Thursday, March 4, 2021

ದಕ್ಷಿಣ ಕಾಶಿಯೆಂದೇ ಜನಜನಿತವಾಗಿರುವ ಕಲಶೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಮಹಾರಥೋತ್ಸವ..!

ದಕ್ಷಿಣ ಕಾಶಿಯೆಂದೇ ಜನಜನಿತವಾಗಿರುವ ಕಲಶೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಮಹಾರಥೋತ್ಸವ..!

ಚಿಕ್ಕಮಗಳೂರು: ಕರ್ನಾಟಕ ರಾಜ್ಯದ  ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಕ್ಷಿಣ ಕಾಶಿಯೆಂದೇ ಕರೆಯಲ್ಪಡುವ ಕಳಸ ಗ್ರಾಮದ ಕಲಶೇಶ್ವರ ಸ್ವಾಮಿ ದೇವಸ್ಥಾನ    ಭದ್ರಾ ನದಿ ದಂಡೆಯಲ್ಲಿದೆ. ಸುತ್ತಲೂ  ಸಹ್ಯಾದ್ರಿಪರ್ವತವಿದ್ದು ಹಸಿರು ಅರಣ್ಯ ಜಲಪಾತಗಳಿಂದ ಸುತ್ತುವರಿದು ಬಹಳ ಸುಂದರ ತಾಣದಲ್ಲಿದೆ ಈ ಕಲಸೇಶ್ವರ ಕ್ಷೇತ್ರ..

ಅಗಸ್ತ್ಯ ಮುನಿಗಳು ಧ್ಯಾನಾಸಕ್ತರಾಗಿ ಪರಶಿವನ ಕುರಿತು ತಪಸ್ಸನ್ನಾಚರಿಸುತ್ತಿದ್ದಾಗ ಪ್ರತ್ಯಕ್ಷನಾದ ಶಿವ  ಅಗಸ್ತ್ಯ ಮುನಿಗಳಿಗೆ  ನೀನು ಕಲಶೇಶನೆಂಬ ಅಭಿದಾನದಿಂದ ಆವಿರ್ಭವಿಸಿ ಭಕ್ತಾದಿಗಳಿಗೆ ಕಲ್ಯಾಣ ಕೊಡುತ್ತಾ ಕಾಲಾಂತ್ಯದವರೆಗೂ ಇರಬೇಕೆಂದು ವರ ಕರುಣಿಸಿ ಅಂತರ್ಧಾನನಾದನು ಎನ್ನವ ಐತಿಹ್ಯವಿದೆ.

ಹೀಗೆ ಅಗಸ್ತ್ಯ ಮುನಿಗಳ ಅನುಗ್ರಹಾರ್ಥವಾಗಿ ದೇವತೆಗಳಿಂದ ಸ್ಥಾಪಿತ ಕಲಶದಲ್ಲಿ ಕಲಶೇಶ್ವರ ಸ್ವಾಮಿಯು ಉದ್ಭವಿಸಿರುವ  ಈ ಪ್ರದೇಶಕ್ಕೆ ಕಲಶೇಶ ಎಂಬ ಹೆಸರು ಬಂತು ಎನ್ನಲಾಗಿದೆ. ದಕ್ಷಿಣ ಕಾಶಿಯ ಅಗಸ್ತ್ಯ ಕ್ಷೇತ್ರ ಕಳಸೇಶ್ವರ ದೇವಸ್ಥಾನದಲ್ಲಿ ಬಹಳ ವಿಜ್ರಂಭಣೆಯ  ಮಹಾ ರಥೋತ್ಸವ ನಡೆಯಿತು. ಈ ಕ್ಷೇತ್ರ ಅಗಸ್ತ್ಯ ಮುನಿಗಳ ಭಕ್ತಿಗೊಲಿದು ಸಂಪ್ರೀತನಾದ ಶಿವನು ಸ್ವಯಂ ಉದ್ಭವವಾದ ಪುಣ್ಯ ಕ್ಷೇತ್ರದಲ್ಲಿ    ಪ್ರಪಂಚದಲ್ಲಿ ಎಲ್ಲೂ ಕಾಣ ಸಿಗದಿರುವಂಥ ಆನೆಗಣಪತಿ ಗಂಡು ಮತ್ತು  ಆನೆಗಣಪತಿ ಹೆಣ್ಣು ಇರುವ ಏಕಮಾತ್ರ ಕ್ಷೇತ್ರವಾಗಿದೆ.

ಈ ಕ್ಷೇತ್ರದಲ್ಲಿ ಕಾರ್ತಿಕ ಶುದ್ಧ ಏಕಾದಶಿಯಂದು ಕ್ಷೇತ್ರದ ಸಾನಿಧ್ಯದಲ್ಲಿ ನಡೆಯುವ ಗಿರಿಜಾ ಕಲ್ಯಾಣೋತ್ಸವ ಮಾಘ ಮಾಸದ ಆರಿದ್ರಾ ನಕ್ಷತ್ರದಲ್ಲಿ ನಡೆಯುವ ಮಹಾರಥೋತ್ಸವ ಬಹಳ ವಿಶೇಷ ಸೇವೆಯಾಗಿದೆ. ಈ ಸಂದರ್ಭ ವಿವಿಧ ಚಿತ್ತಾರಗಳಿಂದ ಸಿಂಗರಿಸಿದ  ಮಹಾರಥೋತ್ಸವಕ್ಕೆ ಊರ ಪರವೂರ ಭಕ್ತರು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು..

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...