Connect with us

    LATEST NEWS

    ರಾಜ್ಯದ `IT-BT’ ಕಂಪನಿಗಳಲ್ಲಿ ನವೆಂಬರ್ 1 ರಂದು ‘ಕನ್ನಡ ಧ್ವಜಾರೋಹಣ’ ಕಡ್ಡಾಯ.!

    Published

    on

    ಬೆಂಗಳೂರು : ಕರ್ನಾಟಕ ರಾಜ್ಯ ಉದಯವಾಗಿ 70 ವರ್ಷ ಸಂದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಐಟಿ ಬಿಟಿ ಕಂಪನಿ, ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ನವೆಂಬರ್ 1ರಂದು ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸಬೇಕೆಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.

    ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಇನ್ನಷ್ಟು ವಿಶೇಷವಾಗಿ ಆಚರಿಸೋಣ. ಈ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳು, ಐಟಿ ಬಿಟಿ ಕಂಪನಿಗಳು, ಕಾರ್ಖಾನೆಗಳು, ಖಾಸಗಿ ಉದ್ಯಮಗಳು ಕನ್ನಡ ಧ್ವಜವನ್ನು ಹಾರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ರಾಜ್ಯದ ಎಲ್ಲಾ ಶಾಲೆ, ಕಾಲೇಜುಗಳು, ಐಟಿ, ಬಿಟಿ ಸಂಸ್ಥೆಗಳಲ್ಲಿಯೂ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಟಿಪ್ಪಣಿ ಹೊರಡಿಸಿ ಸೂಚನೆ ನೀಡಿದ್ದಾರೆ.

    ಇನ್ನು ಕರ್ನಾಟಕ ರಾಜ್ಯ ಉದಯವಾಗಿ 70 ವರ್ಷ ಸಂದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ನವೆಂಬರ್ 1ರಂದು ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

    DAKSHINA KANNADA

    ಕಂಬಳ ಯಜಮಾನ ಇ*ನ್ನಿಲ್ಲ; ಸುಧಾಕರ್ ಆಳ್ವ ವಿ*ಧಿವಶ !

    Published

    on

    ಮಂಗಳೂರು: ಯುವ ಉದ್ಯಮಿ, ಮೋರ್ಲ ಕಂಬಳ ಕೋಣದ ಯಜಮಾನ ಸುಧಾಕರ ಆಳ್ವ ಮೋರ್ಲ ಕಂಬಳಕೋಡಿ (45) ಅವರು ಆಕಸ್ಮಿಕವಾಗಿ ತಮ್ಮ ಮನೆಯ ತೋಟದ ಕೆರೆಗೆ ಕಾಲು ಜಾರಿ ಬಿದ್ದು ಮೃ*ತಪಟ್ಟಿದ್ದಾರೆ.

    ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಸುಧಾಕರ ಆಳ್ವ ಅವರು ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ನಾ*ಪತ್ತೆಯಾಗಿದ್ದು ಮನೆ ಮಂದಿ ಹಾಗೂ ಸ್ಥಳೀಯರು ಸುತ್ತ ಮುತ್ತ ಹುಡುಕಾಟ ನಡೆಸಿದ್ದು ಮನೆಯ ಪಕ್ಕದ ಕೆರೆಯ ಬದಿಯಲ್ಲಿ ಮೃ*ತದೇಹ ಕಂಡು ಬಂದಿದೆ.

    ಪಂಪ್ ಸ್ವಿಚ್ ಹಾಕಲು ಬಂದಾಗ ಕಾಲು ಜಾರಿ ಬಿದ್ದು ಮೃ*ತಪಟ್ಟಿರುವುದಾಗಿ ತಿಳಿದು ಬಂದಿದೆ.

    ಬೇಕರಿ ತಿಂಡಿ-ತಿನಿಸುಗಳ ತಯಾರಕರಾಗಿ, ಯುವ ಉದ್ಯಮಿಯಾಗಿ ಜನಾನುರಾಗಿಯಾಗಿದ್ದ ಸುಧಾಕರ ಆಳ್ವರು ಮಂಗಳವಾರ ತೋಟಕ್ಕೆ ನೀರು ಹಾಯಿಸಲು ಹಾಕಿದ್ದ ಮೋಟಾರ್‌ ಪಂಪ್‌ ಅನ್ನು ಬಂದ್‌ ಮಾಡಲು ಕೆರೆ ಬಳಿ ತೆರಳಿದ್ದರು. ಮನೆಮಂದಿ ಚಹಾ ಕುಡಿಯಲು ಅವರನ್ನು ಕರೆಯಲು ಕೆರೆ ಬಳಿ ತೆರಳಿದಾಗ ಅವರ ಕೈಯಲ್ಲಿದ್ದ ಕೃಷಿಗೆ ಸಂಬಂಧಿ ಪರಿಕರಗಳು ಕೆರೆ ಪಕ್ಕದಲ್ಲಿ ಬಿದ್ದಿದ್ದು, ಚಪ್ಪಲಿ ನೀರಿನಲ್ಲಿ ತೇಲುತ್ತಿದ್ದುದು ಕಂಡುಬಂದಿದೆ. ಅಕ್ಕ-ಪಕ್ಕ ಹುಡುಕಾಟ ನಡೆಸಿದರೂ, ಅವರ ಪ*ತ್ತೆಯಾಗಿರಲಿಲ್ಲ.

    ಕೊನೆಗೆ ಕೆರೆಗೆ ಬಿದ್ದಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೆರೆಯಲ್ಲಿ ಶೋಧನೆ ನಡೆಸಿದಾಗ ಮೃ*ತದೇಹ ಪ*ತ್ತೆಯಾಗಿದೆ.

    Continue Reading

    FILM

    ಯಶ್ ವಿರುದ್ಧ ಎಫ್‌ಐಆರ್‌ಗೆ ಅರಣ್ಯ ಸಚಿವ ಸೂಚನೆ-ಅರೆಸ್ಟ್ ಆಗ್ತಾರಾ ಕೆಜಿಎಫ್‌ ಸ್ಟಾರ್?

    Published

    on

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಕೆಜಿಎಫ್, ಕೆಜಿಎಫ್ 2 ಭಾರೀ ಸಕ್ಸಸ್ ನಂತರ ಟಾಕ್ಸಿಕ್ ಎಂಬ ಪ್ಯಾನ್ ಇಂಡಿಯಾ ಮೂವಿ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯೋಕೆ ಯಶ್ ಕೂಡ ಸಜ್ಜಾಗಿದ್ದಾರೆ. ಈ ಹೊತ್ತಲ್ಲೇ ನಟ ಯಶ್ ಅಭಿನಯಿಸುತ್ತಿರುವ ಟಾಕ್ಸಿಕ್ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.

    ಟಾಕ್ಸಿಕ್ ಚಿತ್ರದ ಸೆಟ್‌ಗಾಗಿ ನೂರಾರು ಮರಗಳನ್ನು ಕಡಿದಿರುವ ಆರೋಪ ಕೇಳಿ ಬಂದಿದೆ.ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಶೂಟಿಂಗ್‌ಗಾಗಿ ಎಚ್‌ಎಂಟಿ ಪ್ರದೇಶದಲ್ಲಿ ಬೃಹತ್ ಸೆಟ್ ಅನ್ನು ಹಾಕಿ ಚಿತ್ರೀಕರಣ ಮಾಡಲಾಗಿತ್ತು.ಈ ವೇಳೆ ಅಲ್ಲಿನ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಸೆಟ್ ನಿರ್ಮಾಣ ಮಾಡಿರುವ ಆರೋಪ ಕೇಳಿ ಬಂದಿದೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಯಾಟ್‌ಲೈಟ್ ಇಮೇಜ್ ಪಡೆದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಪರಿಶೀಲನೆ ನಡೆಸಿದ್ದಾರೆ. ಸ್ಯಾಟಲೈಟ್ ಇಮೇಜ್ ಪಡೆಯುವ ವೇಳೆ ನೂರಾರು ಮರಗಳು ನೆಲಸಮವಾಗಿದ್ದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಅರಣ್ಯ ಕಾಯ್ದೆ ಅಡಿ ಕೇಸ್ ದಾಖಲಿಸಲು ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಸೆಟ್ ಹಾಕಿರೋ ಸ್ಥಳಕ್ಕೂ ಅರಣ್ಯ ಸಚಿವ ಖಂಡ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕೇಸ್ ದಾಖಲಾದ ಹಿನ್ನಲೆ ನಟ ಯಶ್ ಮತ್ತು ಟಾಕ್ಸಿಕ್ ಟೀಂ ಅರೆಸ್ಟ್ ಭೀತಿಗೆ ಸಿಲುಕಿದೆ.

    Continue Reading

    FILM

    ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಕರಾವಳಿ ಬೆಡಗಿ ಆ್ಯಂಕರ್ ಅನುಶ್ರೀ

    Published

    on

    ಬೆಂಗಳೂರು: ಕರಾವಳಿ ಬೆಡಗಿ ಆ್ಯಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಮುಂದಿನ ವರ್ಷ ಒಳ್ಳೆ ಹುಡುಗ ಸಿಕ್ಕರೆ ಮದುವೆ ಗ್ಯಾರಂಟಿ ಎಂದಿದ್ದಾರೆ.

    ಜೀ ಕನ್ನಡ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಆ್ಯಂಕರ್ ಅಕುಲ್ ಅವರು ಅನುಶ್ರೀ ಅವರ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ವೇಳೆ ಮಾತನಾಡಿದ ಅನುಶ್ರೀ ಎಲ್ಲ ಹುಡಿಗಿಯರಂತೆ ನನಗೂ ಮದುವೆ ಆಗಬೇಕು ಎಂದಿದೆ. ನನಗೂ ಬಾಳ ಸಂಗಾತಿ ಬೇಕು ಎಂದಿದೆ. ಎಲ್ಲದಕ್ಕೂ ಸಮಯ ಬರಬೇಕು. ಸರಿಯಾದ ಟೈಮ್ ಅಲ್ಲಿ ಸರಿಯಾದ ವ್ಯಕ್ತಿ ಬರಬೇಕು. ನಾನು ಮದುವೆ ಆಗಬೇಕು ಎಂದು ಮನಸ್ಸು ಮಾಡಬೇಕಿತ್ತು. ಈವರೆಗೆ ಮಾಡಿರಲಿಲ್ಲ. ಈಗ ಮಾಡಿದ್ದೇನೆ. ಮುಂದಿನ ವರ್ಷ ಒಳ್ಳೆಯ ಹುಡುಗ ಸಿಕ್ಕರೆ ಮದುವೆ ಆಗುತ್ತೇನೆ. ಆ ವ್ಯಕ್ತಿ ಬರಲಿ ಎಂದು ಕಾಯುತ್ತೇನೆ. ಬಂದರೆ ನಾನು ಅವರನ್ನು ನಿಮ್ಮ ಮುಂದೆ ತಂದು ನಿಲ್ಲಿಸುತ್ತೇನೆ’ ಎಂದರು ಅವರು.

    ಅನುಶ್ರೀ ಅವರು ಲವ್ ಮ್ಯಾರೇಜ್ ಆಗ್ತಾರಾ ಅಥವಾ ಅವರದ್ದು ಅರೇಂಜ್ ಮ್ಯಾರೇಜ್ ಎಂಬ ಪ್ರಶ್ನೆ ಮೂಡಿದೆ. ಈ ವಿಚಾರ ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಅವರು ಆ್ಯಂಕರಿಂಗ್ ಜೊತೆ ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದು ಅಲ್ಲಿ ಅನೇಕ ಸೆಲೆಬ್ರಿಟಿಗಳ ಸಂದರ್ಶನ ಮಾಡುತ್ತಾರೆ.

    Continue Reading

    LATEST NEWS

    Trending