ಬೆಂಗಳೂರು: ಬಹುನಿರೀಕ್ಷಿತ ‘ಕೆಜಿಎಫ್ ಚಾಪ್ಟರ್ 2’ ನ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಕನ್ನಡ ವರ್ಷನ್ ಹಾಡು ಲಕ್ಷಾಂತರ ವೀವ್ಸ್ ಪಡೆದುಕೊಂಡಿದೆ.
‘ಕೆಜಿಎಫ್ 2’ ಚಿತ್ರದಿಂದ ‘ತೂಫಾನ್..’ ಹಾಡು ಮೂಡಿಬಂದಿದೆ. ಸಾಂಗ್ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಹಾಡಿಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಯಶ್ ಅವರನ್ನು ಕಂಡು ಫ್ಯಾನ್ಸ್ ಖುಷಿ ಆಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಮಾಡಿದ್ದಾರೆ.
ಕನ್ನಡ ಮಾತ್ರವಲ್ಲದೇ, ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿಯೂ ‘ಕೆಜಿಎಫ್: ಚಾಪ್ಟರ್ 2’ ಚಿತ್ರ ಬಿಡುಗಡೆ ಆಗಲಿದೆ.
ಆ ಎಲ್ಲ ಭಾಷೆಗಳಲ್ಲೂ ‘ತೂಫಾನ್’ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಲಾಗಿದೆ. ಎಲ್ಲ ಭಾಷೆಯಲ್ಲೂ ಜನರಿಂದ ಒಳ್ಳೆಯ ರಿಯಾಕ್ಷನ್ ಸಿಗುತ್ತಿದೆ.
Here comes #Toofan 🌪️
Kannada: https://t.co/hwLeUampWF
Telugu: https://t.co/BIjG1e5Xs2
Tamil: https://t.co/jpoe5oyH0B
Malayalam: https://t.co/yDxjcFZD8B#KGFChapter2 @Thenameisyash @prashanth_neel@VKiragandur @hombalefilms @HombaleGroup@RaviBasrur @bhuvangowda84 @LahariMusic pic.twitter.com/DA8IHqbYsQ— Yash (@TheNameIsYash) March 21, 2022