Thursday, April 22, 2021

ನಡುರಾತ್ರೀಲಿ ಕಾರಲ್ಲಿದ್ದುದನ್ನು ಕಂಡು ದಂಗಾದ ಸಿಸಿಬಿ ಪೊಲೀಸರು..!

ನಡುರಾತ್ರೀಲಿ ಕಾರಲ್ಲಿದ್ದುದನ್ನು ಕಂಡು ದಂಗಾದ ಸಿಸಿಬಿ ಪೊಲೀಸರು..!

ಬೆಂಗಳೂರು :  ಸಿಸಿಬಿ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದ್ದು, ರಾಜಧಾನಿಯಲ್ಲಿ ಎರಡು ಗುಂಪುಗಳ ನಡುವೆ ನಡೆಯಬೇಕಿದ್ದ ಗ್ಯಾಂಗ್ ವಾರ್ ತಡೆದಿದ್ದಾರೆ.

ಮಂಗಳೂರು ರೌಡಿಶೀಟರ್ ಕಿರಣ್ ಗೌಡ, ಮಂಗಳೂರು ಉಳ್ಳಾಲ ರೌಡಿ ವಿಶ್ವನಾಥ ಭಂಡಾರಿ ಸೇರಿ 11 ಜನರ ನಟೋರಿಯಸ್ ಗ್ಯಾಂಗ್ ಅರೆಸ್ಟ್ ಆಗಿದೆ.  ಇವರಿಂದ ಭಾರೀ ಪ್ರಮಾಣದಲ್ಲಿ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಬರೋಬ್ಬರಿ 18 ಮಚ್ಚು ಹಾಗೂ ಲಾಂಗುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಮಾರತ್ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಿಸಿಬಿಯಿಂದ ತನಿಖೆ ಮುಂದುವರೆದಿದೆ.

ರೋಹಿತ್ ಹಾಗೂ ಕಾಡುಬೀಸಲಹಳ್ಳಿ ಸೋಮು ಗ್ಯಾಂಗ್ ನಡುವೆ ನಡೆಯಬೇಕಿದ್ದ ಗ್ಯಾಂಗ್ ವಾರ್ ಬಗ್ಗೆ ಮಾಹಿತಿ ಪಡೆದ ತಕ್ಷಣವೇ ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ವಿಶೇಷ ತಂಡ ರಚನೆ ಮಾಡಿ 11 ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರ ಮೇಲೆ ಈಗಾಗಲೇ ದರೋಡೆ, ಡಕಾಯತಿ ಸೇರಿದಂತೆ ಹಲವು ಪ್ರಕರಣಗಳಿವೆ. ಸದ್ಯ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಮೇಲೆ ಎಫ್ಐಆರ್ ದಾಖಲಾಗಿದೆ.

ಸ್ಥಳೀಯ ರೌಡಿಸಂಗೆ ಮಂಗಳೂರು ರೌಡಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದ ಕಾಡುಬಿಸನಹಳ್ಳಿ ಸೋಮ ಮತ್ತು ಕಾಡುಬಿಸನಹಳ್ಳಿ ರೋಹಿತ್ ನಡುವೆ ಹಳೇ ದ್ವೇಷವಿತ್ತು.

ಹೀಗಾಗಿ, ಕಾಡುಬಿಸನಹಳ್ಳಿ ಸೋಮ ಗ್ಯಾಂಗ್ ವಾರ್ಗೆ ಟಾರ್ಗೆಟ್ ಆಗಿದ್ದ. ಇದಕ್ಕೆಲ್ಲ ಮಾಸ್ಟರ್ ಪ್ಲಾನ್ ಮಾಡಿದ್ದು ರೌಡಿ ಕಾಡುಬಿಸನಹಳ್ಳಿ ರೋಹಿತ್.

ಕಾಡುಬಿಸನಹಳ್ಳಿ ಸೋಮ ಗ್ಯಾಂಗ್‌ನ್ನು ಮುಗಿಸಲು ಮಂಗಳೂರಿನ ರೌಡಿಶೀಟರ್‌ ಕಿರಣ್‌ ಗೌಡ ಹಾಗೂ ವಿಶ್ವನಾಥ್‌ ಭಂಡಾರಿಯನ್ನು ಕರೆಸಿದ್ದರು.

ರಾತ್ರಿ ಅಟ್ಯಾಕ್‌ ನಡೆಸಲು ಮಾರಕಾಸ್ತ್ರಗಳ ಸಮೇತ ರಸ್ತೆಯಲ್ಲಿ ಕಾಯುತ್ತಿದ್ದ ವೇಳೆ ಪೊಲೀಸರು ಇವರನ್ನ ಅರೆಸ್ಟ್ ಮಾಡಿದ್ದಾರೆ.

ಆನೇಕಲ್ ರೌಡಿಶೀಟರ್ ಹರೀಶ್, ಸರ್ಜಾಪುರ ರೌಡಿ ಶೀಟರ್ ವೆಂಕಟೇಶ್, ಮಂಗಳೂರು ರೌಡಿಶೀಟರ್ ಕಿರಣ್ ಗೌಡ, ಮಂಗಳೂರು ಉಳ್ಳಾಲ ರೌಡಿ ವಿಶ್ವನಾಥ ಭಂಡಾರಿ ಸೇರಿ 11 ಜನರ ನಟೋರಿಯಸ್ ಗ್ಯಾಂಗ್ ಅರೆಸ್ಟ್ ಆಗಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...