Thursday, February 2, 2023

ಮಂಗಳೂರು : ಉದ್ಯಮಿಗೆ ಹಲ್ಲೆ – ಜೀವ ಬೆದರಿಕೆ – ದೂರು ದಾಖಲು..!

ಮಂಗಳೂರು: ಮಂಗಳೂರು ನಗರದ ಬಂದರು ವ್ಯಾಪ್ತಿಯ ಉದ್ಯಮಿಗೆ ದುಷ್ಕರ್ಮಿಗಳ ತಂಡವೊಂದು ಜೀವ ಬೆದರಿಕೆಯೊಡ್ಡಿದ್ದು ಈ ಸಂಬಂಧ ಬಂದರು ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಬಂದರು ಪ್ರದೇಶದ ಪಟಾಕಿ ಅಂಗಡಿ ಮಾಲಕ ಮುರಳೀಧರ ಪೈಗೆ ರವಿವಾರ ಸಂಜೆ 6:30ಕ್ಕೆ ಕರೆ ಮಾಡಿದ ವ್ಯಕ್ತಿಯೊಬ್ಬ 5 ಲಕ್ಷ ರೂ. ಮೌಲ್ಯದ ಪಟಾಕಿ ಬೇಕಾಗಿದ್ದು, ನಗರದ – ಹೋಟೆಲ್  ಒಂದಕ್ಕೆ ಬರಬೇಕೆಂದು ಸೂಚಿಸಿದ್ದ ಎನ್ನಲಾಗಿದೆ. ಆದರೆ ಅಲ್ಲಿಗೆ ಬರಲು ಸಾಧ್ಯವಿಲ್ಲ ಎಂದು‌‌ ಮುರಳೀಧರ ಪೈ ತಿಳಿಸಿದ್ದರು ಎಂದು ಹೇಳಲಾಗಿದೆ.

ಸೋಮವಾರ ಮಧ್ಯಾಹ್ನ 2ಕ್ಕೆ ಮುರಳೀಧರ ಪೈ ತನ್ನ ಅಂಗಡಿಯಲ್ಲಿದ್ದಾಗ ತನ್ನ ಪರಿಚಯಸ್ಥರೇ ಆದ ದಿನೇಶ್ ಶೆಟ್ಟಿ ಹಾಗೂ ಇತರ 4 ಮಂದಿ‌ ಏಕಾಏಕಿ ಅಂಗಡಿಗೆ ನುಗ್ಗಿ 5 ಲಕ್ಷ ರು. ಹಣ ಕೊಡಬೇಕು, ಇಲ್ಲವಾದರೆ ಶೂಟ್ ಮಾಡಿ ಕೊಲ್ಲುವುದಾಗಿ ಬೆದರಿಕೆಯೊಡ್ಡಿ ಕೆನ್ನೆಗೆ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ ದೂರಿನಲ್ಲಿ ತಿಳಿಸಲಾಗಿದೆ.

ಈ ಕೃತ್ಯದ ಹಿಂದೆ ಭೂಗತ ಲೋಕದ ಪಾತಕಿಯೊಬ್ಬನ ಕೈವಾಡ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಬಂದರು ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಉಳ್ಳಾಲ ಕೊಲ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ : ಕೊಲೆ ಶಂಕೆ..!

ಉಳ್ಳಾಲ: ಯುವತಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲನಿ ಬಾಡಿಗೆ ಮನೆಯಲ್ಲಿ ನಡೆದಿದ್ದು, ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದರೂ ಬಾಯಿಗೆ ಬಟ್ಟೆಯನ್ನು...

ಪುತ್ತೂರು : ಪೋಳ್ಯದಲ್ಲಿ ಸ್ಕೂಟಿ- ಮಾರುತಿ ಓಮಿನಿ ಅಪಘಾತ – ಸವಾರ ಗಂಭೀರ..!

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹೊರವಲಯದ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಪೋಳ್ಯದಲ್ಲಿ ವಾಹ ಅಫಘಾತ ಸಂಭವಿಸಿದ್ದು ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ.ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹೊರವಲಯದ...

ಪುತ್ತೂರು ಕಂಬಳದಲ್ಲಿ ನಟಿಯೊಂದಿಗೆ ಅಸಭ್ಯ ವರ್ತನೆ ಆರೋಪಕ್ಕೆ ದೇವರ ಮೊರೆ ಹೋದ ಸಮಿತಿ – “ಮಹಾಲಿಂಗೇಶ್ವರನ ಮಣ್ಣಿನಲ್ಲಾದ ಘಟನೆ ದೇವರೇ ನೋಡಿಕೊಳ್ಳಲಿ”..!

ಪುತ್ತೂರು: ಪುತ್ತೂರಿನಲ್ಲಿ ಜ.28ರ ಕಂಬಳದಲ್ಲಿ ನಡೆದಿದೆ ಎನ್ನಲಾದ ಅಸಭ್ಯ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದ ಕಂಬಳ ಸಮಿತಿಯವರು ಶ್ರೀ ಮಹಾಲಿಂಗೇಶ್ವರ ದೇವರ ಮೊರೆ ಹೋಗಿದ್ದು, ದೇವರ ನಡೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಏಕಾದಶ ರುದ್ರ...