Connect with us

LATEST NEWS

ಬಾಲ್ಯವಿವಾಹದಲ್ಲಿ ಕರ್ನಾಟಕ ನಂ1- ಐದು ವರ್ಷಗಳ ಅಂಕಿ ಅಂಶಗಳಲ್ಲಿ ಬಹಿರಂಗ..!

Published

on

ಉಡುಪಿ: ಕಳೆದ ಐದು ವರ್ಷಗಳ ಅವಧಿಯಲ್ಲಿ ದೇಶದಲ್ಲೇ ಅತಿ ಹೆಚ್ಚು ಬಾಲ್ಯ ವಿವಾಹ ಕರ್ನಾಟಕದಲ್ಲಿ ನಡೆದಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಹಾಗೂ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿ ಅಂಶಗಳು ಈ ಕಳವಳಕಾರಿ ಸಂಗತಿಯನ್ನು ಬಯಲು ಮಾಡಿವೆ.

ಅದರಲ್ಲಿಯೂ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತವರು ಬೆಳಗಾವಿಯಲ್ಲಿ 2023ರ ಏಪ್ರಿಲ್‌ನಿಂದ ಆಗಸ್ಟ್ ತನಕ 12 ಬಾಲ್ಯ ವಿವಾಹ ಪ್ರಕರಣ ದಾಖಲಾಗಿವೆ. 2030ರೊಳಗೆ ಭಾರತವನ್ನು ಬಾಲ್ಯ ವಿವಾಹ ಮುಕ್ತ ದೇಶವಾಗಿ ರೂಪಿಸುವ ಗುರಿಯೊಂದಿಗೆ ಬಾಲ್ಯ ವಿವಾಹ ನಿಷೇಧ ಕಾಯಿದೆ-2006 ಜಾರಿಗೊಳಿಸಲಾಗಿದೆ. ಇದರ ಹೊರತಾಗಿಯೂ 2018ರಿಂದ 2022ರ ಅವಧಿಯಲ್ಲಿ ದೇಶದಲ್ಲಿ ಒಟ್ಟು 3,524 ಬಾಲ್ಯ ವಿವಾಹಗಳಾಗಿವೆ. ಹೆಣ್ಣಿನ ಮದುವೆಗೆ ನಿಗದಿಪಡಿಸಿದ 18 ವರ್ಷಗಳ ಮಿತಿಯನ್ನು 21ಕ್ಕೇರಿಸುವ ಪ್ರಸ್ತಾಪ ಸಂಸತ್‌ನ ಸ್ಥಾಯಿ ಸಮಿತಿ ಮುಂದಿದೆ. ಆದರೂ, ಚಿಕ್ಕವಯಸ್ಸಿನ ಹುಡುಗಿಯರ ಮದುವೆ ತಪ್ಪಿಲ್ಲ. ಧಾರವಾಡ ಜಿಲ್ಲೆಯಲ್ಲಿ ಫಲ ಕೊಟ್ಟ ದಿಟ್ಟ ಕ್ರಮಗಳಿಂದಾಗಿ ‘ಬಾಲ್ಯವಿವಾಹ’ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಕಳೆದ 5 ವರ್ಷಗಳಲ್ಲಿ ಕರ್ನಾಟಕದಲ್ಲಿ 706, ಅಸ್ಸಾಂನಲ್ಲಿ 554, ತಮಿಳುನಾಡಿನಲ್ಲಿ 414, ಪಶ್ಚಿಮ ಬಂಗಾಳದಲ್ಲಿ 390, ಮಹಾರಾಷ್ಟ್ರದಲ್ಲಿ 185 ಬಾಲ್ಯ ವಿವಾಹಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *

LATEST NEWS

ಬಾಗಿಲು ತೆರೆದ ಕೇದಾರನಾಥ…ಹರಿದು ಬರುತ್ತಿರುವ ಭಕ್ತ ಸಾಗರ!

Published

on

ಮಂಗಳೂರು/ ಉತ್ತರಾಖಂಡ :   ಚಾರ್ ಧಾಮ್ ಯಾತ್ರೆ ಮಾಡುವ ಆಸೆ ಹಲವಾರು ಭಕ್ತರಲ್ಲಿ ಇರುತ್ತದೆ. ಇದೀಗ ಭಕ್ತರ ಕನಸು ಈಡೇರುವ ಸಮಯ ಬಂದಿದ್ದು, ಇಂದಿನಿಂದ(ಮೇ 10) ಚಾರ್ ಧಾಮ್‌ ಯಾತ್ರೆ ಆರಂಭಗೊಂಡಿದೆ. ಕೇದಾರನಾಥ, ಬದರಿನಾಥ ಹಾಗೂ ಗಂಗೋತ್ರಿ ಧಾಮಗಳಿಗೆ ತೆರಳಬೇಕು ಎಂಬ ಹೆಬ್ಬಯಕೆ ಹೊಂದಿರುವವರು ಪ್ರಯಾಣ ಹೊರಡಬಹುದಾಗಿದೆ.
ಮೇ 10 ರಂದು ಉತ್ತರಾಖಂಡದ ಚಾರ್ ಧಾಮ್ ಯಾತ್ರೆ ಆರಂಭವಾಗಿದೆ. ಬೆಳಿಗ್ಗೆ 6:55 ಕ್ಕೆ ಕೇದಾರನಾಥದ ಬಾಗಿಲು ತೆರೆಯಲಾಯಿತು ಮತ್ತು 10:29 ಕ್ಕೆ ಯಮುನೋತ್ರಿಯ ಬಾಗಿಲು ತೆರೆಯಲಾಯಿತು. ಮಧ್ಯಾಹ್ನ 12:25ಕ್ಕೆ ಗಂಗೋತ್ರಿ ಧಾಮದ ಬಾಗಿಲು ತೆರೆಯಲಾಗಿದೆ. ಬದರಿನಾಥ ದೇವಸ್ಥಾನದಲ್ಲಿ ಮೇ 12 ರಿಂದ ದರ್ಶನ ಆರಂಭವಾಗಲಿದೆ.


22.15 ಲಕ್ಷ ಭಕ್ತರು ನೋಂದಣಿ :

ಕೇದಾರನಾಥದ ಬಾಗಿಲು ತೆರೆದ ನಂತರ ಸಿಎಂ ಪುಷ್ಕರ್ ಸಿಂಗ್ ಧಾಮಿ ಪತ್ನಿ ಸಮೇತ ದೇವರ ದರ್ಶನ ಪಡೆದರು. ಈ ನಾಲ್ಕು ಧಾಮಗಳಲ್ಲಿ ದಿನದ ತಾಪಮಾನವು 0 ರಿಂದ 3 ಡಿಗ್ರಿಗಳಷ್ಟು ದಾಖಲಾಗುತ್ತಿದೆ. ರಾತ್ರಿ ವೇಳೆ ಮೈನಸ್‌ ಡಿಗ್ರಿ ತಲುಪುತ್ತಿದೆ. ಆದ್ರೆ, ಇದ್ಯಾವುದನ್ನೂ ಪರಿಗಣಿಸದೆ ಸುಮಾರು 10 ಸಾವಿರ ಭಕ್ತರು ಕೇದಾರನಾಥ ಧಾಮಕ್ಕೆ 16 ಕಿ.ಮೀ ದೂರ ಇರೋ ಗೌರಿಕುಂಡ್ ತಲುಪಿದ್ದಾರೆ.

15 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಹರಿದ್ವಾರ ಮತ್ತು ಋಷಿಕೇಶ ತಲುಪಿದ್ದಾರೆ. ಇಲ್ಲಿಯವರೆಗೆ 22.15 ಲಕ್ಷಕ್ಕೂ ಹೆಚ್ಚು ಭಕ್ತರು ಚಾರ್ ಧಾಮ್ ಯಾತ್ರೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ ದಾಖಲೆಯ 55 ಲಕ್ಷ ಜನರು ಭೇಟಿ ನೀಡಿದ್ದರು.

ಎಷ್ಟು ಭಕ್ತರಿಗೆ ಅವಕಾಶ?

ಕೇದಾರನಾಥ-ಬದರಿನಾಥ ದೇವಸ್ಥಾನ ಸಮಿತಿ ಅಧ್ಯಕ್ಷ ಅಜಯೇಂದ್ರ ಅಜಯ್ ಪ್ರಕಾರ, ಮೇ 9 ರಂದು ಸಂಜೆ 4 ಗಂಟೆಗೆ ಬಾಬಾನ ಪಂಚಮುಖಿ ಡೋಲಿ ಕೇದಾರಧಾಮ್ ತಲುಪಿದಾಗ, 5 ಸಾವಿರ ಜನರು ಸೇರಿದ್ದರು. ಈ ಬಾರಿ ಕೇದಾರನಾಥಕ್ಕೆ ಭಕ್ತರ ಭೇಟಿಯನ್ನು ಸೀಮಿತಗೊಳಿಸಲಾಗಿದೆ. ಪ್ರತಿ ನಿತ್ಯ ಕೇವಲ 15 ಸಾವಿರ ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಕಳೆದ ವರ್ಷ ದಾಖಲೆಯ 55 ಲಕ್ಷ ಜನರು ಆಗಮಿಸಿದ್ದರಿಂದ ವ್ಯವಸ್ಥೆಗೆ ಅಡ್ಡಿಯಾಗಿತ್ತು. ಹೀಗಾಗಿ ಉತ್ತರಾಖಂಡ ಪೊಲೀಸ್ ಮತ್ತು ಪ್ರವಾಸೋದ್ಯಮ ಇಲಾಖೆ ಮೊದಲ ಬಾರಿಗೆ ಈ ತೀರ್ಮಾನ ಕೈಗೊಂಡಿದೆ. ಒಂದು ದಿನದಲ್ಲಿ 15 ಸಾವಿರ ಭಕ್ತರು ಕೇದಾರನಾಥ ಧಾಮಕ್ಕೆ, 16 ಸಾವಿರ ಮಂದಿ ಬದರಿನಾಥ ಧಾಮಕ್ಕೆ, 9 ಸಾವಿರ ಭಕ್ತರು ಯಮುನೋತ್ರಿಗೆ ಮತ್ತು 11 ಸಾವಿರ ಮಂದಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ.

ಸೂಕ್ತ ವ್ಯವಸ್ಥೆ :
ಮೊದಲ ಬಾರಿಗೆ ಚಾರ್ ಧಾಮ್ ಯಾತ್ರೆ ಮಾರ್ಗದಲ್ಲಿ 400ಕ್ಕೂ ಹೆಚ್ಚು ವೈದ್ಯರ ನಿಯೋಜನೆ ಮಾಡಲಾಗಿದೆ. ಇವರಲ್ಲಿ 256 ತುರ್ತು ವೈದ್ಯಕೀಯ ಅಧಿಕಾರಿಗಳು ಮತ್ತು ತಜ್ಞ ವೈದ್ಯರು ಸೇರಿದ್ದಾರೆ. ಭಕ್ತರು ಪ್ರಯಾಣದ ಸಮಯದಲ್ಲಿ ಕನಿಷ್ಠ 7 ದಿನಗಳವರೆಗೆ ಯೋಜಿಸಬೇಕು. ಇದರಿಂದ ದೇಹವು ಹೆಚ್ಚುತ್ತಿರುವ ಮತ್ತು ಕಡಿಮೆಯಾಗುವ ತಾಪಮಾನಕ್ಕೆ ಒಗ್ಗಿಕೊಳ್ಳುತ್ತದೆ.

ಇದನ್ನೂ ಓದಿ : ಮಂಗಳೂರಿನಲ್ಲಿ ಬೆಳಕಿಗೆ ಬಂತು ಬಹುದೊಡ್ಡ ಆನ್ಲೈನ್ ವಂಚನೆ ಪ್ರಕರಣ; ಕೋಟಿಗಟ್ಟಲೆ ಕಳೆದುಕೊಂಡ ನಿವೃತ್ತ ಇಂಜಿನಿಯರ್

ಸೂಪರ್‌ಫಾಸ್ಟ್ ನೆಟ್‌ವರ್ಕ್ ಲಭ್ಯ :

ಕೇದಾರನಾಥದ ಸಂಪೂರ್ಣ ಟ್ರ್ಯಾಕ್‌ನಲ್ಲಿ 4G ಮತ್ತು 5G ನೆಟ್‌ವರ್ಕ್ ಲಭ್ಯವಿರುತ್ತದೆ. ಇದಕ್ಕಾಗಿ 4 ಟವರ್‌ಗಳನ್ನು ಅಳವಡಿಸಲಾಗಿದೆ. ಕಳೆದ ವರ್ಷ, ಈ ಟ್ರ್ಯಾಕ್‌ನಲ್ಲಿ ಕೆಲವು ಸ್ಥಳಗಳಲ್ಲಿ ಮಾತ್ರ ನೆಟ್‌ವರ್ಕ್ ಲಭ್ಯವಿತ್ತು. ನೀವು ದೇವಾಲಯದಲ್ಲಿ ವೈ-ಫೈ ಬಳಸಬೇಕಾದರೆ, ನೀವು ಸರ್ಕಾರಿ ಸ್ಲಿಪ್ ಪಡೆಯಬೇಕಾಗಿತ್ತು, ಆದರೆ ಈಗ ಅಲ್ಲಿಯೂ ಸೂಪರ್‌ಫಾಸ್ಟ್ ನೆಟ್‌ವರ್ಕ್ ಇರುತ್ತದೆ.

ಆನ್‌ಲೈನ್ ಪೂಜೆ ಬುಕಿಂಗ್ :

ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯೋಗೇಂದ್ರ ಸಿಂಗ್ ಪ್ರಕಾರ, ಈ ಬಾರಿ ಆನ್‌ಲೈನ್ ಪೂಜೆ ಜೂನ್ 30 ರವರೆಗೆ ಮಾತ್ರ ನಡೆಯಲಿದೆ. ಇದರಲ್ಲಿ ಶ್ರೀಮದ್ ಭಾಗವತ ಓದಲು 51 ಸಾವಿರ ರೂ. ಹಾಗೂ ಮಹಾಭಿಷೇಕಕ್ಕೆ 12 ಸಾವಿರ ರೂ. ನಿರ್ಧರಿಸಲಾಗಿದೆ.

ಚಾರ್ಟರ್ಡ್‌ ಹೆಲಿಕಾಪ್ಟರ್‌ ಸೇವೆ :

ಇದೇ ಮೊದಲಬಾರಿ ಇಲ್ಲಿ ಚಾರ್ಟರ್ಡ್‌ ಹೆಲಿಕಾಪ್ಟರ್‌ ಸೇವೆಯನ್ನು ಆರಂಭಿಸಲಾಗಿದೆ. ನಾಲ್ಕು ಜನರು ಪ್ರಯಾಣಿಸಬಹುದಾದ ಹೆಲಿಕಾಪ್ಟರ್‌ಗೆ 3.5 ಲಕ್ಷ ರೂ ಖರ್ಚು ಮಾಡಬೇಕಾಗುತ್ತದೆ. ಇನ್ನು ಚಾರ್‌ಧಾಮ್‌ಗೆ ಹೆಲಿಕಾಪ್ಟರ್‌ ಬುಕ್ ಮಾಡಿದ್ರೆ ಒಬ್ಬರಿಗೆ 1.95 ಸಾವಿರ ಚಾರ್ಜ್ ಆಗಲಿದೆ. ಇದರಲ್ಲಿ ವಸತಿ , ಊಟ ಎಲ್ಲವೂ ಸೇರಿದ್ದು, ಹೆಲಿಕಾಪ್ಟರ್‌ ಪ್ರವಾಸಿಗರು ಇದ್ದಲ್ಲೇ ತಂಗುತ್ತದೆ. ಹಾಗೊಂದು ವೇಳೆ ಚಾರ್‌ ಧಾಮ್‌ ಭೇಟಿ ನೀಡಿ ಒಂದೇ ದಿನದಲ್ಲಿ ವಾಪಾಸ್ ಆದ್ರೆ ಒಬ್ಬರಿಗೆ 1.05 ಲಕ್ಷ ಪಾವತಿಸಬೇಕಾಗುತ್ತದೆ.

ಯಾವೆಲ್ಲ ದೇವಾಲಯಗಳ ಬಾಗಿಲು ತೆರೆಯಲಿದೆ?

  • ಮೇ 12 ರಂದು ಬೆಳಗ್ಗೆ 6 ಗಂಟೆಗೆ ಬದರಿನಾಥ ಧಾಮದ ಬಾಗಿಲು ತೆರೆಯಲಿದೆ.
  • ಸಿಖ್ಖರ ಪವಿತ್ರ ಸ್ಥಳವಾದ ಹೇಮಕುಂಡ್ ಸಾಹಿಬ್‌ನ ಬಾಗಿಲು ಮೇ 25 ರಂದು ತೆರೆಯುತ್ತದೆ.
  • ಎರಡನೇ ಕೇದಾರ ಶ್ರೀ ಮದ್ಮಹೇಶ್ವರಜಿಯ ಬಾಗಿಲು ಮೇ 20 ರಂದು ತೆರೆಯುತ್ತದೆ.
  • ಮೂರನೇ ಕೇದಾರ ತುಂಗನಾಥ ಜೀ ಬಾಗಿಲು ಮೇ 10 ರಂದು ತೆರೆಯುತ್ತದೆ.
  • ಪಂಚ ಬದ್ರಿಯಲ್ಲಿರುವ ಪ್ರಸಿದ್ಧ ಭವಿಷ್ಯ ಬದ್ರಿಯ ಬಾಗಿಲು ಮೇ 12 ರಂದು ತೆರೆಯುತ್ತದೆ.
Continue Reading

LATEST NEWS

ಇನ್ಮುಂದೆ ಕೈಗೆಟಕುವ ದರದಲ್ಲೂ ಸಿಗಲಿದೆಯಂತೆ “ವಜ್ರ” ..! ಏನಿದು ಸಂಶೋಧನೆ?

Published

on

ದಕ್ಷಿಣ ಕೊರಿಯಾ/ಮಂಗಳೂರು: ವಜ್ರವು ಅತ್ಯಂತ ದುಬಾರಿ ನವರತ್ನಗಳಲ್ಲಿ ಒಂದಾಗಿದೆ. ವಜ್ರವು ಭೂಮಿಯ ಮೇಲೆ ನೈಸರ್ಗಿಕವಾಗಿ ಕಂಡುಬರುವ ಅತ್ಯಂತ ಕಠಿಣ ವಸ್ತುವಾಗಿದೆ. ಹಲವಾರು ಮಿಲಿಯನ್ ವರ್ಷಗಳಲ್ಲಿ ಹೆಚ್ಚಿನ ತಾಪಮಾನ ಮತ್ತು ಒತ್ತಡದ ಅಡಿಯಲ್ಲಿ ಭೂಮಿಯ ಹೊರಪದರದಲ್ಲಿ ಇಂಗಾಲದ ಪರಮಾಣುಗಳ ಘನೀಕರಣದಿಂದ ಇದು ರೂಪುಗೊಳ್ಳುತ್ತದೆ. ಫ್ಯಾಷನ್ ಮಾರುಕಟ್ಟೆಯಲ್ಲಿ ವಜ್ರಗಳಿಗೆ ಬೇಡಿಕೆ ಹೆಚ್ಚಿದೆ.

diamond

15 ನಿಮಿಷಗಳಲ್ಲಿ ತಯಾರುತ್ತೆ “ವಜ್ರ”:

ನೈಸರ್ಗಿಕ ವಜ್ರಗಳನ್ನು ಹೊರತೆಗೆಯಲು ಮತ್ತು ಪಾಲಿಶ್ ಮಾಡಲು ಬಹಳ ಸಮಯ ತೆಗೆದುಕೊಳ್ಳುವುದರಿಂದ, ಕೃತಕ ವಜ್ರ ತಯಾರಿಕೆಯು ವೇಗವನ್ನು ಪಡೆಯುತ್ತಿದೆ.ಆದರೆ ಇದು ಕೆಲವು ವಾರಗಳನ್ನು ತೆಗೆದುಕೊಳ್ಳುತ್ತದೆ.

diamond

ಆದ್ದರಿಂದ, ದಕ್ಷಿಣ ಕೊರಿಯಾದ ಸಂಶೋಧಕರು ಹೊಸ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ವಿಶೇಷ ದ್ರವ ಲೋಹದ ಮಿಶ್ರಣವನ್ನು ಬಳಸಿ ಕೇವಲ 15 ನಿಮಿಷಗಳಲ್ಲಿ ವಜ್ರಗಳನ್ನು ತಯಾರಿಸುವ ವಿಧಾನವನ್ನು ರೂಪಿಸಲಾಗಿದೆ. ಅದೂ ಸಹ ಅವುಗಳನ್ನು ಸಾಮಾನ್ಯ ವಾತಾವರಣದ ಒತ್ತಡದಲ್ಲಿ ತಯಾರಿಸಲಾಗುತ್ತದೆ. ಈ ಹೊಸ ವಿಧಾನವು ಇಲ್ಲಿಯವರೆಗೆ ಅಗತ್ಯವಿರುವ ಭಾರೀ ಒತ್ತುವ ಪ್ರಕ್ರಿಯೆಯನ್ನು ತಪ್ಪಿಸುತ್ತದೆ. ಕೈಗಾರಿಕಾ ಉದ್ದೇಶಗಳಿಗಾಗಿ ವಜ್ರಗಳ ಉತ್ಪಾದನೆಯನ್ನು ಹೆಚ್ಚಿಸಲು ಈ ವಿಧಾನವನ್ನು ಬಳಸಬಹುದು ಎಂದು ದಕ್ಷಿಣ ಕೊರಿಯಾದ ಇನ್ಸ್ಟಿಟ್ಯೂಟ್ ಫಾರ್ ಬೇಸಿಕ್ ಸೈನ್ಸ್‌ನ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ದ್ರವ ಲೋಹದಲ್ಲಿ ಇಂಗಾಲದ ಪರಮಾಣುಗಳನ್ನು ಸಂಯೋಜಿಸುವುದು ಹೊಸ ಪ್ರಕ್ರಿಯೆಯಲ್ಲ, ಆದರೆ ಇಲ್ಲಿಯವರೆಗೆ ಇದಕ್ಕೆ ಅಗಾಧವಾದ ಒತ್ತಡದ ಬಳಕೆಯ ಅಗತ್ಯವಿತ್ತು.

ಮುಂದೆ ಓದಿ..; “ನಿವೇದಿತಾಜೈನ್”ಗೆ ಸಾವಿನ ಸುಳಿವು ಮೊದಲೇ ಇತ್ತಾ.!? ಈಬಗ್ಗೆ ನಿವೇದಿತಾ ತಾಯಿ ಹೇಳಿದ್ದೇನು ಗೊತ್ತಾ?

diamond

ಗೇಲಿಯಂ, ಐರನ್, ನಿಕ್ಕಲ್, ಸಿಲಿಕಾನ್ ಮಿಥೇಲ್ , ಹೈಡ್ರೋಜನ್ ಗಳನ್ನು ಸೇರಿಸಿ ವ್ಯಾಕ್ಯೂಮ್‌ ವ್ಯವಸ್ಥೆಯ ಮೂಲಕ ವೇಗವಾಗಿ ಈ ಪ್ರೊಸೆಸ್ ಮಾಡಲಾಗುತ್ತಿದೆ. ಇದರಿಂದ ಕೇವಲ ಹದಿನೈದು ನಿಮಿಷಗಳಲ್ಲಿ ವಜ್ರವನ್ನು ತಯಾರಿ ಮಾಡುವ ಆವಿಷ್ಕಾರ ಮಾಡಲಾಗಿದೆ. ಈ ಎಲ್ಲಾ ಪ್ರೊಸೆಸ್ ನಡೆಯಲು ಕೇವಲ ನೂರ ಐವತ್ತು ನಿಮಿಷಗಳು ಸಾಕಾಗುತ್ತದೆ.

ಶಾಲೆಗೆ 100% ಫಲಿತಾಂಶ ತಂದುಕೊಟ್ಟ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯ ಭೀಕರ ಹ*ತ್ಯೆ

ಈ ಕೃತಕ ವಜ್ರ ಭೂಗರ್ಭದಲ್ಲಿ ಸಿಗುವ ಅಸಲಿ ವಜ್ರದಂತೆ ಇದ್ರೂ ಅದಕ್ಕೂ ಇದಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಆದ್ರೆ ಸದ್ಯ ಈ ಹೊಸ ಆವಿಷ್ಕಾರದಿಂದ ಮುಂದಿನ ದಿನಗಳಲ್ಲಿ ವಜ್ರದ ಬೆಲೆ ಕಡಿಮೆಯಾಗುವುದರ ಜೊತೆಗೆ ಹೊಸ ವಿನ್ಯಾಸದ ವಜ್ರಗಳೂ ಮಾರುಕಟ್ಟೆಗೆ ಲಗ್ಗೆ ಇಡುವ ಸಾದ್ಯತೆ ಇದೆ.

Continue Reading

FILM

“ನಿವೇದಿತಾಜೈನ್”ಗೆ ಸಾವಿನ ಸುಳಿವು ಮೊದಲೇ ಇತ್ತಾ.!? ಈಬಗ್ಗೆ ನಿವೇದಿತಾ ತಾಯಿ ಹೇಳಿದ್ದೇನು ಗೊತ್ತಾ?

Published

on

ಮಂಗಳೂರು: ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ನಾಯಕಿಯರು ದುರಂತ ಎಂಬಂತೆ ಸಾವಿನ ಕದ ತಟ್ಟಿದ್ದಾರೆ. ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಮಿಂಚುತ್ತಿದ್ದ ಮೋಹಕ ನಟಿಯರು ದುರಂತವಾಗಿ ಸಾವಿಗೀಡಾಗಿದ್ದಾರೆ. ಅದರಲ್ಲಿ ಒಬ್ಬರು ಮುದ್ದು ಮುಖದ ಚೆಲುವೆ ನೀಳಕಾಯದ ಸುಂದರಿ ನಿವೇದಿತಾ ಜೈನ್. ಹೌದು, ಅಲ್ಪ ಕಾಲ ಬದುಕಿದ್ದರೂ ಇವರು ನಟಿಸಿರುವ ಸಿನೆಮಾಗಳು ಹಿಟ್‌ ಲಿಸ್ಟ್‌ನಲ್ಲಿ ಸೇರಿಕೊಂಡಿದೆ. ಆದರೆ ಸಣ್ಣ ವಯಸ್ಸಿಲ್ಲಿಯೇ ಇಹಲೋಕ ಸೇರಿರುವುದು ಮಾತ್ರ ದುರಂತವೇ ಸರಿ.

niveditha jain

ಇನ್ನು ಸಣ್ಣ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಿವೇದಿತಾ ತನ್ನ 14 ನೇ ವರ್ಷಕ್ಕೆ ಮಿಸ್‌ ಬೆಂಗಳೂರು ಪಟ್ಟ ಮುಡಿಗೇರಿಸಿಕೊಂಡಿದ್ದರು.  ಒಂಭತ್ತನೇ ತರಗತಿಯಲ್ಲಿರುವಾಗಲೇ ಮಿಸ್ ಬೆಂಗಳೂರು ಆಗಿದ್ದರು. ಇಲ್ಲಿಂದ ಇವರ ಬದುಕೇ ಬದಲಾಯಿತಂತೆ. ಇನ್ನು ಇವರ ಫೊಟೊಗಳು ಪೇಪರ್ , ಮೆಗಾಝಿನ್‌ಗಳಲ್ಲಿ ಪ್ರಕಟಗೊಂಡಿತ್ತು. ಈ ಸಮಯದಲ್ಲಿ ರಾಘವೇಂದ್ರ ರಾಜಕುಮಾರ್ ನಟಿಸಲಿದ್ದ “ಶಿವರಂಜಿನಿ” ಚಿತ್ರಕ್ಕೆ ನಾಯಕಿಯಾಗಿ ಅಪ್ರೋಚ್ ಮಾಡಲಾಗಿತ್ತು. ಇದಕ್ಕಿಂತ ಮೊದಲು ನಿವೇದಿತಾಳಿಗೆ ಅನೇಕ ಸಿನೆಮಾ ಆಫರ್‌ಗಳು ಬಂದರೂ ಕೂಡಾ ಇವರು ಇಂಟ್ರಸ್ಟ್ ತೋರಿಸಿರಲಿಲ್ಲ. ಆದರೆ ಡಾ. ರಾಜ್‌ಕುಮಾರ್ ಅವರ ಕಡೆಯಿಂದ ರಾಘಣ್ಣನ ಸಿನೆಮಾಗೆ ನಾಯಕಿಯಾಗಿ ನಟಿಸುವಂತೆ ಆಫರ್ ಬಂದಿತ್ತು. ಇನ್ನು ತುಂಬಾನೆ ಚಿಕ್ಕವಳಾಗಿದ್ದ ಇವರಿಗೆ ಸಿನೆಮಾಗಳಲ್ಲಿ ನಟಿಸುವ ಆಸಕ್ತಿ ಇಲ್ಲವಾಗಿತ್ತು. ಆದರೆ ನಿವೇದಿತಾಳಿಗೆ ರಾಜ್‌ಕುಮಾರ್‌ರವರ ಜೊತೆ ನಟಿಸಲು ಬಹಳ ಆಸಕ್ತಿ ಇತ್ತಂತೆ. ಹಾಗಾಗಿ ಅವರ ಬ್ಯಾನರ್‌ನಲ್ಲಿ ಮೂಡಿಬರುವ “ಶಿವರಂಜಿನಿ” ಸಿನೆಮಾಗೆ ನಟನೆ ಮಾಡಲು ಒಪ್ಪಿದ್ದರಂತೆ ನಿವೇದಿತಾ.

 ಸಲ್ಮಾನ್ ಖಾನ್ ಜೊತೆ ನಟಿಸಲಿದ್ದಾರೆ ರಶ್ಮಿಕಾ ಮಂದಣ್ಣ; ಯಾವ ಸಿನಿಮಾ? ಇಲ್ಲಿದೆ ಡಿಟೇಲ್ಸ್

ನಟಿಯ ಸಾವಿನ ಸುಳಿವು ಮೊದಲೇ ಇತ್ತಾ..?

niveditha

ನಿವೇದಿತಾ ಜೈನ್‌ ಇವರ ಸಾವಿನ ಬಗ್ಗೆ ನೂರಾರು ಮಾತುಗಳು ಕೇಳಿ ಬರುತ್ತಿತ್ತು. ವದಂತಿಗಳು ಹಬ್ಬಿತ್ತು. ಇನ್ನು ನಿವೇದಿತಾ ಬದುಕಿ ಬಾಳಿದ್ದು ಮಾತ್ರ ಕೇವಲ 19 ವರ್ಷ. ಆದರೆ ಅಷ್ಟರಲ್ಲೇ 12ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಅಭಿನಯಿಸಿದ್ರು.  ಬದುಕಿ ಉಳಿದಿದ್ರೆ ಈಗ ಬಾಲಿವುಡ್‌ ನಲ್ಲೂ ಸ್ಟಾರ್ ಆಗ್ತಿದ್ರು ಈಕೆ.  ಮಗಳ ಸಾವಿನ ಬಗ್ಗೆ ಸ್ವತಃ ಅವರ ತಾಯಿ ಪ್ರಿಯಾ ಜೈನ್ ಖಾಸಗಿ ಯೂಟ್ಯೂಬ್ ಚಾನೆಲ್ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಮತ್ತೆ ಡೀಪ್ ಫೇಕ್ ಗೆ ಬಲಿಯಾದ ಆಲಿಯಾ ಭಟ್; ನಟಿಯ ವೀಡಿಯೋ ನೋಡಿ ಫ್ಯಾನ್ಸ್ ಶಾಕ್!

ಕೇರಳದ ವ್ಯಕ್ತಿಯಿಂದ ಸಿಕ್ಕಿತ್ತು ಸಾವಿನ ಮುನ್ಸೂಚನೆ:

ಕೊಲ್ಲೂರು ದೇವಸ್ಥಾನಕ್ಕೆ ನಿವೇದಿತಾ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು. ಈ ವೇಳೆ ಕೇರಳದಿಂದ ಬಂದವರು 45 ದಿನಗಳ ಉಪವಾಸದಲ್ಲಿದ್ದು ಪೂಜೆ ಮಾಡುತ್ತಿದ್ದರು. ಅವರು ಏಕಾಏಕಿ ನಮ್ಮನ್ನು ಅವರ ಬಳಿ ಕರೆಸಿಕೊಂಡರು. ನಮ್ಮ ಮನೆಯ ಎಲ್ಲಾ ವಿಚಾರವನ್ನು ಸ್ಪಷ್ಟವಾಗಿ ವಿವರಿಸಿದರು. ಮನೆಯ ಅಡುಗೆ ಕೋಣೆ ಯಾವ ಭಾಗದಲ್ಲಿದೆ. ಯಾವ ಭಾಗದಲ್ಲಿ ದೇವರ ಕೋಣೆ ಇದೆ ಹೀಗೆ..ಎಲ್ಲಾ ಇರೋದನ್ನು ಕಂಡ ಹಾಗೆ ಹೇಳಿದ್ದರು. ಇನ್ನು ಮಗಳು ನಿವೇದಿತಾಳನ್ನು ನೋಡಿ ಇವಳು ಅಲ್ಪಾಯುಷಿ ಎಂದು ಹೇಳಿದ್ರು.  ಇವಳ ಹಣೆಗೆ ಬಲವಾದ ಪೆಟ್ಟು ಬೀಳಲಿದೆ. ನೀವು ಕೂಡಲೇ ಮನೆಯನ್ನು ಬದಲಾಯಿಸಿ ಎಂದು ಹೇಳಿದ್ದರು. ನಾವು ಕೂಡಾ ಬೇರೆ ಮನೆಯನ್ನು ಹುಡುಕಾಡಲು ಆರಂಭಿಸಿದೆವು. ಆದರೆ ದುರಾದೃಷ್ಟವಶಾತ್ ನಮಗೆ ಮನೆ ಸಿಗಲಿಲ್ಲ. ನಮ್ಮ ಮಗಳು ಕೂಡಾ ನಮ್ಮ ಪಾಳಿಗೆ ಉಳಿಲಿಲ್ಲಾ. ಅವರು ಏನು ಹೇಳಿದ್ದರೋ ಹಾಗೆ ನಡೆದು ಹೋಯಿತು ಎಂದು ನಿವೇದಿತಾ ತಾಯಿ ಪ್ರಿಯಾ ಜೈನ್ ಹೇಳಿದ್ರು.

ಇನ್ನು ಈ ಬಗ್ಗೆ ಕೆಲವು ವರದಿಗಳಲ್ಲಿ ನಿವೇದಿತಾ ಈ ವಿಷಯ ತಿಳಿದ ಕೂಡಲೇ ದಿಗ್ಭ್ರಾಂತಳಾಗಿದ್ದಾಳೆ ಎಂದೆಲ್ಲ ಸುದ್ದಿಯಾಗಿತ್ತು. ಆದರೆ ನಿವೇದಿತಾ ಜೈನ್ ‘ನಮ್ಮದೇ ಆದ ಕರ್ಮ ಇರುತ್ತೆ ನಂಗೆ ಅಷ್ಟು ಬೇಗ ಏನೂ ಆಗವುದಿಲ್ಲ’ ಅಂತ ಹೇಳುತ್ತಿದ್ದರು. ಇನ್ನು ಜೀವನದಲ್ಲಿ ತುಂಬಾನೇ ಪಾಸಿಟಿವ್ ಆಗಿದ್ರಂತೆ ನಿವೇದಿತಾ.

 

Continue Reading

LATEST NEWS

Trending