ಮುಲ್ಕಿ: ವ್ಯಕ್ತಿಯೋರ್ವನ ಮುಖವನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆಯಾದ ಘಟನೆಗೆ ಸಂಬಂಧಿಸಿದಂತೆ ಓರ್ವನ ಬಂಧನವಾಗಿದ್ದು, ಕೇವಲ 3000 ರೂಪಾಯಿ ವಿಷಯಕ್ಕೆ ಗಲಾಟೆ ನಡೆದು ಕೊಲೆಯಾಗಿದೆ ಎಂದು ತಿಳಿದುಬಂದಿದೆ.
ನಿನ್ನೆ ಮುಲ್ಕಿ ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ನಡೆದಿತ್ತು. ಕೊಲೆಯಾದ ವ್ಯಕ್ತಿಯನ್ನು ಕಾರ್ಕಳ ತಾಲೂಕಿನ ಮುಂಡ್ಕೂರು ನಿವಾಸಿ 45 ವರ್ಷದ ಹರೀಶ್ ಸಾಲ್ಯಾನ್ ಎಂದು ಗುರುತಿಸಲಾಗಿದೆ. ಮೃತದೇಹ ಪತ್ತೆಯಾದ ಅಣತಿ ದೂರದಲ್ಲಿ ರಕ್ತಸಿಕ್ತ ಕಲ್ಲು ಸಿಕ್ಕಿದ್ದು ಮೃತರ ಮೊಬೈಲ್ ಕೂಡ ಪತ್ತೆಯಾಗಿದೆ.
ಹರೀಶ್ ಸಾಲ್ಯಾನ್ ಕೊಲೆಯಾದ ಸ್ಥಳದಲ್ಲಿ ಚೀಲವೊಂದು ದೊರೆತಿದ್ದು, ಶುಕ್ರವಾರ ರಾತ್ರಿ 8 ಗಂಟೆಗೆ ಬಪ್ಪನಾಡು ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ ರಶೀದಿ ಮತ್ತು ಪ್ರಸಾದ ಅದರಲ್ಲಿ ಪತ್ತೆಯಾಗಿದೆ. ಇಂದು ಬೆಳಗ್ಗೆ ಬಸ್ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ಮೃತದೇಹ ಗಮನಿಸಿ ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದರ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ತಮಿಳುನಾಡು ಮೂಲದ ಹಳೆಯಂಗಡಿ ತೋಕೂರುನಲ್ಲಿ ವಾಸವಾಗಿದ್ದ ಮುರುಗನ್‌ನ್ನು ಬಂಧಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ 3000ರೂಪಾಯಿಗೆ ಗಲಾಟೆ ನಡೆದಿದ್ದು ಅದು ಅತಿರೇಕಕ್ಕೇರಿ ಆರೋಪಿ ಹರೀಶ್ ಸಾಲ್ಯಾನ್ ಎಂಬವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ.
ಆರೋಪಿಯನ್ನು ಇಂದು ಸಂಜೆಯೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.