Monday, July 4, 2022

ಕೊನೆಗೂ ತಣ್ಣಗಾದ ದರ್ಶನ್ ಅಭಿಮಾನಿಗಳು – ಜಗ್ಗೇಶ್​ ನಡುವಣ ವಿವಾದ..! ನಟ ಜಗ್ಗೇಶ್ ಗೆ ಪಕ್ಷದ ವಕ್ತಾರ ಸ್ಥಾನ ನೀಡಿದ ಬಿಜೆಪಿ..!

ಕೊನೆಗೂ ತಣ್ಣಗಾದ ದರ್ಶನ್ ಅಭಿಮಾನಿಗಳು – ಜಗ್ಗೇಶ್​ ನಡುವಣ ವಿವಾದ..! ನಟ ಜಗ್ಗೇಶ್ ಗೆ ಪಕ್ಷದ ವಕ್ತಾರ ಸ್ಥಾನ ನೀಡಿದ ಬಿಜೆಪಿ..!

ಬೆಂಗಳೂರು : ನಟ ಜಗ್ಗೇಶ್ ಅವರನ್ನು ಬಿಜೆಪಿ ಬೆಂಗಳೂರು ನಗರ ಘಟಕದ ವಕ್ತಾರರಾಗಿ ನೇಮಿಸಲಾಗಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನ್​ಕುಮಾರ್​ ಕಟೀಲ್​ ಆದೇಶ ಹೊರಡಿಸಿದ್ದಾರೆ.

ಆಡಳಿತ ಪಕ್ಷವಾದ್ದರಿಂದ ಬಿಜೆಪಿ ಮಾಡಿದ ಸಾಧನೆಯನ್ನು ಜನರಿಗೆ ಮುಟ್ಟಿಸುವುದು, ಮಾಧ್ಯಮಗಳಿಗೆ ಪಕ್ಷದ ಕಾರ್ಯ ಸಾಧನೆ ಬಗ್ಗೆ ಹೇಳುವುದು, ಪಕ್ಷ ಮತ್ತು ಸರ್ಕಾರ ಮಾಡಿದ ಕೆಲಸಗಳನ್ನು ಜನರಿಗೆ ಮನಗಾಣಿಸುವ ಕೆಲಸವನ್ನು ಇವರು ಮಾಡಲಿದ್ದಾರೆ.

ಜಗ್ಗೇಶ್ ಸೇರಿ ಒಟ್ಟು 10 ಮಂದಿಯನ್ನು ವಿವಿಧ ನಗರಗಳಿಗೆ ವಕ್ತಾರರನ್ನಾಗಿ ಘೋಷಿಸಿದೆ. ದರ್ಶನ್​ ಅಭಿಮಾನಿಗಳು ಮತ್ತು ಜಗ್ಗೇಶ್​ ನಡುವೆ ನಡೆಯುತ್ತಿದ್ದ ವಿವಾದದಿಂದ ಸುದ್ದಿಯಲ್ಲಿದ್ದ ಜಗ್ಗೀಶ್ ಆಡಳಿತ ಪಕ್ಷದೊಳಗೆ ನಡೆದಿರುವ ಬೆಳವಣಿಗೆಯಿಂದ ಮತ್ತೆ ಸುದ್ದಿಯಲ್ಲಿದ್ದಾರೆ.

ದರ್ಶನ್ ಅಭಿಮಾನಿಗಳು ಮತ್ತು ಜಗ್ಗೇಶ್​ ನಡುವಣ ವಿವಾದ ಕೊನೆಗೂ ತಣ್ಣಗಾಗುತ್ತಿದೆ. ನಟ ದರ್ಶನ್​ ಕ್ಷಮೆ ಯಾಚಿಸುವ ಮೂಲಕ ಕಳೆದ ಮೂರು ದಿನಗಳಿಂದ ಹತ್ತಿ ಉರಿಯುತ್ತಿದ್ದ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿದ್ದ ಜಗ್ಗೇಶ್​, ಧನ್ಯವಾದ ಹೇಳಿದ್ದರು. ಈ ಘಟನೆ ಬೆನ್ನಲ್ಲೇ ಜಗ್ಗೇಶ್​ಗೆ ಪಕ್ಷದಿಂದ ಉತ್ತಮ ಸ್ಥಾನ-ಮಾನ ದೊರೆತಿದೆ. ಜಗ್ಗೇಶ್​ ಪಕ್ಷದ ಬೆಂಗಳೂರು ಮುಖ್ಯ ವಕ್ತಾರರಾಗಿ ನೇಮಕಗೊಂಡಿದ್ದಾರೆ.

ಬಿಬಿಎಂಪಿ ವಾರ್ಡ್​ಗಳ ಪುನರ್​ವಿಂಗಡನೆ ಪ್ರಕ್ರಿಯೆ ವಿವಾದ ಮತ್ತು ಬಿಬಿಎಂಪಿ ಚುನಾವಣೆ ಸಮೀಪದಲ್ಲಿರುವುದರಿಂದ ಜಗ್ಗೇಶ್​ಗೆ ನೀಡಿರುವ ಹೊಸ ಹೊಣೆಗಾರಿಕೆ ರಾಜಕೀಯ ವಲಯದಲ್ಲಿ ಹಲವರ ಗಮನ ಸೆಳೆದಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಜಗ್ಗೇಶ್​ ಯಶವಂತಪುರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. ಕೊನೆಯ ಕ್ಷಣದಲ್ಲಿ ಟಿಕೆಟ್​ ಸಿಕ್ಕಿದ್ದರಿಂದ ಹೆಚ್ಚು ಪ್ರಚಾರ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಅವರು ಚುನಾವಣೆಯಲ್ಲಿ ಸೋತಿದ್ದರು ಎಂದು ವಿಶ್ಲೇಷಿಸಲಾಗಿತ್ತು.

ನಂತರ ಅವರು ಸಿನಿಮಾದಲ್ಲೇ ಹೆಚ್ಚು ತೊಡಗಿಕೊಂಡರು. ಈಗ ಅವರಿಗೆ ಪಕ್ಷದಲ್ಲಿ ದೊಡ್ಡ ಸ್ಥಾನಮನ ಸಿಕ್ಕಿದೆ. ಜ

 

LEAVE A REPLY

Please enter your comment!
Please enter your name here

Hot Topics

ಮರವಂತೆಯಲ್ಲಿ ಸಮುದ್ರಪಾಲಾದ ಕಾರು: ಓರ್ವ ಸ್ಪಾಟ್ ಡೆತ್-ಓರ್ವ ನಾಪತ್ತೆ

ಕುಂದಾಪುರ: ಚಲಿಸುತ್ತಿದ್ದ ಕಾರೊಂದು ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸಮುದ್ರ ಪಾಲಾಗಿ ಕಾರಿನೊಳಗಿದ್ದ ನಾಲ್ವರ ಪೈಕಿ ಚಾಲಕ ಸಾವನ್ನಪ್ಪಿದ್ದು, ಓರ್ವ ನಾಪತ್ತೆಯಾಗಿ ಇಬ್ಬರು ಪ್ರಯಾಣಿಕರು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಿದಂತಹ ದಾರುಣ ಘಟನೆ ಉಡುಪಿ...

ಮಂಗಳೂರು: ದೋಣಿ ಮೇಲೆತ್ತುವಾಗ ನೇತ್ರಾವತಿ ನದಿಗೆ ಬಿದ್ದ ಓರ್ವ ನಾಪತ್ತೆ ಮತ್ತಿಬ್ಬರ ರಕ್ಷಣೆ

ಬಂಟ್ವಾಳ: ದೋಣಿ ಮೇಲೆತ್ತುವಾಗ ಪ್ರವಾಹದ ರಭಸಕ್ಕೆ ದೋಣಿ ಸಮೇತ ನದಿಗೆ ಬಿದ್ದು ಓರ್ವ ನಾಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ಅರ್ಕುಳ ಗ್ರಾಮದ ಶಶಿರಾಜ್ ಧಕ್ಕೆಯಲ್ಲಿ ನಿನ್ನೆ ಸಂಜೆ ನಡೆದಿದೆ.ನಾಪತ್ತೆಯಾದ ಯುವಕನನ್ನು ರಾಜು ಸಾಹ್...

ಮಂಗಳೂರು: ಎಕ್ಕೂರಿನಲ್ಲಿ ಲೈಟ್‌ ಕಂಬಕ್ಕೆ ಢಿಕ್ಕಿ ಹೊಡೆದ ಕಾರು-ಮೂವರಿಗೆ ಗಾಯ

ಮಂಗಳೂರು: ಕೇರಳದಿಂದ ಮಂಗಳೂರಿಗೆ ಬರುತ್ತಿದ್ದ ಇನ್ನೋವಾ ಕಾರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಮೂವರು ಗಾಯಗೊಂಡ ಘಟನೆ ಮಂಗಳೂರು ಹೊರವಲಯದ ಎಕ್ಕೂರು ಬಳಿ ನಿನ್ನೆ ತಡರಾತ್ರಿ ನಡೆದಿದೆ.ನಿನ್ನೆ ಮಧ್ಯರಾತ್ರಿ...