿ ನವನೀತ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು, ಸದಾಶಿವ ಆಳ್ವ ತಲಪಾಡಿ, ಶಶಿಕಾಂತ್ ಶೆಟ್ಟಿ ಕಾರ್ಲ, ಪ್ರಸನ್ನ ಶೆಟ್ಟಿ ಅತ್ತೂರ್ ಗುತ್ತು, ಮನೋಹರ ಕುಂದರ್ ಎರ್ಮಾಳ್, ಪ್ರಜ್ವಲ್ ಶೆಟ್ಟಿ ಗುರುವಾಯನಕೆರೆ, ನಿತಿನ್ ಹುಣಸೆಕಟ್ಟೆ ಭಾಗವಹಿಸಲಿದ್ದಾರೆ. ರವಿ ಭಟ್ ಪಡುಬಿದ್ರಿ ಅವರು ಪೂಜಾ ವ್ಯವಸ್ಥೆಯಲ್ಲಿ ಸಹಕರಿಸಲಿದ್ದಾರೆ. ಪೂಜೆಯ ನಂತರ ಪ್ರಸಾದ ಭೋಜನ ಹಾಗೂ ಸಂಜೆ 5.30 ರ ತನಕ ಕಲ್ಲಡ್ಕ ವಿಠ್ಠಲ ನಾಯ್ಕ್ ಅವರ ತಂಡ ದಿಂದ ‘ಗೀತಾ ಸಾಹಿತ್ಯ ಸಂಭ್ರಮ’ ಜರಗಲಿದೆ. ಮಸ್ಕತ್ ನಲ್ಲಿ ನೆಲೆಸಿರುವ ಎಲ್ಲಾ ಸಮುದಾಯದ ಭಕ್ತ ಭಾಂದವರು ಆಗಮಿಸಿ ಸಹಕರಿಸಬೇಕೆಂದು ಬಿರುವ ಜವನೆರ್ ಸಂಘಟಕರು ತಿಳಿಸಿದ್ದಾರೆ.

Continue Reading

DAKSHINA KANNADA

Puttur: ಬಸ್, ಬೈಕ್ ನಡುವೆ ಭೀಕರ ಅಪಘಾತ- ಬೈಕ್ ಸವಾರ ಸ್ಪಾಟ್ ಡೆತ್..!

Published

on

ಪುತ್ತೂರು: ಬಸ್‌ ಹಾಗೂ ಆ್ಯಕ್ಟಿವಾ ನಡುವೆ ಅಪಘಾತ ಸಂಭವಿಸಿ, ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಬಕದ ಪೋಳ್ಯದಲ್ಲಿ ನಡೆದಿದೆ.

ಮೃತಪಟ್ಟವರನ್ನು ನೆಹರುನಗರ ಮಾಸ್ಟರ್ ಪ್ಲಾನರಿ ಕಾರ್ಮಿಕ, ಅಳಕೆಮಜಲು ನಿವಾಸಿ ಕ್ಲಿಫರ್ಡ್ ಮೋರಸ್ ರಾಜಾ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಪುತ್ತೂರು ಟ್ರಾಫಿಕ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

LATEST NEWS

Trending