Connect with us

hasana

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರ; ಚಾಲಕನಿಗೆ ಗಂಭೀರ ಗಾ*ಯ

Published

on

ಹಾಸನ:  ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಚಾಲಕ ಗಂಭೀರ ಗಾ*ಯಗೊಂಡು ಆಸ್ಪತ್ರೆಗೆ ಸೇರಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹಾಸನ- ಸಕಲೇಶಪುರ ನಡುವೆ ಇರುವ ಬಾಳುಪೇಟೆಯ ಬಳಿ ಈ ಘಟನೆ ನಡೆದಿದ್ದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಳುಪೇಟೆಯಿಂದ ಕೋಡ್ಲಿ ಹಳ್ಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಈಗಾಗಲೇ ಇದೇ ರೀತಿ ಮರ ಬಿದ್ದು ನಾಲ್ಕು ಜನ ಮೃತಪಟ್ಟಿದ್ದಾರೆ.

ಮರಗಳ ತೆರವಿಗೆ ಆಗ್ರಹ :

ಈ ರಸ್ತೆಯ ಉದ್ದಕ್ಕೂ ಇಕ್ಕೆಲೆಗಳಲ್ಲಿ ಮರಗಳಿದ್ದು ಹಲವು ಹಳೆಯ ಮರಗಳು ಗೆದ್ದಲು ಹಿಡಿದು ನಿಂತಿವೆ. ಸಣ್ಣ ಗಾಳಿ ಬೀಸಿದರೂ ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ತೆರವು ಮಾಡಲು ಈ ಹಿಂದೆಯೇ ಸ್ಥಳೀಯರು ಒತ್ತಾಯಿಸಿದ್ದರು. ಆದರೆ, ಮರ ತೆರವು ಮಾಡಲು ಮುಂದಾಗದ ಅಧಿಕಾರಿಗಳ ವರ್ತನೆಯಿಂದಾಗಿ ಈಗಾಗಲೇ ನಾಲ್ಕು ಜೀವ ಹೋಗಿದೆ.

ಇದೀಗ ಮತ್ತೆ ಘಟನೆ ಮರುಕಳಿಸಿದ್ದು, ಕಾರು ಚಾಲಕ ಗಂಭೀರ ಗಾಯಗೊಂಡಿದ್ದಾರೆ.  ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಸ್ಥಳಿಯರೇ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.

Click to comment

Leave a Reply

Your email address will not be published. Required fields are marked *

hasana

ಆರ್‌ಎಸ್‌ಎಸ್‌ ಬಗ್ಗೆ ತಪ್ಪಾಗಿ ಮಾತಾಡಿದ್ರೆ ಕ್ಷಮಿಸಿ ಎಂದ ಪ್ರಜ್ವಲ್ ರೇವಣ್ಣ

Published

on

ಹಾಸನ: ನನ್ನ ಗಮನಕ್ಕೆ ಬಾರದೆ ನಾನು ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿದ್ದೆ. ನಾನೊಬ್ಬ ಯುವಕನಾಗಿ ಹೋರಾಟದ ದೃಷ್ಠಿಯಿಂದ ಮಾತನಾಡಿದ್ದೆ . ಆದರೆ ಈಗ ನಾನು ಆರ್‌ಎಸ್‌ಎಸ್‌ ನ ಬಗ್ಗೆ ಅರಿವಿಲ್ಲದೆ ಮಾತನಾಡಿರುವುದು ತಪ್ಪು. ನನಗೆ ಅರಿವಾಗಿದೆ. ಸಭೆಯಲ್ಲಿ ಆರ್‌ಎಸ್‌ ಕಾರ್ಯಕರ್ತರು, ಮುಖಂಡರು ಇದ್ದಲ್ಲಿ ನನ್ನನ್ನು  ಕ್ಷಮಿಸಿ ಬಿಡಿ ಎಂದು ಸಭೆಯೊಂದರಲ್ಲಿ ಕೇಳಿಕೊಂಡಿದ್ದಾರೆ.

prajwal

ಈಗಾಗಲೇ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಜೋಡಿ ಎತ್ತುಗಳ ಹಾಗೆ ಲೋಕಸಭಾ ಚುನಾವಣಾ ಆಖಾಡದಲ್ಲಿ ಪ್ರಚಾರ ಆರಂಭಿಸಿದ್ದಾರೆ.  ಈ ಹಿನ್ನೆಲೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಜೆಡಿಎಸ್​ ಮತ್ತು ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಜ್ವಲ್ ರೇವಣ್ಣರವರು ಮಾತನಾಡಿದ್ದಾರೆ.

ಇದನ್ನೂ ಓದಿ : ಮುಂದಿನ ದಿನಗಳಲ್ಲಿ ಈ ಭಾಗಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ನಾನು ಸಂಸದನಾಗಿ ಆಯ್ಕೆಯಾಗಿ 5 ವರ್ಷಗಳಾಗಿದೆ. ಐದು ವರ್ಷದಲ್ಲಿ ಬಹಳಷ್ಟು ಯೋಜನೆಗಳನ್ನು ಕ್ಷೇತ್ರಕ್ಕೆ ತಂದುಕೊಟ್ಟಿದ್ದೇನೆ. ಜನ ನನ್ನ ಅಭಿವೃದ್ಧಿಯ ಬಗ್ಗೆ ಯಾರೂ ಪ್ರಶ್ನೆ ಮಾಡುತ್ತಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಇದು ಕೇವಲ ಕಾಂಟ್ರಾಕ್ಟ್ ಮದುವೆ ಅಲ್ಲ, ಐವತ್ತು ಅರುವತ್ತು ವರ್ಷಗಳ ಕಾಲ ನಾವು ಜಂಟಿಯಾಗಿ ಕೆಲಸ ಮಾಡುತ್ತೇವೆ ಎಂದು ರಾಧಾ ಮೋಹನ್ ದಾಸ್ ಕೂಡಾ ಹೇಳಿದ್ದಾರೆ. ಬಿಜೆಪಿ-ಜೆಡಿಎಸ್ ಎರಡೂ ಪಕ್ಷದ ಕಾರ್ಯಕರ್ತರನ್ನು ಗೌರವಿಸುತ್ತೇನೆ. ನಾನೊಬ್ಬ ಯುವಕ. ಹಾಗಾಗಿ ಗೊತ್ತಿಲ್ಲದೆ ಕೆಲವೊಂದು ತಪ್ಪುಗಳು ಸಂಭವಿಸಬಹುದು. ಆದರೆ ನನ್ನ ತಪ್ಪುಗಳನ್ನು ಅರಿತು ಅದನ್ನು ಸರಿಮಾಡಿಕೊಂಡು ಮುಂದೆ ಹೋಗುತ್ತೇನೆ. ಹಿರಿಯರು ಹೇಳಿದ ಮಾತನ್ನು ಚಾಚುತಪ್ಪದೆ ಪಾಲಿಸುತ್ತೇನೆ. ನನಗೊಂದು ಈ ಬಾರಿ ಅವಕಾಶ ಮಾಡಿಕೊಡಿ ಎಂದು ವಿನಂತಿಸಿಕೊಂಡರು. ಈ ಬಾರಿ 400 ಸೀಟ್ ಗೆಲ್ಲಿಸುವ ಮೂಲಕ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು. ಇದರಲ್ಲಿ ನನಗೂ ಒಂದು ಅವಕಾಶ ಮಾಡಿಕೊಡಿ ಎಂದು ಪ್ರಜ್ವಲ್ ರೇವಣ್ಣ ಮನವಿ ಮಾಡಿದರು.

 

 

Continue Reading

hasana

450 ರೂಪಾಯಿಗೆ ನಡೆಯಿತು ಮಾ*ರಣಾಂತಿಕ ಹ*ಲ್ಲೆ..!! ಸಿಕ್ಕ ಸಿಕ್ಕಲ್ಲಿ ತಿವಿದು ಎಸ್ಕೇಪ್ ಆದ ಕಿರಾತಕರು

Published

on

ಹಾಸನ: 450 ರೂಪಾಯಿಗಳಿಗಾಗಿ ವ್ಯಕ್ತಿಯೊಬ್ಬನ ಮೇಲೆ ಮಾ*ರಣಾಂತಿಕ ಹ*ಲ್ಲೆ ನಡೆಸಿದ ಮೂವರು,  ಹಣ ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾದ ಘಟನೆ ಹಾಸನ ಜಿಲ್ಲೆಯ ಹೊಳೆನರಸಿಪುರ ಪಟ್ಟಣದಲ್ಲಿ  ನಡೆದಿದೆ. ಹ*ಲ್ಲೆಗೊಳಗಾದ ವ್ಯಕ್ತಿ ಗಿರೀಶ್ ಎಂಬಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

murder attempt

ಇದನ್ನೂ ಓದಿ.. ನಿನ್ನೆ ಮಗುವಿನ ಹುಟ್ಟುಹಬ್ಬ… ಇಂದು ತಾಯಿ ಮಗು ಜೀವಾಂತ್ಯ..!

ಏನಿದು ಘಟನೆ?

ಕೆ.ಆರ್. ನಗರದ ನಿವಾಸಿಯಾಗಿದ್ದ ಗಿರೀಶ್ ಎಂಬಾತ ಡ್ರೈವರ್ ಕೆಲಸ ಮಾಡುತ್ತಿದ್ದು, ಬೆಂಗಳೂರಿಗೆ ತೆರಳಲು ಪಟ್ಟಣಕ್ಕೆ ಬಂದಿದ್ದಾರೆ. ಅವರ ಸ್ನೇಹಿತನೂ ಬರುವುದಾಗಿ ಹೇಳಿದ ಕಾರಣ ಬಸ್ ನಿಲ್ದಾಣದ ಪಕ್ಕದಲ್ಲೇ ಇದ್ದ ಪುರಸಭೆ ಕಟ್ಟಡದ ಟಾರೆಸಿ ಮೇಲೆ ಮಲಗಿದ್ದಾರೆ.

ರಾತ್ರಿ ಸರಿ ಸುಮಾರು 11.30 ಕ್ಕೆ ಟಾರೆಸ್ ಮೇಲೆ ಬಂದ ಮೂವರು ಗಿರೀಶ್‌ನನ್ನು ಎಬ್ಬಿಸಿ ಕಿಸೆಯಲ್ಲಿದ್ದ 450 ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಬಳಿಕ ಗಿರೀಶ್ ಹೊಂದಿದ್ದ ಮೊಬೈಲ್ ಕೂಡಾ ಕಿತ್ತುಕೊಂಡಿದ್ದಾರೆ.

ಈ ವೇಳೆ ಮೊಬೈಲ್ ಕೊಡಿ ಎಂದು ಪ್ರತಿರೋಧ ತೋರಿದಾಗ ಮನ ಬಂದಂತೆ ಚೂರಿಯಿಂದ ಇ*ರಿದು ಪರಾರಿಯಾಗಿದ್ದಾರೆ. ಗಿರೀಶ್ ಬ್ಯಾಗ್ ಸಹ ಕಿತ್ತುಕೊಂಡು ಪರಾರಿಯಾಗಿದ್ದು, ಓಡಿ ಹೋಗುವಾಗ ಚಿರು ಹಾಗು ಕಾಂತ ಎಂದು ಹೆಸರು ಕೂಗಿದ್ದಾಗಿ ಗಿರೀಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಚೂರಿ ಇರಿ*ತಕ್ಕೆ ಒಳಗಾದ ಗಿರೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಣ್ಣಿನ ಕೆಳಭಾಗ, ಕತ್ತು, ಹಾಗೂ ಎದೆ ಭಾಗದಲ್ಲಿ ಚೂ*ರಿ ಇರಿತದ ಗಾಯಗಳಾಗಿದೆ.

 

Continue Reading

hasana

ಬೆಂಕಿ ನಂದಿಸಲು ಹೊರಟ ಮಹಿಳೆ ಸಜೀ*ವ ದ*ಹನ..!! ಹಾಸನದಲ್ಲೊಂದು ಹೃದಯವಿದ್ರಾವಕ ಘಟನೆ

Published

on

ಹಾಸನ: ಹಸು ಮೇಯಿಸಲು ಹೋಗಿದ್ದ ಮಹಿಳೆಯೊಬ್ಬರು ತೋಟಕ್ಕೆ ಬೆಂಕಿ ಬಿದ್ದಿರುವುದನ್ನು ಕಂಡು  ನಂದಿಸಲು ಹೋಗಿ  ಸುಟ್ಟು ಬಸ್ಮವಾದ ಹೃದಯವಿದ್ರಾವಕ ಘಟನೆಯೊಂದು ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ.

50 ವರ್ಷ ಪ್ರಾಯದ ಕೆಂಚಮ್ಮ ಎಂಬವರು ಪ್ರತಿ ನಿತ್ಯ ದನ-ಕರುಗಳನ್ನು ಮನೆಗೆ ವಾಪಾಸು ಹೊಡೆದುಕೊಂಡು ಬರುತ್ತಿದ್ದ  ವೇಳೆ ಕಾಫಿ ತೋಟದಲ್ಲಿ ಬೆಂಕಿ ಬಿದ್ದಿರುವುದನ್ನ ನೋಡಿದ್ದಾರೆ. ಅಕ್ಕ ಪಕ್ಕದಲ್ಲಿ ಯಾರು ಇಲ್ಲದ ಕಾರಣ ತಾವೇ ಸೊಪ್ಪು ಹಿಡಿದು ಕಾಫಿ ತೋಟಕ್ಕೆ ಹತ್ತಿರುವ ಬೆಂಕಿ ನಂದಿಸಲು  ಪ್ರಯತ್ನಪಟ್ಟಿದ್ದಾರೆ. ಆದರೆ ಬೆಂಕಿಯ ದಟ್ಟ ಹೊಗೆಗೆ ಉಸಿರುಗಟ್ಟಿದಂತಾಗಿ ಹೊರ ಬರುವ ಪ್ರಯತ್ನದಲ್ಲಿದ್ದಾಗ ಸೀರೆಗೆ ಬೆಂಕಿ ತಗುಲಿದೆ. ಬಿಸಿಲಿನ ಬೇಗೆಗೆ ದಗದಗನೆ ಉರಿಯುತ್ತಿದ್ದ ಬೆಂಕಿ ಕೆಂಚಮ್ಮ ಅವರನ್ನೂ ಸಂಪೂರ್ಣ ವ್ಯಾಪಿಸಿದೆ. ಬೆಂಕಿಯನ್ನು ಗಮನಿಸಿ ಸ್ಥಳಕ್ಕೆ ಬಂದ ಜನರಿಗೆ ಬೆಂಕಿ ಆರಿಸಿದ ಬಳಿಕ ತೋಟದ ಬದಿಯಲ್ಲಿ ಕೆಂಚಮ್ಮ ಬಿದ್ದಿರುವುದು ಗೊತ್ತಾಗಿದೆ.  ಸುಮಾರು ಒಂದು ಎಕ್ರೆಯಷ್ಟು ಕಾಫಿ, ಏಲಕ್ಕಿ, ಹಾಗೂ ಕಾಳುಮೆಣಸು ಗಿಡಗಳು ಸುಟ್ಟು ಕರಕಲಾಗಿ ಹೋಗಿದೆ.

 

 

Continue Reading

LATEST NEWS

Trending