Connect with us

LATEST NEWS

ಜೀವಾಂತ್ಯವಾದ ಕಾಂತಾಬಾರೆ-ಬೂದಬಾರೆ ಜನ್ಮಕ್ಷೇತ್ರದ ಮರ..! ಇತಿಹಾಸದ ಜೀವಂತ ಸಾಕ್ಷಿಯ ಅಂತ್ಯ..!

Published

on

ಕಿನ್ನಿಗೋಳಿ: ಮುಲ್ಕಿ ತಾಲೂಕು ಕೊಲ್ಲೂರಿನ ಶ್ರೀ ಕಾಂತಬಾರೆ-ಬೂದಬಾರೆ ಜನ್ಮ ಕ್ಷೇತ್ರದ ತಾಕೊಡೆ ಮರ ಶುಕ್ರವಾರ(ಎ.3) ಮದ್ಯಾಹ್ನ ಬುಡಸಹಿತ ಧರೆಗುರುಳುವುದರೊಂದಿಗೆ ಇತಿಹಾಸದ ಜೀವಂತ ಸಾಕ್ಷಿಯೊಂದು ಅಂತ್ಯ ಕಂಡಂತಾಗಿದೆ.

ಸುಮಾರು 800 ರಿಂದ 1000 ವರ್ಷಗಳ ಹಿನ್ನೆಲೆ ಈ ತಾಕೊಡೆ ಮರಕ್ಕೆ ಇತ್ತು ಅನ್ನುವುದು ಅಧ್ಯಯನಗಳಿಂದಲೂ ದೃಢವಾಗಿದೆ. ಮೂಲ್ಕಿ ಸಾವಂತ ಅರಸರ ದಳವಾಯಿಗಳಾಗಿದ್ದ ಅವಳಿ ವೀರರಾದ  ಕಾಂತಬಾರೆ-ಬೂದಬಾರೆಯರು. ಹುಟ್ಟಿದ್ದು ಇದೇ ತಾಕೊಡೆ ಮರದಡಿಯಲ್ಲಿ ಮತ್ತು ಆಗ ತಾನೆ ಹುಟ್ಟಿದ ಅವಳಿ ಮಕ್ಕಳನ್ನು ಬಟ್ಟೆಯ ತೊಟ್ಟಿಲು ಹಾಕಿ ತೂಗಿದ್ದು ಇದೇ ತಾಕೊಡೆ ಮರದ ಪಡ್ಡಾಯಿ ಕೊಂಬೆ ಅನ್ನುವುದು ಉಲ್ಲೇಖನೀಯ. ಬೃಹದಾಕಾರದ ಈ ಮರದ ಪಡ್ದಾಯಿ ಗೆಲ್ಲು ಕೆಲ ವರ್ಷಗಳ ಹಿಂದೆ ಭಾರೀ ಗಾಳಿಮಳೆಯ ಸಂದರ್ಭ ಬಿದ್ದಿತ್ತು.

kanthabare

ಮುಂದೆ ಓದಿ..; ಪ್ರಾಂಶುಪಾಲೆ, ಶಿಕ್ಷಕಿ ನಡುವೆ ಹೊಯ್‌ ಕೈ..!! ವೀಡಿಯೋ ವೈರಲ್

ಸುಮಾರು 2ರಿಂದ 3 ಮೀಟರ್‌ಗಳಷ್ಟು ವ್ಯಾಸವಿದ್ದ ಈ ಮರದ ಉತ್ತರ ದಿಕ್ಕಿನ ಗೆಲ್ಲು ಕೆಲ ದಿನಗಳ ಹಿಂದೆ ಬಿದ್ದಿತ್ತು. ಸುದೀರ್ಘ ಕಾಲಮಾನದಲ್ಲಿ ಅದರಷ್ಟೇ ಆದ ಯಾವುದೇ ಗಿಡ ಚಿಗುರಿದರೂ ಜೀವಂತ ಉಳಿದಿರಲಿಲ್ಲ. ಆದರೆ ಇದೀಗ ಪರ್ಯಾಯವಾಗಿ ಪಕ್ಕದಲ್ಲಿ ತಾಕೊಡೆಯ ಗಿಡವೊಂದು ಭವಿಷ್ಯದ ಸಾಕ್ಷಿಯಾಗಿ ಗೋಚರವಾಗಿದೆ. ಧಾರ್ಮಿಕ ಮಹತ್ವದ ಧರೆಗುರುಳಿದ ಮರದ ತೆರವಿಗೆ ಪೂರ್ವಭಾವಿಯಾಗಿ ಧಾರ್ಮಿಕ ಪ್ರಕ್ರಿಯೆ ಸಹಿತ ಪ್ರಶ್ನಾಚಿಂತನೆ ನಡೆಸಿ ಆ ಪ್ರಕಾರ ಮುಂದುವರಿಯಲು ಕ್ಷೇತ್ರದ ಆಡಳಿತ ಸಮಿತಿ ಹಾಗೂ ಟ್ರಸ್ಟ್ ತೀರ್ಮಾನಿಸಿದೆ.

DAKSHINA KANNADA

”ನಮ್ಮ ಕಂಬಳ ಪ್ರಶಸ್ತಿ ಪ್ರದಾನ 2024”ರ ಸಂಭ್ರಮ; ಕಂಬಳ ಸಾಧಕರನ್ನು ಗುರುತಿಸಿ ಗೌರವಿಸಿದ “ನಮ್ಮ ಕುಡ್ಲ”

Published

on

ಮಂಗಳೂರು : ತುಳುನಾಡಿನ ಜಾನಪದ ಕ್ರೀಡೆ ಕಂಬಳಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 2023/24 ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆದ ಒಟ್ಟು 24 ಕಂಬಳಗಳ 6 ವಿಭಾಗಗಳಲ್ಲಿ ಪ್ರಶಸ್ತಿ ನೀಡುವ ವಿಶೇಷ ಕಾರ್ಯಕ್ರಮ ಶುಕ್ರವಾರ (ಮೇ 17) ಮಂಗಳೂರಿನ ಸೈoಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ಎಲ್.ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.


ನಮ್ಮಕುಡ್ಲ ಟಿವಿ ಚಾನೆಲ್, ನಮ್ಮ ಕಂಬಳ ಟೀಮ್ ದುಬಾಯಿ ಮತ್ತು ಸೈoಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭವನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ ಅಧ್ಯಕ್ಷತೆಯಲ್ಲಿ ಮೂಲ್ಕಿ ಸೀಮೆ ದುಗ್ಗಣ್ಣ ಸಾವಂತರಸರು ಮತ್ತು ಸೈoಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ರೆಕ್ಟರ್ ಫಾ. ಮೆಲ್ವಿನ್ ಜೋಸೆಫ್ ಪಿಂಟೋ ಅವರು ಉದ್ಘಾಟಿಸಿದರು. ನಮ್ಮಕುಡ್ಲ ಚಾನೆಲ್ ನ ಸಿಒಒ ಕದ್ರಿ ನವನೀತ ಶೆಟ್ಟಿ ಪ್ರಸ್ತಾವನೆಗೈದು ‘ನಮ್ಮಕಂಬಳ ಪ್ರಶಸ್ತಿ 2024’ ರ ಬಗ್ಗೆ ಮಾಹಿತಿ ನೀಡಿದರು.

‘ನಮ್ಮ ಕಂಬುಲ ನನ ದುಂಬುಲ’ ಕೈಪಿಡಿ ಬಿಡುಗಡೆ

ಕದ್ರಿ ನವನೀತ ಶೆಟ್ಟಿ ಮತ್ತು ಸನತ್ ಕುಮಾರ್ ಶೆಟ್ಟಿ ದುಬಾಯಿ ಸಂಪಾದಿತ ‘ನಮ್ಮ ಕಂಬುಲ ನನ ದುಂಬುಲ’ ಎಂಬ 2023/24 ನೇ ಸಾಲಿನ ಕಂಬಳದ ಮಾಹಿತಿ ಕೈಪಿಡಿಯನ್ನು ಮೂಲ್ಕಿ ಸೀಮೆ ದುಗ್ಗಣ್ಣ ಸಾವಂತರಸರು ಬಿಡುಗೆಡೆ ಮಾಡಿದರು. ರಿಯಲ್‌ಎಸ್ಟೇಟ್‌ಉದ್ಯಮಿ ಹಾಗೂ ಬಿಲ್ಡರ್ ಕ್ಷೇತ್ರದ ಹಿರಿಯ ಸಾಧಕ ರೋಹನ್ ಕಾರ್ಪೋರೇಷನಿನ ಆಡಳಿತ ನಿರ್ದೇಶಕ ರೋಹನ್ ಮೊಂತೆರೊ ಅವರಿಗೆ ಪೇಟ ಧರಿಸಿ, ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಗೌರವ ಸನ್ಮಾನ ನೀಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಡಾ.ಮೋಹನ್ ಆಳ್ವ ಮಾತನಾಡಿ, ಕಾಲದೊಂದಿಗೆ ಬದಲಾದ ಕಂಬಳ ಇಂದು ಜಗತ್ತಿನ ಗಮನ ಸೆಳೆದೆದಿದೆ. ಹಂತ ಹಂತವಾಗಿ ಕಂಬಳ ಬದಲಾಗಿ ಇಂದು ಲಕ್ಷಾಂತರ ಜನರನ್ನು ತಲುಪಿದೆ. ಇಂತಹ ಬದಲಾವಣೆಗಳ ಜತೆಗೆ ಕಂಬಳದಲ್ಲಿ ಕೋಣಗಳನ್ನು ಬಿಡುವ ವಿಚಾರದಲ್ಲೂ ಬದಲಾವಣೆ ಆಗ ಬೇಕು ಎಂದರು.

ರೋಹನ್ ಮೊಂತೆರೊ ಅವರು ಮಾತನಾಡಿ, ಈ ಸನ್ಮಾನದಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಬಾಲ್ಯದಲ್ಲಿ ತಾನು ಕೂಡಾ 2 ವರ್ಷ ಗದ್ದೆಯಲ್ಲಿ ಉಳುಮೆ ಮಾಡಿದ್ದೇನೆ. ಕೋಣಗಳನ್ನು ಸಾಕುವ ಕಷ್ಟ ನನಗೂ ಗೊತ್ತು ಎಂದು ಹೇಳಿ ನಮ್ಮಕುಡ್ಲ ಚಾನೆಲ್ ಮತ್ತು ಸಂಘಟಕರನ್ನು ಅಭಿನಂದಿಸಿದರು.

ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಪುತ್ತೂರು ಶಾಸಕ, ಬೆಂಗಳೂರು ಕಂಬಳದ ಸಾರಥಿ ಅಶೋಕ್‌ ಕುಮಾರ್ ರೈ, ಆಭರಣ ಟೈಮ್ ಲೆಸ್ ಜುವೆಲ್ಲರಿ ಬೆಂಗಳೂರು ಇದರ ಮಾಲಕ ಪ್ರತಾಪ್ ಮಧುಕರ ಕಾಮತ್, ಎಸ್.ಎಲ್. ಡೈಮಂಡ್ ಹೌಸ್ ನ ಮಾಲಕ ಪ್ರಶಾಂತ್ ಶೇಟ್, ಜನಪದ ವಿದ್ವಾoಸ ಹಾಗೂ ಕಂಬಳದ ಪ್ರಧಾನ ತೀರ್ಪುಗಾರ ಗುಣಪಾಲ ಕಡoಬ, ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಶಿಸ್ತು ಸಮಿತಿಯ ಅಧ್ಯಕ್ಷ ಭಾಸ್ಕರ ಕೋಟ್ಯಾನ್, ಸೈoಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ಡೀನ್ ಡಾ. ಆದರ್ಶ ಗೌಡ, ಅದಾನಿ ಸಂಸ್ಥೆಯ ಸಿಇಒ ಕಿಶೋರ್ ಆಳ್ವ, ಪಟ್ಲ ಫೌಂಡೇಶನಿನ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ನಮ್ಮ ಕುಡ್ಲ ಸಂಸ್ಥೆಯ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಸ್ವಾಗತಿಸಿ, ವಂದಿಸಿದರು. ನಿರ್ದೇಶಕರಾದ ಹರೀಶ್ ಬಿ. ಕರ್ಕೇರ, ಸುರೇಶ್ ಬಿ. ಕರ್ಕೇರ, ಮೋಹನ್ ಬಿ. ಕರ್ಕೇರ, ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಸುದರ್ಶನ್, ಅಮಿತಾ, ಸುರೇಖಾ ಶೆಟ್ಟಿ ಮತ್ತಿತರರು ಇದ್ದರು. ನಿತಿನ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.

120 ಪ್ರಶಸ್ತಿ ಪ್ರದಾನ :

ಕಂಬಳದ ಚಾಂಪಿಯನ್ ಕೋಣ ಹಾಗೂ ಕೋಣದ ಯಜಮಾನರಿಂದ ಹಿಡಿದು ತಂಡದ ಎಲ್ಲಾ ಸದಸ್ಯರನ್ನು ಗುರುತಿಸಿ ವಿವಿಧ ವಿಭಾಗಗಳಲ್ಲಿ ಒಟ್ಟು ಸುಮಾರು 120 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಕನೆ ಹಲಗೆ ಮತ್ತು ಅಡ್ಡ ಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್ ಕೆ. ಪೂಜಾರಿ, ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ ಭಟ್, ಹಗ್ಗ ಕಿರಿಯ ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ, ನೇಗಿಲು ಹಿರಿಯ ಬೋಳದ ಗುತ್ತು ಸತೀಶ್ ಶೆಟ್ಟಿ, ನೇಗಿಲು ಕಿರಿಯ ಮುನಿಯಾಲ್ ಉದಯಕುಮಾರ್ ಶೆಟ್ಟಿ ಸೇರಿದಂತೆ ಕೋಣಗಳ ಯಜಮಾನರಿಗೆ ಪ್ರಶಸ್ತಿ ನೀಡಲಾಯಿತು.

ಇದನ್ನೂ ಓದಿ : ಕೊನೆಗೂ ಮೌನ ಮುರಿದ ಎಚ್‌ಡಿ ದೇವೇಗೌಡ..! ಪ್ರಜ್ವಲ್ ಬಗ್ಗೆ ಹೇಳಿದ್ದೇನು?

ಬೈಂದೂರು ಮಹೇಶ್ ಪೂಜಾರಿ, ಭಟ್ಕಳ ಹರೀಶ್, ಬಂಬ್ರಾಣ ಬೈಲ್ ವಂದಿತ್ ಶೆಟ್ಟಿ, ಭಟ್ಕಳ ಶಂಕರ ನಾಯ್ಕ್, ಕಕ್ಕೆ ಪದವು ಪೆರ್oಗಾಲ್ ಕೃತಿಕ್ ಗೌಡ ಮತ್ತು ಮಾಸ್ತಿಕಟ್ಟೆ ಸ್ವರೂಪ್ ಸಹಿತ 6 ವಿಭಾಗಗಳಲ್ಲಿ ಕೋಣ ಓಡಿಸುವವರನ್ನು ನಮ್ಮ ಕಂಬಳ ಪ್ರಶಸ್ತಿ ನೀಡಿ ಗೌರವಿಸಲಾಯಿತು. 6 ವಿಭಾಗಗಳ ಕೋಣಗಳಿಗೆ ಚಾoಪಿಯನ್ ಅವಾರ್ಡ್ ಪ್ರದಾನ ಮಾಡಲಾಯಿತು. ಕಂಬಳ ಸಂಯೋಜಕರು ಮತ್ತು ತೀರ್ಪುಗಾರರನ್ನು ಶಾಲು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.

Continue Reading

LATEST NEWS

ಐದು ಮಕ್ಕಳಿದ್ದಾರೆಂದು ಚಿಂತೆಗೊಳಗಾದ ತಂದೆ..! ಅಕ್ಕನಿಂದಲೇ ಇಬ್ಬರು ಸಹೋದರಿಯರ ಕೊ*ಲೆ..!

Published

on

ಉತ್ತರ ಪ್ರದೇಶ:  ಐದು ಮಕ್ಕಳು ಇರುವುದರಿಂದ ತಂದೆ ಚಿಂತೆಗೊಳಗಾಗಿದ್ದಾರೆ ಎಂದು ಸ್ವತಃ ಅಕ್ಕನೇ ಇಬ್ಬರು ಸಹೋದರಿಯರನ್ನು ಕೊಂ*ದ ಹೇಯ ಕೃತ್ಯ ಉತ್ತರಪ್ರದೇಶದಲ್ಲಿ ನಡೆದಿದೆ.  ಮೇ.16ರಂದು ತಡರಾತ್ರಿ 12.30ರ ಸುಮಾರಿಗೆ ನೂರ್‌ಪುರ್ ಪೊಲೀಸ್ ಠಾಣೆಗೆ ಗೌಹಾವರ್ ಜೈತ್ ಗ್ರಾಮದ ಮನೆಯೊಂದರಲ್ಲಿ ಇಬ್ಬರು ಬಾಲಕಿಯರ ಶ*ವ ಪತ್ತೆಯಾಗಿರುವುದರ ಬಗ್ಗೆ ಪೊಲೀಸರು ತಿಳಿಸಿದ್ದಾರೆ.

murder

ರಿತು(7 ವ), ಪವಿತ್ರ(5 ವ) ಮೃತಪಟ್ಟ ಬಾಲಕಿಯರು. ಪೊಲೀಸರು ಘಟನೆ ಬಗ್ಗೆ ತಿಳಿದ ಕೂಡಲೇ ಮನೆಗೆ ಧಾವಿಸಿದ್ದಾರೆ. ಈ ವೇಳೆ ಇಬ್ಬರು ಬಾಲಕಿಯರ ಮೃತದೇಹ ಮನೆಯ ನೆಲದ ಮೇಲೆ ಬಿದ್ದಿತ್ತು. ಸಹದೇವ್ ಹಾಗೂ ಸವಿತಾ ತಮ್ಮ ಐದು ಮಂದಿ ಮಕ್ಕಳ ಜೊತೆ ವಾಸ ಮಾಡ್ತಾಇದ್ದರು. ಸವಿತಾ ಅವರ 13 ವರ್ಷ ಮತ್ತು 9 ವರ್ಷದ ಇಬ್ಬರು ಹಿರಿಯ ಹೆಣ್ಣು ಮಕ್ಕಳು ಮೊದಲ ಪತಿಯ ಮಕ್ಕಳಾಗಿದ್ದಾರೆ. ಇನ್ನು ಮೃತ ಪಟ್ಟ ಬಾಲಕಿಯರು ಸೇರಿದಂತೆ 1.5 ವರ್ಷದ ಮಗು ಎರಡನೇ ಪತಿ ಸಹದೇವ್‌ರವರ ಮಕ್ಕಳು.

ನಟಿ ಪವಿತ್ರಾ ಜಯರಾಂ ಸಾ*ವಿನ ಬೆನ್ನಲ್ಲೇ ಆತ್ಮಹ*ತ್ಯೆಗೆ ಶರಣಾದ ಸಹನಟ ಚಂದು!

ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಮನೆಗೆ ನುಗ್ಗಿ ಸಹೋದರಿಯರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಬಾಲಕಿ ಹೇಳಿದ್ದಾಳೆ. ಬಳಿಕ ತಾನೇ ಈ ಕೃ*ತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಆಕೆಯ ತಂದೆ ಮನೆಯಲ್ಲಿ ಹೆಚ್ಚು ಸದಸ್ಯರು ಇರುವುದರಿಂದ ಚಿಂತೆಗೆ ಒಳಗಾಗಿದ್ದರು. ಹೀಗಾಗಿ ನಾನು ಇಬ್ಬರು ಸಹೋದರಿಯರನ್ನು ಸ್ಕಾರ್ಫ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾಳೆ. ಮೃತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಾಲಕಿಯಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಎಸ್‌ಪಿ ಜದೌನ್ ತಿಳಿಸಿದ್ದಾರೆ.

 

Continue Reading

LATEST NEWS

ಕೊನೆಗೂ ಮೌನ ಮುರಿದ ಎಚ್‌ಡಿ ದೇವೇಗೌಡ..! ಪ್ರಜ್ವಲ್ ಬಗ್ಗೆ ಹೇಳಿದ್ದೇನು?

Published

on

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನ ಮಂತ್ರಿ ದೇವೇಗೌಡರವರು ಮೌನ ಮುರಿದಿದ್ದಾರೆ. ಇದೇ ಮೊದಲ ಬಾರಿಗೆ ಪ್ರಜ್ವಲ್ ಪೆಂಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದಾರೆ.  ಬೆಂಗಳೂರಿನಲ್ಲಿ ಮಾತನಾಡಿದ ದೇವೇಗೌಡರು, ಪ್ರಜ್ವಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ. ನಮ್ಮದೇನು ತಕರಾರಿಲ್ಲ. ಆದರೆ ರೇವಣ್ಣ ವಿಚಾರದಲ್ಲಿ ಜನರಿಗೆ ಸತ್ಯ ಗೊತ್ತಿದೆ.  ರೇವಣ್ಣ ಪ್ರಕರಣ ಕೋರ್ಟ್‌ನಲ್ಲಿ ನಡೆಯುತ್ತಿದೆ. ಈ ಪ್ರಕರಣದಲ್ಲಿ ರೇವಣ್ಣರನ್ನು ಯಾವ ರೀತಿ ಸಿಲುಕಿಸಿದ್ದಾರೆ. ಕೇಸ್ ಹೇಗೆ ದಾಖಲು ಮಾಡಿದ್ದಾರೆ ಎಂದು ನಮಗೆ ತಿಳಿದಿದೆ. ಕೋರ್ಟ್‌ನಲ್ಲಿ ಜಡ್ಜ್‌ಮೆಂಟ್ ನಡೀತಿದೆ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

devegowda

ಇದನ್ನೂ ಓದಿ..; ಪ್ರಜ್ವಲ್ ರೇವಣ್ಣ ಪ್ರಕರಣ; ವೀಡಿಯೋ, ಫೋಟೋ ಅಪ್ಲೋಡ್ ಮಾಡಿದ್ದಾತ ಅರೆಸ್ಟ್

ಇಂದು 92ನೇ ಹುಟ್ಟು ಹಬ್ಬ ಹಿನ್ನೆಲೆ ಜೆಪಿ ನಗರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.  ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ದೇವೇಗೌಡರು ಈಗಾಗಲೇ ಈ ಘಟನೆ ಬಗ್ಗೆ ಕುಮಾರಾಸ್ವಾಮಿ ಅವರು ನಮ್ಮ ಕುಟುಂಬದ ಪರವಾಗಿ ಮಾತನಾಡಿದ್ದಾರೆ.  ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ. ಇದರಲ್ಲಿ ಅನೇಕರ ಹೆಸರು ಇದೆ, ಆದರೆ ನಾನು ಅವರ ಹೆಸರನ್ನು ಹೇಳಲು ಬಯಸುವುದಿಲ್ಲ. ಇನ್ನು ಸಂತ್ರಸ್ಥ ಮಹಿಳೆಯರಿಗೆ ಪರಿಹಾರ ನೀಡಬೇಕು. ಈ ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಅವರೆಲ್ಲರಿಗೂ ಶಿಕ್ಷೆ ಆಗಬೇಕು. ಈ ಕುರಿತಾಗಿ ಕುಮಾರಸ್ವಾಮಿಯವರು ಬಿಡಿ ಬಿಡಿಯಾಗಿ ತಿಳಿಸಿದ್ದಾರೆಎಂದು ಹೇಳಿದರು. .

Continue Reading

LATEST NEWS

Trending