Monday, August 15, 2022

ಬಂಟ್ವಾಳ: ದ್ವಿಚಕ್ರವಾಹನದಲ್ಲಿ ದನದ ಮಾಂಸ ಮಾರುತ್ತಿದ್ದ ವ್ಯಕ್ತಿಯ ಬಂಧನ-20ಕೆ.ಜಿ ಮಾಂಸ ವಶಕ್ಕೆ

ಬಂಟ್ವಾಳ: ದ್ವಿಚಕ್ರವಾಹನದಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ನಿನ್ನೆ ಬಂಟ್ವಾಳದ ಗೂಡಿನಬಳಿಯಲ್ಲಿ ನಡೆದಿದೆ.


ಬೋಳಂತೂರು ನಿವಾಸಿ ಮಹಮ್ಮದ್ ಮುಸ್ತಫಾ ಬಂಧಿತ ಆರೋಪಿ.

ಆರೋಪಿ ಮಹಮ್ಮದ್ ಮುಸ್ತಫಾ ಹಾಗೂ ಸ್ನೇಹಿತ ಇಬ್ಬರು ಸೇರಿ ಅಕ್ರಮವಾಗಿ ದನಗಳನ್ನು ಕದ್ದು ತಂದು ಪ್ರತಿ ಆದಿತ್ಯವಾರ ದಿನ ಮನೆಯಲ್ಲಿ ಕಡಿದು ಮಾಂಸ ಮಾಡಿ ಬಳಿಕ ದ್ವಿಚಕ್ರದ ಮೂಲಕ ನಂದಾವರ, ಗೂಡಿನಬಳಿ, ಮಂಚಿ ಸಹಿತ ತಾಲೂಕಿನ ಆಯ್ದ ಕಡೆಗಳಿಗೆ ಮಾರಾಟ ಮಾಡುವುದಾಗಿ ಪೋಲೀಸರಿಗೆ ಮಾಹಿತಿ ಲಭಿಸಿದೆ.

ಆರೋಪಿಯ ದ್ವಿ ಚಕ್ರವಾಹನ ಹಾಗೂ ಅದರಲ್ಲಿದ್ದ 20 ಕೆ.ಜಿ‌.ಮಾಂಸವನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಬಾಲಕಿಯ ಅತ್ಯಾಚಾರ ಪ್ರಕರಣ ಸಾಬೀತು- ಅಪರಾಧಿಗೆ 7 ವರ್ಷ ಕಠಿಣ ಶಿಕ್ಷೆ

ಮಂಗಳೂರು: ಪರಿಶಿಷ್ಟ ಜಾತಿಯ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸೋ) ಎಫ್.ಟಿ.ಎಸ್.ಸಿ-1 ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿ ಮಂಗಳೂರಿನ ಸುಧಾಕರ ಪೂಜಾರಿ ಎಂಬಾತನಿಗೆ 7 ವರ್ಷ ಕಠಿಣ...

ಸೌದಿ ಅರೇಬಿಯಾದಲ್ಲಿ ಭಾರತದ ಸ್ವಾತಂತ್ರ್ಯ ಸಂಭ್ರಮ: ಕೇಕ್‌ ಕತ್ತರಿಸಿ ಆಚರಿಸಿದ ಅನಿವಾಸಿಗರು

ಮಂಗಳೂರು: ಇಂದು ಭಾರತ ದೇಶಾದ್ಯಂತ ಹಬ್ಬದ ವಾತಾವರಣ. ಸ್ವಾತಂತ್ರ್ಯದ ಅಮೃತಮಹೋತ್ಸವವಾದ ಇಂದು ಬೆಳಗ್ಗೆ ದೇಶಾದ್ಯಂತ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸುತ್ತಿದ್ದರೆ ಸಪ್ತ ಸಮುದ್ರಾಚೆಗಿರುವ ಸೌದಿ ಅರೇಬಿಯಾದಲ್ಲಿ ಅನಿವಾಸಿ ಭಾರತೀಯರು ಸ್ವಾತಂತ್ರ್ಯವನ್ನು ಆಚರಿಸಿದರು.ಸೌದಿ ಅರೇಬಿಯಾ...

ಕನಸಿನ, ಆಕರ್ಷಣೆಯ ಹಾಗೂ ಅಭಿವೃದ್ದಿಯ ಮಂಗಳೂರಿಗೆ ಪಣ: ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

ಮಂಗಳೂರು: ಕನಸಿನ, ಆಕರ್ಷಣೆಯ ಹಾಗೂ ಅಭಿವೃದ್ದಿಯ ಮಂಗಳೂರನ್ನು ಮಾಡಲು ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್‌ ಕುಮಾರ್‌ ಹೇಳಿದ್ದಾರೆ.ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಸ್ವಾತಂತ್ರ್ಯದ...