ಇಸ್ಲಮಾಬಾದ್ : ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್ ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಇಲ್ಲಿನ ಪ್ರಸಿದ್ಧ ಸಂಡೇ ಬಝಾರ್‌ನಲ್ಲಿ ಈ ಅಗ್ನಿ ದುರಂತ ಸಂಭವಿಸಿದ್ದು ಸುಮಾರು 300 ಅಂಗಡಿಗಳು ಸುಟ್ಟುಹೋಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೆಕೆಂಡ್‌ಹ್ಯಾಂಡ್ ಬಟ್ಟೆಗಳು ಹಾಗೂ ಕಂಬಳಿಗಳನ್ನು ಮಾರಾಟ ಮಾಡುವ ಮಾರುಕಟ್ಟೆಯ ಗೇಟ್ ಸಂಖ್ಯೆ 7ರ ಬಳಿ ಈ ಬೆಂಕಿ ಕಾಣಿಸಿಕೊಂಡಿದ್ದು ಕ್ಷಣಮಾತ್ರದಲ್ಲಿ ಸಂಪೂರ್ಣ ಮಾರುಕಟ್ಟೆಗೆ ಹರಡಿದೆ.
ಪಾಕ್ ವಾಯುಪಡೆಯ 2 ಹೆಲಿಕಾಪ್ಟರ್‌ಗಳ ನೆರವಿನಿಂದ 10 ಅಗ್ನಿಶಾಮಕ ಯಂತ್ರಗಳು ಹಲವು ಗಂಟೆಯ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಂದಿಸಲು ಯಶಸ್ವಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದುರಂತದಲ್ಲಿ ಸಾವು – ನೋವುಗಳಾದ ಬಗ್ಗೆ ಯಾವುದೇ ಮಾಹಿತಿ ದಾಖಲಾಗಿಲ್ಲ.
A massive fire broke out at a market in #Islamabad, #Pakistan Wednesday night. Casualties unknown. pic.twitter.com/e9RYYX47UG
— Media Warrior (@MediaWarriorY) December 7, 2022