ಮಾ.2-4 ವರ್ಚುವಲ್ ಮ್ಯಾರಿಟೈಮ್ ಇಂಡಿಯಾ ಶೃಂಗಸಭೆ 2021; ಎನ್ ಎಂ ಪಿ ಟಿ ನೇತೃತ್ವದಲ್ಲಿ ಪೂರ್ವ ಬಾವಿ ಸಭೆ..!
ಮಂಗಳೂರು: ಕಳೆದೊಂದು ವರ್ಷದಿಂದ ನಾವು ಕೊರೊನಾದಿಂದ ಕಂಗೆಟ್ಟಿದ್ದೇವೆ. ಕೇವಲ ಭಾರತ ಮಾತ್ರವಷ್ಟೇ ಅಲ್ಲ, ಇಡೀ ವಿಶ್ವವೇ ಇದರ ಹೊಡೆತಕ್ಕೆ ಸಿಲುಕಿದೆ.
ಆದರೆ ನಮ್ಮ ಬಳಿ ಇರುವ ಸ್ವಯಂಶಕ್ತಿಯಿಂದಾಗಿ ನಾವು ಅದನ್ನು ಮೆಟ್ಟಿನಿಲ್ಲಲು ಸಮರ್ಥರಾಗಿದ್ದೇವೆ ಎಂದು ಮಂಗಳೂರು ನವಮಂಗಳುರು ಬಂದರು ಮಂಡಳಿ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಅಭಿಪ್ರಾಯಪಟ್ಟರು.
ಭಾರತೀಯ ಕಡಲ ವಲಯದಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಹೂಡಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ವರ್ಚುವಲ್ ಮ್ಯಾರಿಟೈಮ್ ಇಂಡಿಯಾ ಶೃಂಗಸಭೆ 2021 ಭಾರತೀಯ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಆಯೋಜನೆ ಮಾಡುತ್ತಿದೆ.
ಮಾರ್ಚ್ 02 ರಿಂದ 04 ರವರೆಗೆ ನಡೆಯಲಿರುವ ವರ್ಚುವಲ್ ಶೃಂಗ ಸಭೆಯ ಅಂಗವಾಗಿ ಪೂರ್ವಭಾವಿಯಾಗಿ ವಿವಿಧ ಸಣ್ಣ ಮತ್ತು ಬೃಹತ್ ಕೈಗಾರಿಕಾ ವಲಯಗಳ ಹೂಡಿಕೆದಾರರು ಮತ್ತು ಕೈಗಾರಿಕಾ ವಲಯದ ಸಂಘ ಸಂಸ್ಥೆಗಳ ನೆರವಿನೊಂದಿಗೆ ರೋಡ್ ಷೋ ಗಳನ್ನು ನ್ಯೂ ಮೆಂಗ್ಳೂರು ಪೋರ್ಡ್ ಟ್ರಸ್ಟ್ ಆಯೋಜನೆ ಮಾಡುತ್ತಿದೆ.
ಇದರ ಅಂಗವಾಗಿ ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ವಲಯದ ಸಭಾಂಗಣದಲ್ಲಿ ಸಣ್ಣ ಕೈಗಾರಿಕಾ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡ ಸಭೆಯಲ್ಲಿ ಮಾತನಾಡಿದರು.
ಪೋರ್ಟ್, ಬಂದರು ಚಟುವಟಿಕೆಗಳು ಮಹಾಮಾರಿ ಕೊರೊನಾದ ಸುಳಿಗೆ ಸಿಲುಕಿ ಒದ್ದಾಡಿದೆ. ಆದರೆ ನಮ್ಮ ಬಳಿ ಇರುವ ಶಕ್ತಿ, ಸಾಮರ್ಥ್ಯದಿಂದ ನಾವು ಅದನ್ನು ಮೆಟ್ಟಿ ಬೆಳೆದು ನಿಂತಿದ್ದೇವೆ.
ಇದೀಗ ನಮಗೆ ಸವಾಲುಗಳನ್ನು ಎದುರಿಸಿ ಸಮರ್ಥವಾಗಿ ಮುನ್ನಡೆಯುವುದಕ್ಕೆ ಶಕ್ತಿ ಬಂದಿದೆ. ಮೇರಿಟೈಮ್ ಮಂಡಳಿ ಮೂಲಕ ನಾವು ಇನ್ನೂ ಬೆಳೆಯಬೇಕಾಗಿದೆಎಂದು ಅವರು ಹೇಳಿದರು.
ಭಾರತೀಯ ಕಡಲ ವಲಯದಲ್ಲಿನ ಸಂಭಾವ್ಯ ವ್ಯಾಪಾರ ಅವಕಾಶಗಳನ್ನು ಅನ್ವೇಷಣೆ, ಆತ್ಮನಿರ್ಭರ್ ಭಾರತ್ ಕುರಿತೂ ಅಕ್ಕರಾಜು ಮಾತನಾಡಿದರು. ಇದೇ ವೇಳೆ ನಡೆದ ಸಂವಾದ ಕಾರ್ಯಕ್ರಮದಲ್ಲೂ ಅವರು ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ಬಳಿಕ ನಮ್ಮ ಕುಡ್ಲ ವಾಹಿನಿಗೆ ಮಾತನಾಡಿದ ನವಮಂಗಳೂರು ಬಂದರು ಮಂಡಳಿ ಅಧ್ಯಕ್ಷ ವೆಂಕಟರಮಣ ಅಕ್ಕರಾಜು “ಭಾರತೀಯ ಕಡಲ ವಲಯದಲ್ಲಿನ ಸಂಭಾವ್ಯ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುವುದು ಮತ್ತು ಆತ್ಮನಿರ್ಭರ್ ಭಾರತ್ ಮಾಡುವುದು” ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.